Site icon Vistara News

SEBI Fine: 2 ಕಂಪನಿ, 7 ಜನಕ್ಕೆ 2.46 ಕೋಟಿ ರೂ. ದಂಡ ವಿಧಿಸಿದ ಸೆಬಿ; ಏನಿದಕ್ಕೆ ಕಾರಣ?

SEBI Imposes Fine

ನವದೆಹಲಿ: ನಿಯಂತ್ರಕ ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಎರಡು ಕಂಪನಿಗಳು ಹಾಗೂ ಏಳು ವ್ಯಕ್ತಿಗಳಿಗೆ ಮಾರುಕಟ್ಟೆ ನಿಯಂತ್ರಕ ಸೆಕ್ಯುರಿಟೀಸ್ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ (Securities and Exchange Board of India-SEBI) 2.46 ಕೋಟಿ ರೂ. ದಂಡ (SEBI Fine) ವಿಧಿಸಿದೆ.

ಸೆಬಿ ನಿಯಮಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ತಳ್ವಾಲ್ಕರ್ಸ್‌ ಬೆಟರ್‌ ವ್ಯಾಲ್ಯೂ ಫಿಟ್‌ನೆಸ್‌ ಲಿಮಿಟೆಡ್‌ ಆ್ಯಂಡ್‌ (TBVFL) ಹಾಗೂ ತಳ್ವಾಲ್ಕರ್ಸ್‌ ಹೆಲ್ತ್‌ಕ್ಲಬ್ಸ್‌ ಲಿಮಿಟೆಡ್‌ (THL) ಕಂಪನಿಗಳಿಗೆ ದಂಡ ವಿಧಿಸಲಾಗಿದೆ. ಇದರ ಪ್ರಮೋಟರ್‌ಗಳಾದ ಗಿರೀಶ್‌ ತಳ್ವಾಲ್ಕರ್, ಪ್ರಶಾಂತ್‌ ತಳ್ವಾಲ್ಕರ್, ಮಧುಕರ್‌ ತಳ್ವಾಲ್ಕರ್, ವಿನಾಯಕ್‌ ಗಾವಂಡೆ, ಅನಂತ್‌ ಗಾವಂಡೆ, ಹರ್ಷ ಬಟ್ಕಳ್‌ ಹಾಗೂ ಅನಂತ್‌ ಗಾವಂಡೆ ಅವರೂ ಸೇರಿ ದಂಡ ಪಾವತಿಸಬೇಕಿದೆ.

ಮೋಸ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿಗಳ ನಿಯಂತ್ರಣ (PFUTP) ಹಾಗೂ ಕಂಪನಿಯ ಲೆಕ್ಕಪತ್ರ ಬಹಿರಂಗಪಡಿಸುವಿಕೆ ನಿಯಮಗಳನ್ನು ಗಾಳಿಗೆ ತೂರಿ ಉದ್ಯಮ ಮುಂದುವರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಂಪನಿ ಹಾಗೂ ಅದರ ಏಳು ಪ್ರಮೋಟರ್‌ಗಳಿಗೆ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Adani-Hindenburg case: ಅದಾನಿ ಷೇರು ವ್ಯವಹಾರ ತನಿಖೆ ಪೂರ್ಣ! ಸುಪ್ರೀಂಗೆ ಸೆಬಿ ಮಾಹಿತಿ, ಕೆಲವು ಕೇಸ್‌ನಲ್ಲಿ ಕ್ರಮ ಸಾಧ್ಯತೆ!

ಯಾರಿಗೆ ಎಷ್ಟು ದಂಡ?

ಗಿರೀಶ್‌ ತಳ್ವಾಲ್ಕರ್, ಪ್ರಶಾಂತ್‌ ತಳ್ವಾಲ್ಕರ್, ಅನಂತ್‌ ಗಾವಂಡೆ ಹಾಗೂ ಹರ್ಷ ಭಟ್ಕಳ್‌ ಅವರಿಗೆ ತಲಾ 36 ಲಕ್ಷ ರೂ., ಟಿಬಿವಿಎಫ್‌ಎಲ್‌, ವಿನಾಯಕ್‌ ಗಾವಂಡೆ ಹಾಗೂ ಮಧುಕರ್‌ ತಳ್ವಾಲ್ಕರ್ ಅವರಿಗೆ ತಲಾ 24 ಲಕ್ಷ ರೂ., ಗಿರೀಶ್‌ ನಾಯಕ್‌ ಅವರಿಗೆ 18 ಹಾಗೂ ಟಿಎಚ್‌ಎಲ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಹಾಗೆಯೇ, ಏಳೂ ಜನರಿಗೂ 18 ತಿಂಗಳು ಸೆಬಿ ನಿಯಂತ್ರಣದಲ್ಲಿರುವ ಯಾವುದೇ ಕಂಪನಿಯ ಭಾಗವಾಗುವುದರಿಂದ ನಿಷೇಧಿಸಿದೆ.

Exit mobile version