ಲಖನೌ: ಉತ್ತರಪ್ರದೇಶ(Uttar Pradesh)ದಲ್ಲಿ ಅರೆಸ್ಟ್ ಆಗಿರುವ ಸೀರಿಯಲ್ ಕಿಲ್ಲರ್(Serial Killer)ಬಗ್ಗೆ ಅನೇಕ ವಿಚಾರಗಳು ಬಯಲಾಗುತ್ತಿದೆ. ಈತನ ಪತ್ತೆಗಾಗಿ 22 ಪೊಲೀಸರ ತಂಡ ಬಲೆ ಬೀಸಿತ್ತು. ಮತ್ತು ಬರೋಬ್ಬರಿ 1.50 ಲಕ್ಷ ಮೊಬೈಲ್ ಫೋನ್ ನಂಬರ್‌ಗಳನ್ನು ಟ್ರ್ಯಾಕ್ ಮಾಡಲಾಗಿದೆ. ಇನ್ನು ಕಿರುಕುಳ ನೀಡುತ್ತಿದ್ದ ಚಿಕ್ಕಮ್ಮನ ಮೇಲಿನ ದ್ವೇಷಕ್ಕೆ 9 ಅಮಾಯಕ ಮಹಿಳೆಯರನ್ನು ಕೊಂದಿದ್ದಾನೆ ಎಂಬ ವಿಚಾರ ತನಿಖೆ ವೇಳೆ ಬಯಲಾಗಿದೆ.
ಜೂನ್ 2023 ಮತ್ತು ಜುಲೈ 2024 ರ ನಡುವೆ ಬರೇಲಿ ಶಾಹಿ ಮತ್ತು ಶಿಶ್‌ಗಢ ಪೊಲೀಸ್ ವೃತ್ತದ ಅಡಿಯಲ್ಲಿ ಸುಮಾರು ಒಂಬತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಸೈಕೋ ಕಿಲ್ಲರ್ ಅನ್ನು ನಾವು ಬಂಧಿಸಿದ್ದೇವೆ. ನಾವು 22 ತಂಡಗಳನ್ನು ರಚಿಸಿದ್ದೇವೆ ಮತ್ತು ಆತನನ್ನು ಪತ್ತೆಹಚ್ಚಲು ‘ತಲಾಶ್’ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೆವು ಎಂದು ಬರೇಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಹೇಳಿದ್ದಾರೆ. ಬಂಧಿತನನ್ನು 38 ವರ್ಷದ ಕುಲದೀಪ್ ಕುಮಾರ್ ಗಂಗ್ವಾರ್ ಎಂದು ಗುರುತಿಸಲಾಗಿದೆ.
⚠️Sensitive Visual⚠️
— Sachin Gupta (@SachinGuptaUP) August 10, 2024
उत्तर प्रदेश : बरेली के सीरियल/साइको किलर कुलदीप गंगवार से पुलिस ने क्राइम ऑफ सीन री-क्रिएट कराया। पुतला बनाकर खेत में लेटाया। फिर कुलदीप ने बताया कि वो कैसे-क्या करता था। 9 महिलाओं के मर्डर हुए। 6 मर्डर करने की बात कुलदीप ने कुबूली है।
📽️@Benarasiyaa pic.twitter.com/rJNfHMk1nW
ಕೊಲೆ ಮಾಡಿ ಬಿಂದಿ, ಲಿಪ್‌ಸ್ಟಿಕ್ ಎತ್ತಿಡುತ್ತಿದ್ದ
ಇನ್ನು ಕೊಲೆಗಾರ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿದ ಬಳಿಕ ಅವರ ಬಳಿಯಿಂದ ಬಿಂದಿ ಮತ್ತು ಲಿಪ್‌ಸ್ಟಿಕ್ ಅನ್ನು ಎತ್ತಿಡುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಇದೀಗ ಆತನ ಹೆಡೆಮುರಿ ಕಟ್ಟಿರುವ ಪೊಲೀಸರು ಈ ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕುಲದೀಪ್ ಬಾಲ್ಯ ಅಷ್ಟೊಂದು ಸುಖಮಯವಾಗಿರಲಿಲ್ಲ. ತಾಯಿ ಬಾಲ್ಯದಲ್ಲೇ ಸಾವನ್ನಪ್ಪಿದ ಬಳಿಕ ತಂದೆ ಇನ್ನೊಂದು ಮದುವೆಯಾಗಿದ್ದ. ಮಲತಾಯಿಯ ಕಿರುಕುಳದಿಂದ ಬೇಸತ್ತಿದ್ದ ಕುಲದೀಪ್‌ಗೆ ಮಹಿಳೆಯರ ಮೇಲೆ ಒಂದು ರೀತಿಯ ದ್ವೇಷ ಬೆಳೆದಿತ್ತು ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ. ಸದ್ಯ ಆತನನ್ನು ವೈದ್ಯಕೀಯ ಚಿಕಿತ್ಸೆಗೊಳಪಡಿಸಲಾಗಿದೆ.
Here he is seen demonstrating the same act on a female mannequin. pic.twitter.com/e54lfQVOWk
— Piyush Rai (@Benarasiyaa) August 10, 2024
ಇದನ್ನೂ ಓದಿ: Serial Killer: 9 ಮಹಿಳೆಯರ ಕೊಂದ ಸರಣಿ ಹಂತಕ ಸೆರೆ; ಆತ ಹೇಗೆ ಕೊಲೆ ಮಾಡುತ್ತಿದ್ದ? ವಿಡಿಯೊ ಇಲ್ಲಿದೆ