ಹೊಸದಿಲ್ಲಿ: ವಿಮಾನದಲ್ಲಿ ಮಹಿಳೆಯೊಬ್ಬರಿಗೆ ಜಿಂದಾಲ್ ಗ್ರೂಪ್ ಕಂಪನಿಯ ಉನ್ನತಾಧಿಕಾರಿಯೊಬ್ಬರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಕೋಲ್ಕತ್ತಾದಿಂದ ಅಬುದಾಬಿಗೆ ತೆರಳುತ್ತಿದ್ದ ವಿಮಾನದಲ್ಲಿ ದಿನೇಶ್ ಕೆ ಸರೌಗಿ ಎಂಬಾತ ಮಹಿಳೆಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಕಿರುಕುಳ(Sexual Harassment) ನೀಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಇದಕ್ಕೆ ಖುದ್ದು ಜಿಂದಾಲ್ ಗ್ರೂಪ್(Jindal Group)ನ ಮುಖ್ಯಸ್ಥ ನವೀನ್ ಜಿಂದಾಲ್(Naveen Jindal) ಪ್ರತಿಕ್ರಿಯಿಸಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಘಟನೆ ವಿವರ:
ಎಕ್ಸ್‌ನಲ್ಲಿ ಅನೇಕ ಪೋಸ್ಟ್‌ಗಳನ್ನು ಮಾಡುವ ಮೂಲಕ ಮಹಿಳೆ ಘಟನೆ ಬಗ್ಗೆ ವಿವರಿಸಿದ್ದಾಳೆ.ಅವಳು ಬೋಸ್ಟನ್‌ಗೆ ಹೋಗುತ್ತಿದ್ದಳು ಮತ್ತು ಎತಿಹಾದ್ ಏರ್‌ವೇಸ್‌ನಲ್ಲಿ ಅಬುಧಾಬಿಗೆ ಸಾರಿಗೆ ವಿಮಾನವನ್ನು ತೆಗೆದುಕೊಂಡಿದ್ದಳು, ಅವಳ ಪಕ್ಕದಲ್ಲಿ ಕುಳಿತಿದ್ದ 65ವರ್ಷದ ದಿನೇಶ್ ಅವಳೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸಿದನು. ತನ್ನನ್ನು ತಾನು ಜಿಂದಾಲ್ ಗ್ರೂಪ್ ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಎಂದು ಪರಿಚಯಿಸಿಕೊಂಡಿದ್ದ ಆತ ಒಮನ್‌ನಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದ. ಇದಾದ ಬಳಿಕ ಮಹಿಳೆಯ ಬಗ್ಗೆ ವಿಚಾರಿಸುತ್ತಾ ಆಕೆಯ ಹವ್ಯಾಸಗಳ ಬಗ್ಗೆ ಕೇಳುತ್ತಾನೆ. ಆಗ ಸಿನಿಮಾ ವೀಕ್ಷಣೆ ತನ್ನ ಹವ್ಯಾಸ ಎಂದು ಮಹಿಳೆ ಹೇಳಿದ್ದಾಳೆ. ಅದಕ್ಕೆ ನನ್ನ ಬಳಿ ಕೆಲವು ಸಿನಿಮಾಗಳಿವೆ ಎಂದು ಹೇಳುತ್ತಾ ಪೋರ್ನ್ ವಿಡಿಯೋಗಳನ್ನು ತೋರಿಸಿದ್ದಾನೆ ಎಂದು ಮಹಿಳೆ ದೂರಿದ್ದಾಳೆ.
I am working to get this incident out to the founder of Jindal Steel @MPNaveenJindal so that he is aware of the kind of people who are in leadership. I am also afraid of how this molestor must be treating his female employees from a place of power.
— Ananya Chhaochharia (She/her) (@ananyac05) July 18, 2024
ಇನ್ನು ಈ ನವೀನ್ ಜಿಂದಾಲ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಮಹಿಳೆ, ಈ ಕಿಡಿಗೇಡಿ ತನ್ನ ಮಹಿಳಾ ಉದ್ಯೋಗಿಗಳನ್ನು ಕೆಲಸದ ಸ್ಥಳದಲ್ಲಿ ಹೇಗೆ ನಡೆಸಿಕೊಳ್ಳುತ್ತಿರಬಹುದು ಎಂಬ ಭಯವೂ ನನಗಿದೆ. ನಾನು ಚೆನ್ನಾಗಿದ್ದೇನೆ, ಸ್ವಲ್ಪ ಗಲಾಟೆ ಮತ್ತು ತೊಂದರೆಗೀಡಾಗಿದ್ದೇನೆ. ಆದರೆ ಇನ್ನೊಬ್ಬ ಮಹಿಳೆಗೆ ಇದು ಎಂದಿಗೂ ಸಂಭವಿಸಬಾರದು ಎಂದು ನಾನು ಬಯಸುತ್ತೇನೆ ಎಂದಿದ್ದಾಳೆ.
ನವೀನ್ ಜಿಂದಾಲ್ ಪ್ರತಿಕ್ರಿಯೆ
ಇನ್ನು ಮಹಿಳೆಯ ಪೋಸ್ಟ್‌ಗೆ ನವೀನ್ ಜಿಂದಾಲ್ ಪ್ರತಿಕ್ರಿಯಿಸಿದ್ದಾರೆ. ನಮ್ಮನ್ನು ಗಮನಕ್ಕೆ ಈ ವಿಚಾರವನ್ನು ತಂದಿದ್ದಕ್ಕೆ ಧನ್ಯವಾದಗಳು! ನೀವು ಮಾಡಿದ್ದನ್ನು ಮಾಡಲು ಸಾಕಷ್ಟು ಧೈರ್ಯ ಬೇಕು ಮತ್ತು ಅಂತಹ ವಿಷಯಗಳಿಗೆ ನಾವು ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದೇವೆ. ಈ ವಿಷಯವನ್ನು ತಕ್ಷಣವೇ ತನಿಖೆ ಮಾಡಲಾಗುತ್ತದೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Dear Ananya, thank you for reaching out and speaking up! It takes a lot of courage to do what you did and I want you to know that we have a zero tolerance policy for such matters. I have asked the team to immediately investigate the matter and thereafter strictest and necessary…
— Naveen Jindal (@MPNaveenJindal) July 19, 2024
ಇದನ್ನೂ ಓದಿ: Viral Video: ಜಿಮ್ ಸಾಧನದಲ್ಲೇ ಯುವಕನ ತಲೆಗೆ ಹೊಡೆದ ಟ್ರೈನರ್; ಭೀಕರ ದೃಶ್ಯ ಫುಲ್ ವೈರಲ್