ನಾಗಾಲ್ಯಾಂಡ್ : ನಾಗಾಲ್ಯಾಂಡ್ ಉನ್ನತ ಶಿಕ್ಷಣ ಸಚಿವ ತಾಮ್ಜೆನ್ ಇಮ್ನಾ ಅಲೊಂಗ್ ಇತ್ತೀಚಿಗಷ್ಟೇ ಕಾರ್ಯಕ್ರಮವೊಂದರಲ್ಲಿ ಸಣ್ಣ ಕಣ್ಣುಗಳಿಂದ ಆಗುವ ಅನುಕೂಲಗಳ ಬಗ್ಗೆ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದರು. ಇದಾದ ಬಳಿಕ ಜನರು ಕೂಡ ತಾಮ್ಜೆನ್ ಬಗ್ಗೆ ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದರು. ಅದರಲ್ಲಿ ಹೆಚ್ಚಿನ ಜನರು ತಾಮ್ಜೆನ್ಗೆ ಮದುವೆ ಆಗಿದೆಯಾ? ಅವರ ಪತ್ನಿ ಯಾರೆಂದು ಹುಡುಕಾಟ ನಡೆಸಿದವರೇ ಹೆಚ್ಚಿದ್ದರು.
ಈ ಬಗ್ಗೆ ಸ್ವತಃ ತಾಮ್ಜೆನ್ ಟ್ವೀಟರ್ನಲ್ಲಿ ಗೂಗಲ್ನ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಅದರ ಜತೆಗೆ ಗೂಗಲ್ನಲ್ಲಿ ನನ್ನ ಬಗ್ಗೆ ನಡೆದಿರುವ ಹುಡುಕಾಟ ನೋಡಿದರೆ ನನಗೆ ಉತ್ಸುಕತೆ ತಂದಿದೆ, ಆದರೆ, ನಾನು ಸಿಂಗಲ್. ನಾನೇ ಹೆಂಡತಿಗಾಗಿ ಹುಡುಕಾಟ ನಡೆಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇದನ್ನು ಓದಿ| ಈ ʻಪುಷ್ಪʼ ನಮ್ಮ ಕೈಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ! ಪಶ್ಚಿಮ ಬಂಗಾಳ ಅರಣ್ಯಾಧಿಕಾರಿ ಟ್ವೀಟ್ ವೈರಲ್
ಇದೇ ಪೋಸ್ಟ್ ಈಗ ಶಾದಿ . ಕಾಮ್ ಸಂಸ್ಥಾಪಕ ಅನುಪಮ್ ಮಿತ್ತಲ್ ಅವರ ಗಮನ ಸೆಳೆದಿದೆ. ಅವರು ಕೂಡ ತಾಮ್ಜೆನ್ ಅವರ ಟ್ವೀಟ್ಗೆ ಮರು ಟ್ವೀಟ್ ಮಾಡಿದ್ದು, ನಾನು ಏನನ್ನಾದರೂ ಮಾಡಬೇಕಾಗಿದೆ ಎಂದು ರಿಪ್ಲೈ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ತಾಮ್ಜೆನ್ “”ನಾನು ಖುಷಿಯಾಗಿದ್ದೇನೆ, ಸಲ್ಮಾನ್ ಖಾನ್ ಮದುವೆಗಾಗಿ ಕಾಯುತ್ತಿದ್ದೇನೆʼʼ ಎಂದಿದ್ದಾರೆ. ಇದಕ್ಕೆ ಮರು ಉತ್ತರ ಕೊಟ್ಟ ಅನುಪಮ್ “”ಸಲ್ಮಾನ್ ಖಾನ್ಗಾಗಿ ಬಹಳ ದಿನ ಕಾಯಬಹುದು. ಆದರೆ, ನಾವು ಮತ್ತು ನಮ್ಮ ಶಾದಿ. ಕಾಮ್ ನಿಮಗಾಗಿ ನಿಮ್ಮ ಸಮಯಕ್ಕಾಗಿ ಕಾಯುತ್ತಿದ್ದೇವೆ ಸರ್ ಬೇಗ ಬನ್ನಿʼʼ ಎಂದು ಬರೆದುಕೊಂಡಿದ್ದಾರೆ.
ಇಷ್ಟೆಲ್ಲ ಆದ ಬಳಿಕ ಸಚಿವರು ವಿಶ್ವ ಜನಸಂಖ್ಯಾ ದಿನವನ್ನು ಹೇಳುತ್ತಾ “”ಸುಸ್ಥಿರ ಅಭಿವೃದ್ದಿಗಾಗಿ ಒಬ್ಬಂಟಿಯಾಗಿರುವುದು ಒಳ್ಳೆಯದು. ಎಲ್ಲರೂ ಒಂಟಿ ಆಂದೋಲನಕ್ಕೆ ನನ್ನ ಜೊತೆ ಬನ್ನಿʼʼ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಕಿರಣ್ ರಿಜುಜು ಪ್ರತಿಕ್ರಿಯಿಸಿ “”ತಾಮ್ಜೆನ್ ವಾಸ್ತವವಾಗಿ ಮದುವೆ ವಿರೋಧಿಯಲ್ಲ. ಆದರೆ, ಅವರು ತಮ್ಮ ಗುಂಪಿನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಹೊಂದಿದ್ದಾರೆʼʼ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಾಮ್ಜೆನ್ “”ಹೌದು ಕಿರಣ್ ರಿಜಿಜು ಜೀ, ಜನರು ಸ್ವ ಇಚ್ಛೆಯಿಂದ ನನ್ನ ಗುಂಪಿಗೆ ಸೇರಿದರೆ ನನಗಿಷ್ಟʼʼ ಎಂದು ಹೇಳಿಕೊಂಡಿದ್ದಾರೆ. ಸಚಿವರ ಈ ಟ್ವೀಟ್ ಸಂಭಾಷಣೆ ಆನ್ಲೈನ್ನಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಸಚಿವರ ಸಂಭಾಷಣೆಯನ್ನು ಎಂಜಾಯ್ ಮಾಡ್ತಿದ್ದಾರೆ.
ಇದನ್ನು ಓದಿ| ರಿಪೋರ್ಟರ್‌ಗಳಿಗೆ ಟೀ ಸರ್ವ್ ಮಾಡಿದ ಅಕ್ಷತಾ ಮೂರ್ತಿ, ಫೋಟೊ ವೈರಲ್