Site icon Vistara News

Special Parliament Session: `ವಂದೇ ಮಾತರಂʼ ಎಂದು ಘೋಷಿಸುತ್ತಾ ಹೊಸ ಸಂಸತ್‌ ಭವನಕ್ಕೆ ಸಂಸದರ ಎಂಟ್ರಿ ಹೀಗಿತ್ತು!

modi new parliment entry

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಹಳೆಯ ಸಂಸತ್‌ ಭವನದ ಸೆಂಟ್ರಲ್‌ ಹಾಲ್‌ನಲ್ಲಿ ಈ ಅಧಿವೇಶನದ ಅಂತಿಮ ಭಾಷಣ ಮಾಡಿದರು. ನಂತರ ಎಲ್ಲ ಸಂಸದರು ಅಲ್ಲಿಂದ ಹೊರಬಿದ್ದು ನೂತನ ಸಂಸತ್‌ ಭವನಕ್ಕೆ (Special Parliament Session) ನಡೆದು ಹೋದರು.

ಈ ಸಂದರ್ಭದಲ್ಲಿ ಸಂಸತ್‌ ಸದಸ್ಯರಿಂದ ʼವಂದೇ ಮಾತರಂʼ ʼಭಾರತ್‌ ಮಾತಾ ಕಿ ಜೈʼ ಎಂಬ ಘೋಷಣೆಗಳು ಮೊಳಗಿದವು. ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮುಂತಾದವರು ಮುಂಚೂಣಿಯಲ್ಲಿ ಪ್ರಧಾನಿ ಜತೆಗೆ ಹೆಜ್ಜೆ ಹಾಕಿದರೆ, ಉಳಿದವರು ಅವರನ್ನು ಹಿಂಬಾಲಿಸಿದರು. ಹಿಂದುಗಡೆ ವಿಪಕ್ಷಗಳ ಸಂಸದರು ಕೂ ಅವರನ್ನು ಹಿಂಬಾಲಿಸಿದರು.

modi new parliment entry

ನೂತನ ಸಂಸತ್‌ ಭವನದ ಲೋಕಸಭೆ ಹಾಲ್‌ನಲ್ಲಿ ಮುಂದಿನ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ನಿತಿನ್‌ ಗಡ್ಕರಿ ಹಾಗೂ ರಾಜನಾಥ್‌ ಸಿಂಗ್‌ ಅವರ ಆಸನಗಳಿವೆ. ಹೊಸ ಸಂಸತ್‌ ಭವನದಲ್ಲಿ ಆರಂಭಗೊಂಡ ವಿಶೇಷ ಅಧಿವೇಶನದ ಮೊದಲ ಭಾಷಣವನ್ನೂ ಮೋದಿಯವರೇ ಮಾಡಿದರು. ಈ ಮೂಲಕ ಅವರು ಇತಿಹಾಸ ಸೃಷ್ಟಿಸಿದರು.

modi new parliment entry

ಇದಕ್ಕೂ ಮುನ್ನ ಸೆಂಟ್ರಲ್‌ ಹಾಲ್‌ನಲ್ಲಿ ಎಲ್ಲ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ʼʼಇನ್ನು ಮುಂದೆ ಹಳೆಯ ಸಂಸತ್‌ ಭವನವನ್ನು ʼಸಂವಿಧಾನ ಸದನʼ (samvidhan sadan) ಎಂದು ಕರೆಯೋಣʼʼ ಎಂದು ನುಡಿದರು.

ಇದನ್ನೂ ಓದಿ: Special Parliament Session: ಹಳೆಯ ಸಂಸತ್‌ ಭವನ ಇನ್ನು ʼಸಂವಿಧಾನ ಸದನʼ: ಪಿಎಂ ನರೇಂದ್ರ ಮೋದಿ

Exit mobile version