ದೇಶ
Special Parliament Session: ಹಳೆಯ ಸಂಸತ್ ಭವನ ಇನ್ನು ʼಸಂವಿಧಾನ ಸದನʼ: ಪಿಎಂ ನರೇಂದ್ರ ಮೋದಿ
ನೂತನ ಸಂಸತ್ ಭವನಕ್ಕೆ ಅಧಿವೇಶನಕ್ಕಾಗಿ ತೆರಳುವ ಮುನ್ನ ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಪ್ರಧಾನಿ ಮೋದಿ (PM Narendra Modi) ಸಂಸದರನ್ನು ಉದ್ದೇಶಿಸಿ ಮಾತನಾಡಿದರು.
ಹೊಸದಿಲ್ಲಿ: ಹಳೆಯ ಸಂಸತ್ ಭವನವನ್ನು (Old Parliament Building) ಇನ್ನು ಮುಂದೆ ʼಸಂವಿಧಾನ ಸದನʼ (Samvidhan Sadan) ಎಂದು ಕರೆಯಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಹೇಳಿದರು. ನೂತನ ಸಂಸತ್ ಭವನಕ್ಕೆ (New Parliament building) ತೆರಳುವ ಮುನ್ನ ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ವಿಶೇಷ ಅಧಿವೇಶನಕ್ಕೆ (Special Parliament Session) ಸೇರಿದ ಎಲ್ಲ ಸಂಸದರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗಣೇಶ ಚತುರ್ಥಿಯ ಶುಭಾಶಯಗಳನ್ನು ಕೋರುತ್ತ ಅವರು ಭಾಷಣ ಆರಂಭಿಸಿದರು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನವೀಕೃತ ಸಂಕಲ್ಪದೊಂದಿಗೆ ನಾವು ಹೊಸ ಸದನದತ್ತ ಸಾಗುತ್ತಿದ್ದೇವೆ. ಹಳೆಯ ಕಟ್ಟಡ ಮತ್ತು ವಿಶೇಷವಾಗಿ ಈ ಸೆಂಟ್ರಲ್ ಹಾಲ್ ನಮ್ಮ ಭಾವನೆಗಳಿಂದ ತುಂಬಿದೆ. ಇದು ನಮ್ಮನ್ನು ಭಾವುಕರನ್ನಾಗಿಸುತ್ತದೆ. ಆದರೆ ನಮ್ಮ ಕರ್ತವ್ಯಕ್ಕೆ ಸ್ಫೂರ್ತಿ ನೀಡುತ್ತದೆ. ಈ ಸೆಂಟ್ರಲ್ ಹಾಲ್ ಬ್ರಿಟಿಷರಿಂದ ಭಾರತಕ್ಕೆ ಆದ ಅಧಿಕಾರ ಪರಿವರ್ತನೆಗೆ ಸಾಕ್ಷಿಯಾಗಿದೆ. ಈ ಸೆಂಟ್ರಲ್ ಹಾಲ್‌ನಲ್ಲಿ ನಮ್ಮ ತ್ರಿವರ್ಣ ಧ್ವಜ, ನಮ್ಮ ರಾಷ್ಟ್ರೀಯ ಗೀತೆಯನ್ನು ಅಳವಡಿಸಲಾಯಿತು. ಅನೇಕ ಐತಿಹಾಸಿಕ ಘಟನೆಗಳು ನಡೆದವು. ಉಭಯ ಸದನಗಳು ಇಲ್ಲಿ ಒಗ್ಗೂಡಿ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡವು ಎಂದು ಮೋದಿ ಹೇಳಿದರು.
ಭಾರತದ ಅನೇಕ ರಾಷ್ಟ್ರಪತಿಗಳು ಇಲ್ಲಿ ನಮ್ಮನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕಳೆದ 7 ದಶಕಗಳಲ್ಲಿ ನಾವು ವಿವಿಧ ಜವಾಬ್ದಾರಿಗಳನ್ನು ಸ್ವೀಕರಿಸಿದ್ದೇವೆ, ವಿವಿಧ ತಿದ್ದುಪಡಿಗಳು ಮತ್ತು ಸುಧಾರಣೆಗಳನ್ನು ತೆಗೆದುಕೊಂಡಿದ್ದೇವೆ. ಎಲ್ಲಾ ಲೋಕಸಭೆಗಳು 4,000ಕ್ಕೂ ಹೆಚ್ಚು ಕಾನೂನುಗಳನ್ನು ಅಂಗೀಕರಿಸಿವೆ. ಸ್ವಾತಂತ್ರ್ಯದ ನಂತರ ಭಾರತದ ಭವಿಷ್ಯವನ್ನು ನಿರ್ಧರಿಸಲು ಉಭಯ ಸದನಗಳು ಒಗ್ಗೂಡಿದ ಅನೇಕ ಐತಿಹಾಸಿಕ ಸಂದರ್ಭಗಳಿವೆ. 1952ರಲ್ಲಿ ಸುಮಾರು 42 ರಾಷ್ಟ್ರಗಳ ಮುಖ್ಯಸ್ಥರು ಈ ಸೆಂಟ್ರಲ್ ಹಾಲ್‌ನಲ್ಲಿ ಭಾಷಣ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಕಾನೂನುಗಳು, ಮುಸ್ಲಿಂ ಮಹಿಳೆಯರ ಸಬಲೀಕರಣ, ವರದಕ್ಷಿಣೆ ಅಪರಾಧೀಕರಣ, ಲಿಂಗಾಯತ ಹಕ್ಕುಗಳು ಇತ್ಯಾದಿಗಳಂತಹ ಹಲವಾರು ಕಾನೂನುಗಳನ್ನು ಅವರು ಪ್ರಸ್ತಾಪಿಸಿದರು.
ತಮ್ಮ ಭಾಷಣದಲ್ಲಿ ಅವರು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ವಿಶೇಷ ಉಲ್ಲೇಖ ಮಾಡಿದರು. ಕೇಂದ್ರಾಡಳಿತ ಪ್ರದೇಶದ ಜನರ ಜೀವನವನ್ನು ಸುಧಾರಿಸುವಲ್ಲಿ ಸಂಸತ್ತು ಅಸಾಧಾರಣ ಕೆಲಸ ಮಾಡಿದೆ. ಆರ್ಟಿಕಲ್ 370 ರದ್ದತಿ ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಎಂದು ಉಲ್ಲೇಖಿಸಿದರು.
ನಮ್ಮಲ್ಲಿ 75 ವರ್ಷಗಳ ಮಾರ್ಗಸೂಚಿ ಇದೆ. ನಾವು ನಮ್ಮ ಆಕಾಂಕ್ಷೆಗಳನ್ನು ಉನ್ನತ ಮಟ್ಟದಲ್ಲಿ ಇಟ್ಟುಕೊಂಡರೆ, ನಾವು ಖಂಡಿತವಾಗಿಯೂ ಯಶಸ್ವಿಯಾಗಲಿದ್ದೇವೆ. ಕೆಲವೇ ವರ್ಷಗಳಲ್ಲಿ, ಭಾರತವು ಭಾರತದ ಆತ್ಮನಿರ್ಭರತೆಯನ್ನು ಚರ್ಚಿಸಲು ಪ್ರಾರಂಭಿಸಿತು. ರಕ್ಷಣಾ ಕ್ಷೇತ್ರದಲ್ಲಿ ಭಾರತವು ಸ್ವಾವಲಂಬಿಯಾಗುವುದನ್ನು ಯಾವ ಭಾರತೀಯನು ಬಯಸುವುದಿಲ್ಲ? ಭಾರತದ ಸ್ವಾವಲಂಬನೆಯ ಕನಸುಗಳನ್ನು ಈಡೇರಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಪ್ರತಿಯೊಂದು ವಲಯದಲ್ಲೂ ನಾವು ವಿಶ್ವದರ್ಜೆಯ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಮೋದಿ ಹೇಳಿದರು.
ಜಾಗತಿಕ ದಕ್ಷಿಣದ ಧ್ವನಿಯಾಗಿ ಹೊರಹೊಮ್ಮುತ್ತಿದೆ ಮತ್ತು ರಾಷ್ಟ್ರವು ʼವಿಶ್ವಾಮಿತ್ರʼನಾಗಿ ಮುನ್ನಡೆಯುತ್ತಿದೆ. ವಿಶ್ವವು ನಮ್ಮಲ್ಲಿ ವಿಶ್ವಾಮಿತ್ರನನ್ನು ನೋಡುತ್ತದೆ. ಇದು ಸಮಯ, ಇದು ಸರಿಯಾದ ಸಮಯ. ಸಣ್ಣ ಕ್ಯಾನ್ವಾಸ್‌ನಲ್ಲಿ ನಾವು ದೊಡ್ಡ ಚಿತ್ರವನ್ನು ಮಾಡಲು ಸಾಧ್ಯವಿಲ್ಲ. ನಾವು ಈಗ ದೊಡ್ಡ ಕ್ಯಾನ್ವಾಸ್‌ನಲ್ಲಿ ಚಿತ್ರಿಸಬೇಕು. ನಮಗೆ ಭಾರತಕ್ಕೆ ದೊಡ್ಡ ದೃಷ್ಟಿ ಬೇಕು. ಶೀಘ್ರದಲ್ಲೇ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ಹೇಳಿದರು.
ದೇಶ
India Canada Row: ಉಗ್ರನಿಗೆ ಕೆನಡಾ ಬೆಂಬಲದ ಬೆನ್ನಲ್ಲೇ ಖಲಿಸ್ತಾನಿ ಪನ್ನುನ್ ಆಸ್ತಿ ಜಪ್ತಿ ಮಾಡಿದ ಎನ್‌ಐಎ
India Canada Row: ಭಾರತ ವಿರೋಧಿ ಹೇಳಿಕೆಗಳ ಮೂಲಕವೇ ಕುಖ್ಯಾತಿ ಗಳಿಸಿರುವ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಆಸ್ತಿಯನ್ನು ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಚಂಡೀಗಢ: ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (Sikhs For Justice) ಸಂಘಟನೆಯ ಉಗ್ರ, ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಆಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜಪ್ತಿ ಮಾಡಿದೆ. ಇದರೊಂದಿಗೆ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆ ವಿಚಾರದಲ್ಲಿ ಭಾರತದ ವಿರುದ್ಧ ಆರೋಪ ಮಾಡಿದ ಕೆನಡಾಗೆ ಪರೋಕ್ಷವಾಗಿ ತಿರುಗೇಟು ನೀಡಿದಂತಾಗಿದೆ.
ಚಂಡಿಗಢದಲ್ಲಿರುವ ಒಂದು ನಿವಾಸ, ಅಮೃತಸರದ ಖಾನ್‌ಕೋಟ್‌ನಲ್ಲಿರುವ ಕೃಷಿ ಜಮೀನು ಹಾಗೂ ಪನ್ನು ಗ್ರಾಮದಲ್ಲಿರುವ ಕೃಷಿ ಜಮೀನನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಾರ್ವಜನಿಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ನಿವಾಸಕ್ಕೆ ಎನ್‌ಐಎ ನೋಟಿಸ್ ಅಂಟಿಸಿದೆ. ಜಮೀನಿನಲ್ಲೂ ಜಪ್ತಿ ಕುರಿತು ನೋಟಿಸ್ ಅಂಟಿಸಲಾಗಿದೆ.
#WATCH | On the orders of the NIA Court, a property confiscation notice has been installed at a property of banned Sikhs for Justice (SFJ) founder and designated terrorist Gurpatwant Singh Pannu at village Khankot in Amritsar pic.twitter.com/mz5ZYlXERd
— ANI (@ANI) September 23, 2023
ಕೆನಡಾ, ಬ್ರಿಟನ್, ಅಮೆರಿಕದಲ್ಲಿ ಪ್ರತ್ಯೇಕವಾದದ ವಿಷ ಬೀಜ ಬಿತ್ತುತ್ತಿರುವ ಸಿಖ್ಸ್ ಫಾರ್ ಜಸ್ಟಿಸ್ ಉಗ್ರ ಸಂಘಟನೆಯ ಸಂಸ್ಥಾಪಕರಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ಕೂಡ ಒಬ್ಬನಾಗಿದ್ದಾನೆ. ಭಾರತದಲ್ಲಿ ಕೂಡ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಕಾರಣ 2019ರಲ್ಲಿ ಕೇಂದ್ರ ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಇದನ್ನು ನಿಷೇಧಿಸಲಾಗಿದೆ. ಈಗ ಅದರ ಸಂಘಟನೆಯ ಉಗ್ರನ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಕೆನಡಾದಲ್ಲಿ ಕಳೆದ ಜೂನ್ 18ರಂದು ಹತ್ಯೆಗೀಡಾದ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಜಸ್ಟಿನ್ ಟ್ರುಡೋ ಮಹಾನ್ ವ್ಯಕ್ತಿಯಂತೆ ಬಿಂಬಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಹತ್ಯೆ ಕುರಿತು ಯಾವುದೇ ಸಾಕ್ಷ್ಯ ಕೊಡದೆ ಆರೋಪದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಭಾರತವು ಮತ್ತೊಬ್ಬ ಖಲಿಸ್ತಾನಿಯ ಆಸ್ತಿ ಜಪ್ತಿ ಮಾಡುವ ಮೂಲಕ ಪರೋಕ್ಷವಾಗಿ ಕೆನಡಾಗೆ ಟಾಂಗ್ ಕೊಟ್ಟಿದೆ.
ಇದನ್ನೂ ಓದಿ: India Canada Row: ಭಾರತದಿಂದಲೇ G20 ಶೃಂಗಸಭೆ ಯಶಸ್ವಿ ಎಂದ ಬ್ರೆಜಿಲ್; ಕೆನಡಾ ಪಿಎಂ ಆರೋಪಕ್ಕೆ ಏನೆಂದಿತು?
ಜಿ20 ಶೃಂಗಸಭೆಗೆ ಬೆದರಿಕೆ ಹಾಕಿದ್ದ ಪನ್ನುನ್
ವಿದೇಶದಲ್ಲಿ ಕುಳಿತೇ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾನೆ. ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಅಡ್ಡಿಪಡಿಸಬೇಕು ಎಂದು ಭಾರತದ ಮುಸ್ಲಿಮರಿಗೆ ಈತ ಕರೆ ನೀಡಿದ್ದ. “ಕಾಶ್ಮೀರದ ಮುಸ್ಲಿಮರು ದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಗೆ ಅಡ್ಡಿಪಡಿಸಬೇಕು. ಶುಕ್ರವಾರದ ಪ್ರಾರ್ಥನೆ ಬಳಿಕ ದೆಹಲಿಯಲ್ಲಿರುವ ಪ್ರಗತಿ ಮೈದಾನಕ್ಕೆ (ಶೃಂಗಸಭೆ ನಡೆಯುವ ಸ್ಥಳ) ಪರೇಡ್ ನಡೆಸಬೇಕು. ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನ ಧ್ವಜ ಹಾರಿಸಲಾಗುತ್ತದೆ” ಎಂದು ಗುರ್‌ಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಕೆ ನೀಡಿದ್ದ.
ದೇಶ
Jairam Ramesh: ನೂತನ ಸಂಸತ್ತನ್ನು ‘ಮೋದಿ ಮಲ್ಟಿಪ್ಲೆಕ್ಸ್’ ಎಂದ ಕಾಂಗ್ರೆಸ್ ನಾಯಕ; ಭುಗಿಲೆದ್ದ ವಿವಾದ
Jairam Ramesh: ಕೆಲವು ದಿನಗಳ ಹಿಂದಷ್ಟೇ ಮೊದಲ ಅಧಿವೇಶನಕ್ಕೆ ಸಾಕ್ಷಿಯಾಗಿರುವ ನೂತನ ಸಂಸತ್ ಭವನವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ‘ಮೋದಿ ಮಲ್ಟಿಪ್ಲೆಕ್ಸ್’ ಎಂದು ಕರೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ನವದೆಹಲಿ: ಕೆಲ ದಿನಗಳ ಹಿಂದಷ್ಟೇ ನೂತನ ಸಂಸತ್ ಭವನದಲ್ಲಿ (New Parliament Building) ಮೊದಲ ಅಧಿವೇಶನ ನಡೆದಿದೆ. ನೂತನ ಸಂಸತ್ ಭವನವನ್ನು ಕೂಡ ಪ್ರಜಾಪ್ರಭುತ್ವದ ದೇಗುಲ ಎಂದೇ ಹೇಳಲಾಗುತ್ತಿದೆ. ಅತ್ಯಾಧುನಿಕವಾಗಿ ನಿರ್ಮಿಸಿರುವ ಸಂಸತ್ ಭವನವು ಸಕಲ ಸೌಲಭ್ಯಗಳನ್ನೂ ಹೊಂದಿರುವುದರಿಂದ ಗಮನ ಸೆಳೆದಿದೆ. ಇದರ ಬೆನ್ನಲ್ಲೇ, ಕಾಂಗ್ರೆಸ್ ನಾಯಕ (Congress Leader) ಜೈರಾಮ್ ರಮೇಶ್ (Jairam Ramesh) ಅವರು ನೂತನ ಸಂಸತ್ ಭವನವನ್ನು “ಮೋದಿ ಮಲ್ಟಿಪ್ಲೆಕ್ಸ್” (Modi Multiplex) ಎಂದು ಕರೆದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
“ನೂತನ ಸಂಸತ್ ಭವನಕ್ಕೆ ತುಂಬ ಜನಪ್ರಿಯತೆ ಕೊಟ್ಟು, ಹೊಗಳಿ, ವೈಭವೀಕರಿಸಿದ ಬಳಿಕ ಚಾಲನೆ ನೀಡಲಾಗಿದೆ. ಆದರೆ, ನಾಲ್ಕು ದಿನಗಳಿಂದ ನಾನು ಸಂಸತ್ ಕಲಾಪಗಳಲ್ಲಿ ಪಾಲ್ಗೊಂಡ ಬಳಿಕ ನನ್ನ ಅಭಿಪ್ರಾಯ ಬದಲಾಗಿದೆ. ಏಕೆಂದರೆ, ಹೊಸ ಸಂಸತ್ ಭವನವು ದೊಡ್ಡದಾಗಿದೆ. ಸಂಸತ್ ವೀಕ್ಷಣೆಗೆ ಭೂತಕನ್ನಡಿಯೇ ಬೇಕಾಗಿದೆ. ಸಂಸತ್ ಸದಸ್ಯರ ನಡುವೆ ಸರಿಯಾಗಿ ಸಂಭಾಷಣೆ, ಮಾತುಕತೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪ್ರಜಾಪ್ರಭುತ್ವದ ಆಶಯಗಳು ಈಡೇರುತ್ತಿಲ್ಲ. ನರೇಂದ್ರ ಮೋದಿ ಅವರ ಆಶಯದಂತೆಯೇ ಇದನ್ನು ನಿರ್ಮಿಸಿದ ಕಾರಣ ನೂತನ ಸಂಸತ್ ಭವನವನ್ನು ಮೋದಿ ಮಲ್ಟಿಪ್ಲೆಕ್ಸ್ ಎಂಬುದಾಗಿ ಕರೆಯುವುದೇ ಸೂಕ್ತ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
The new Parliament building launched with so much hype actually realises the PM's objectives very well. It should be called the Modi Multiplex or Modi Marriot. After four days, what I saw was the death of confabulations and conversations—both inside the two Houses and in the…
— Jairam Ramesh (@Jairam_Ramesh) September 23, 2023
“ನಾನು ಸಂಸತ್ತಿನ ಎರಡೂ ಸದನಗಳಲ್ಲಿ ಓಡಾಡಿದ್ದೇನೆ. ಹಳೆಯ ಸಂಸತ್ ಭವನದಲ್ಲಿ ಕಲಾಪಗಳ ಮಧ್ಯೆ ತಿರುಗಾಡಬಹುದಿತ್ತು. ಒಬ್ಬರಿಗೊಬ್ಬರು ಚರ್ಚೆ, ಸಂವಾದದಲ್ಲಿ ನಿರತರಾಗಬಹುದಿತ್ತು. ಎರಡೂ ಕಲಾಪಗಳಿಗೆ ಓಡಾಡಲು, ಕಾರಿಡಾರ್‌ನಲ್ಲಿ ತಿರುಗಾಡುವುದು ಸುಲಭವಾಗಿತ್ತು. ಆದರೆ, ಹೊಸ ಸಂಸತ್ ಭವನದಲ್ಲಿ ಇದೆಲ್ಲದಕ್ಕೂ ಅವಕಾಶವಿಲ್ಲ. ಸಂಸತ್ ಭವನದ ವಿನ್ಯಾಸವು ಪ್ರಜಾಪ್ರಭುತ್ವವನ್ನೇ ಕೊಲ್ಲುವಂತಿದೆ. ನರೇಂದ್ರ ಮೋದಿ ಅವರು ಸಂವಿಧಾನವನ್ನು ಬದಲಾಯಿಸದೆಯೇ ಪ್ರಜಾಪ್ರಭುತ್ವವನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: New Parliament Building: ನೂತನ ಸಂಸತ್ ಭವನದ ರಚನೆ, ವಿನ್ಯಾಸ ಅದ್ಭುತ! ವಿಡಿಯೊ ನೋಡಿ
ಜೆ.ಪಿ.ನಡ್ಡಾ ತಿರುಗೇಟು
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕೆಗಳಿಗೆ ಬಿಜೆಪಿ ತಿರುಗೇಟು ನೀಡಿದೆ. “ಕಾಂಗ್ರೆಸ್ ಮಾತ್ರ ಇಂತಹ ಕನಿಷ್ಠ ಮನಸ್ಥಿತಿಯನ್ನು ಪ್ರದರ್ಶಿಸಲು ಸಾಧ್ಯ. ಹೀನ ಮನಸ್ಥಿತಿಯ ಭಾಗವಾಗಿಯೇ ಕಾಂಗ್ರೆಸ್ ಸಂಸತ್ ವಿರುದ್ಧ ಮಾತನಾಡುತ್ತಿದೆ. ಆ ಮೂಲಕ ದೇಶದ 140 ಕೋಟಿ ಜನರ ಆಶಯಗಳಿಗೆ ವಿರುದ್ಧವಾದ, ಅವರಿಗೆ ಅವಮಾನ ತೋರುವ ವರ್ತನೆ ಪ್ರದರ್ಶಿಸುತ್ತಿದೆ” ಎಂದಿದ್ದಾರೆ.
Even by the lowest standards of the Congress Party, this is a pathetic mindset. This is nothing but an insult to the aspirations of 140 crore Indians.
— Jagat Prakash Nadda (@JPNadda) September 23, 2023
In any case, this isn’t the first time Congress is anti-Parliament. They tried in 1975 and it failed miserably.😀 https://t.co/QTVQxs4CIN
“ಸಂಸತ್ ವಿರೋಧಿ ಮನಸ್ಥಿತಿಯನ್ನು ಕಾಂಗ್ರೆಸ್ ಇದೇ ಮೊದಲ ಬಾರಿಗೆ ಪ್ರದರ್ಶಿಸುತ್ತಿಲ್ಲ. 1975ರಲ್ಲೂ ಇಂತಹ ಮನಸ್ಥಿತಿ ತೋರಿತು. ಆದರೆ, ಆ ಪ್ರಯತ್ನದಲ್ಲಿ ಕಾಂಗ್ರೆಸ್ ವಿಫಲವಾಯಿತು” ಎಂದು ಜೆ.ಪಿ.ನಡ್ಡಾ ಎಕ್ಸ್ ಸಾಮಾಜಿಕ ಜಾಲತಾಣ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರೆ.
ದೇಶ
Dalit vs Thakors: ದಲಿತರ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಖರೀದಿಸದವರ ಕಾರ್ಡ್‌ಗಳನ್ನು ಪಕ್ಕದ ಹಳ್ಳಿಗೆ ವರ್ಗಾಯಿಸಿದ ಡಿಸಿ!
ಸುಮಾರು ಒಂದೂವರೆ ವರ್ಷಗಳ ಹಿಂದೆ ಕಾಂತಿ ಪರ್ಮಾರ್ ಎಂಬ ದಲಿತರು ನಡೆಸುತ್ತಿರುವ ಎಫ್‌ಪಿಎಸ್‌ನಿಂದ ತಮ್ಮ ಮಾಸಿಕ ಪಡಿತರವನ್ನು ಖರೀದಿಸುವುದನ್ನು ನಿಲ್ಲಿಸಿದ್ದರು. ಇದೀಗ ಜಿಲ್ಲಾಧಿಕಾರಿಗಳ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಾಂತಿ ಪರ್ಮಾರ್ ಯೋಚಿಸುತ್ತಿದ್ದಾರೆ.
ಅಹಮದಾಬಾದ್: ಗುಜರಾತಿನ ಒಂದು ಹಳ್ಳಿಯಲ್ಲಿ ದಲಿತರಿಗೆ (Dalit) ಸೇರಿದ ನ್ಯಾಯಬೆಲೆ ಅಂಗಡಿಯಿಂದ (Fair Price Shop) ಪಡಿತರವನ್ನು ಖರೀದಿಸದ ಹಳ್ಳಿಯ ಎಲ್ಲ 436 ಕಾರ್ಡ್‌ದಾರರ ಪಡಿತರ ಚೀಟಿಗಳನ್ನು (ration card) ಜಿಲ್ಲಾಧಿಕಾರಿ ಪಕ್ಕದ ಹಳ್ಳಿಗೆ ವರ್ಗಾಯಿಸಿದ್ದಾರೆ.
ಪಟಾನ್ ಜಿಲ್ಲೆಯ ಸರಸ್ವತಿ ತಹಸಿಲ್‌ನ ಕನೋಸನ್ ಗ್ರಾಮಕ್ಕೆ ಸೇರಿದ ಎಲ್ಲಾ 436 ಪಡಿತರ ಚೀಟಿದಾರರು ಪಕ್ಕದ ಗ್ರಾಮದ ಎಡ್ಲಾದಿಂದ ಪಡಿತರವನ್ನು ಖರೀದಿಸಬಹುದು; ದಲಿತರು ನಡೆಸುತ್ತಿರುವ ನ್ಯಾಯಬೆಲೆ ಅಂಗಡಿಯಿಂದ (ಎಫ್‌ಪಿಎಸ್) ಖರೀದಿಸಬೇಕಾಗಿಲ್ಲ ಎಂದು ಪಟಾನ್ ಜಿಲ್ಲಾಧಿಕಾರಿ ಅರವಿಂದ್ ವಿಜಯನ್ ಆದೇಶಿಸಿದ್ದಾರೆ.
ಕನೋಸನ್ ಗ್ರಾಮದಲ್ಲಿರುವ ಹೆಚ್ಚಿನ ಪಡಿತರ ಚೀಟಿದಾರರು ಮೇಲ್ಜಾತಿಯ ಠಾಕೋರ್ ಸಮುದಾಯದವರಾಗಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಕಾಂತಿ ಪರ್ಮಾರ್ ಎಂಬ ದಲಿತರು ನಡೆಸುತ್ತಿರುವ ಎಫ್‌ಪಿಎಸ್‌ನಿಂದ ತಮ್ಮ ಮಾಸಿಕ ಪಡಿತರವನ್ನು ಖರೀದಿಸುವುದನ್ನು ನಿಲ್ಲಿಸಿದ್ದರು. ಇದೀಗ ಜಿಲ್ಲಾಧಿಕಾರಿಗಳ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಕಾಂತಿ ಪರ್ಮಾರ್ ಯೋಚಿಸುತ್ತಿದ್ದಾರೆ.
ಕನೋಸನ್, ಗುಜರಾತ್‌ನ ʼಸಾಮ್ರಾಸ್ ಗ್ರಾಮʼಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರದ ʼಸಾಮ್ರಾಸ್ ಯೋಜನೆʼಯಡಿ, ಗ್ರಾಮಸ್ಥರು ತಮ್ಮ ವಾರ್ಡ್ ಸದಸ್ಯರು ಮತ್ತು ಸರಪಂಚರನ್ನು ಒಮ್ಮತದಿಂದ ಆಯ್ಕೆ ಮಾಡುತ್ತಾರೆ. ಮತದಾನ ಮಾಡುವುದಿಲ್ಲ. ಅಂತಹ ಗ್ರಾಮಗಳಿಗೆ ರಾಜ್ಯದಿಂದ ವಿಶೇಷ ಪ್ರೋತ್ಸಾಹ ಸಿಗುತ್ತದೆ. ಸಾಮ್ರಾಸ್ ಎಂದರೆ “ಸಾಮಾಜಿಕ ಸಾಮರಸ್ಯ” ಎಂದರ್ಥವಿದೆ.
ದಲಿತ ಕಾಂತಿ ಪರ್ಮಾರ್ ಅವರು ಒಂದೂವರೆ ವರ್ಷದ ಹಿಂದೆ ಠಾಕೋರ್ ಒಬ್ಬರಿಗೆ ಪಡಿತರ ನೀಡಲು ನಿರಾಕರಿಸುವುದರೊಂದಿಗೆ ಬಿಕ್ಕಟ್ಟು ಆರಂಭವಾಗಿತ್ತು. ಆ ಠಾಕೋರ್ ಈ ಪಡಿತರ ಚೀಟಿ ಮಾನ್ಯತೆ ಹೊಂದಿರಲಿಲ್ಲ ಎಂದು ಪರ್ಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಕಾಂತಿ ಪರ್ಮಾರ್ ಬೆದರಿಕೆ ಹಾಕಿದ್ದಾರೆ ಎಂದು ಠಾಕೋರರು ಆರೋಪಿಸಿದ್ದಾರೆ.
ಕನೋಸನ್‌ನ 268 ನಿವಾಸಿಗಳ ಹೇಳಿಕೆಗಳನ್ನು ಜಿಲ್ಲಾಡಳಿತ ದಾಖಲಿಸಿಕೊಂಡಿದೆ. ಅವರಲ್ಲಿ 260 ಜನರು ಪಕ್ಕದ ಹಳ್ಳಿಯಿಂದ ಪಡಿತರ ಖರೀದಿ ಇಚ್ಛೆ ವ್ಯಕ್ತಪಡಿಸಿದ್ದಾರೆ. ಎಂಟು ನಿವಾಸಿಗಳು ಮಾತ್ರ ಕಾಂತಿಯ ಎಫ್‌ಪಿಎಸ್‌ನಿಂದ ಪಡಿತರವನ್ನು ಪಡೆಯಲು ಮುಂದಾಗಿದ್ದಾರೆ. ಸುಮಾರು 2,200 ಜನಸಂಖ್ಯೆಯನ್ನು ಹೊಂದಿರುವ ಕನೋಸನ್‌ನಲ್ಲಿ, 90 ಪ್ರತಿಶತಕ್ಕೂ ಹೆಚ್ಚು ನಿವಾಸಿಗಳು ಠಾಕೋರ್‌ಗಳಾಗಿದ್ದಾರೆ.
ಮೇ ತಿಂಗಳಲ್ಲಿ ಪಟಾನ್ ಪಟ್ಟಣದ ಸಾರ್ವಜನಿಕ ಉದ್ಯಾನವನದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಕ್ಕಾಗಿ ಕಾಂತಿ ಮೇಲೆ ದೂರು ದಾಖಲಾಗಿದೆ. ವಿಷದ ಪರಿಣಾಮದಿಂದಾಗಿ ಅವರ ಎಡಗಾಲನ್ನು ಕತ್ತರಿಸಬೇಕಾಗಿ ಬಂದಿತ್ತು. ಇದರ ನಂತರ, ಕಾಂತಿ ಅವರ ಮಗ ಮುಖೇಶ್ ಅವರು ಠಾಕೂರ್ ಸಮುದಾಯದ ನಾಲ್ವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಅವರು ತಮ್ಮ ಅಂಗಡಿಯನ್ನು ಬಹಿಷ್ಕರಿಸುವಂತೆ ಗ್ರಾಮಸ್ಥರನ್ನು ಒತ್ತಾಯಿಸುವ ಮೂಲಕ ತಮ್ಮ ತಂದೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ ಎಂದು ಆರೋಪಿಸಿದ್ದರು. ಕಾಂತಿ ಅವರ ಅಂಗಡಿಯ ಪರವಾನಗಿ ರದ್ದುಪಡಿಸಲು ನಾಲ್ವರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದರು.
ಇದನ್ನೂ ಓದಿ: Karwar News: ದಲಿತ ಮುಖಂಡನಿಂದ ಹಿಂದು ದೇವರ ಅವಹೇಳನ ಪ್ರಕರಣ; ವಿಡಿಯೊ ಮಾಡಿದ ಯುವಕನ ಮೇಲೆ ಹಲ್ಲೆ
ಕ್ರಿಕೆಟ್
Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
Varanasi Stadium: ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯಲ್ಲಿ ನಿರ್ಮಿಸಿರುವ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದನ್ನು ಶಿವನಿಂದ ಸ್ಫೂರ್ತಿ ಪಡೆದು ನಿರ್ಮಿಸಲಾಗುತ್ತಿದ್ದು, ಸ್ಟೇಡಿಯಂನ ವೈಶಿಷ್ಟ್ಯ ಇಲ್ಲಿದೆ.
ವಾರಾಣಸಿ: ವಿಶ್ವನಾಥನ ಸನ್ನಿಧಿಯಾಗಿರುವ ವಾರಾಣಸಿಯಲ್ಲಿ ಭವ್ಯ ಹಾಗೂ ಅತ್ಯಾಧುನಿಕ ಸೌಲಭ್ಯಗಳುಳ್ಳ ಕ್ರಿಕೆಟ್ ಸ್ಟೇಡಿಯಂ (Varanasi Stadium) ನಿರ್ಮಿಸಲಾಗುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ದೇವರ ನಗರಿ ಎಂದೇ ಖ್ಯಾತಿಯಾಗಿರುವ ವಾರಾಣಸಿಯ ಕ್ರೀಡಾಂಗಣವೂ ಶಿವನಿಂದ ಸ್ಫೂರ್ತಿಗೊಂಡು ನಿರ್ಮಿಸಲಾಗುತ್ತಿದೆ. ಕ್ರೀಡಾಂಗಣದ ಪ್ರತಿಯೊಂದು ವಿಭಾಗದಲ್ಲೂ ಶಿವನ ಛಾಯೆ ಇದೆ. ಹಾಗಾಗಿ, ವಾರಾಣಸಿ ಕ್ರೀಡಾಂಗಣವು ವಿಶೇಷವಾಗಿದೆ. ಇದರ ಎಲ್ಲ ವೈಶಿಷ್ಟ್ಯಗಳು, ಶಿವನ ಛಾಯೆ ಸೇರಿ ಹಲವು ಮಾಹಿತಿ ಇಲ್ಲಿದೆ.
ತ್ರಿಶೂಲ, ಡಮರು, ಶಿವತಾಂಡವ
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣದ ವಿನ್ಯಾಸವು ಶಿವನಿಂದ ಸ್ಫೂರ್ತಿಗೊಂಡಿದೆ. ಕ್ರೀಡಾಂಗಣದ ಮುಂಭಾಗದಲ್ಲಿ ನಿರ್ಮಿಸಲಿರುವ ಮಾಧ್ಯಮ ಕೇಂದ್ರ (Media Centre) ಶಿವನ ಕೈಯಲ್ಲಿರುವ ಡಮರುಗದಂತೆ ಇರಲಿದೆ.
ಅಷ್ಟೇ ಅಲ್ಲ, ಸ್ಟೇಡಿಯಂ ಚಾವಣಿಯು ಚಂದ್ರನ ಆಕಾರದಲ್ಲಿ, ಪ್ರವೇಶ ದ್ವಾರವು ಬಿಲ್ವಪತ್ರೆ ಹಾಗೂ ಹೊನಲು ಬೆಳಕಿನ ಪಂದ್ಯದ ವೇಳೆ ಝಳಪಿಸುವ ಫ್ಲಡ್‌ಲೈಟ್ ತ್ರಿಶೂಲದ ಆಕಾರದಲ್ಲಿ ಇರಲಿವೆ. ಹಾಗಾಗಿ, ಇಡೀ ಸ್ಟೇಡಿಯಂ ಶಿವನಿಂದ ಸ್ಫೂರ್ತಿಗೊಂಡಂತೆ ನಿರ್ಮಾಣವಾಗಲಿದೆ.
ಸ್ಟೇಡಿಯಂನಲ್ಲಿ ಏನೆಲ್ಲ ಇರಲಿದೆ?
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣವಾಗಿದೆ. ಇದರಲ್ಲಿ 30 ಸಾವಿರ ಪ್ರೇಕ್ಷಕರು ಕುಳಿತು ಪಂದ್ಯವನ್ನು ವೀಕ್ಷಿಸಬಹುದಾಗಿದೆ. ರಾಜಾತಲಾಬ್ ಪ್ರದೇಶದ ರಿಂಗ್ ರೋಡ್ ಬಳಿ ಇದನ್ನು ನಿರ್ಮಿಸಲಾಗಿದ್ದು, ಏಳು ಪಿಚ್‌ಗಳು ಇರಲಿವೆ.
ಪಂದ್ಯದ ವೇಳೆ ಮಳೆ ಬಂದರೆ ಕ್ಷಿಪ್ರವಾಗಿ ನೀರು ಹೀರಿಕೊಳ್ಳುವ, ಅತ್ಯಾಧುನಿಕ ಸೌಕರ್ಯಗಳುಳ್ಳ ಡ್ರೆಸ್ಸಿಂಗ್ ರೂಮ್‌ಗಳು, ಮೂರು ಪ್ರಾಕ್ಟೀಸ್ ಪಿಚ್‌ಗಳು ಸೇರಿ ಹಲವು ಸೌಲಭ್ಯಗಳಿವೆ. 2025ರ ಡಿಸೆಂಬರ್‌ನಲ್ಲಿ ಕ್ರೀಡಾಂಗಣಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ICC World Cup: ಶೀಘ್ರದಲ್ಲೇ ಚಿನ್ನಸ್ವಾಮಿ ಸ್ಟೇಡಿಯಂಗೆ ಹೈಟೆಕ್ ಸ್ಪರ್ಶ
ಕಾಶಿ ವಿಶ್ವನಾಥನ ಊರಿನಲ್ಲಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂಗೆ ಸುಮಾರು 451 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು 121 ಕೋಟಿ ರೂ. ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 330 ಕೋಟಿ ರೂ. ವಿನಿಯೋಗಿಸಲಿದೆ.
-
ಪ್ರಮುಖ ಸುದ್ದಿ21 hours ago
Ipsos poll Survey: ಟ್ರುಡೋ ಜನಪ್ರಿಯತೆ ಕುಸಿತ, ಕೆನಡಾ ಪಿಎಂ ಆಗಲು ಪ್ರತಿಪಕ್ಷ ನಾಯಕನೇ ಬೆಸ್ಟ್!
-
ಗ್ಯಾಜೆಟ್ಸ್24 hours ago
YouTube: ಯುಟ್ಯೂಬ್ ವಿಡಿಯೋ ಮಾಡುವುದು ಇನ್ನೂ ಸುಲಭ! ಹೊಸ ಎಡಿಟಿಂಗ್ ಆ್ಯಪ್ ಲಾಂಚ್
-
ಸುವಚನ11 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ23 hours ago
Prisoners Escape: ವ್ಯಾನ್ನಿಂದ ಜಿಗಿದು ಇಬ್ಬರು ಕೈದಿಗಳು ಪರಾರಿ; ಕತ್ತೆ ಕಾಯುತ್ತಿದ್ದ ಪೊಲೀಸರು!
-
ಕರ್ನಾಟಕ17 hours ago
Heart Attack: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಸದ್ದಿಗೆ ಹಾರಿಹೋಯ್ತು ಯುವಕನ ಪ್ರಾಣ!
-
ಉಡುಪಿ20 hours ago
Dr HS Shetty : ಯಶಸ್ವೀ ಉದ್ಯಮಿ ಡಾ. ಎಚ್.ಎಸ್ ಶೆಟ್ಟಿ ಅವರಿಗೆ ಹುಟ್ಟೂರ ಸನ್ಮಾನ; ಸಾಧನೆ, ಸೇವೆಯ ವಿಸ್ತಾರಕ್ಕೆ ನಮಿಸಿದ ಜನ
-
ಕ್ರೈಂ22 hours ago
Assault Case : ಕೈ ತಾಗಿದ್ದಕ್ಕೆ ಯುವಕರ ಮಧ್ಯೆ ಕಿರಿಕ್; ಖಾನಾಪುರದಲ್ಲಿ ಬಿಗುವಿನ ವಾತಾವರಣ
-
ದೇಶ20 hours ago
Chandrayaan 3: ನಿದ್ದೆಯಿಂದ ಎಚ್ಚರವಾಗಲು ಒಲ್ಲೆ ಎನ್ನುತ್ತಿರುವ ಲ್ಯಾಂಡರ್, ಪ್ರಜ್ಞಾನ್! ನಾಳೆ ಮತ್ತೆ ಇಸ್ರೋ ಪ್ರಯತ್ನ