Site icon Vistara News

Stock Market: ಷೇರು ಪೇಟೆ ತಲ್ಲಣ; ಏಕಾಏಕಿ 700 ಅಂಕ ಕುಸಿದ ನಿಫ್ಟಿ, ಸಾವಿರಾರು ಕೋಟಿ ರೂ. ನಷ್ಟ

Stock Market

Stock Market: Markets closed lower, Nifty below 22,450, Sensex down 730 points dragged by realty and IT

ಮುಂಬೈ: ಷೇರು ಮಾರುಕಟ್ಟೆಯಲ್ಲಿ (Stock Market) ಶುಕ್ರವಾರ (ಮೇ 3) ತಲ್ಲಣ ಸೃಷ್ಟಿಯಾಗಿದ್ದು, ಎನ್‌ಎಸ್‌ಇ ನಿಫ್ಟಿ (NSE Nifty) ಹಾಗೂ ಬಿಎಸ್‌ಇ ಸೆನ್ಸೆಕ್ಸ್‌ ಭಾರಿ ಕುಸಿತ ಕಂಡ ಕಾರಣ ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ. ದಿನದ ವಹಿವಾಟಿನ ಅಂತ್ಯಕ್ಕೆ ಎನ್‌ಎಸ್‌ಇ ನಿಫ್ಟಿ 50 ಸುಮಾರು 172.35 ಪಾಯಿಂಟ್‌ಗಳ ಕುಸಿತ ಕಂಡರೆ, ಬಿಎಸ್‌ಇ ಸೆನ್ಸೆಕ್ಸ್‌ (BSE Sensex) 733 ಪಾಯಿಂಟ್‌ಗಳ ಕುಸಿತ ಕಂಡಿದೆ. ಆರಂಭದಲ್ಲಿ ಲಾಭ ಕಂಡ ಹೂಡಿಕೆದಾರರು ದಿನದ ಅಂತ್ಯಕ್ಕೆ ನಷ್ಟ ಅನುಭವಿಸಿದರು.

ಎನ್‌ಎಸ್‌ಇ ನಿಫ್ಟಿ 50 ದಿನದ ವಹಿವಾಟನ್ನು 22,456.65 ಪಾಯಿಂಟ್‌ಗಳಿಗೆ ಅಂತ್ಯಗೊಳಿಸಿತು. ಇನ್ನು ಬಿಎಸ್‌ಇ ಸೆನ್ಸೆಕ್ಸ್‌ 73,846 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿತು. ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾದರೂ ಎಲ್‌&ಟಿ. ಮಾರುತಿ ಸುಜುಕಿ, ರಿಲಯನ್ಸ್‌ ಇಂಡಸ್ಟ್ರೀಸ್‌, ನೆಸ್ಲೆ ಇಂಡಿಯಾ, ಭಾರ್ತಿ ಏರ್‌ಟೆಲ್‌ ಸೇರಿ ಹಲವು ಕಂಪನಿಗಳು ಲಾಭ ಗಳಿಸಿವೆ. ಕೋಲ್‌ ಇಂಡಿಯಾ, ಗ್ರಾಸಿಂ ಇಂಡಸ್ಟ್ರೀಸ್‌, ಒಎನ್‌ಜಿಸಿ, ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ ಹಾಗೂ ಹಿಂಡಾಲ್ಕೋ ಇಂಡಸ್ಟ್ರೀಸ್‌ ಸೇರಿ ಹಲವು ಕಂಪನಿಗಳು ನಷ್ಟ ಅನುಭವಿಸಿವೆ.

ಶುಕ್ರವಾರ ಬೆಳಗ್ಗೆ ಷೇರು ಮಾರುಕಟ್ಟೆ ವಹಿವಾಟು ಆರಂಭವಾಗುತ್ತಲೇ ಸುಮಾರು 50 ಪಾಯಿಂಟ್‌ಗಳ ಏರಿಕೆಯಾಯಿತು. ಇದರಿಂದ ಹೂಡಿಕೆದಾರರಿಗೆ ಖುಷಿಯಾಯಿತು. ಆದರೆ, ಇದಾದ ಕೆಲವೇ ಗಂಟೆಗಳಲ್ಲಿ ಪಾಯಿಂಟ್‌ಗಳ ಕುಸಿತ ಜಾಸ್ತಿಯಾಗುತ್ತಲೇ ಹೋಯಿತು. ಇದರಿಂದ ಹೂಡಿಕೆದಾರರು ಸಾವಿರಾರು ಕೋಟಿ ರೂ. ನಷ್ಟ ಅನುಭವಿಸಿದರು ಎಂದು ತಿಳಿದುಬಂದಿದೆ. ಕಳೆದ ಕೆಲ ದಿನಗಳಿಂದ ಷೇರು ಮಾರುಕಟ್ಟೆ ವಹಿವಾಟು ಉತ್ತಮವಾಗಿತ್ತು. ಆದರೆ, ಶುಕ್ರವಾರ ದಿಢೀರನೆ ಕುಸಿತ ಕಂಡಿತು.

ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು ಕೆಲ ದಿನಗಳ ಹಿಂದಷ್ಟೇ ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರಹ್‌ ರೋಹನ್ ಮೂರ್ತಿಗೆ 240 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದರು. ಈ ಮೂಲಕ ಏಕಾಗ್ರಹ್‌ ಇನ್ಫೋಸಿಸ್‌ನ 15 ಲಕ್ಷ ಷೇರುಗಳನ್ನು ಅಂದರೆ ಕಂಪನಿಯಲ್ಲಿ ಶೇಕಡಾ 0.04ರಷ್ಟು ಪಾಲನ್ನು ಹೊಂದಿದಂತಾಗಿದೆ ಎಂದು ಎಕ್ಸ್‌ಚೇಂಜ್‌ ಫೈಲಿಂಗ್ ಬಹಿರಂಗಪಡಿಸಿದೆ. ಈ ವ್ಯವಹಾರವನ್ನು ʼಆಫ್-ಮಾರ್ಕೆಟ್ʼನಲ್ಲಿ ನಡೆಸಲಾಯಿತು ಎಂದು ಫೈಲಿಂಗ್ ತಿಳಿಸಿದೆ.

ನಾರಾಯಣಮೂರ್ತಿ ಅವರು ಈಗ ಇನ್ಫೋಸಿಸ್‌ನ ಆಡಳಿತ ನಿರ್ವಹಣೆಯಲ್ಲಿ ಯಾವುದೇ ಪಾತ್ರ ಹೊಂದಿಲ್ಲ. ಅದರ ಪ್ರಮುಖ ಷೇರುಪಾಲುದಾರರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇನ್ಫೋಸಿಸ್​ನಲ್ಲಿ ಮೂರ್ತಿ ಅವರ ಬಳಿ 1.51 ಕೋಟಿ ಷೇರುಗಳಿದ್ದವು. ಈಗ ಮೊಮ್ಮಗನಿಗೆ 15 ಲಕ್ಷ ಷೇರುಗಳನ್ನು ಕೊಟ್ಟ ಬಳಿಕ ಅವರ ಬಳಿ ಉಳಿರುವ ಷೇರುಗಳ ಸಂಖ್ಯೆ 1.36 ಕೋಟಿ. ಈ ಮೂಲಕ ಇನ್ಫೋಸಿಸ್​ನಲ್ಲಿ ಅವರು ಹೊಂದಿದ್ದ ಶೇ. 0.40ರಷ್ಟು ಷೇರುಪಾಲು ಶೇ. 0.36ಕ್ಕೆ ಇಳಿದಿದೆ.

ಇದನ್ನೂ ಓದಿ: Kotak Bank: ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಕೊಟಕ್‌ ಬ್ಯಾಂಕ್‌ ಷೇರು ಭಾರಿ ಕುಸಿತ; ಹೂಡಿಕೆದಾರರಿಗೆ ನಷ್ಟ!

Exit mobile version