Site icon Vistara News

Sudipa Chatterjee: ಗೋಮಾಂಸ ಸೇವನೆಗೆ ಪ್ರಚಾರ- TMC ನಾಯಕ ಬಬೂಲ್‌ ಸುಪ್ರಿಯೋ ಆಪ್ತೆ, ಬೆಂಗಾಳಿ ನಟಿಗೆ ಜೀವ ಬೆದರಿಕೆ

Sudipa Chatterjee

ಕೋಲ್ಕತ್ತಾ: ಅಡುಗೆ ಕಾರ್ಯಕ್ರಮವೊಂದರಲ್ಲಿ ಸ್ಪರ್ಧಿಯೋರ್ವ ತಯಾರಿಸಿದ್ದ ಬೀಫ್‌ ಖಾದ್ಯವನ್ನು ಪ್ರೊಮೋಟ್‌ ಮಾಡಿದ್ದಾರೆ ಎಂಬ ಕಾರಣಕ್ಕೆ ಖ್ಯಾತ ಬೆಂಗಾಳಿ ನಟಿ(Bengali actress)ಯೊಬ್ಬರಿಗೆ ಜೀವ ಬೆದರಿಕೆ ಕರೆ ಬಂದಿದೆ. ನಟಿ ಸುದೀಪಾ ಚಟರ್ಜಿ(Sudipa Chatterjee) ತಮಗೆ ನಿರಂತರವಾಗಿ ಬೆದರಿಕೆ(Death threats) ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಂಗ್ಲಾದೇಶಿ ಕುಕ್ಕಿಂಗ್‌ ಶೋವೊಂದರ ಆಂಕರ್‌ ಆಗಿರುವ ಸುದೀಪಾ ಅವರು ಬೀಫ್‌ ಖಾದ್ಯ ತಯಾರಿಸುತ್ತಿದ್ದ ಸ್ಪರ್ಧಿ ಜೊತೆಗೆ ಮಾತುಕತೆ ನಡೆಸಿದ್ದರು. ಈ ವಿಡಿಯೋದಲ್ಲಿ ಬಹಳ ವೇಗವಾಗಿ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವರಿಂದ ಖಂಡನೆ ವ್ಯಕ್ತವಾಗಿತ್ತು. ಅದೂ ಅಲ್ಲದೇ ಸುದೀಪಾ ಅವರು ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ಸಚಿವ ಬಬುಲ್‌ ಸುಪ್ರಿಯೋ ಅವರಿಗೆ ಆಪ್ತರಾಗಿರುವ ಕಾರಣ ಈ ವಿಚಾರ ರಾಜಕೀಯ ಆಯಾಮವನ್ನೂ ಪಡೆದುಕೊಂಡಿತ್ತು. ಅದೂ ಅಲ್ಲದೇ ಈ ಬಗ್ಗೆ ಸ್ವತಃ ಬಬುಲ್‌ ಸುಪ್ರಿಯೋ ಪ್ರತಿಕ್ರಿಯಿಸಿದ್ದು, ರಾಜಕೀಯ ಕಾರಣಕ್ಕಾಗಿ ಆಕೆಯನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದರು.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಸುದೀಪಾ, ನನ್ನನ್ನು ಟ್ರೋಲ್ ಮಾಡುತ್ತಿರುವ ಹೆಚ್ಚಿನ ಜನರು ವೀಡಿಯೊವನ್ನು ನೋಡಿಲ್ಲ ಎಂದು ನನಗೆ ಖಾತ್ರಿಯಿದೆ. ನಾನು ಎಂದಿಗೂ ಗೋಮಾಂಸವನ್ನು ತಿನ್ನುವುದಿಲ್ಲ, ಅದನ್ನು ಬೇಯಿಸುವುದು ಬಿಟ್ಟುಬಿಡಿ, ಅದನ್ನು ಮುಟ್ಟಲಿಲ್ಲ. ಎರಡನೆಯದಾಗಿ, ಕರೀಂ ಜಹಾನ್ (ಕಾರ್ಯಕ್ರಮದಲ್ಲಿ ಭಾಗವಹಿಸಿದವರು) ಅಡುಗೆ ಮಾಡುವ ವೀಡಿಯೊಗಳು ಇನ್ನೂ ಎಡಿಟ್ ಆಗಿಲ್ಲ, ನಾನು ಗೋಮಾಂಸವನ್ನು ಮುಟ್ಟಿದ್ದೇನೆ ಎಂದು ತಪ್ಪು ಭಾವಿಸಿದ್ದೀರಿ ಎಂದು ಹೇಳಿದ್ದಾರೆ.

ಇನ್ನು ಕೆಲವು ತಿಂಗಳುಗಳ ಹಿಂದೆ ಖ್ಯಾತ ಯೂಟ್ಯೂಬರ್‌ ಕಾಮಿಯಾ ಜಾನಿ (Kamiya Jani) ವಿರುದ್ಧವೂ ಇಂತಹದ್ದೇ ಆರೋಪ ಕೇಳಿ ಬಂದಿತ್ತು. ಕಾಮಿಯಾ ಜಾನಿ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿದ್ದು, ʼಕರ್ಲಿ ಟೇಲ್ಸ್‌ʼ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಕಾಮಿಯಾ ಜಾನಿ ಈ ಹಿಂದೆ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಗೋಮಾಂಸ ಭಕ್ಷಣೆಯ ಕುರಿತು ವಿಡಿಯೋ ಮಾಡಿದ್ದರು. ಅವರು ಪುರಿ ಜಗನ್ನಾಥ ದೇವಸ್ಥಾನದ ಅಭಿವೃದ್ದಿಗಾಗಿ ಅಲ್ಲಿನ ಸರ್ಕಾರ ರೂಪಿಸಿರುವ ‘ಪರಿಕ್ರಮ’ ಎಂಬ ಯೋಜನೆಯಲ್ಲಿ ಪಾಲ್ಗೊಂಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ:Lakshmi Hebbalkar: ಅಂಗನವಾಡಿಗಳಿಗೆ ಕಳಪೆ ಆಹಾರ ಪೂರೈಕೆಯಾದರೆ ಉಪನಿರ್ದೇಶಕರ ಮೇಲೆ ಕಠಿಣ ಕ್ರಮ: ಹೆಬ್ಬಾಳಕರ್

Exit mobile version