Site icon Vistara News

savings rates : ಸುಕನ್ಯಾ ಸಮೃದ್ಧಿ, ಅಂಚೆ ಎಫ್‌ಡಿ ಬಡ್ಡಿದರ ಏರಿಕೆ!

sukanya samruddhi

ನವ ದೆಹಲಿ: ಕೇಂದ್ರ ಸರ್ಕಾರವು (Central Government) ಸಣ್ಣ ಉಳಿತಾಯಗಾರರಿಗೆ (savings rates ) ಸಿಹಿ ಸುದ್ದಿ ನೀಡಿದೆ. 2024ರ ಜನವರಿ-ಮಾರ್ಚ್‌ ಅವಧಿಗೆ ಸಣ್ಣ ಉಳಿತಾಯ ಯೋಜನೆಗಳ (Small Saving Schemes) ಬಡ್ಡಿ ದರಗಳನ್ನು 0.20% ತನಕ ಏರಿಸಲಾಗಿದೆ(Rate of Interests). ಸುಕನ್ಯಾ ಸಮೃದ್ಧಿ (sukanya samriddhi) ಮತ್ತು 3 ವರ್ಷಗಳ ಅವಧಿಯ ಪೋಸ್ಟ್‌ ಆಫೀಸ್‌ ಬಡ್ಡಿ ದರಗಳನ್ನು ಏರಿಸಲಾಗಿದೆ(Post office FD). ಹಣಕಾಸು ಸಚಿವಾಲಯವು 2023ರ ಡಿಸೆಂಬರ್‌ 29ರಂದು ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಹೀಗಿದ್ದರೂ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)‌ ಬಡ್ಡಿ ದರ 7.1% ರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

ಅಂಚೆ ಇಲಾಖೆಯ ಉಳಿತಾಯ ಯೋಜನೆಗಳ ಪರಿಷ್ಕೃತ ಬಡ್ಡಿ ದರ ಇಂತಿದೆ.

ಉಳಿತಾಯ ಸಾಧನ2023 ಅಕ್ಟೋಬರ್-ಡಿಸೆಂಬರ್‌ ಬಡ್ಡಿ ದರ(%)2024ರ ಜನವರಿ-ಮಾರ್ಚ್‌ ಬಡ್ಡಿದರ(%)
ಉಳಿತಾಯ ಠೇವಣಿ44
1 ವರ್ಷಗಳ ಟೈಮ್‌ ಡೆಪಾಸಿಟ್‌6.96.9
2 ವರ್ಷಗಳ ಟೈಮ್‌ ಡೆಪಾಸಿಟ್‌77
3 ವರ್ಷಗಳ ಟೈಮ್‌ ಡೆಪಾಸಿಟ್‌77.1
5 ವರ್ಷಗಳ ಟೈಮ್‌ ಡೆಪಾಸಿಟ್7.57.5
5 ವರ್ಷಗಳ ರಿಕರಿಂಗ್‌ ಡೆಪಾಸಿಟ್6.76.7
ಹಿರಿಯ ನಾಗರಿಕರ ಉಳಿತಾಯ ಯೋಜನೆ8.28.2
ಮಾಸಿಕ ಆದಾಯ ಖಾತೆ ಯೋಜನೆ7.47.4
ನ್ಯಾಶನಲ್‌ ಸೇವಿಂಗ್ಸ್‌ ಸ್ಕೀಮ್‌7.77.7
ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಸ್ಕೀಮ್‌7.17.1
ಕಿಸಾನ್‌ ವಿಕಾಸ ಪತ್ರ7.5 (115 ತಿಂಗಳಲ್ಲಿ ಮೆಚ್ಯೂರಿಟಿ)7.5
ಸುಕನ್ಯಾ ಸಮೃದ್ಧಿ ಖಾತೆ88.2

ಸಣ್ಣ ಉಳಿತಾಯ ಬಡ್ಡಿ ಲೆಕ್ಕಾಚಾರ ಹೇಗೆ?

ಸರ್ಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪರಿಷ್ಕರಿಸುತ್ತದೆ. ಶ್ಯಾಮಲಾ ಗೋಪಿನಾಥ್‌ ಸಮಿತಿಯ ವರದಿಯನ್ನು ಆಧರಿಸಿ ಈ ಬಡ್ಡಿ ದರಗಳು ನಿಗದಿಯಾಗುತ್ತವೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಕ್ಕೂ 10 ವರ್ಷಗಳ ಅವಧಿಯ ಸರ್ಕಾರಿ ಸಾಲಪತ್ರಗಳು ನೀಡುವ ಆದಾಯಕ್ಕೂ ಸಂಬಂಧವಿದೆ. ಈ ಸಮಿತಿ 2011ರಲ್ಲಿ ಸಲ್ಲಿಸಿದ್ದ ವರದಿಯಲ್ಲಿ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಮಾರುಕಟ್ಟೆಯ ಏರಿಳಿತಗಳಿಗೆ ಲಿಂಕ್‌ ಕಲ್ಪಿಸಬೇಕು ಎಂದಿತ್ತು.

ಕೇವಲ ಚಿನ್ನ , ಸಣ್ಣ ಉಳಿತಾಯ ಯೋಜನೆಗಳು ಅಥವಾ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದರಿಂದ ಕೆಲವು ಅನಾನುಕೂಲತೆ ಇದೆ. ಹೂಡಿಕೆಯನ್ನು ವೈವಿಧ್ಯಗೊಳಿಸಲು ಮ್ಯೂಚುವಲ್ ಫಂಡ್‌ ಸೂಕ್ತ. ಹಣದುಬ್ಬರ ಉನ್ನತ ಮಟ್ಟದಲ್ಲಿ ಇದ್ದಾಗ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ನಿಮ್ಮ ಹೂಡಿಕೆಯನ್ನು ಹೆಚ್ಚಿಸುವುದಿಲ್ಲ. ಬದಲಿಗೆ ಮೌಲ್ಯವನ್ನು ಕಳೆಯುತ್ತದೆ. ಹೀಗಾಗಿ ಮ್ಯೂಚುವಲ್‌ ಫಂಡ್‌ ಸಹಕಾರಿಯಾಗುತ್ತದೆ.

ಈ ಸುದ್ದಿಯನ್ನೂ ಓದಿ: SBI FD Rates: ಎಫ್‌ಡಿ ಠೇವಣಿದಾರರಿಗೆ ಎಸ್‌ಬಿಐ ಗುಡ್‌ ನ್ಯೂಸ್;‌ ಬಡ್ಡಿದರ ಭಾರಿ ಹೆಚ್ಚಳ

Exit mobile version