Site icon Vistara News

Taliban firing | ಶಾಲೆಗೆ ಬಂದ ಬಾಲಕಿಯರ ಮೇಲೆ ಗುಂಡು ಹಾರಿಸಿದ ತಾಲಿಬಾನ್‌ ಉಗ್ರರು

taliban

ಕಾಬೂಲ್:‌ ಅಫಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರ ಅಟ್ಟಹಾಸಕ್ಕೆ ಬಾಲಕಿಯರು ಬಲಿಪಶುಗಳಾಗುತ್ತಿದ್ದಾರೆ. ಶಿಕ್ಷಣವನ್ನು ಮುಂದುವರಿಸಲು ಶಾಲೆಗೆ ಬಂದ ಬಾಲಕಿಯರ ಮೇಲೆ ತಾಲಿಬಾನ್‌ ಉಗ್ರರು ಮನಬಂದಂತೆ ಗುಂಡು ಹಾರಿಸುತ್ತಿರುವ, ಗನ್‌ಗಳಿಂದ ಹೊಡೆಯುತ್ತಿರುವ ದೃಶ್ಯ ಜಾಲತಾಣಗಳಲ್ಲಿ ವೈರಲ್‌ ಆಗಿದೆ. (Taliban firing) ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮೋನಿಕಾ ವರ್ಮಾ ಎಂಬುವರು ಮಾಡಿರುವ ಟ್ವೀಟ್‌ನಲ್ಲಿ, ತಾಲಿಬಾನ್‌ ಶಿಕ್ಷಣ ಬಯಸುವ ಬಾಲಕಿಯರ ಮೇಲೆ ಗುಂಡು ಹಾರಿಸುತ್ತಿದೆ. ಆದರೆ ಏನೀಗ? ಕನಿಷ್ಠ ಸುದ್ದಿಗೋಷ್ಠಿ ನಡೆಸಿದ್ದಾರೆ.. ಎಂದು ಖಂಡಿಸಿದ್ದಾರೆ.

ತಾಲಿಬಾನ್‌ ಅಫಘಾನಿಸ್ತಾನದಲ್ಲಿ ಬಾಲಕಿಯರು ಮತ್ತು ಮಹಿಳೆಯರ ಶಿಕ್ಷಣವನ್ನು ನಿರ್ಬಂಧಿಸಿದೆ. ಇದರೊಂದಿಗೆ ಜಗತ್ತಿನಲ್ಲಿ ಮಹಿಳೆಯರಿಗೆ, ಬಾಲಕಿಯರಿಗೆ ಶಿಕ್ಷಣ ನಿರಾಕರಿಸಿದ ಏಕೈಕ ರಾಷ್ಟ್ರ ಎಂಬ ಕಳಂಕಕ್ಕೆ ಅಫಘಾನಿಸ್ತಾನ ಪಾತ್ರವಾಗಿದೆ.

Exit mobile version