ಚೆನ್ನೈ: ಬಹುಜನ ಸಮಾಜ ಪಕ್ಷದ (BSP President) ತಮಿಳುನಾಡು ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ (Armstrong) ಅವರನ್ನು ಹತ್ಯೆ ಬೆನ್ನಲ್ಲೇ ತಮಿಳುನಾಡಿನಲ್ಲಿ ಮತ್ತೊರ್ವ ರಾಜಕೀಯ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ(Tamil nadu Violence) ನಡೆದಿದೆ. ಕಡಲೂರಿನಲ್ಲಿ ಈ ಘಟನೆ ನಡೆದಿದ್ದು, ಎನ್‌ಡಿಎ ಮಿತ್ರಪಕ್ಷ, ಅನ್ಬುಮಣಿ ರಾಮದಾಸ್ ನೇತೃತ್ವದ ಪಟ್ಟಲ್ಲಿ ಮಕ್ಕಳ ಕಚ್ಚಿ(PMK) ಪಕ್ಷದ ಮುಖಂಡನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಿದ್ದಾರೆ.
கடலூரில் பா.ம.க. நிர்வாகிக்கு அரிவாள் வெட்டு
— Dr S RAMADOSS (@drramadoss) July 7, 2024
கண்டிக்கத்தக்கது: திமுக ஆட்சியில் சட்டம் –
ஒழுங்கு முற்றிலுமாக சீர்குலைந்து விட்டது!
கடலூர் மாவட்டம் சூரப்பநாயக்கன் சாவடியைச் சேர்ந்த பாட்டாளி மக்கள் கட்சியின் நிர்வாகி சங்கர், அதே பகுதியைச் சேர்ந்த நால்வரால் கொடூரமாக… pic.twitter.com/l1Z1L7l3df
ಪಿಎಂಕೆ ನಾಯಕ ಶಿವಶಂಕರ್ ಮೇಲೆ ಈ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಂಭೀಕರವಾಗಿ ಗಾಯಗೊಂಡಿರುವ ಅವರು ಜೋವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಮೂಲತಃ ಕೇಬಲ್ ಟಿವಿ ಆಪರೇಟರ್ ಆಗಿರುವ ಶಿವಶಂಕರ್, ತಿರುಪಾಪುಲಿಯೂರ್‌ನಲ್ಲಿರುವ ತಮ್ಮ ಮನೆಯ ಮುಂದೆ ನಿಂತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಅವರ ಮೇಲೆ ಕತ್ತಿಯಿಂದ ಹಲ್ಲೆಗೆ ಶುರು ಮಾಡಿದ್ದಾರೆ. ಶಿವಶಂಕರ್ ಓಡಲು ಶುರು ಮಾಡಿದಾಗ ದುಷ್ಕರ್ಮಿಗಳು ಅವರನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಇನ್ನು ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಾರಣಾಂತಿಕ ಹಲ್ಲೆಯಲ್ಲಿ ಶಿವಶಂಕರ್ ಕುತ್ತಿಗೆ ಬಾಯಿ ಮತ್ತು ಭುಜಕ್ಕೆ ಭಾರೀ ಗಾಯಗಳಾಗಿವೆ. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಘಟನೆಗೆ ಅನ್ಬುಮಣಿ ರಾಮದಾಸ್ ಖಂಡನೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಪೊಲೀಸರ ನಿರ್ಲಕ್ಷ್ಯವೇ ಇಂತಹ ದುರ್ಘಟನೆಗೆ ಕಾರಣ. ಶಂಕರನ ಸಹೋದರ ಪ್ರಭು ಮೂರು ವರ್ಷಗಳ ಹಿಂದೆ ಬರ್ಬರವಾಗಿ ಕೊಲೆಯಾಗಿದ್ದ. ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ಶಂಕರ್‌ಗೆ ತಂಡವೊಂದು ನ್ಯಾಯಾಲಯಕ್ಕೆ ಹಾಜರಾಗದಂತೆ ಬೆದರಿಕೆ ಹಾಕಿತ್ತು. ಆದರೆ ಆ ನಂತರವೂ ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ, ಶಂಕರ್‌ಗೆ ರಕ್ಷಣೆಯನ್ನೂ ನೀಡಿಲ್ಲ. ಇದು ಕ್ರೂರ ಕೊಲೆ ಯತ್ನಕ್ಕೆ ಕಾರಣವಾಯಿತು. ಇದು ಪೊಲೀಸರ ಆಲಸ್ಯ ಮತ್ತು ಅಸಮರ್ಥತೆಯನ್ನು ತೋರಿಸುತ್ತದೆ ಎಂದು ದೂರಿದ್ದಾರೆ. ಘಟನೆಗೆ ಬಿಜೆಪಿ ನಾಯಕರು ಕೂಡ ಖಂಡನೆ ವ್ಯಕ್ತಪಡಿಸಿದ್ದಾರೆ.
Big
— Shehzad Jai Hind (Modi Ka Parivar) (@Shehzad_Ind) July 8, 2024
After BSP chief of Tamil Nadu now
PMK leader fatally attacked in Cuddalore Tamil Nadu
Shocking video
Law and order in Tamil Nadu has collapsed
Instead of handing over probe to CBI- DMK Congress protecting accused
Will Khalnayak Rahul Gandhi visit 65 Dalit victims… pic.twitter.com/Qf4YQaLQzb
ರಾಜಕೀಯ ಹತ್ಯೆ, ಹಿಂಸಾಚಾರ, ಬೇರೆ ರಾಜಕೀಯ ಪಕ್ಷದ ನಾಯಕರ ಮೇಲೆ ಹಲ್ಲೆಗಳು ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಲೇ ಇರುತ್ತವೆ. ಈಗ ಇಂತಹ ರಾಜಕೀಯ ದ್ವೇಷದ ಹತ್ಯೆಗಳು ತಮಿಳುನಾಡಿಗೂ ಕಾಲಿಟ್ಟಿವೆ. ಇದಕ್ಕೆ ನಿದರ್ಶನ ಎಂಬಂತೆ, ಕೆಲವು ದಿನಗಳ ಹಿಂದೆಯಷ್ಟೇ ಬಹುಜನ ಸಮಾಜ ಪಕ್ಷದ (BSP President) ತಮಿಳುನಾಡು ಘಟಕದ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್ (Armstrong) ಅವರನ್ನು ಹತ್ಯೆ ಮಾಡಲಾಗಿತ್ತು. ಚೆನ್ನೈನಲ್ಲಿರುವ (Chennai) ಅವರ ನಿವಾಸದ ಬಳಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು.
ಇದನ್ನೂ ಓದಿ: Viral Video: ಹೃಷಿಕೇಶದ ಗಂಗಾ ಘಾಟ್‌ನಲ್ಲಿ ಬಿಕಿನಿ ಧರಿಸಿದ ವಿದೇಶಿಯರ ಮೋಜು ಮಸ್ತಿ!