Site icon Vistara News

Viral Video | ಹೆದ್ದಾರಿಯಲ್ಲಿ ದಿಟ್ಟ ಮಹಿಳೆಯ ಟ್ರಕ್‌ ಸವಾರಿ

woman truck driver

ತಮಿಳುನಾಡು: Viral Video | ಪುರುಷರಿಗಿಂತಲೂ ಮಹಿಳೆಯರು ಎಲ್ಲದರಲ್ಲೂ ಮೇಲುಗೈ ಅಂತ ಆಗಾಗ ನಿರೂಪಿಸ್ತಾನೆ ಇರ್ತಾರೆ. ಅದರಲ್ಲೂ ಈಗಿನ ಕಾಲಮಾನದಲ್ಲಿ ಮಹಿಳೆ ಯಾವುದರಲ್ಲೂ ಹಿಂದೆಯಿಲ್ಲ ಎಂಬುದಕ್ಕೆ ಈಗಾಗಲೇ ಹಲವು ನಿದರ್ಶನಗಳು ನಮ್ಮ ಮುಂದಿದೆ. ತಮಿಳುನಾಡಿನಲ್ಲಿ ಮಹಿಳೆಯೊಬ್ಬರು ಟ್ರಕ್​ ಚಾಲನೆ ಮಾಡುತ್ತಿದ್ದಾರೆ. ಅವರ ದಿಟ್ಟತನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಐಪಿಎಸ್ ಅವಿನಾಶ್​ ಶರಣ್​ ತಮ್ಮ ಟ್ವಿಟರ್​ನಲ್ಲಿ ಈ ಕುರಿತ ವಿಡಿಯೋವೊಂದರನ್ನು ಹಂಚಿಕೊಂಡಿದ್ದಾರೆ. ತಮಿಳುನಾಡಿನ ಹೆದ್ದಾರಿಯಲ್ಲಿ ಮಹಿಳೆಯೊಬ್ಬರು ಟ್ರಕ್​ ಚಾಲನೆ ಮಾಡಿಕೊಂಡು ಹೋಗುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಹೆದ್ದಾರಿಯಲ್ಲಿ ಮಹಿಳೆ ವೇಗವಾಗಿ ಟ್ರಕ್​ ಚಲಾಯಿಸಿಕೊಂಡು ಬರುತ್ತಿರುವ ದೃಶ್ಯವನ್ನು ಪಕ್ಕದ ಟ್ರಕ್​ನಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಈ ವಿಡಿಯೋಗೆ ಕ್ಯಾಪ್ಷನ್ ನೀಡಿರುವ ಅವಿನಾಶ್ ಶರಣ್, “ಟ್ರಕ್​ಗೆ ಮಹಿಳೆ ಅಥವಾ ಪುರುಷ ಎಂಬ ಭೇಧಭಾವವಿಲ್ಲ. ಯಾರೇ ಚಾಲಕರಿದ್ದರೂ ಅದು ಸರಾಗವಾಗಿ ಸಾಗುತ್ತದೆʼ ಎಂದು ಬರೆದಿದ್ದಾರೆ.

ಮಹಿಳೆ ಹೆದ್ದಾರಿಯಲ್ಲಿ ಟ್ರಕ್​ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೊ ನೋಡಿದವರು ಮಹಿಳೆಯ ಧೈರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ.

ಇದನ್ನು ಓದಿ| ನಾಗಿನ್‌ ಹಾರ್ನ್‌ ಸದ್ದಿಗೆ ರಸ್ತೆಯಲ್ಲೇ ಕುಣಿದ ಯುವಕರು, ವಿಡಿಯೋ ವೈರಲ್

Exit mobile version