ಪಟನಾ: ಬಿಹಾರ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav) ಅವರು ದೈವಭಕ್ತರು. ನನ್ನ ಕನಸಿನಲ್ಲಿ ಶ್ರೀರಾಮ ಬಂದಿದ್ದ, ನನ್ನ ತಂದೆಯೇ ಬಂದು ಹೀಗೆ ಹೇಳಿದರು ಎಂಬುದಾಗಿ ಇದಕ್ಕೂ ಮೊದಲು ಅವರು ತಿಳಿಸಿದ್ದಾರೆ. ಈಗ ತೇಜ್ ಪ್ರತಾಪ್ ಯಾದವ್ ಅವರು ದೇವಾಲಯವೊಂದರಲ್ಲಿ ಶಿವಲಿಂಗವನ್ನು ತಬ್ಬಿ ಕುಳಿತು ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಅವರು ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೊ ಈಗ ವೈರಲ್ (Viral Video) ಆಗಿದೆ.
ಹೌದು, ತೇಜ್ ಪ್ರತಾಪ್ ಯಾದವ್ ಅವರು ಶಿವಲಿಂಗವನ್ನು ತಬ್ಬಿಕೊಂಡು ಕುಳಿತಿದ್ದಾರೆ. ಅವರ ಮೈಮೇಲೆ ಹಾಲಿನ ಕ್ಷೀರಾಭಿಷೇಕ ನಡೆದಿದೆ. ಒಂದು ನಿಮಿಷಕ್ಕೂ ಹೆಚ್ಚು ಅವಧಿವರೆಗೆ ಅಭಿಷೇಕ ನಡೆದಿದ್ದು, ಮುಗಿಯುವವರೆಗೂ ತೇಜ್ ಪ್ರತಾಪ್ ಯಾದವ್ ಅವರು ಶಿವಲಿಂಗವನ್ನು ತಬ್ಬಿಕೊಂಡೇ ಕುಳಿತಿದ್ದರು. ಆದರೆ, ತೇಜ್ ಪ್ರತಾಪ್ ಯಾದವ್ ಅವರು ಯಾವ ದೇವಾಲಯದಲ್ಲಿ ಹೀಗೆ ಶಿವಲಿಂಗವನ್ನು ತಬ್ಬಿಕೊಂಡು ಕುಳಿತಿದ್ದರು ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
Mahadev is the symbol of ultimate truth. To embrace Mahadev is to embrace the deepest, most profound aspects of ourselves.
— Tej Pratap Yadav (@TejYadav14) July 7, 2024
To find peace in the midst of chaos is to find Mahadev.
🕉️🔱Har Har Mahadev🕉️🔱 @yadavtejashwi @RJDforIndia @yadavakhilesh @RahulGandhi pic.twitter.com/aK5Ow9j7zq
ಶಿವಲಿಂಗವನ್ನು ತಬ್ಬಿಕೊಂಡು ಕುಳಿತ ವಿಡಿಯೊವನ್ನು ತೇಜ್ ಪ್ರತಾಪ್ ಯಾದವ್ ಅವರೇ ಹಂಚಿಕೊಂಡಿದ್ದಾರೆ. ಇದರ ಜತೆಗೆ ಅವರು ಒಕ್ಕಣೆಯನ್ನೂ ಬರೆದುಕೊಂಡಿದ್ದಾರೆ. “ಮಹಾದೇವನು ಪರಮ ಸತ್ಯದ ಪ್ರತೀಕ. ಮಹಾದೇವನನ್ನು ಅಪ್ಪಿಕೊಳ್ಳುವುದು ಎಂದರೆ, ನಮ್ಮ ಮನಸ್ಸಿನ ಆಳವನ್ನು ನಾವೇ ತಲುಪಿದಂತೆ. ಮನಸ್ಸಿನ ತುಂಬ ತುಂಬಿರುವ ಅಶಾಂತಿಯನ್ನು ನಿರ್ಮೂಲನೆ ಮಾಡಬೇಕು ಎಂದರೆ, ಮಹಾದೇವನ ಮೊರೆಹೋಗಿ” ಎಂಬುದಾಗಿ ತೇಜ್ ಪ್ರತಾಪ್ ಯಾದವ್ ಅವರು ಪೋಸ್ಟ್ ಮಾಡಿದ್ದಾರೆ.
ರಾಮ ಕನಸಲ್ಲಿ ಬಂದ ಎಂದಿದ್ದ ತೇಜ್ ಪ್ರತಾಪ್ ಯಾದವ್
ರಾಮಮಂದಿರ ಉದ್ಘಾಟನೆಗೂ ಮೊದಲು “ರಾಮ ನನ್ನ ಕನಸಲ್ಲಿ ಬಂದಿದ್ದ” ಎಂಬುದಾಗಿ ತೇಜ್ ಪ್ರತಾಪ್ ಯಾದವ್ ಹೇಳಿದ್ದರು. “ಚುನಾವಣೆಗಳು ಮುಗಿದ ಬಳಿಕ ಭಗವಾನ್ ಶ್ರೀರಾಮನನ್ನು ಮರೆಯುತ್ತಾರೆ. ಜನವರಿ 22ರಂದೇ ಶ್ರೀರಾಮನು ರಾಮಮಂದಿರವನ್ನು ಪ್ರವೇಶಿಸುತ್ತಾನೆಯೇ? ಹಾಗಂತ ನಿಯಮಗಳೇನಾದರೂ ಇವೆಯೇ? ಭಗವಾನ್ ಶ್ರೀರಾಮನು ನಾಲ್ವರು ಶಂಕರಾಚಾರ್ಯರ ಕನಸಿನಲ್ಲಿ ಬಂದಿದ್ದಾನೆ. ಆತನು ನನ್ನ ಕನಸಿನಲ್ಲೂ ಬಂದಿದ್ದು, ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದಿದ್ದಾನೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಪಟತನ ಇರುವುದರಿಂದ ಹೋಗುವುದಿಲ್ಲ ಎಂದು ಹೇಳಿದ್ದಾನೆ” ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದರು.
ಇದನ್ನೂ ಓದಿ: Bhai Bhatijavaad | ಮೋದಿ ʼಪರಿವಾರವಾದʼ ಟೀಕೆ ಬೆನ್ನಲ್ಲೇ ತೇಜ್ ಪ್ರತಾಪ್ ಯಾದವ್ ಸಭೆಯಲ್ಲಿ ಅವರ ಬಾವ ಭಾಗಿ!