ನವದೆಹಲಿ: ಮಹಾಲಯ ಅಮವಾಸ್ಯೆಯ ದಿನವಾದ ಶನಿವಾರ (ಅಕ್ಟೋಬರ್ 14) ಜಗತ್ತಿನ ಹಲವೆಡೆ ಸೂರ್ಯಗ್ರಹಣ ಗೋಚರಿಸಿದೆ. ಭಾರತ ಹೊರತುಪಡಿಸಿ ಹಲವು ದೇಶಗಳಲ್ಲಿ ಸೂರ್ಯಗ್ರಹಣ ಗೋಚರಿಸಿದ್ದು, ಆಗಸದಲ್ಲಿ ಸೂರ್ಯನು ಮಿನುಗುವ ಫೋಟೊಗಳು ಲಭ್ಯವಾಗಿವೆ. ಸೂರ್ಯನು ಕೆಂಪು ಆಕಾರ ತಳೆದಿರುವ, ಅರ್ಧ ಚಂದ್ರದ ರೀತಿ ಆಗಿರುವ ಹಲವು ಫೋಟೊಗಳು ವೈರಲ್ ಆಗಿವೆ. ಕೆಲವು ಫೋಟೊಗಳ ಗ್ಯಾಲರಿ ಇಲ್ಲಿದೆ.
ಸೂರ್ಯ ಗ್ರಹಣವು ಟೆಕ್ಸಾಸ್‌ನಲ್ಲಿ ಆರಂಭವಾಗಿದ್ದು, ಮೆಕ್ಸಿಕೋ, ಯುಕಾಟಾನ್ ಪೆನಿನ್ಸುಲಾ, ಗ್ವಾಟೆಮಾಲಾ, ಹೊಂಡಾರುಸ್, ನಿಕರಾಗುವಾ, ಕೋಸ್ಟರಿಕಾದಲ್ಲಿ ಗೋಚರಿಸಿದೆ.
ಪನಾಮ, ಮಧ್ಯ ಅಮೆರಿಕ, ಉತ್ತರ ಅಮೆರಿಕ, ಕೊಲಂಬಿಯಾ ಮತ್ತು ಬ್ರೆಜಿಲ್‌ನಲ್ಲಿ ಇತ್ಯಾದಿ ದೇಶಗಳಲ್ಲಿ ಗೋಚರಿಸುವುದರ ಜತೆಗೆ ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲೂ ಗ್ರಹಣ ಸಂಭವಿಸಿದೆ. ಹೀಗಾಗಿ ಈ ಭಾಗದಲ್ಲಿ ಮಾತ್ರ ಗ್ರಹಣ ಪರಿಣಾಮ ಉಂಟಾಗಿದೆ.
ಇದನ್ನೂ ಓದಿ: NASA mission: ʼಬೆನ್ನುʼ ಮುಟ್ಟಿ ಬಂದ ಓಸಿರಿಸ್ ರೆಕ್ಸ್, ಭೂಮಿಗಿಳಿದ ಕ್ಷುದ್ರಗ್ರಹ ಮಾದರಿ ಈಗ ನಾಸಾ ವಿಜ್ಞಾನಿಗಳ ಕೈಯಲ್ಲಿ