ನವದೆಹಲಿ: ಜಿ20 ಶೃಂಗಸಭೆಗೆ (G20 Summit 2023) ಆತಿಥ್ಯವನ್ನು ವಹಿಸುತ್ತಿರುವ ಭಾರತವು ಇದಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ದಿಲ್ಲಿಯಲ್ಲಿ (New Delhi) ಸೆಪ್ಟೆಂಬರ್ 9ರಿಂದ 10ರವರೆಗೆ ನಡೆಯಲಿರುವ ಈ ಶೃಂಗಸಭೆಯಲ್ಲಿ 25 ರಾಷ್ಟ್ರಗಳ ನಾಯಕರು (Leaders From 25 Countries) ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜಿ20 ಶೃಂಗಸಭೆಯು ಭಾರತಕ್ಕೆ (Host Country India) ಈ ರೀತಿಯ ಮೊದಲ ಕಾರ್ಯಕ್ರಮವಾಗಿದ್ದು, ಶೃಂಗಸಭೆಯು ಯಾವುದೇ ತೊಂದರೆಯಿಲ್ಲದೆ ಮುಕ್ತಾಯಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಅವಿರತವಾಗಿ ದುಡಿಯುತ್ತಿದೆ.
ವಿಶ್ವ ನಾಯಕರ ಭದ್ರತೆಗೆ ವಿಶೇಷ ಆದ್ಯತೆ
ಶೃಂಗ ಸಭೆ ನಡೆಯಲಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿರುವ ಎಲ್ಲ ಉನ್ನತ ಮಟ್ಟದ ಹೊಟೇಲ್‌ಗಳನ್ನು ಅಂತಾರಾಷ್ಟ್ರೀಯ ಅತಿಥಿಗಳಿಗಾಗಿ ಮುಂಗಡವಾಗಿ ಬುಕ್ ಮಾಡಲಾಗಿದೆ. ಕಾರ್ಯಕ್ರಮದ ವೇಲೆ ಸಂಚಾರ ದಟ್ಟಣೆಯನ್ನು ತಪ್ಪಿಸುವುದಕ್ಕಾಗಿ ದಿಲ್ಲಿ ಪೊಲೀಸರು ಟ್ರಾಫಿಕ್ ರಿಹರ್ಸಲ್ ಮಾಡುತ್ತಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆ 2023 ಭದ್ರತೆಯ ದೃಷ್ಟಿಯಿಂದ ಒಂದು ನಿರ್ಣಾಯಕ ಘಟನೆಯಾಗಿದೆ ಮತ್ತು ಅದಕ್ಕಾಗಿಯೇ ಭಾರತ ಸರ್ಕಾರವು ಭೇಟಿ ನೀಡುವ ನಾಯಕರ ಭದ್ರತಾ ಅಗತ್ಯಗಳನ್ನು ಸರಿಹೊಂದಿಸಲು 20 ಆಡಿ ಬುಲೆಟ್ ರೆಸಿಸ್ಟೆಂಟ್ ಕಾರುಗಳನ್ನು 18 ಕೋಟಿ ರೂ. ಬಾಡಿಗೆಗೆ ಪಡೆದಿದೆ.
ದಿಲ್ಲಿಯಲ್ಲಿ ಸಾರ್ವಜನಿಕ ರಜೆ
ಬುಲೆಟ್ ರೆಸಿಸ್ಟೆಂಟ್ ಕಾರುಗಳನ್ನು ವಿವಿಧ ರಾಷ್ಟ್ರಗಳ ನಾಯಕರು ಮತ್ತು ಸರ್ಕಾರದ ಮುಖ್ಯಸ್ಥರಿಗೆ ವಹಿಸುವುದು ಪ್ರೋಟೋಕಾಲ್ ಕಾರ್ಯವಿಧಾನವಾಗಿದೆ. ನವದಿಲ್ಲಿಯಲ್ಲಿ ನಡೆಯುವ ಶೃಂಗಸಭೆಯು ವರ್ಷವಿಡೀ ನಡೆದ ಎಲ್ಲಾ G20 ಸಭೆಗಳು ಮತ್ತು ಪ್ರಕ್ರಿಯೆಗಳ ಅಂತಿಮಘಟ್ಟವಾಗಿದೆ. ಮೆಗಾ ಈವೆಂಟ್ ಯಾವುದೇ ಗೊಂದಲವಿಲ್ಲದೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೆಪ್ಟೆಂಬರ್ 8-10 ರವರೆಗೆ ದೆಹಲಿಯಲ್ಲಿ ಸಾರ್ವಜನಿಕ ರಜೆ ಘೋಷಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಜಿ20 ಶೃಂಗಸಭೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಪ್ರಧಾನಿ ಮೋದಿ; ಹೊಗಳಿ, ಹೇಳಿಕೆ ಬಿಡುಗಡೆ ಮಾಡಿದ ಅಮೆರಿಕ ವೈಟ್ಹೌಸ್
ಯಾವ ರಾಷ್ಟ್ರಗಳು, ಸಂಘಟನೆಗಳು ಭಾಗವಹಿಸುತ್ತಿವೆ?
ಜಿ20 ಗ್ರೂಪ್‌ನ 20 ಸದಸ್ಯ ರಾಷ್ಟ್ರಗಳನ್ನು ಹೊರತುಪಡಿಸಿ, 9 ದೇಶಗಳ ನಾಯಕರನ್ನು ಈ ಶೃಂಗ ಸಭೆಗೆ ಸೇರಲು ಆಹ್ವಾನಿಸಲಾಗಿದೆ. ವಿಶ್ವಸಂಸ್ಥೆ, ಐಎಂಎಫ್, ವಿಶ್ವ ಬ್ಯಾಂಕ್, ವಿಶ್ವ ಆರೋಗ್ಯ ಸಂಸ್ಥೆ, ಐಎಲ್ಒ, ವಿಶ್ವ ವ್ಯಾಪಾರ ಸಂಘಟನೆ, ಎಫ್ಎಸ್‌ಬಿ, ಒಇಸಿಡಿ ಪಾಲ್ಗೊಳ್ಳಲಿವೆ. ಅಲ್ಲದೇ, ಎಯು, ಎುಡಿಎ-ಎನ್ಇಪಿಎಡಿ, ಆಸಿಯಾನ್ ಸೇರಿದಂತೆ ಪ್ರಾದೇಶಿಕ ಸಂಸ್ಥೆಗಳ ಚೇರ್ಮನ್‌ಗಳಿಗೆ ಆಹ್ವಾನ ನೀಡಲಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.