ನವ ದೆಹಲಿ: ದೈನಂದಿನ ಬಳಕೆಯಲ್ಲಿರುವ ಹಲವಾರು ಔಷಧಗಳ ದರಗಳಲ್ಲಿ ಶೀಘ್ರ ( Medicine price ) ಇಳಿಕೆಯಾಗಲಿದೆ.
ಡಯಾಬಿಟಿಸ್ (ಮಧುಮೇಹ), ಎಚ್‌ಐವಿ, ಹೆಪಟೈಟಿಸ್ ಸಿ ಚಿಕಿತ್ಸೆಯಲ್ಲಿ ಬಳಸುವ ಔಷಧಗಳು, ಕಾಂಡೋಮ್ ಸೇರಿದಂತೆ ಗರ್ಭ ನಿರೋಧಕಗಳ ದರಗಳಲ್ಲಿ ಇಳಿಕೆಯಾಗಲಿದೆ. ಸರ್ಕಾರವು ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯನ್ನು (NLEM) ಬಿಡುಗಡೆಗೊಳಿಸಿದೆ.
ಮಧುಮೇಹ ಕುರಿತ ಚಿಕಿತ್ಸೆಯಲ್ಲಿ ಬಳಸುವ ಟೆನಿಲಿಗ್ಲಿಪ್ಟಿನ್ (Teneligliptin), ಇನ್ಸುಲಿನ್ ಗ್ಲಾರ್ಗಿನ್ ಇಂಜೆಕ್ಷನ್ (Insulin glargine injection), ಸಾಮಾನ್ಯ anti biotics ವಿಭಾಗದ ಮೆರೊಪೆನೆಮ್, ಸೆರ್‌ಫ್ಯೂರೋಕ್ಸಿನ್ ಔಷಧಗಳ ದರ ಇಳಿಕೆಯಾಗಲಿದೆ. ಈ ಔಷಧಗಳನ್ನು ಅಗತ್ಯ ಔಷಧಗಳ ಪಟ್ಟಿಗೆ ಸೇರಿಸಲಾಗುತ್ತಿದೆ.