ನವದೆಹಲಿ: ಆರ್ಥಿಕ ಹಿಂಜರಿತ ಅನಿಶ್ಚಿತತೆ (Economic recession)ಮತ್ತು ಭೌಗೋಳಿಕ ಸಂಘರ್ಷಗಳ (geopolitical tensions) ನಡುವೆಯೇ ಈ ವರ್ಷ ಬಂಗಾರದ ಬೆಲೆ ಭಾರೀ ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು (Gold Price) ಅಖಿಲ ಭಾರತ ರತ್ನ ಮತ್ತು ಚಿನ್ನಾಭರಣ ದೇಶಿ ಸಮಿತಿ(GJC) ಅಭಿಪ್ರಾಯ ಮಾಡಿದೆ. 2024ರ ವರ್ಷದಲ್ಲಿ 10 ಗ್ರಾಮ್ ಬಂಗಾರ ಬೆಲೆ 70 ಸಾವಿರ ರೂ.ವರೆಗೂ ಏರಿಕೆಯಾಗುವ ನಿರೀಕ್ಷೆ ಇದೆ. ಹಣದುಬ್ಬರ ವಿರುದ್ಧ ಬಂಗಾರ ಖರೀದಿಯು ಈ ವರ್ಷ ಅತ್ಯುತ್ತಮ ಆಯ್ಕೆ ಎನಿಸಿಕೊಳ್ಳಲಿದೆ(best time to invest).
ಹಳದಿ ಲೋಹದ ಮೇಲಿನ ಹೂಡಿಕೆಯು ಹಣದುಬ್ಬರದ ವಿರುದ್ಧ ಪರಿಪೂರ್ಣ ಆಯ್ಕೆಯಾಗಿ 2024ರಲ್ಲೂ ಮುಂದುವರಿಯುವ ಸಾಧ್ಯತೆಯಿದೆ. ಏಕೆಂದರೆ ಗ್ರಾಹಕರು, ಹೆಚ್ಚಿನ ಸರಕು ಬೆಲೆಗಳು ಮತ್ತು ವಿಶ್ವಾದ್ಯಂತ ಹೆಚ್ಚಿದ ಬಡ್ಡಿದರಗಳನ್ನು ಎದುರಿಸುತ್ತಾರೆ, ಹೀಗಾಗಿ ಹಣಕಾಸು ಮಾರುಕಟ್ಟೆ ಸಾಕಷ್ಟು ಅನಿಶ್ಚಿತತೆಯಾಗಿರುತ್ತದೆ ಎಂದು ಜಿಜೆಸಿ ಅಧ್ಯಕ್ಷ ಸಾಯಂ ಮೆಹ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆರ್ಥಿಕ ಪರಿಸ್ಥಿತಿಗಳು ಹದಗೆಟ್ಟರೆ, ರಕ್ಷಣಾತ್ಮಕ ಸ್ವತ್ತುಗಳಿಗೆ ಬೇಡಿಕೆಯನ್ನು ಹೆಚ್ಚಿಸಿದರೆ, ಚಿನ್ನದ ಬೆಲೆಗಳು ಏರಿಕೆಯಾಗಬಹುದು. ಇದು ಹಿಂದಿನಾ ಎಲ್ಲ ಮುನ್ಸೂಚನೆಗಳನ್ನು ತಲೆಕೆಳಗು ಮಾಡುವ ಸಾಧ್ಯತೆಗಳಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2023 ರಲ್ಲಿ ಜಾಗತಿಕ ಆರ್ಥಿಕ ಕುಸಿತದ ಮಧ್ಯೆ ಅಮೆರಿಕ ಬಡ್ಡಿದರದ ಏರಿಕೆ ಸ್ಥಗಿತ, ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಹೆಚ್ಚಿನ ಹಣದುಬ್ಬರದಿಂದಾಗಿ ಸುರಕ್ಷಿತ ಹೂಡಿಕೆಯ ಭಾಗವಾಗಿ ಚಿನ್ನದ ಖರೀದಿ ಹೆಚ್ಚಾಗಿತ್ತು. ಇದು ಇತರ ಹೂಡಿಕೆ ಉತ್ಪನ್ನಗಳನ್ನು ಮೀರಿಸಿತ್ತು ಎಂದು ಸಾಯಂ ಮೆಹ್ರಾ ಅವರು ತಿಳಿಸಿದ್ದಾರೆ. ಶೇ.13 ರಿಟರ್ನ್‌ನೊಂದಿಗೆ ಬಂಗಾರವು ಅತ್ಯಂತ ಆಕರ್ಷಕ ಹೂಡಿಕೆಯಾಗಿ 2023ರಲ್ಲಿ ಮುಂದುವರಿದಿತ್ತು ಎಂದು ಅವರು ತಿಳಿಸಿದ್ದಾರೆ.
22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ತುಸು ಏರಿಕೆ
22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಬೆಲೆಗಳಲ್ಲಿ (Gold Rate Today) ಮಂಗಳವಾರ ಕ್ರಮವಾಗಿ ₹20 ಮತ್ತು ₹22 ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದು ನೀವು ಒಂದು ಗ್ರಾಂ 22 ಕ್ಯಾರಟ್ ಚಿನ್ನವನ್ನು ₹5,875ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹47,000 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್ ಚಿನ್ನವನ್ನು ₹58,750 ಮತ್ತು ₹5,87,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹6,409 ಆಗಿದ್ದರೆ, ಎಂಟು ಗ್ರಾಂ ಬೆಲೆ ₹51,272 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹64,090 ಮತ್ತು ₹6,40,900 ವೆಚ್ಚವಾಗಲಿದೆ.
ಒಂದು ಗ್ರಾಂ ಬೆಳ್ಳಿಯ ಬೆಲೆ ₹76, ಎಂಟು ಗ್ರಾಂ ₹608 ಮತ್ತು 10 ಗ್ರಾಂ ₹760ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹7,600 ಮತ್ತು 1 ಕಿಲೋಗ್ರಾಂಗೆ ₹ 76,000 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.
ಈ ಸುದ್ದಿಯನ್ನೂ ಓದಿ: Theft Case : ದೇವರ ಪೂಜೆ ದಿನ ಉಂಡು ಹೋದವರು 21 ಕೆಜಿ ಚಿನ್ನ, ಬೆಳ್ಳಿ ಕೊಂಡೂ ಹೋದರು!