Site icon Vistara News

Triple Talaq: ಯೋಗಿ ಆದಿತ್ಯನಾಥ್‌, ಮೋದಿಯನ್ನು ಹೊಗಳಿದ ಮಹಿಳೆಗೆ ಘೋರ ಶಿಕ್ಷೆ; ಬೆಂಕಿ ಹಚ್ಚಿ, ತ್ರಿವಳಿ ತಲಾಖ್‌ ನೀಡಿದ ಪಾಪಿ ಪತಿ

Triple Talaq

ಲಖನೌ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಹೊಗಳಿದ್ದಕ್ಕಾಗಿ ಮುಸ್ಲಿಂ ಮಹಿಳೆಗೆ ಪತಿ ಬೆಂಕಿ ಹಚ್ಚಿ ನಂತರ ತ್ರಿವಳಿ ತಲಾಖ್ (Triple Talaq) ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೂಲತಃ ಉತ್ತರ ಪ್ರದೇಶದ ಬಹ್ರೈಚ್ ಮೂಲದ ಮಹಿಳೆ ಅಯೋಧ್ಯೆಯ ಅರ್ಷದ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯ ನಂತರ ಅಯೋಧ್ಯೆಗೆ ಬಂದ ಮಹಿಳೆ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರ ಉತ್ತಮ ಕೆಲಸಗಳಿಂದ ಪ್ರಭಾವಿತರಾಗಿ ಈ ಇಬ್ಬರು ನಾಯಕರ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಇದರಿಂದ ಕೆರಳಿದ ಅರ್ಷದ್ ಬೆಂಕಿ ಹಚ್ಚಿ ತ್ರಿವಳಿ ತಲಾಖ್‌ ನೀಡಿದ್ದಾನೆ ಎಂದು ಮೂಲಗಳು ತಿಳಿಸಿದ್ದಾರೆ. ಕೊಟ್ವಾಲಿ ನಗರದ ದೆಹಲಿ ದರ್ವಾಜಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಇದೀಗ ಅರ್ಷದ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಯೋಧ್ಯೆ ಮತ್ತು ಬಹ್ರೈಚ್ ಜಿಲ್ಲೆಗಳ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಲ್ಲದೆ ಅರ್ಷದ್ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ ಎಂಬ ಆರೋಪವೂ ಇದೆ.

ಸಂತ್ರಸ್ತೆ ಹೇಳಿದ್ದೇನು?

ಹಳ್ಳಿ ಪ್ರದೇಶದಲ್ಲಿ ಬೆಳೆದ ಸಂತ್ರಸ್ತೆ ತಾನು ಮದುವೆಯಾದ ಬಳಿಕ ಅಯೋಧ್ಯೆಗೆ ಆಗಮಿಸಿ ಇಲ್ಲಿನ ವ್ಯವಸ್ಥೆ ಕಂಡು ಪ್ರಭಾವಕ್ಕೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ʼʼಹೀಗಾಗಿ ಪತಿಯ ಬಳಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ ಅವರನ್ನು ಹೊಗಳಿದ್ದೆ. ಇದರಿಂದ ಕೆರಳಿದ ಆತ ಅವಹೇಳನಕಾರಿಯಾಗಿ ನಿಂದಿಸಿದ. ಬಳಿಕ ಮನೆಯೊಂದ ಹೊರ ಹಾಕಿದ. ಮಾತುಕತೆಯ ನಂತರ ಅತ್ತೆ ಮನೆಗೆ ಹಿಂದಿರುಗಿದೆ. ಆಗ ಅರ್ಷದ್‌ ತ್ರಿವಳಿ ತಲಾಖ್ ನೀಡಿದ ಮತ್ತು ದೈಹಿಕವಾಗಿ ಹಲ್ಲೆ ನಡೆಸಿದ. ಜೀವ ಉಳಿಸಿಕೊಳ್ಳಲು ಅತ್ತೆ ಮನೆಯಿಂದ ಹೊರಬಂದೆʼʼ ಎಂದು ಮಹಿಳೆ ತಿಳಿಸಿದ್ದಾರೆ.

ಬಿಜೆಪಿಗೆ ಮತ ಹಾಕಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ!

ಕೆಲವು ದಿನಗಳ ಹಿಂದೆ ಈ ಮಾದರಿಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿತ್ತು. ಮಹಿಳೆಯೊಬ್ಬರು ಬಿಜೆಪಿಯನ್ನು ಬೆಂಬಲಿಸಿ ವೋಟ್ ಹಾಕಿದ್ದಕ್ಕೆ ಕೋಪಗೊಂಡ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ್ದ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಳಿಕ ಈ ಬಗ್ಗೆ ಮಹಿಳೆ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

ದೂರಿನಲ್ಲಿ ಮಹಿಳೆ, ತಾನು ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಸ್ವಲ್ಪ ಸಮಯದ ನಂತರ ಅತ್ತೆ, ಪತಿ ಹಾಗೂ ನಾದಿನಿಯರು ಹಿಂಸೆ ನೀಡಿ ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆ. ಒಂದೂವರೆ ವರ್ಷದಿಂದ ಪತಿಯ ಜತೆ ಆಕೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ. ಆದರೆ ಬಿಜೆಪಿಯನ್ನು ಬೆಂಬಲಿಸಿ ಅದರ ಪರವಾಗಿ ಮತ ಹಾಕಿದ್ದಕ್ಕೆ ಕೋಪಗೊಂಡ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ತಿಳಿಸಿದ್ದರು. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯ ಪತಿ, ಅತ್ತೆ ಹಾಗೂ ನಾದಿನಿಯರ ವಿರುದ್ಧ ವರದಕ್ಷಿಣ ನಿಷೇಧ ಕಾಯಿದೆ, ಮುಸ್ಲಿಂ ಮಹಿಳೆಯರ ಕಾಯ್ದೆ ಮತ್ತು ಭಾರತೀಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: Triple Talaq : ತ್ರಿವಳಿ ತಲಾಖ್​​ಗೆ ಶಿಕ್ಷೆ ಆಗಲೇಬೇಕು; ಸುಪ್ರೀಂ ಕೋರ್ಟ್​ಗೆ ಹೊಸ ಅಫಿಡವಿಟ್​ ಸಲ್ಲಿಸಿ ಕಾನೂನನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರ

Exit mobile version