ನವದೆಹಲಿ: ದೃಢೀಕರಣಗೊಂಡ ಖಾತೆಗಳನ್ನು (Verified Accounts) ಹೊಂದಿರುವ ಕಂಟೆಂಟ್ ಕ್ರಿಯೇಟರ್‌ಗಳಿಗೆ (Content Creators) ಜಾಹೀರಾತು ಆದಾಯದಲ್ಲಿ (Advertising Revenue) ಹಣ ನೀಡುವುದಾಗಿ ಟ್ವಿಟರ್ (Twitter) ಗುರುವಾರ ಘೋಷಣೆ ಮಾಡಿದೆ. ಅಂದರೆ, ವೆರಿಫೈಡ್ ಟ್ವಿಟರ್ ಖಾತೆಗಳಿಗೆ ದೊರೆಯಲಿದೆ. ತಮ್ಮ ರಿಪ್ಲೈಗಳಲ್ಲಿ ಪ್ರದರ್ಶಿಸಲಾದ ಜಾಹೀರಾತು ಆದಾಯದಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಪಾಲನ್ನು ಪಡೆಯಲಿದ್ದಾರೆ. ಇದಕ್ಕೆ ಅರ್ಹರಾಗಲು ಕಳೆದ 3 ತಿಂಗಳುಗಳಲ್ಲಿ ತಮ್ಮ ಪೋಸ್ಟ್‌ಗಳಲ್ಲಿ ಕನಿಷ್ಠ 5 ಮಿಲಿಯನ್ ಇಂಪ್ರೆಶನ್‌ಗಳನ್ನು ಹೊಂದಿರಬೇಕು. ಸ್ಟ್ರೈಪ್ ಪೇಮೆಂಟ್ ಅಕೌಂಟ್ ಹೊಂದಿರಬೇಕಾಗುತ್ತದೆ(Twitter Monetization).
ತನ್ನ ವೇದಿಕೆಗಳಲ್ಲಿ ಹೆಚ್ಚು ಕಂಟೆಂಟ್ ಕ್ರಿಯೇಟರ್‌ಗಳನ್ನು ಪಡೆಯಲು ಟ್ವಿಟರ್ ಪ್ಲ್ಯಾನ್ ಮಾಡುತ್ತಿದೆ. ಈ ವರ್ಷದ ಆರಂಭದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ ತಮ್ಮ ವಿಷಯಕ್ಕೆ ಪಾವತಿಸಿದ ಚಂದಾದಾರಿಕೆಯನ್ನು ನೀಡಲು ಕಂಪನಿಯು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿತು.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮೈಕ್ರೋಬ್ಲಾಗಿಂಗ್ ಟ್ವಿಟರ್ ಖರೀದಿಸಿದ ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು, ಪಾವತಿ ಗೇಟ್‌ವೇ ಶುಲ್ಕಗಳನ್ನು ಹೊರತುಪಡಿಸಿ ಕಂಪನಿಯು ಮೊದಲ ವರ್ಷದಲ್ಲಿ ಸಂಪೂರ್ಣ ಚಂದಾದಾರಿಕೆಯ ಆದಾಯವನ್ನು ಕಂಟೆಂಟ್ ಕ್ರಿಯೇಟರ್ಸ್‌ಗೆ ವರ್ಗಾಯಿಸಲಾಗುತ್ತದೆ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: ವಿಸ್ತಾರ Explainer: Thread Launch: ಟ್ವಿಟರ್‌ನಂತೆ ಥ್ರೆಡ್ ಬಳಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಮಾರ್ಕ್ ಜುಕರ್‌ಬರ್ಗ್ ಒಡೆತನದ ಮೆಟಾ ಇತ್ತೀಚೆಗಷ್ಟೇ ಟ್ವಿಟರ್‌ಗೆ ನೇರವಾಗಿ ಪೈಪೋಟಿ ನೀಡುವ ಥ್ರೆಡ್ ಆ್ಯಪ್ ಆರಂಭಿಸಿದ ಬೆನ್ನಲ್ಲೇ, ಟ್ವಿಟರ್ ಕಂಟೆಂಟ್ ಕ್ರಿಯೇಟರ್‌ಗಳಿಗೆ ಆದಾಯದ ಪಾಲು ನೀಡಲು ನಿರ್ಧಾರವನ್ನು ಕೈಗೊಂಡಿದೆ. ಲಾಂಚ್ ಆದ ಐದೇ ದಿನದಲ್ಲಿ ಥ್ರೆಡ್ 10 ಕೋಟಿ ಬಳಕೆದಾರರನ್ನು ಹೊಂದಿದೆ. ವ್ಯಾಪಾರ ರಹಸ್ಯಗಳು ಮತ್ತು ಇತರ ಗೌಪ್ಯ ಮಾಹಿತಿ ಹೊಂದಿದ್ದ ಮಾಜಿ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಎಂದು ಆರೋಪಿಸಿ ಟ್ವಿಟರ್ ಕಂಪನಿಯು ಮೆಟಾ ವಿರುದ್ಧ ಮೊಕದ್ದಮೆ ಹೂಡುವುದಾಗಿ ಹೇಳಿದೆ.
ತಂತ್ರಜ್ಞಾನ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.