Site icon Vistara News

Twitter Accounts Delete | 150 ಕೋಟಿ ಟ್ವಿಟರ್‌ ಖಾತೆ ರದ್ದುಗೊಳಿಸಲು ಮಸ್ಕ್‌ ತೀರ್ಮಾನ, ಏನಿದಕ್ಕೆ ಕಾರಣ?

Twitter To Delete 150 Crore Accounts

ವಾಷಿಂಗ್ಟನ್‌: ಟ್ವಿಟರ್‌ ಖರೀದಿಸಿದ ಬಳಿಕ ಎಲಾನ್‌ ಮಸ್ಕ್‌ ಕೈಗೊಂಡ ಹತ್ತಾರು ಕ್ರಮಗಳು ಸುದ್ದಿಯಾಗಿವೆ. ಇದರ ಬೆನ್ನಲ್ಲೇ ಎಲಾನ್‌ ಮಸ್ಕ್‌ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದ್ದಾರೆ. ಟ್ವಿಟರ್‌ ಖಾತೆ ತೆರೆದು, ಸಕ್ರಿಯರಾಗಿರದ ಸುಮಾರು ೧೫೦ ಕೋಟಿ ಖಾತೆಗಳನ್ನು ಡಿಲೀಟ್‌ (Twitter Accounts Delete) ಮಾಡಲು ತೀರ್ಮಾನಿಸಿದ್ದಾರೆ.

“ಟ್ವಿಟರ್‌ ಸ್ಪೇಸ್‌ ಉಳಿಸಲು ತೀರ್ಮಾನಿಸಲಾಗಿದೆ. ವರ್ಷಗಟ್ಟಲೆ ಟ್ವಿಟರ್‌ ಲಾಗಿನ್‌ ಆಗದವರು, ಟ್ವೀಟ್‌ ಮಾಡದವರು ಸೇರಿ ವಿವಿಧ ರೀತಿಯಲ್ಲಿ ಸಕ್ರಿಯವಾಗಿರದ ಖಾತೆಗಳನ್ನು ರದ್ದುಗೊಳಿಸಲಾಗುತ್ತದೆ. ಇದಕ್ಕೂ ಮೊದಲು, ಟ್ವಿಟರ್‌ ಖಾತೆದಾರರಿಗೆ ಡಿಲೀಟ್‌ ಮಾಡುವ ಕುರಿತು ಮಾಹಿತಿ ನೀಡಲಾಗುತ್ತದೆ. ಅವರು ಸಕ್ರಿಯವಾಗಿರುವುದನ್ನು ದೃಢೀಕರಿಸಬಹುದು, ಕೋರಿಕೆ ಸಲ್ಲಿಸಬಹುದು” ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.

ಟ್ವಿಟರ್‌ ನಕಲಿ ಖಾತೆಗಳ ವಿರುದ್ಧವೂ ಎಲಾನ್‌ ಮಸ್ಕ್‌ ಸಮರ ಸಾರಿದ್ದಾರೆ. ನಿಖರ ಮಾಹಿತಿ ನೀಡಿದವರ ಖಾತೆಗಳನ್ನು ರದ್ದುಗೊಳಿಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ, ಸಕ್ರಿಯವಾಗಿ ಬಳಸದವರ ಖಾತೆಗಳನ್ನೂ ರದ್ದುಗೊಳಿಸಲು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ | Elon Musk | ಟ್ವಿಟರ್‌ ನಕಲಿ ಖಾತೆಗಳಿಗೆ ಮಸ್ಕ್‌ ಮಾಸ್ಟರ್‌ಸ್ಟ್ರೋಕ್‌, ‘ಪರೋಡಿ’ಗಳ ಕಾಯಂ ಬ್ಯಾನ್‌ಗೆ ಕ್ರಮ

Exit mobile version