Site icon Vistara News

Union Budget 2023: ರೈಲ್ವೆಗೆ 2.41 ಲಕ್ಷ ಕೋಟಿ ರೂ. ಹಂಚಿಕೆ, ಯಾವುದಕ್ಕೆಲ್ಲ ವೆಚ್ಚ?

Union Budget 2023 allocated to RS 2.41 Crore to Railway

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್‌ನಲ್ಲಿ (Union Budget 2023) ರೈಲ್ವೆಗಾಗಿ 2,41,267.51 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಹಿಂದೆಂದೂ ನೀಡಿರದಷ್ಟು ಹಣವನ್ನು ಈ ಸಲದ ಬಜೆಟ್​​ನಲ್ಲಿ ರೈಲ್ವೆ ಕ್ಷೇತ್ರಕ್ಕೆ ಕೊಡಲಾಗಿದೆ. 2013-14ರ ಬಜೆಟ್​ನಲ್ಲಿ ರೈಲ್ವೆ ವಲಯಕ್ಕೆ ನೀಡಲಾಗಿದ್ದ ಹಣದ 9ಪಟ್ಟು ಹೆಚ್ಚು ಇದು ಎಂಬುದು ವಿಶೇಷ.

ರೈಲ್ವೆ ವಲಯದ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದ ನಿರ್ಮಲಾ ಸೀತಾರಾಮನ್​ ಅವರು, 100 ನಿರ್ಣಾಯಕ ಸಾರಿಗೆ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು. ಹಾಗೇ, ವಂದೇ ಭಾರತ್​ ರೈಲು ಸಂಚಾರ ವಿಸ್ತರಣೆಯ ಬಗ್ಗೆಯೂ ಅಗತ್ಯ ಕ್ರಮ ಕೈಗೊಳ್ಳುವುದು ಈ ಯೋಜನೆಯಲ್ಲಿ ಸೇರಿದೆ ಎಂದು ಹೇಳಿದರು.

ಹೊಸ ರೈಲು ಮಾರ್ಗಗಳ ನಿರ್ಮಾಣ

ಹೊಸ ರೈಲು ಮಾರ್ಗಗಳ ನಿರ್ಮಾಣ, ನ್ಯಾರೋ ಗೇಜ್‌ಗಳನ್ನು ಬ್ರಾಡ್‌ ಗೇಜ್‌ಗಳಾಗಿ ಪರಿವರ್ತನೆ, ಹೊಸ ಮಾರ್ಗಗಳ ಡಬ್ಲಿಂಗ್ ಮತ್ತು ಸೇತುವೆ, ಸುರಂಗ ಇತ್ಯಾದಿಗಳ ನಿರ್ಮಾಣಗಳ ಮೇಲೆ 2023-24 ಹಣಕಾಸು ವರ್ಷದಲ್ಲಿ ರೈಲ್ವೆ ಇಲಾಖೆ ಹೆಚ್ಚು ಗಮನ ಹರಿಸಲಿದೆ. ದೇಶದ ಗುಡ್ಡಗಾಡು ಪ್ರದೇಶದಲ್ಲೂ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹೊಸ ರೈಲು ಮಾರ್ಗಗಳನ್ನು ಹಾಕುವುದು ಮಹತ್ವದ್ದಾಗಿದೆ. ಇದಕ್ಕಾಗಿ ಒಟ್ಟು 31,850 ಕೋಟಿ ರೂ. ಮೀಸಲಾಗಿರಿಸಲಾಗಿದೆ. ಗೇಜ್ ಪರಿವರ್ತನೆಗೆ 4,600 ಕೋಟಿ ರೂ. ಎತ್ತಿಡಲಾಗಿದೆ.

ಇದೇ ವೇಳೆ, ರೈಲು ಮಾರ್ಗಗಳ ವಿದ್ಯುದ್ದೀಕರಣಕ್ಕಾಗಿ ಇಲಾಖೆಯ 8,070 ಕೋಟಿ ರೂ. ಎತ್ತಿಟ್ಟಿದೆ. ಹಾಗಾಗಿ, ಸೇತುವೆಗಳು, ಸುರಂಗಳ ಮಾರ್ಗ ನಿರ್ಮಾಣ ಮತ್ತಿತರ ಕಾರ್ಯಗಳಿಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ 1,255 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ.

ಇದನ್ನೂ ಓದಿ: Union Budget 2023: ನಮ್ಮ ಬಜೆಟ್‌ ಅನ್ನು ಜಗತ್ತು ಸ್ವೀಕರಿಸಲು 10 ಕಾರಣ ನೀಡಿದ ವಿದೇಶಾಂಗ ಸಚಿವ ಜೈಶಂಕರ್

ಯಾವುದಕ್ಕೆ ಎಷ್ಟೆಷ್ಟು ಹಣ ವೆಚ್ಚ?

Exit mobile version