Site icon Vistara News

Union Budget 2024 : ಹೊಸ ಉದ್ಯೋಗಿಗಳಿಗೆ 1 ತಿಂಗಳ ವೇತನ, ಮುದ್ರಾ ಸಾಲ 20 ಲಕ್ಷ ರೂ.ಗೆ ಏರಿಕೆ- ಯುವಕರಿಗೆ ಬಂಪರ್‌ ಗಿಫ್ಟ್‌

union budget 2024

ಹೊಸದಿಲ್ಲಿ: ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಯುವಕರಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಯೋಜನೆಗಳನ್ನು ಘೋಷಿಸಲಾಗಿದೆ. ಉದ್ಯೋಗ ಸೃಷ್ಟಿ ಮತ್ತು ಕೌಶಲಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಈ ಬಜೆಟ್‌(Union Budget 2024) ನಲ್ಲಿ ಬರೋಬ್ಬರಿ 2ಲಕ್ಷ ಕೋಟಿ ರೂ ಘೋಷಿಸಿದೆ. ಇನ್ನು ಶಿಕ್ಷಣಕ್ಕೆ ಬರೋಬ್ಬರಿ 1.48 ಲಕ್ಷ ಕೋಟಿ ರೂ ಘೋಷಿಸಿದೆ. ಇನ್ನು ಹೊಸದಾಗಿ ಕೆಲಸಕ್ಕೆ ಸೇರುವ ಯುವಕರಿಗೆ ಒಂದು ತಿಂಗಳ ಸಂಬಳವನ್ನು ಸರ್ಕಾರವೇ ಪಾವತಿಸಲಿದೆ. ಅಲ್ಲದೇ 500 ಸಂಸ್ಥೆಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್‌ ಯೋಜನೆ ಘೋಷಿಸಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ.

ಈ ಬಾರಿ ಬಜೆಟ್‌ನಲ್ಲಿ ಶಿಕ್ಷಣ, ಉದ್ಯೋಗ ಮತ್ತು ಕೌಶಲಾಭಿವೃದ್ಧಿಗೆ ಅಧಿಕ ಒತ್ತು ನೀಡಿರುವ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ಬರೋಬ್ಬರಿ 20ಲಕ್ಷ ಯುವಕರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗುತ್ತದೆ ಎಂದು ಘೋಷಿಸಿದೆ. ಹೊಸ ಉದ್ಯೋಗಿಗಳಿಗೆ ಒಂದು ತಿಂಗಳ ವೇತನವನ್ನು ಸರ್ಕಾರ ನೀಡಲಿದೆ. ಇದರಿಂದ ಬರೋಬ್ಬರಿ 2.1ಲಕ್ಷ ಯುವಕರಿಗೆ ಬಹಳ ಅನಕೂಲಕರವಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು.

ಮುದ್ರಾ ಸಾಲ ಪ್ರಮಾಣ ಏರಿಕೆ

ಇನ್ನು ಉದ್ಯೋಗ ಸೃಷ್ಟಿ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ ಭರ್ಜರಿ ಯೋಜನೆ ಘೋಷಿಸಲಾಗಿದೆ. ಉತ್ಪಾದನಾ ಕ್ಷೇತ್ರದಲ್ಲಿ ನಾಲ್ಕು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ನೀಡಿರುವ ಕೇಂದ್ರ, ಮಾಲಿಕರು ಮತ್ತು ನೌಕರರಿಗೆ EPFO ಸೌಲಭ್ಯವನ್ನೂ ಘೋಷಿಸಿದೆ. ಮುದ್ರಾ ಯೋಜನೆ ಸಾಲದ ಪ್ರಮಾಣವನ್ನು 10ಲಕ್ಷ ರೂಗಳಿಂದ 20ಲಕ್ಷ ರೂ,ಗಳಿಗೆ ಹೆಚ್ಚಳ ಮಾಡಲಾಗಿದೆ. ವಿಶೇಷವಾಗಿ ಮಹಿಳಾ ಉದ್ಯೋಗಿಗಳನ್ನು ಕೇಂದ್ರೀಕರಿಸಿ ಕೌಶಾಲಾಭಿವೃದ್ಧಿ ತರಬೇತಿ ಮತ್ತು ಹಾಸ್ಟೆಲ್‌ ಸೌಲಭ್ಯ ಒದಗಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್‌ ತಮ್ಮ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ.

ಶಿಕ್ಷಣಕ್ಕೆ ಒತ್ತು

ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಶೈಕ್ಷಣಿಕ ಸಾಲದ ಪ್ರಮಾಣವನ್ನು ಹೆಚ್ಚಿಸಿದೆ. ದೇಶಿಯ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೀಡಲಾಗುತ್ತಿರುವ ಸಾಲದ ಪ್ರಮಾಣವನ್ನು 10ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್​​ನಲ್ಲಿ ಕೃಷಿ ಕ್ಷೇತ್ರಕ್ಕ ಭರ್ಜರಿ ಕೊಡುಗೆ; ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ

Exit mobile version