Site icon Vistara News

Union Budget 2024: ಕಾಶಿ ಕಾರಿಡಾರ್‌ ಮಾದರಿಯಲ್ಲಿ ಬಿಹಾರದ ಎರಡು ದೇಗುಲಗಳ ಅಭಿವೃದ್ಧಿ

Union budget 2024

ಹೊಸದಿಲ್ಲಿ: ಮೋದಿ 3.0 ಸರ್ಕಾರ(Modi Governmnet)ದ ಮೊದಲ ಬಜೆಟ್‌(Union Budget 2024) ಇಂದು ಮಂಡನೆ ಆಗಿದೆ. ಈ ಬಾರಿ ಕೇಂದ್ರ ಬಜೆಟ್‌ನಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ಕಾಶಿ ಮಾದರಿಯಲ್ಲಿ ಬಿಹಾರದ ಗಯಾದಲ್ಲಿರುವ ವಿಷ್ಣುಪಾದ ದೇವಾಲಯ(Vishnupad Temple) ಮತ್ತು ಮಹಾಬೋಧಿ(Mahabodhi Temple) ದೇಗುಲಗಳ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌(Nirmala Seetharaman) ಹೇಳಿದ್ದಾರೆ.

ವಿಷ್ಣುಪಾದ ದೇಗುಲ ಅತ್ಯಂತ ಪ್ರಾಚೀನ ದೇಗುಲ ಫಾಲ್ಗು ನದಿ ದಡದಲ್ಲಿರುವ ಭಗವಾನ್‌ ವಿಷ್ಣುವಿನ ದೇಗುವಲವಾಗಿದೆ. ಬೋಧ್‌ ಗಯಾದಲ್ಲಿರುವ ಮಹಾಬೋಧಿ ದೇಗುಲವಿಶ್ವ ಪಾರಂಪರಿಕಾ ಸ್ಥಳವೆಂದು ಯುನೆಸ್ಕೋ ಗುರುತಿಸಿದೆ. ಈ ಎರಡು ದೇಗುಲಗಳನ್ನು ವಿಶ್ವ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲಾಗುತ್ತದೆ. ಈ ದೇಗುಲಗಳು ಅಪಾರ ಆಧ್ಯಾತ್ಮಿಕ ಮಹತ್ವ ಹೊಂದಿದೆ. ಕಾಶಿ ಮಾದರಿಯಲ್ಲಿ ಅಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ವಿಷ್ಣುಪಾದ್ ದೇವಾಲಯ ಕಾರಿಡಾರ್ ಮತ್ತು ಮಹಾಬೋಧಿ ದೇವಾಲಯ ಕಾರಿಡಾರ್‌ನ ಸಮಗ್ರ ಅಭಿವೃದ್ಧಿಯನ್ನು ಬೆಂಬಲಿಸಲಾಗುವುದು ಮತ್ತು ಯಶಸ್ವಿ ಕಾಶಿ ವಿಶ್ವನಾಥ ದೇವಾಲಯದ ಕಾರಿಡಾರ್‌ನ ಮಾದರಿಯಲ್ಲಿ ಅವುಗಳನ್ನು ವಿಶ್ವದರ್ಜೆಯ ಯಾತ್ರಿಕರು ಮತ್ತು ಪ್ರವಾಸಿ ತಾಣಗಳಾಗಿ ಪರಿವರ್ತಿಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ಈ ಬಾರಿ ಉದ್ಯೋಗಿಗಳಿಗೆ, ತೆರಿಗೆ ಪಾವತಿದಾರರಿಗೆ ಅನುಕೂಲವಾಗುವ ದಿಸೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಹಲವು ಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಕೆ ಮಾಡಿರುವುದು, ಹೊಸ ತೆರಿಗೆಯ ಪದ್ಧತಿಯ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಮಾಡಿರುವ ಕಾರಣ 6-7 ಲಕ್ಷ ರೂ. ಹಾಗೂ 9-10 ಲಕ್ಷ ರೂ. ಆದಾಯ ಪಡೆಯುವವರು ವರ್ಷಕ್ಕೆ 17,500 ರೂ. ತೆರಿಗೆ ಉಳಿತಾಯ ಮಾಡಬಹುದಾಗಿದೆ.

ಸ್ಟಾಂಡರ್ಡ್‌ ಡಿಡಕ್ಷನ್‌ ಎಂಬುದು ತೆರಿಗೆ ವಿನಾಯಿತಿ ಆಗಿದ್ದು, ಇದಕ್ಕಾಗಿ ನೌಕರರು ಹೂಡಿಕೆ ಮಾಡಬೇಕಿಲ್ಲ. ತೆರಿಗೆ ಪಾವತಿಸಲು ಅರ್ಹವಿರುವವರು ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತದ ಅಡಿಯಲ್ಲಿ ವಿನಾಯಿತಿ ಪಡೆಯಲಿದ್ದಾರೆ. ಈ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತವನ್ನು ಕೇಂದ್ರ ಸರ್ಕಾರವೀಗ 75 ಸಾವಿರ ರೂ.ಗೆ ಏರಿಕೆ ಮಾಡಿರುವುದರಿಂದ, ಇನ್ನು ಹೊಸ ತೆರಿಗೆಯ ಸ್ಲ್ಯಾಬ್‌ಗಳ ಸ್ಟ್ರಕ್ಚರ್‌ ಬದಲಾವಣೆ ಮಾಡಿರುವುದರಿಂದ 6-7 ಲಕ್ಷ ರೂ. ಆದಾಯ ಗಳಿಸುವವರು ಶೇ.10ರಷ್ಟು ಬದಲು ಶೇ.5ರಷ್ಟು ತೆರಿಗೆ ಪಾವತಿಸುತ್ತಾರೆ. ಇನ್ನು, 9-10 ಲಕ್ಷ ರೂ. ಆದಾಯ ಗಳಿಸುವವರು ಶೇ.15ರ ಬದಲು ಶೇ.10ರಷ್ಟು ತೆರಿಗೆ ಪಾವತಿಸಲಿದ್ದಾರೆ.

ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್​ ನಮ್ಮ ಪ್ರಣಾಳಿಕೆ, ರಾಹುಲ್ ಗಾಂಧಿ ಆಲೋಚನೆಗಳ ನಕಲು; ಕಾಂಗ್ರೆಸ್​ ಟೀಕೆ

Exit mobile version