Site icon Vistara News

ಅಮೆರಿಕ ಸಂಸತ್ತಲ್ಲಿ ಮೋದಿ ವೈಭವ; ಸೆಲ್ಫಿ, ಆಟೋಗ್ರಾಫ್​ಗೆ ಮುಗಿಬಿದ್ದ ಯುಎಸ್​ ಸಂಸದರು, ಭಾರತಾಂಬೆಗೆ ಜೈಕಾರ

PM Modi Giving Autograph to US Lawmakers

#image_title

ಪ್ರಧಾನಿ ಮೋದಿ (PM Modi)ಅವರು ವಿಶ್ವದಲ್ಲೇ ಜನಪ್ರಿಯ ವ್ಯಕ್ತಿ ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಅಮೆರಿಕದಲ್ಲಿ ಅವರೀಗ ಎಲ್ಲ ಜನಪ್ರತಿನಿಧಿಗಳಿಗೂ ಚಿರಪರಿಚಿತರು. ಜೂ.21ರಿಂದ ಯುಎಸ್ ಪ್ರವಾಸ (PM Modi US Visit) ದಲ್ಲಿರುವ ಪ್ರಧಾನಿ ಮೋದಿ ಜೂನ್​ 22ರಂದು ಅಮೆರಿಕ ಸಂಸತ್ತಿನಲ್ಲಿ (United States Congress) ಸುದೀರ್ಘ ಭಾಷಣ ಮಾಡಿದರು. ಸುಮಾರು 1 ತಾಸುಗಳ ಕಾಲ ನಡೆದ ಅವರ ಭಾಷಣಕ್ಕೆ ಅಮೆರಿಕ ಕಾಂಗ್ರೆಸ್​ ಸದಸ್ಯರು, ಭಾರತ-ಅಮರಿಕ ಸಮುದಾಯದವರು ಶ್ರೋತೃಗಳಾಗಿದ್ದರು. ಪ್ರಧಾನಿ ಮೋದಿಯವರ ಮಾತುಗಳಿಗೆ (PM Modi Speech US) ಅಮೆರಿಕ ಸಂಸತ್​ ಸದಸ್ಯರು 12 ಬಾರಿ, ಎದ್ದುನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ. ಹಾಗೇ, ಭಾರತೀಯ ಮೂಲದವರು ಪ್ರತ್ಯೇಕವಾಗಿ ಎರಡು ಬಾರಿ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದು ತುಂಬ ವಿಶೇಷವಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮುಗಿಸುತ್ತಿದ್ದಂತೆ ಅಮೆರಿಕ ಸಂಸತ್ತಿನಲ್ಲಿ ಜೋರಾಗಿ ಚಪ್ಪಾಳೆ ತಟ್ಟಿದ್ದಲ್ಲದೆ, ಸಂಸತ್​ ಸದಸ್ಯರು, ಜನಪ್ರತಿನಿಧಿಗಳು, ಅಲ್ಲಿದ್ದ ಭಾರತೀಯ ಮೂಲದ ಪ್ರಮುಖರೆಲ್ಲ ಬಂದು ಪ್ರಧಾನಿ ಮೋದಿಯನ್ನು ಸುತ್ತುವರಿದಿದ್ದಾರೆ. ನರೇಂದ್ರ ಮೋದಿಯವರ ಜತೆ ಸೆಲ್ಫಿ ಕ್ಲಿಕ್​ ಮಾಡಿಕೊಂಡಿದ್ದಾರೆ. ಆಟೋಗ್ರಾಫ್​ ಕೂಡ ತೆಗೆದುಕೊಂಡಿದ್ದಾರೆ. ಅವರಿಗೆ ಶೇಕ್​ ಹ್ಯಾಂಡ್​ ಮಾಡಿ ಅಭಿನಂದಿಸಿದರು. ಮೋದಿ ಮುಖದಲ್ಲೂ ಸ್ವಚ್ಛಂದ ನಗು ಸ್ಪುರಿಸುತ್ತಿತ್ತು. ‘ಭಾರತ್ ಮಾತಾ ಕಿ ಜೈ, ವಂದೇ ಮಾತರಂ’ ಉದ್ಘೋಷಗಳೂ ಕೇಳುತ್ತಿದ್ದವು.

ಇದನ್ನೂ ಓದಿ: PM Modi US Visit: ಮೋದಿಗಾಗಿ ಭರ್ಜರಿ ಡಿನ್ನರ್​, ಎಲ್ಲ ಸಸ್ಯಾಹಾರ: ಜತೆಗಿರುವ ರೆಡ್ ವೈನ್​​ಗೆ ಇದೆ ಗುಜರಾತ್ ನಂಟು!

ಅಮೆರಿಕ ಸಂಸತ್ತಲ್ಲಿ, ಜನಪ್ರತಿನಿಧಿಗಳ ಜತೆ ಪ್ರಧಾನಿ ಮೋದಿ ಮಾತು

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಹಲವು ಪ್ರಮುಖ ವಿಷಯಗಳನ್ನು ಮಾತಾಡಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ಮೂಲದವರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದೇ ವೇಳೆ ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಬಗ್ಗೆ ಮಾತನಾಡಿದ ಅವರು ‘ಇಲ್ಲಿ ಭಾರತೀಯ ಬೇರು ಇರುವ ಅಮೆರಿಕದ ಜನರು ತುಂಬ ಜನ ಇದ್ದಾರೆ. ನನ್ನ ಹಿಂಭಾಗದಲ್ಲಿ ಕುಳಿತಿರುವವರೂ ಹಾಗೇ. ಅವರು ಅಮೆರಿಕದಲ್ಲಿ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ’ ಎಂದು ಹೇಳಿದರು. ಹಾಗೇ, ಜಿ20 ಶೃಂಗದ ಸದಸ್ಯತ್ವವನ್ನು ಆಫ್ರಿಕನ್ ದೇಶಗಳಿಗೆ ಕೊಡಬೇಕು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಸಂಸತ್ತಲ್ಲಿ ಭಾಷಣ ಮಾಡುತ್ತಿದ್ದಾಗ ಪದೇಪದೇ ಅಲ್ಲಿನ ಸಂಸದರು, ಭಾರತೀಯ ಸಮುದಾಯದವರು ಚಪ್ಪಾಳೆ ಹೊಡೆದು, ಹರ್ಷ ವ್ಯಪ್ತಪಡಿಸುತ್ತಿದ್ದರು.

ಇದನ್ನೂ ಓದಿ: PM Modi US Visit: ʼಸಮೋಸಾ ಕಾಕಸ್…‌ʼ: ಅಮೆರಿಕದ ಜಂಟಿ ಸದನ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಮಾಡಿದ ಮೋದಿ ಮಾತು!

Exit mobile version