ಅಮೆರಿಕ ಸಂಸತ್ತಲ್ಲಿ ಮೋದಿ ವೈಭವ; ಸೆಲ್ಫಿ, ಆಟೋಗ್ರಾಫ್​ಗೆ ಮುಗಿಬಿದ್ದ ಯುಎಸ್​ ಸಂಸದರು, ಭಾರತಾಂಬೆಗೆ ಜೈಕಾರ Vistara News

ದೇಶ

ಅಮೆರಿಕ ಸಂಸತ್ತಲ್ಲಿ ಮೋದಿ ವೈಭವ; ಸೆಲ್ಫಿ, ಆಟೋಗ್ರಾಫ್​ಗೆ ಮುಗಿಬಿದ್ದ ಯುಎಸ್​ ಸಂಸದರು, ಭಾರತಾಂಬೆಗೆ ಜೈಕಾರ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಹಲವು ಪ್ರಮುಖ ವಿಷಯಗಳನ್ನು ಮಾತಾಡಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ಮೂಲದವರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದೇ ವೇಳೆ ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಬಗ್ಗೆಯೂ ಮಾತನಾಡಿದರು.

VISTARANEWS.COM


on

PM Modi Giving Autograph to US Lawmakers
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಪ್ರಧಾನಿ ಮೋದಿ (PM Modi)ಅವರು ವಿಶ್ವದಲ್ಲೇ ಜನಪ್ರಿಯ ವ್ಯಕ್ತಿ ಎಂಬುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಅಮೆರಿಕದಲ್ಲಿ ಅವರೀಗ ಎಲ್ಲ ಜನಪ್ರತಿನಿಧಿಗಳಿಗೂ ಚಿರಪರಿಚಿತರು. ಜೂ.21ರಿಂದ ಯುಎಸ್ ಪ್ರವಾಸ (PM Modi US Visit) ದಲ್ಲಿರುವ ಪ್ರಧಾನಿ ಮೋದಿ ಜೂನ್​ 22ರಂದು ಅಮೆರಿಕ ಸಂಸತ್ತಿನಲ್ಲಿ (United States Congress) ಸುದೀರ್ಘ ಭಾಷಣ ಮಾಡಿದರು. ಸುಮಾರು 1 ತಾಸುಗಳ ಕಾಲ ನಡೆದ ಅವರ ಭಾಷಣಕ್ಕೆ ಅಮೆರಿಕ ಕಾಂಗ್ರೆಸ್​ ಸದಸ್ಯರು, ಭಾರತ-ಅಮರಿಕ ಸಮುದಾಯದವರು ಶ್ರೋತೃಗಳಾಗಿದ್ದರು. ಪ್ರಧಾನಿ ಮೋದಿಯವರ ಮಾತುಗಳಿಗೆ (PM Modi Speech US) ಅಮೆರಿಕ ಸಂಸತ್​ ಸದಸ್ಯರು 12 ಬಾರಿ, ಎದ್ದುನಿಂತು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸಿದ್ದಾರೆ. ಹಾಗೇ, ಭಾರತೀಯ ಮೂಲದವರು ಪ್ರತ್ಯೇಕವಾಗಿ ಎರಡು ಬಾರಿ ಎದ್ದು ನಿಂತು ಚಪ್ಪಾಳೆ ಹೊಡೆದಿದ್ದು ತುಂಬ ವಿಶೇಷವಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮುಗಿಸುತ್ತಿದ್ದಂತೆ ಅಮೆರಿಕ ಸಂಸತ್ತಿನಲ್ಲಿ ಜೋರಾಗಿ ಚಪ್ಪಾಳೆ ತಟ್ಟಿದ್ದಲ್ಲದೆ, ಸಂಸತ್​ ಸದಸ್ಯರು, ಜನಪ್ರತಿನಿಧಿಗಳು, ಅಲ್ಲಿದ್ದ ಭಾರತೀಯ ಮೂಲದ ಪ್ರಮುಖರೆಲ್ಲ ಬಂದು ಪ್ರಧಾನಿ ಮೋದಿಯನ್ನು ಸುತ್ತುವರಿದಿದ್ದಾರೆ. ನರೇಂದ್ರ ಮೋದಿಯವರ ಜತೆ ಸೆಲ್ಫಿ ಕ್ಲಿಕ್​ ಮಾಡಿಕೊಂಡಿದ್ದಾರೆ. ಆಟೋಗ್ರಾಫ್​ ಕೂಡ ತೆಗೆದುಕೊಂಡಿದ್ದಾರೆ. ಅವರಿಗೆ ಶೇಕ್​ ಹ್ಯಾಂಡ್​ ಮಾಡಿ ಅಭಿನಂದಿಸಿದರು. ಮೋದಿ ಮುಖದಲ್ಲೂ ಸ್ವಚ್ಛಂದ ನಗು ಸ್ಪುರಿಸುತ್ತಿತ್ತು. ‘ಭಾರತ್ ಮಾತಾ ಕಿ ಜೈ, ವಂದೇ ಮಾತರಂ’ ಉದ್ಘೋಷಗಳೂ ಕೇಳುತ್ತಿದ್ದವು.

ಇದನ್ನೂ ಓದಿ: PM Modi US Visit: ಮೋದಿಗಾಗಿ ಭರ್ಜರಿ ಡಿನ್ನರ್​, ಎಲ್ಲ ಸಸ್ಯಾಹಾರ: ಜತೆಗಿರುವ ರೆಡ್ ವೈನ್​​ಗೆ ಇದೆ ಗುಜರಾತ್ ನಂಟು!

PM Modi Waving At US Lawmakers
ಅಮೆರಿಕ ಸಂಸತ್ತಲ್ಲಿ ಜನಪ್ರತಿನಿಧಿಗಳ ಜತೆ ಪ್ರಧಾನಿ ಮೋದಿ ಮಾತು

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಹಲವು ಪ್ರಮುಖ ವಿಷಯಗಳನ್ನು ಮಾತಾಡಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ಮೂಲದವರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದೇ ವೇಳೆ ಯುಎಸ್​ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಬಗ್ಗೆ ಮಾತನಾಡಿದ ಅವರು ‘ಇಲ್ಲಿ ಭಾರತೀಯ ಬೇರು ಇರುವ ಅಮೆರಿಕದ ಜನರು ತುಂಬ ಜನ ಇದ್ದಾರೆ. ನನ್ನ ಹಿಂಭಾಗದಲ್ಲಿ ಕುಳಿತಿರುವವರೂ ಹಾಗೇ. ಅವರು ಅಮೆರಿಕದಲ್ಲಿ ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ’ ಎಂದು ಹೇಳಿದರು. ಹಾಗೇ, ಜಿ20 ಶೃಂಗದ ಸದಸ್ಯತ್ವವನ್ನು ಆಫ್ರಿಕನ್ ದೇಶಗಳಿಗೆ ಕೊಡಬೇಕು ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಸಂಸತ್ತಲ್ಲಿ ಭಾಷಣ ಮಾಡುತ್ತಿದ್ದಾಗ ಪದೇಪದೇ ಅಲ್ಲಿನ ಸಂಸದರು, ಭಾರತೀಯ ಸಮುದಾಯದವರು ಚಪ್ಪಾಳೆ ಹೊಡೆದು, ಹರ್ಷ ವ್ಯಪ್ತಪಡಿಸುತ್ತಿದ್ದರು.

ಇದನ್ನೂ ಓದಿ: PM Modi US Visit: ʼಸಮೋಸಾ ಕಾಕಸ್…‌ʼ: ಅಮೆರಿಕದ ಜಂಟಿ ಸದನ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಮಾಡಿದ ಮೋದಿ ಮಾತು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ರಸ್ತೆ ಅಪಘಾತದ ಗಾಯಾಳುಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ! ಕೇಂದ್ರದಿಂದ ರಾಷ್ಟ್ರಾದ್ಯಂತ ಜಾರಿ

cashless medical treatment: ರಸ್ತೆ ಅಪಘಾತದ ಗಾಯಾಳುಗಳ ಚಿಕಿತ್ಸೆ ಸಂಬಂಧ ಕೇಂದ್ರ ಸರ್ಕಾರವು ಹೊಸ ಉಪಕ್ರಮವನ್ನು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಜಾರಿಗೆ ತರಲು ಹೊರಟಿದೆ.

VISTARANEWS.COM


on

]cashless medical treatment for accident victims by central Government
Koo

ನವದೆಹಲಿ: ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರವು(Central Government), ಅಪಘಾತಗಳಲ್ಲಿ ಗಾಯಗೊಂಡವರಿಗೆ (accident victims) ನಗದುರಹಿತ ವೈದ್ಯಕೀಯ ಚಿಕಿತ್ಸೆ (cashless medical treatment) ನೀಡುವ ವ್ಯವಸ್ಥೆಯನ್ನು ರಾಷ್ಟ್ರಾದ್ಯಂತ ಜಾರಿಗೆ ತರಲು ಹೊರಟಿದೆ. 2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಪ್ರಕಾರ ಈ ಹೊಸ ಉಕ್ರಮವನ್ನು ಕೈಗೊಳ್ಳಲಾಗುತ್ತಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (Road Transport & Highways Ministry) ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ (Health and Family planning Ministry) ಸಚಿವಾಲಯಗಳು ಜಂಟಿಯಾಗಿ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿವೆ.

ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಸಾರವಾಗಿ ಮತ್ತು 2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಅನ್ವಯ, ಅಪಘಾತ ಸಂಭವಿಸಿದ ಸ್ಥಳಗಳಿಗೆ ಹತ್ತಿರುವ ಇರುವ ಸೂಕ್ತ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆಗೆ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಲ್ಲಿ ವ್ಯಾಖ್ಯಾನಿಸಲಾದ ‘ಗೋಲ್ಡನ್ ಅವರ್’ ಸೇರಿದಂತೆ ರಸ್ತೆ ಅಪಘಾತದ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆಯನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಅನುರಾಗ್ ಜೈನ್ ಅವರು ತಿಳಿಸಿದ್ದಾರೆ.

ಜಗತ್ತಿನಲ್ಲೇ ಭಾರತವು ಅತಿ ಹೆಚ್ಚು ರಸ್ತೆ ಅಪಘಾತ ಸಾವು ನೋವುಗಳಿಗೆ ಸಾಕ್ಷಿಯಾಗುತ್ತಿದೆ. ಹಾಗಾಗಿ, 2030ರ ಹೊತ್ತಿಗೆ ರಸ್ತೆ ಅಪಘಾತಗಳಲ್ಲಿನ ಸಾವಿನ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು 5 E ಗಳಾದ ಎಜುಕೇಷನ್(Education), ಎಂಜಿನಿಯರಿಂಗ್ (Engineering), ಎನ್‌ಫೋರ್ಸ್‌ಮೆಂಟ್ (Enforcement) ಮತ್ತು ಎರ್ಮೆಜೆನ್ಸಿ ಕೇರ್(Emergency Care) ರಸ್ತೆ ಸುರಕ್ಷತಾ ಜಾಗೃತಿಯನ್ನು ಕೈಗೊಳ್ಳುತ್ತಿದೆ. ಸುರಕ್ಷತಾ ಕ್ರಮಗಳನ್ನು ಯೋಜನಾ ಹಂತದಲ್ಲಿ ರಸ್ತೆ ವಿನ್ಯಾಸದಲ್ಲಿ ಅಳವಡಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ವಿವರವಾದ ಅಪಘಾತ ವರದಿ (ಇ-ಡಿಎಆರ್) ಯೋಜನೆಯು ರಾಷ್ಟ್ರವ್ಯಾಪಿ ರಸ್ತೆ ಅಪಘಾತಗಳ ದತ್ತಾಂಶಗಳ ವರದಿ, ನಿರ್ವಹಣೆ ಮತ್ತು ವಿಶ್ಲೇಷಣೆಯನ್ನು ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ.

ರಸ್ತೆ ಸುರಕ್ಷತೆಯ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯದ ಬಗ್ಗೆ ಎತ್ತಿ ಹೇಳಿದೆ ಕಾರ್ಯದರ್ಶಿ ಜೈನ್ ಅವರು, ಶಾಲೆ ಮತ್ತು ಕಾಲೇಜು ಪಠ್ಯಕ್ರಮಗಳಲ್ಲಿ ರಸ್ತೆ ಸುರಕ್ಷತೆಯನ್ನು ಸೇರ್ಪಡೆ ಮಾಡಲು ಈಗಾಗಲೇ ಶಿಕ್ಷಣ ಸಚಿವಾಲಯವು ತನ್ನ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.

ಮುಂಬರುವ “ಗ್ಲೋಬಲ್ ರೋಡ್ ಸೇಫ್ಟಿ ಇನಿಶಿಯೇಟಿವ್” ಎಂಬ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಕಾರ್ಯಕ್ರಮವು 27 ದೇಶಗಳ 130 ಪ್ರಖ್ಯಾತ ರಸ್ತೆ ಸುರಕ್ಷತಾ ತಜ್ಞರ ಭಾಗವಹಿಸುವುದಕ್ಕೆ ಸಾಕ್ಷಿಯಾಗಲಿದೆ. ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳು ಮತ್ತು ನಗರಗಳಲ್ಲಿ ರಸ್ತೆ ಅಪಘಾತದ ಸಾವುಗಳು ಮತ್ತು ಗಾಯಗಳನ್ನು ಕಡಿಮೆ ಮಾಡುವ ಗುರಿ ಕುರಿತು ಚರ್ಚಿಸುವುದು ಮತ್ತು ಅಂತಿಮಗೊಳಿಸುವುದು ಈ ಉಪಕ್ರಮದ ಮೊದಲ ಆದ್ಯತೆಯಾಗಿದೆ. 2024ರ ಮಾರ್ಚ್ ತಿಂಗಳಲ್ಲಿ ಜೀನಿವಾದಲ್ಲಿ ನಡೆಯಲಿರುವ ಗ್ಲೋಬಲ್ ಫೋರ್ ಫಾರ್ ರೋಡ್ ಟ್ರಾಫಿಕ್ ಸೆಫ್ಟಿ ಸೆಷನ್‌ನಲ್ಲಿ ಈ ಉಪಕ್ರಮದ ಪರಿಣಾಮಗಳ ಕುರಿತು ಚರ್ಚಿಸುವ ಸಾಧ್ಯತೆಗಳಿವೆ.

ಈ ಸುದ್ದಿಯನ್ನೂ ಓದಿ: ವಿಸ್ತಾರ ಸಂಪಾದಕೀಯ: ದಿಗಿಲು ಹುಟ್ಟಿಸುತ್ತಿರುವ ರಸ್ತೆ ಅಪಘಾತಗಳು, ತಪ್ಪಿತಸ್ಥ ಚಾಲಕರಿಗೆ ಕಠಿಣ ಶಿಕ್ಷೆಯಾಗಬೇಕು

Continue Reading

ದೇಶ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ! ಬಿತ್ತು ಲೀತು ಗ್ರಾಮದಲ್ಲಿ 13 ಜನರ ಹೆಣ

Manipur Violence: ಈಶಾನ್ಯ ರಾಜ್ಯ ಮಣಿಪುರದಲ್ಲಿ ಮೇ 3ರಿಂದ ಎರಡು ಸಮುದಾಯಗಳ ಮಧ್ಯೆ ಹಿಂಸಾಚಾರ ನಡೆಯುತ್ತಿದ್ದು, ಈವರೆಗೆ ಕನಿಷ್ಠ 182 ಜನರು ಮೃತಪಟ್ಟಿದ್ದಾರೆ.

VISTARANEWS.COM


on

Fresh violence in Manipur and 13 people found dead in village
Koo

ನವದೆಹಲಿ: ಈಶಾನ್ಯ ರಾಜ್ಯ ಮಣಿಪುರದ (Manipur Violence) ತೆಂಗ್ನೌಪಾಲ್ ಜಿಲ್ಲೆಯಲ್ಲಿ (Tengnoupal district) ಸೋಮವಾರ ಮಧ್ಯಾಹ್ನ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು (Fresh violence), ಕನಿಷ್ಠ 13 ಜನರು ಮೃತಪಟ್ಟಿದ್ದಾರೆ. ತೆಂಗ್ನೌಪಾಲ್ ಜಿಲ್ಲೆಯ ಸೈಬೋಲ್ ಬಳಿಯ ಲೀತು ಗ್ರಾಮದಲ್ಲಿ ಮಧ್ಯಾಹ್ನದ ಸುಮಾರಿಗೆ ಎರಡು ಗುಂಪುಗಳ ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆದಿದೆ (Encounter) ಎಂದು ಭದ್ರತಾ ಪಡೆಗಳ ಅಧಿಕಾರಿಗಳು ತಿಳಿಸಿದ್ದಾರೆ.

ಹಿಂಸಾಚಾರ ನಡೆದ ಸ್ಥಳದಿಂದ ಭದ್ರತಾ ಪಡೆಗಳು ಕೇವಲ 10 ಕಿ.ಮೀ ದೂರದಲ್ಲಿದ್ದವು. ನಮ್ಮ ಪಡೆಗಳು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ಲೀತು ಗ್ರಾಮದಲ್ಲಿ 13 ಶವಗಳ ಬಿದ್ದಿದ್ದವು. ಆದರೆ, ಅಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ಕಂಡ ಬರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರೆಲ್ಲರೂ ಲೀತು ಗ್ರಾಮದಲ್ಲವರೆಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅವರು ಬೇರೆ ಸ್ಥಳದಿಂದ ಬಂದು ಇಲ್ಲಿನ ಸ್ಥಳೀಯ ಪ್ರತ್ಯೇಕತಾ ಗುಂಪುಗಳ ಜತೆಗೆ ಸಂಘರ್ಷ ನಡೆಸಿರಬಹುದು. ಆಗ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮತ್ತೊಂದೆಡೆ, ಮೃತಪಟ್ಟವರ ಗುರುತು ಪತ್ತೆಯನ್ನು ಪೊಲೀಸರಲಾಗಲೀ, ಭದ್ರತಾ ಪಡೆಗಳಾಗಲೇ ಖಚಿತಪಡಿಸಿಲ್ಲ.

ಈಗಾಗಲೇ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಮತ್ತು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಣಿಪುರದಲ್ಲಿ ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ ಮೇ 3ರಿಂದ ಸಂಘರ್ಷ ನಡೆಯುತ್ತಿದೆ. ಎರಡೂ ಸಮುದಾಯಗಳ ನಡುವಿನ ಸಂಘರ್ಷದಲ್ಲಿ ಇದವರೆಗೆ ಕನಿಷ್ಠ 182 ಜನರು ಮೃತಪಟ್ಟು, 50 ಸಾವಿರಕ್ಕೂ ಅಧಿಕ ಜನರು ನಿರ್ಗತಿಕರಾಗಿದ್ದಾರೆ.

ಹಿಂಸಾಚಾರಪೀಡಿತ ಮಣಿಪುರ ರಾಜ್ಯದ ಗಡಿ ಪ್ರದೇಶಗಳನ್ನು ಹೊರತುಪಡಿಸಿ ಕೆಲವು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಅಧಿಕಾರಿಗಳು ಭಾನುವಾರ ಮಾತ್ರ ಹಿಂತೆಗೆದುಕೊಂಡಿದ್ದಾರೆ. ಇದಾದ ಬೆನ್ನಲ್ಲೇ ಮತ್ತೆ ಗುಂಡಿನ ಚಕಮಕಿ ನಡೆದಿದೆ, ಹಿಂಸಾಚಾರ ಭುಗಿಲೆದ್ದಿದೆ.

ಹಿಂಸಾಚಾರಪೀಡಿತ ಕೆಲವು ಜಿಲ್ಲೆಗಳಲ್ಲಿನ ಪ್ರದೇಶಗಳು ಮೈತೈ ಅಥವಾ ಕುಕಿಗಳ ಪ್ರಾಬಲ್ಯವನ್ನು ಹೊಂದಿವೆ ಮತ್ತು ಕಳೆದ ಏಳು ತಿಂಗಳುಗಳಲ್ಲಿ ಹೆಚ್ಚಿನ ಹಿಂಸಾಚಾರ, ಗುಂಡಿನ ಚಕಮಕಿ, ಬೆಂಕಿ ಹಚ್ಚುವುದು ಮತ್ತು ಅಪಹರಣಗಳಿಗೆ ಈ ಪ್ರದೇಶವು ಸಾಕ್ಷಿಯಾಗಿದೆ. ಕೇಂದ್ರ ಮತ್ತು ಮಣಿಪುರ ಸರ್ಕಾರವು, ರಾಜ್ಯದ ಅತ್ಯಂತ ಹಳೆಯ ಉಗ್ರಗಾಮಿ ಸಂಘಟನೆಯಾದ ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫೋರ್ಸ್ (ಯುಎನ್‌ಎಲ್‌ಎಫ್) ನೊಂದಿಗೆ ದಿಲ್ಲಿಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಾಲ್ಕು ದಿನಗಳ ನಂತರ, ನಿಷೇಧವನ್ನು ಹಿಂತೆಗೆದುಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ: Manipur Violence: ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ಸೇನಾಧಿಕಾರಿಗೆ ಮಣಿಪುರ ಹಿಂಸಾಚಾರ ತಡೆಯುವ ಹೊಣೆ!

Continue Reading

ದೇಶ

ಕಾಂಗ್ರೆಸ್‌ಗೆ ಸೋಲು; ಇಂಡಿಯಾ ಕೂಟದಲ್ಲಿ ತಳಮಳ! ನಾಯಕತ್ವಕ್ಕೆ ಹಲವರ ಗಾಳ!

INIDA Bloc: ಮೂರು ರಾಜ್ಯಗಳಲ್ಲಿ ಭಾರೀ ಸೋಲಿನ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೂರು ತಿಂಗಳ ಬಳಿಕ ಇಂಡಿಯಾ ಕೂಟದ ನಾಯಕರ ಸಭೆ ಕರೆದಿದ್ದಾರೆ.

VISTARANEWS.COM


on

India Bloc Meeting
Koo

ದು ರಾಜ್ಯಗಳ ಚುನಾವಣೆಯಲ್ಲಿ (Assembly Election 2023) ಕಾಂಗ್ರೆಸ್ ಪಕ್ಷವು (Congress Party) ಕೇವಲ ಒಂದು ರಾಜ್ಯವನ್ನು ಗೆದ್ದುಕೊಳ್ಳುವ ಮೂಲಕ ಸೋತು ಸುಣ್ಣವಾಗಿದೆ. ವಿಶೇಷವಾಗಿ ಹಿಂದಿ ಹಾರ್ಟ್‌ ಲ್ಯಾಂಡ್ ಎನಿಸಿಕೊಂಡಿರುವ ಮಧ್ಯ ಪ್ರದೇಶ, ಛತ್ತೀಸ್‌ಗಢ ಹಾಗೂ ರಾಜಸ್ಥಾನಗಳ ಪೈಕಿ, ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢ ಸೋಲು ಅನಿರೀಕ್ಷಿತವಾಗಿದೆ. ಚುನಾವಣಾಪೂರ್ವ ಮತ್ತು ಕೆಲವು ಎಕ್ಸಿಟ್ ಪೋಲ್‌ಗಳು ಛತ್ತೀಸ್‌ಗಢ ಗೆಲ್ಲುವ ಕಾಂಗ್ರೆಸ್, ಮಧ್ಯ ಪ್ರದೇಶದಲ್ಲಿ ಫುಲ್ ಫೈಟ್ ನೀಡಲಿದೆ ಎಂದು ಹೇಳಿದ್ದವು. ಆದರೆ, ರಿಸಲ್ಟ್ ಮಾತ್ರ ಸಂಪೂರ್ಣ ಉಲ್ಟಾ ಆಗಿದ್ದು, ಬಿಜೆಪಿ (BJP Party) ಭರ್ಜರಿ ಜಯ ಸಾಧಿಸಿದೆ. ಹಾಗಾಗಿ, ಸಹಜವಾಗಿಯೇ 2024ರ ಲೋಕಸಭೆ ಚುನಾವಣೆಗಾಗಿ (Lok Sabha Election 2024) ಒಂದಾಗಿರುವ ಇಂಡಿಯಾ ಕೂಟದ (India Bloc) ಮೇಲೆ ಈ ಸೋಲು ಪರಿಣಾಮ ಬೀರುವ ಸಾಧ್ಯತೆಗಳಿವೆ. ಈಗಾಗಲೇ ಮಮತಾ ಬ್ಯಾನರ್ಜಿ, ಅಖಿಲೇಶ್ ಸಿಂಗ್ ಯಾದವ್, ಒಮರ್ ಅಬ್ದುಲ್ಲಾ ಸೇರಿ ಹಲವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ಸೋಲು, ಇಂಡಿಯಾ ಕೂಟದ ನಾಯಕತ್ವಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹಟ್ಟು ಹಾಕಿದೆ. ಲೋಕಸಭೆ ಚುನಾವಣೆಯವರೆಗೂ ಈ ಕೂಟ ಬದುಕುಳಿಯಲಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಈ ಮಧ್ಯೆ, ಮಲ್ಲಿಕಾರ್ಜುನ ಖರ್ಗೆ ಅವರು ಡಿಸೆಂಬರ್ 6ರಂದು ಇಂಡಿಯಾ ಕೂಟದ ಸಭೆ ಕರೆದಿದ್ದಾರೆ. ಮೂರು ತಿಂಗಳ ಬಳಿಕ ಇಂಡಿಯಾ ಕೂಟದ ಸಭೆ ನಡೆಯುತ್ತಿದೆ. ಆದರೆ, ಈ ಸಭೆಗೆ ತಾನು ಭಾಗವಹಿಸುತ್ತಿಲ್ಲ ಎಂದು ಹೇಳುವ ಮೂಲಕ ತೃಣಮೂಲ ಕಾಂಗ್ರೆಸ್ ಅಪಸ್ವರ ಎತ್ತಿದೆ. ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಸೀಟ್ ಷೇರಿಂಗ್ ಮೂಲಕ ಚುನಾವಣೆ ಎದುರಿಸಿದ್ದರೆ ಖಂಡಿತವಾಗಿಯೂ ಬಿಜೆಪಿ ಸೋಲುತ್ತಿತ್ತು. ಮತಗಳ ವಿಭಜನೆಯಿಂದಾಗಿ ಬಿಜೆಪಿ ಗೆದ್ದಿದೆ ಎಂದು ತೃಣಮೂಲ ನಾಯಕಿ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?

ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಗೆದ್ದಿದೆ. ಅವರು ಮಧ್ಯ ಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನವನ್ನೂ ಗೆಲ್ಲಬಹುದಾಗಿತ್ತು. ಇಂಡಿಯಾ ಕೂಟದ ಕೆಲವು ಪಕ್ಷಗಳು ವೋಟ್ ಕಟ್ ಮಾಡಿವೆ. ಇದುವೇ ಸತ್ಯ. ಹಾಗಾಗಿ ನಾವು ಸೀಟ್ ಷೇರಿಂಗ್ ಬಗ್ಗೆ ಸಲಹೆ ನೀಡಿದ್ದೆವು. ಮತ ವಿಭಜನೆಯಿಂದಾಗಿಯೇ ಕಾಂಗ್ರೆಸ್ ಸೋತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಈಗ ‘ಇಂಡಿಯಾ’ ನೆನಪಾಗಿದೆ- ಓಮರ್

ಕಾಂಗ್ರೆಸ್ ಪಕ್ಷಕ್ಕೆ ಮೈತ್ರಿಕೂಟವು ತಡವಾಗಿ ನೆನಪಾಗಿದೆ. ಡಿಸೆಂಬರ್ 6ರಂದು ಕಾಂಗ್ರೆಸ್ ಅಧ್ಯಕ್ಷರು ಇಂಡಿಯಾ ಕೂಟದ ನಾಯಕರಿಗೆ ಊಟಕ್ಕೆ ಆಹ್ವಾನಿಸಿದ್ದಾರೆ. ಮೂರು ತಿಂಗಳ ನಂತರ ಇಂಡಿಯಾ ಕೂಟವನ್ನು ತಡವಾಗಿ ನೆನಪಿಸಿಕೊಂಡಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಲೇವಡಿ ಮಾಡಿದರು.

ನಮ್ಮ ಕಡೆಯಿಂದಲೂ ತಪ್ಪಾಗಿದೆ ಎಂದರಾ ಖರ್ಗೆ?

ತಪ್ಪುಗಳು ನಡೆದಿವೆ ಮತ್ತು ನಾವು ತಿದ್ದುಪಡಿ ಮಾಡಿಕೊಳ್ಳೋಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆಂದು ಮೂಲಗಳ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಕೆಲವು ರಾಜ್ಯಗಳಲ್ಲಿ ಅತಿಯಾದ ವಿಶ್ವಾಸ ಮತ್ತು ಸರಿಯಾದ ಅಭ್ಯರ್ಥಿಗಳಿಗೆ ಮನ್ನಣೆ ನೀಡದಿರುವುದು ಮತ್ತು ಚುನಾವಣೆಯ ಕೊನೆಯ ಕೆಲವು ದಿನಗಳಲ್ಲಿ ನಾವು ಭಾರೀ ಹಿನ್ನಡೆ ಅನುಭವಿಸಿದ್ದು ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ಸೋಲು ಇಂಡಿಯಾ ಕೂಟದ ಮೇಲೆ ಪರಿಣಾಮ ಇಲ್ಲ

ಇಷ್ಟಾಗಿಯೂ ಎಸ್‌ಪಿ ನಾಯಕ ಅಖಿಲೇಶ್ ಯಾದವ್, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಸೇರಿದಂತೆ ಬಹುತೇಕ ನಾಯಕರು, ಕಾಂಗ್ರೆಸ್ ಪಕ್ಷದ ಸೋಲು ಇಂಡಿಯಾ ಕೂಟದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ನಾವು ಯಾವ ಉದ್ದೇಶಕ್ಕೆ ಕೂಟವನ್ನು ರಚಿಸಿದ್ದೇವೆಯೋ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಗಾಗಿ ನಾವು ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ. 2024ರಲ್ಲಿ ಬದಲಾವಣೆಯಾಗಲಿದ್ದು, ಐತಿಹಾಸಿಕ ಫಲಿತಾಂಶ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ಇಂಡಿಯಾ ಕೂಟದ ಮೇಲೆ ಪರಿಣಾಮ ಏನು?

-ಕೂಟದಲ್ಲಿ ನಾಯಕರ ಮೇಲುಗೈಗೆ ಹೆಚ್ಚಿನ ಸಂಘರ್ಷವಾಗಬಹುದು.
-ಸೋತಿದ್ದರಿಂದ ಕಾಂಗ್ರೆಸ್ ನಾಯಕತ್ವಕ್ಕೆ ಹೆಚ್ಚಿನವರು ಒಪ್ಪಲಿಕ್ಕಿಲ್ಲ
-ಮಮತಾ, ನಿತೀಶ್, ಕೇಜ್ರಿವಾಲ್‌ ಸೇರಿ ಹಲವುರ ನಾಯಕತ್ವಕ್ಕೆ ಒತ್ತಾಯಿಸಬಹುದು.
-ಒಮ್ಮತ ಮೂಡದಿದ್ದರೆ ಲೋಕಸಭೆ ಚುನಾವಣೆ ಮುನ್ನವೇ ಕೂಟ ಛಿದ್ರವಾಗಬಹುದು.
-ಲೋಕಸಭೆ ಎಲೆಕ್ಷನ್ ವೇಳೆ, ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನಿಂದ ಹೆಚ್ಚಿನ ಸೀಟಿಗೆ ಒತ್ತಾಯಿಸಬಹುದು.
-ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಬಹುದು.
-ಇಂಡಿಯಾ ಕೂಟದ ಕಚ್ಚಾಟವು ಬಿಜೆಪಿ ಲಾಭ ತಂದುಕೊಡಬಹುದು.

ಈ ಸುದ್ದಿಯನ್ನೂ ಓದಿ: Assembly Elections 2023: ಬಿಜೆಪಿಗೆ ನಾಲ್ಕನೇ ಮೂರು ಬಹುಮತ, ಕಾಂಗ್ರೆಸ್‌ಗೆ ಒಂದೇ ಗ್ಯಾರಂಟಿ!

Continue Reading

ದೇಶ

ಇಂದಿರಾ ಗಾಂಧಿಗೆ ಭದ್ರತಾ ಅಧಿಕಾರಿಯಾಗಿದ್ದ ಲಾಲದುಹೋಮಾ ಈಗ ಮಿಜೋರಾಂ ಸಿಎಂ!

Lalduhoma: ಲಾಲದಹೋಮಾ ಅವರು ಒಮ್ಮೆ ಲೋಕಸಭೆ ಹಾಗೂ ವಿಧಾನಸಭೆಯಿಂದ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹ ಕೂಡ ಆಗಿದ್ದರು. ಈ ಕಾಯ್ದೆಯ ಅನ್ವಯ ಅನರ್ಹಗೊಂಡ ಮೊದಲ ಸಂಸದ ಎಂಬ ಕುಖ್ಯಾತಿ ಕೂಡ ಇವರಿಗಿದೆ.

VISTARANEWS.COM


on

once indira Gandhi's security incharge Lalduhoma is now becoming mizoram CM
Koo

ನವದೆಹಲಿ: ಎಲ್ಲರ ನಿರೀಕ್ಷೆಯನ್ನು ಮೀರಿದ ಹಾಗೂ ಎಕ್ಸಿಟ್‌ ಪೋಲ್‌ಗಳ ಸಮೀಕ್ಷೆಯನ್ನು (Exit Polls) ಸುಳ್ಳಾಗಿಸಿದ ಫಲಿತಾಂಶವನ್ನು ಮಿಜೋರಾಂ ಜನರು ನೀಡಿದ್ದಾರೆ(Mizoram Election Results). ಆಡಳಿತಾರೂಢ ಪಕ್ಷ ಮಿಜೋ ನ್ಯಾಷನಲ್ ಫ್ರಂಟ್(MNF)ಗೆ ಭಾರೀ ಸೋಲುಂಟಾಗಿದ್ದು, ಪ್ರತಿಪಕ್ಷ ಝೋರಾಂ ಪೀಪಲ್ಸ್ ಮೂವ್‌ಮೆಂಟ್(ZPM) ಅಧಿಕಾರದ ಗದ್ದುಗೆಗೆ ಏರಿದೆ. ಇಂದಿರಾ ಗಾಂಧಿ ಅವರ ಭದ್ರತೆಯ ಉಸ್ತುವಾರಿ ಹೊತ್ತಿದ್ದ, ಮಾಜಿ ಐಪಿಎಸ್ ಅಧಿಕಾರಿ ಲಾಲದುಹೋಮಾ (Lalduhoma) ಅವರು ಮಿಜೋರಾಂ ಮುಖ್ಯಮಂತ್ರಿಯಾಗಲಿದ್ದಾರೆ(Mizoram CM). ಸೋಮವಾರ ಪ್ರಕಟವಾದ ಎಲೆಕ್ಷನ್‌ ಫಲಿತಾಂಶದಲ್ಲಿ ಜೆಡ್‌ಪಿಎಂ 27, ಎಂಎನ್‌ಎಫ್ 10 ಮತ್ತು ಬಿಜೆಪಿ 2(BJP Party), ಕಾಂಗ್ರೆಸ್ 1 (Congress Party) ಸ್ಥಾನಗಳನ್ನು ಗೆದ್ದುಕೊಂಡಿವೆ. ಮಿಜೋರಾಂನಲ್ಲಿ ಒಟ್ಟು 40 ಕ್ಷೇತ್ರಗಳಿವೆ. ಈ ಮಧ್ಯೆ, ಚುನಾವಣೆಯಲ್ಲಿ ಸೋತಿರುವ ಮಿಜೋರಾಂ ಸಿಎಂ ಝೋರಮ್‌ತಂಗಾ(Zoramthanga) ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಲಾಲದುಹೋಮಾ ಅವರು ಗೋವಾದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದರು. ಬಳಿಕ ಅವರು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಭದ್ರತೆಯ ಉಸ್ತುವಾರಿ ಜವಾಬ್ದಾರಿಗಾಗಿ ದಿಲ್ಲಿಗೆ ಆಗಮಿಸಿದರು. ಸೇವೆಯ ಬಳಿಕ ಅವರು ಝೋರಮ್ ಪೀಪಲ್ಸ್ ಮೂವ್ಮೆಂಟ್(ZPM) ರಾಜಕೀಯ ಪಕ್ಷವನ್ನು ಆರಂಭಿದರು.

1984ರಲ್ಲಿ ಲಾಲದುಹೋಮಾ ಅವರು ಲೋಕಸಭೆಗೆ ಆಯ್ಕೆಯಾಗುವ ರಾಜಕಾರಣ ಆರಂಭಿಸಿದರು. ಆದರೆ, ಅವರ ರಾಜಕಾರಣದ ಆರಂಭ ಚೆನ್ನಾಗಿರಲಿಲ್ಲ. ಯಾಕೆಂದರೆ, ಪಕ್ಷಾಂತರ ಕಾಯ್ದೆ ಅನ್ವಯ ಅವರ ತಮ್ಮ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ವಿಶೇಷ ಎಂದರೆ, ಪಕ್ಷಾಂತರ ಕಾಯ್ದೆ ಜಾರಿಯ ಬಳಿಕ ಸದಸ್ಯತ್ವ ಕಳೆದುಕೊಂಡ ಮೊದಲ ವ್ಯಕ್ತಿ ಇವರು.
ಅದೇ ರೀತಿ, 2020ರಲ್ಲಿ ವಿಧಾನಸಭೆ ಸದಸ್ಯರಾಗಿದ್ದಾಗಲೂ ಪಕ್ಷಾಂತರ ನಿಷೇಧ ಕಾಯ್ದೆಯ ಅನ್ವಯ ತಮ್ಮ ಅನರ್ಹವಾಗಿದ್ದರು. ಹಾಗಿದ್ದೂ, 2021ರಲ್ಲಿ ನಡೆದ ಬೈಎಲೆಕ್ಷನ್‌ಲ್ಲಿ ಭರ್ಜರಿ ಜಯ ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಈಗ ಅದೇ ವ್ಯಕ್ತಿ ಮಿಜೋರಾಂನ ಸಿಎಂ ಆಗುತ್ತಿದ್ದಾರೆ.

ಜೆಡ್‌ಪಿಎಂಗೆ ಭರ್ಜರಿ ಜಯ

ಸೋಮವಾರ ಮಿಜೋರಾಂನಲ್ಲಿ ಮತ ಎಣಿಕೆ ಆರಂಭದಿಂದಲೇ ಝೋರಾಂ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಪಕ್ಷವು (Mizoram Election Result) ಸ್ಪಷ್ಟ ಬಹುಮತದತ್ತ ಸಾಗಲಾರಂಭಿಸಿತು. ಒಟ್ಟು 40 ವಿಧಾನಸಭೆ ಕ್ಷೇತ್ರಗಳ ಪೈಕಿ ಪ್ರತಿಪಕ್ಷ ಝೆಡ್‌ಪಿಎಂ 26 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಇನ್ನು ಆಡಳಿತಾರೂಢ ಎಂಎನ್‌ಎಫ್‌ 9, ಕಾಂಗ್ರೆಸ್‌ 2 ಹಾಗೂ ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು. ಅಂತಿಮವಾಗಿ ಜೆಡ್‌ಪಿಎಂ ಅತಿದೊಡ್ಡ ಗೆಲುವು ಸಾಧಿಸಿತು.

ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ ಮತ್ತು ಜಾರ್ಖಂಡ ರಾಜ್ಯಗಳ ಜತೆಗೆ ಭಾನುವವಾರ(ಡಿ.3) ಮಿಜೋರಾಂ ಎಲೆಕ್ಷನ್ ರಿಸಲ್ಟ್ ಪ್ರಕಟವಾಗಬೇಕಿತ್ತು. ಆದರೆ, ಕ್ರೈಸ್ತರೇ ಹೆಚ್ಚಿರುವ ಮಿಜೋರಾಂನಲ್ಲಿ ಮತ ಎಣಿಕೆಯನ್ನು ಭಾನುವಾರದಿಂದ ಸೋಮವಾರಕ್ಕೆ ಮುಂದೂಡುವಂತೆ ಭಾರೀ ಮನವಿಗಳು ಬಂದಿದ್ದವು. ಅಂತಿಮವಾಗಿ ಚುನಾವಣಾ ಆಯೋಗವು ಮತ ಎಣಿಕೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿತ್ತು.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಕಾಂಗ್ರೆಸ್‌, ಮಿಜೋರಾಂನಲ್ಲೂ ಹಿನ್ನಡೆ ಅನುಭವಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಐದು ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್‌ ಈಗ 2 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇನ್ನು ಕಳೆದ ಬಾರಿ ಒಂದೇ ಕ್ಷೇತ್ರ ಗೆದ್ದಿದ್ದ ಬಿಜೆಪಿ ಈಗ ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ 21 ಮ್ಯಾಜಿಕ್‌ ನಂಬರ್‌ ಆಗಿದ್ದು, ಇದನ್ನು ಝೆಪಿಎಂ ಸುಲಭವಾಗಿ ದಾಟಿದೆ.

ಜೆಡ್‌ಪಿಎಂ ಮುಖ್ಯಸ್ಥ ಲಾಲದುಹೋಮಾ ಅವರು ಸೆರ್ಚಿಪ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಮಿಜೋರಾಂ ಮುಖ್ಯಮಂತ್ರಿಯಾಗಲಿದ್ದಾರೆ. ಈಗಾಗಲೇ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ಮತ್ತೊಂದೆಡೆ, ಎಂಎನ್‌ಪಿ ನಾಯಕ, ಆರೋಗ್ಯ ಸಚಿವ ಆರ್‌ ಲಾಲ್ತಾಂಗ್ಲಿಯಾನಾ ಅವರು ಸೋಲು ಕಂಡಿದ್ದಾರೆ. ಮತ್ತೊಂದೆಡೆ ಸಿಎಂ ಝೋರಮ್‌ತಂಗಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

1987ರಲ್ಲಿ ಮಿಜೋರಾಂ ರಾಜ್ಯ ರಚನೆಯಾದಾಗಿನಿಂದಲೂ ಕಾಂಗ್ರೆಸ್ ಹಾಗೂ ಮಿಜೋ ನ್ಯಾಷನಲ್ ಫ್ರಂಟ್ ಸರ್ಕಾರವನ್ನು ಮಾಡುತ್ತಾ ಬಂದಿವೆ. ಹತ್ತು ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಕೊನೆಗಾಣಿಸಿ 1998ರಲ್ಲಿ ಎಂಎನ್‌ಪಿಯ ಝೋರಮ್‌ತಂಗಾ ಅವರು ಮುಖ್ಯಮಂತ್ರಿಯಾದರು. 2008, 2013ರಲ್ಲಿ ಕಾಂಗ್ರೆಸ್ ಗೆಲ್ಲೋವರೆಗೂ ಎಂಎನ್‌ಪಿ ಆಡಳಿತದಲ್ಲಿತ್ತು. 2018ರಲ್ಲಿ ಎಂಎನ್‌ಪಿ ಮತ್ತೆ ಅಧಿಕಾರಕ್ಕೆ ಬಂತು. ಈಗ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ತಮ್ಮ ಪ್ರದರ್ಶನ ತೋರುವಲ್ಲಿ ವಿಫಲವಾಗಿವೆ. ಮಧ್ಯ ಪ್ರದೇಶವೊಂದನ್ನು ಹೊರತುಪಡಿಸಿ, ರಾಜಸ್ಥಾನ, ಜಾರ್ಖಂಡ್, ಮಿಜೋರಾಂ, ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಗೆ ಸರ್ಕಾರಗಳು ಕೊಚ್ಚಿಕೊಂಡು ಹೋಗಿವೆ.

ಈ ಸುದ್ದಿಯನ್ನೂ ಓದಿ: Assembly Elections 2023: ಬಿಜೆಪಿಗೆ ನಾಲ್ಕನೇ ಮೂರು ಬಹುಮತ, ಕಾಂಗ್ರೆಸ್‌ಗೆ ಒಂದೇ ಗ್ಯಾರಂಟಿ!

Continue Reading
Advertisement
Dasara Elephant Arjuna
ಕರ್ನಾಟಕ7 mins ago

Dasara Elephant Arjuna: ಅರ್ಜುನನ ನಿಧನಕ್ಕೆ ಸಿಎಂ, ಡಿಸಿಎಂ, ನಟ ದರ್ಶನ್ ಸೇರಿ ಗಣ್ಯರ ಸಂತಾಪ

]cashless medical treatment for accident victims by central Government
ದೇಶ13 mins ago

ರಸ್ತೆ ಅಪಘಾತದ ಗಾಯಾಳುಗಳಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ! ಕೇಂದ್ರದಿಂದ ರಾಷ್ಟ್ರಾದ್ಯಂತ ಜಾರಿ

Cricket news
ಕ್ರಿಕೆಟ್28 mins ago

ind vs aus : ಆಸ್ಟ್ರೇಲಿಯಾ- ಭಾರತ ಟಿ20 ಪಂದ್ಯದ ಅಂಪೈರ್​ ಮೇಲೆ ಮೋಸದ ಅರೋಪ!

Hori festival in maavali at soraba taluk
ಶಿವಮೊಗ್ಗ43 mins ago

Shivamogga News: ಮಾವಲಿ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ

Shakti Scheme Effect, In Uttara Kannada district locals and students are facing problems without buses
ಉತ್ತರ ಕನ್ನಡ44 mins ago

Sirsi News: ಶಕ್ತಿ ಯೋಜನೆ ಎಫೆಕ್ಟ್‌: ಉ.ಕ ಜಿಲ್ಲೆಯಲ್ಲಿ ಸ್ಥಳೀಯರಿಗೆ ಬಸ್‌ ಇಲ್ಲದೇ ಪರದಾಟ

Rohit Sharma
ಕ್ರಿಕೆಟ್1 hour ago

Rohit Sharma : ಫಾರಿನ್ ಟೂರ್​ ಮುಗಿಸಿ ಮರಳಿದ ರೋಹಿತ್​ ಶರ್ಮಾ ಫ್ಯಾಮಿಲಿ

Suvarna Vidhana Soudha
ಕರ್ನಾಟಕ1 hour ago

ಸುವರ್ಣಸೌಧಕ್ಕೆ ಶಾಶ್ವತ ವಿದ್ಯುತ್‌ ದೀಪಾಲಂಕಾರ; ಕಲರ್‌ಫುಲ್‌ ಫೋಟೊಗಳು ಇಲ್ಲಿವೆ

BY Vijayendra Channaraj Hattiholi
ಕರ್ನಾಟಕ1 hour ago

BY Vijayendra : ಪೃಥ್ವಿ ಸಿಂಗ್‌ಗೆ ಇರಿತ ಪ್ರಕರಣ; ಹಟ್ಟಿಹೊಳಿ ಬಂಧನಕ್ಕೆ ವಿಜಯೇಂದ್ರ ಆಗ್ರಹ

Virat kohli
ಕ್ರಿಕೆಟ್1 hour ago

Suryakumar Yadav : ಕೊಹ್ಲಿ ದಾಖಲೆ ಮುರಿಯಲು ಸಜ್ಜಾಗಿದ್ದಾರೆ ಸೂರ್ಯಕುಮಾರ್​

Prtithvi singh attacked
ಕರ್ನಾಟಕ2 hours ago

Lakshmi Hebbalkar : ಜಾರಕಿಹೊಳಿ ಆಪ್ತನಿಗೆ ಹೆಬ್ಬಾಳ್ಕರ್‌ ಸೋದರನ ಗ್ಯಾಂಗ್‌ನಿಂದ ಚೂರಿ ಇರಿತ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

ead your daily horoscope predictions for december 4th 2023
ಪ್ರಮುಖ ಸುದ್ದಿ17 hours ago

Dina Bhavishya : ಇಂದು ಹೂಡಿಕೆ ಮಾಡಿದ್ರೆ ಈ ರಾಶಿಯವರಿಗೆ ಡಬಲ್‌ ಧಮಾಕಾ!

Police call off protest FIR against lawyer who slapped police
ಕರ್ನಾಟಕ1 day ago

Police Protest : ಪ್ರತಿಭಟನೆ ಕೈ ಬಿಟ್ಟ ಪೊಲೀಸರು; ಕಪಾಳಕ್ಕೆ ಹೊಡೆದ ವಕೀಲನ ಮೇಲೆ ಎಫ್‌ಐಆರ್‌

Dina Bhavihsya
ಪ್ರಮುಖ ಸುದ್ದಿ2 days ago

Dina Bhavishya : ಸಂಡೇ ಆದರೂ ಈ ರಾಶಿಯವರಿಗೆ ಟೆನ್ಷನ್‌ ತಪ್ಪಲ್ಲ! ಇವರಿಂದ ದೂರ ಇರಿ

Cockroaches bite baby born 2 days ago in vanivilas hospital
ಆರೋಗ್ಯ2 days ago

Vanivilas Hospital : 2 ದಿನಗಳ ಹಿಂದಷ್ಟೇ ಜನಿಸಿದ ಮಗುವನ್ನು ಕಚ್ಚಿ ಹಾಕಿದ ಜಿರಳೆಗಳು!

Dina Bhavishya
ಪ್ರಮುಖ ಸುದ್ದಿ3 days ago

Dina Bhavishya : ಯಾರನ್ನೂ ನಂಬಿ ಇನ್ವೆಸ್ಟ್ಮೆಂಟ್‌ ಮಾಡ್ಬೇಡಿ!

DK Shiakumar and MLA Munirathna
ಕರ್ನಾಟಕ3 days ago

DK Shivakumar : ಡಿಕೆಶಿಯನ್ನು ಗೇಟ್‌ ಒಳಗೇ ಬಿಟ್ಟಿಲ್ಲ, ಸಿಎಂ ಮಾಡುವಂತೆಯೂ ಹೇಳಿಲ್ಲವೆಂದ ಮುನಿರತ್ನ!

Tigre Found in Mysuru again Beware of this village
ಕರ್ನಾಟಕ3 days ago

Operation Tiger : ಮೈಸೂರಲ್ಲಿ ಮತ್ತೆ ಹುಲಿ ಕಾಟ; ಈ ಗ್ರಾಮದವರು ಹುಷಾರು!

Infosys Narayana Murthy and Congress Guarantee
ಕರ್ನಾಟಕ4 days ago

Congress Guarantee : ಯಾವುದನ್ನೂ ಪುಕ್ಕಟೆ ಕೊಡಬೇಡಿ; ‘ಗ್ಯಾರಂಟಿ’ಗೆ ನಾರಾಯಣ ಮೂರ್ತಿ ಆಕ್ಷೇಪ!

Justice for Ajay Protests against NIMHANS Hospital
ಆರೋಗ್ಯ4 days ago

Child Death : ಜಸ್ಟಿಸ್ ಫಾರ್ ಅಜಯ್; ಶುರುವಾಯ್ತು ನಿಮ್ಹಾನ್ಸ್‌ ವಿರುದ್ಧ ಪ್ರತಿಭಟನೆ

Dina Bhavishya
ಪ್ರಮುಖ ಸುದ್ದಿ6 days ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

ಟ್ರೆಂಡಿಂಗ್‌