Site icon Vistara News

Armed Drones: ಅಮೆರಿಕದಿಂದ ಭಾರತಕ್ಕೆ 31 ಎಂಕ್ಯೂ-9ಬಿ ಸಶಸ್ತ್ರ ಡ್ರೋನ್‌; ಇದು 4 ಶತಕೋಟಿ ಡಾಲರ್ ಡೀಲ್!

US will Sale 31 MQ-9B Armed Drones To India

ವಾಷಿಂಗ್ಟನ್: ಸುಮಾರು 4 ಶತಕೋಟಿ ಡಾಲರ್ (4 Billion Dollar) ಮೌಲ್ಯದ ಒಪ್ಪಂದದಲ್ಲಿ ಭಾರತಕ್ಕೆ (India) ಎಂಕ್ಯೂ-9ಬಿ ಸೀ ಗಾರ್ಡಿಯನ್ ಡ್ರೋನ್‌ಗಳ ಮಾರಾಟಕ್ಕೆ (31 MQ-9B Armed Drones) ಅಮೆರಿಕ (America) ಗ್ರೀನ್ ಸಿಗ್ನಲ್ ನೀಡಿದೆ. ಡಿಫೆನ್ಸ್ ಸೆಕ್ಯುರಿಟಿ ಕೋಆಪರೇಶನ್ ಸಂಸ್ಥೆಯು ಅಗತ್ಯವಿರುವ ಪ್ರಮಾಣೀಕರಣವನ್ನು ಪಡೆದುಕೊಂಡಿದ್ದು, ಇಂದು ಸಂಭವನೀಯ ಮಾರಾಟದ ಕುರಿತು ಅಮೆರಿಕ ಕಾಂಗ್ರೆಸ್‌ಗೆ ಸೂಚಿಸಲಿದೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ವೇಳೆ ಭಾರತ 31 ಎಂಕ್ಯೂ-9ಬಿ ಸ್ಕೈ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸಲು ಪ್ರಸ್ತಾಪಿಸಿದ್ದರು. ಸರ್ಕಾರದಿಂದ ಸರ್ಕಾರದ ನಡುವಿನ ಈ ಒಪ್ಪಂದವು ಬೈಡೆನ್ ಆಡಳಿತದ ಪ್ರಮುಖ ಹೆಗ್ಗುರಾತಾಗಿದೆ.

ಈ ಉದ್ದೇಶಿತ ಮಾರಾಟವು ಅಮೆರಿಕ-ಭಾರತೀಯ ಕಾರ್ಯತಂತ್ರದ ಸಂಬಂಧವನ್ನು ಬಲಪಡಿಸಲು ಮತ್ತು ರಾಜಕೀಯ ಸ್ಥಿರತೆ, ಶಾಂತಿಗಾಗಿ ಪ್ರಮುಖ ಶಕ್ತಿಯಾಗಿ ಮುಂದುವರಿಯುವ ಪ್ರಮುಖ ರಕ್ಷಣಾ ಪಾಲುದಾರರ ಭದ್ರತೆಯನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಅಮೆರಿಕ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತಾ ಉದ್ದೇಶಗಳನ್ನು ಬೆಂಬಲಿಸುತ್ತದೆ. ಇಂಡೋ-ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ವಲಯದಲ್ಲಿ ಆರ್ಥಿಕ ಪ್ರಗತಿ ದ್ಯೋತಕ ಎಂದು ಅಮೆರಿಕದ ರಕ್ಷಣಾ ಭದ್ರತಾ ಸಂಸ್ಥೆ ಹೇಳಿಕೊಂಡಿದೆ.

ಪ್ರಸ್ತಾವಿತ ಮಾರಾಟವು ಕಾರ್ಯಾಚರಣೆಯ ಸಮುದ್ರ ಮಾರ್ಗಗಳಲ್ಲಿ ಮಾನವರಹಿತ ಕಣ್ಗಾವಲು ಮತ್ತು ವಿಚಕ್ಷಣ ಗಸ್ತುಗಳನ್ನು ಸಕ್ರಿಯಗೊಳಿಸುವ ಮೂಲಕ ಪ್ರಸ್ತುತ ಮತ್ತು ಭವಿಷ್ಯದ ಬೆದರಿಕೆಗಳನ್ನು ಎದುರಿಸಲು ಭಾರತದ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಭಾರತವು ತನ್ನ ಸೇನೆಯನ್ನು ಆಧುನೀಕರಿಸುವ ಬದ್ಧತೆಯನ್ನು ಪ್ರದರ್ಶಿಸಿದೆ. ಹಾಗಾಗಿ, ಈ ಹೊಸ ನಮೂನೆಯ ಉಪಕರಣಗಳು ಅದರ ಬದ್ಧತೆಗೆ ತೊಂದರೆಯಾಗುವುದಿಲ್ಲ ಎಂದು ಅಮೆರಿಕದ ಸಂಸ್ಥೆ ಹೇಳಿದೆ.

ರಕ್ಷಣೆ ಇಲಾಖೆಗೆ ಅತಿ ಹೆಚ್ಚು, ಕೃಷಿ ಕ್ಷೇತ್ರಕ್ಕೆ ಕಡಿಮೆ ಹಂಚಿಕೆ

2024ರ (Budget 2024) ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಧ್ಯಂತರ ಬಜೆಟ್​ ಪ್ರಕಟಿಸಿದ್ದಾರೆ. 2024-25ನೇ ಸಾಲಿಗೆ ಭಾರತದ ಬಂಡವಾಳ ವೆಚ್ಚವನ್ನು ಶೇಕಡಾ 11 ರಷ್ಟು ಹೆಚ್ಚಿಸಿ 11.11 ಲಕ್ಷ ಕೋಟಿ ರೂ.ಗೆ ಅಥವಾ ಜಿಡಿಪಿಯ ಶೇಕಡಾ 3.4 ಕ್ಕೆ ಹೆಚ್ಚಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಇಲಾಖಾವಾರು ಬಜೆಟ್​ಗಳ ಹಂಚಿಕೆಯನ್ನು ಪ್ರಕಟಿಸಿದ್ದಾರೆ. ಮಧ್ಯಂತರ ಬಜೆಟ್​ನಲ್ಲಿ ರಕ್ಷಣಾ ಸಚಿವಾಲಯಕ್ಕೆ ಹೆಚ್ಚಿನ ಹಂಚಿಕೆ ನೀಡಿರುವುದು ಖಾತರಿಯಾಗಿದ್ದು, ಕೃಷಿ ಇಲಾಖೆ ಕನಿಷ್ಠ ಪಾಲು ಪಡೆದುಕೊಂಡಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ದ್ವಿಗುಣ ಪರಿಣಾಮ ಬೀರಿದೆ ಎಂಬುದಾಗಿ ವಿತ್ತ ಸಚಿವರು ಹೇಳಿದ್ದಾರೆ. ಭಾರತೀಯ ವಿಮಾನಯಾನ ಸಂಸ್ಥೆಗಳು 1,000 ಹೊಸ ವಿಮಾನಗಳಿಗೆ ಆರ್ಡರ್ ನೀಡಿವೆ ಎಂದು ಸಚಿವರು ಇದೇ ವೇಳೆ ಪ್ರಕಟಿಸಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿನ ತಂತ್ರಜ್ಞಾನವನ್ನು ಬಲಪಡಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ. ಕೃಷಿ ಚಟುವಟಿಕೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಯನ್ನು ಸರ್ಕಾರ ಉತ್ತೇಜಿಸುತ್ತದೆ ಎಂಬುದಾಗಿಯೂ ನುಡಿದಿದ್ದಾರೆ. ವಿವಿಧ ಬೆಳೆಗಳ ಮೇಲೆ ನ್ಯಾನೊ ಡಿಎಪಿಯ ಅನ್ವಯವನ್ನು ಕೃಷಿ-ಹವಾಮಾನ ವಲಯಗಳಲ್ಲಿ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Drone Pratap : ಲೈಸೆನ್ಸ್‌ ಪಡೆಯದೆ ಡ್ರೋನ್‌ ಹಾರಾಟ-ಮಾರಾಟ; ಡ್ರೋನ್‌ ಪ್ರತಾಪ್‌ ವಿರುದ್ಧ ಮತ್ತೊಂದು ದೂರು

Exit mobile version