Site icon Vistara News

V. Somanna: ಎಲ್ಲವೂ ಅಂದುಕೊಂಡಂತೆ ಆಯಿತು: ನಗುಮೊಗದಲ್ಲಿ ಅಮಿತ್‌ ಶಾ ಮನೆಯಿಂದ ಹೊರಬಂದ ಸಚಿವ ವಿ. ಸೋಮಣ್ಣ

v somanna meets union home minister amit shah

ನವದೆಹಲಿ: ಬಿಜೆಪಿಯನ್ನು ತೊರೆಯುವುದಿಲ್ಲ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾರನೆಯ ದಿನವೇ ನವದೆಹಲಿಯಲ್ಲಿ ಕೇಂದ್ರ ಗೃಹ ಸಚೊವ ಅಮಿತ್‌ ಶಾ ಅವರನ್ನು ಭೇಟಿ ಮಾಡಿರುವ ವಸತಿ ಸಚಿವ ವಿ. ಸೋಮಣ್ಣ, ಎಲ್ಲವೂ ಅಂದುಕೊಂಡಂತೆ ಆಗಿದೆ ಎಂದಿದ್ದಾರೆ.

ದೆಹಲಿಯ ಕೃಷ್ಣಮೆನನ್‌ ರಸ್ತೆಯಲ್ಲಿರುವ ಅಮಿತ್ ಶಾ ನಿವಾಸದಲ್ಲಿ ಭೇಟಿ ಮಾಡಿದ ಸೋಮಣ್ಣ ಜತೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಇದ್ದರು. ಒಟ್ಟು 15 ನಿಮಿಷಗಳ ಕಾಲ ನಾಯಕರು ಮಾತುಕತೆ ನಡೆಸಿದರು.

ಪಕ್ಷದಲ್ಲಿ ತಮಗಾದ ನೋವಿನ ಬಗ್ಗೆ ಸೋಮಣ್ಣ ಪ್ರಸ್ತಾಪ ಮಾಡಿದ್ದಾರೆ. ನಾನು ಎಲ್ಲವನ್ನ ಸರಿಪಡಿಸುವೆ ಕೆಲಸ ಮಾಡಿ ಎಂದು ಅಮಿತ್‌ ಶಾ ಹೇಳಿದ್ದಾರೆ ಎನ್ನಲಾಗಿದೆ.

ಅಮಿತ್ ಶಾ ಭೇಟಿಯನಂತರ ಖುಷಿಯಿಂದ ಹೊರಬಂದ ಸೋಮಣ್ಣ, ಎಲ್ಲವು ಅಂದುಕೊಂಡಂತೆ ಆಗಿದೆ ಎಂದು ಹೇಳಿ ಹೊರಟರು. ಸೋಮಣ್ಣ ಏನನ್ನು ಅಪೇಕ್ಷಿಸಿದ್ದರು, ಯಾವುದಕ್ಕೆ ಆಶ್ವಾಸನೆ ಸಿಕ್ಕಿದೆ ಎನ್ನುವುದು ಮಾತ್ರ ಕುತೂಹಲವಾಗಿದೆ.

ಇದನ್ನೂ ಓದಿ: V. Somanna: ವಿಜಯೇಂದ್ರ ವಯಸ್ಸೆಷ್ಟು? ನನ್ನ ವಯಸ್ಸೆಷ್ಟು?: ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ಸಚಿವ ವಿ. ಸೋಮಣ್ಣ

Exit mobile version