ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಳೆತ್ತರದ ಮುದ್ದುಮುದ್ದಾದ ಟೆಡ್ಡಿಬೇರ್‌ಗಳು ಈ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಮಾರುಕಟ್ಟೆಗೆ ಕಾಲಿಟ್ಟಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಅಂದಹಾಗೆ, ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟೆಡ್ಡಿಬೇರ್ ಡೇ ಕೂಡ ಒಂದು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನಾನಾ ಬಗೆಯ ಟೆಡ್ಡಿಬೇರ್‌ಗಳು (Giant Teddy Bear Trend) ಎಂಟ್ರಿ ನೀಡುತ್ತವೆ. ಆದರೆ, ಈ ಬಾರಿ ಎತ್ತರದ ಅದರಲ್ಲೂ ಅತ್ಯಾಕರ್ಷಕವಾದ ಬಿಗ್ ಜೈಂಟ್ ಟೆಡ್ಡಿಬೇರ್‌ಗಳು ಕಾಲಿಟ್ಟಿವೆ. ಇನ್ನು ಹುಡುಗರು ಅಷ್ಟೇ! ಹುಡುಗಿಯರನ್ನು ಮೆಚ್ಚಿಸಲು ಅವರನ್ನು ಪ್ರೀತಿಯಿಂದ ಆಲಂಗಿಸಲು ಸಾಧ್ಯವಾಗುವಂತಹ ಸಾಫ್ಟ್ ಬಿಗ್ ಟೆಡ್ಡಿಬೇರ್‌ಗಳನ್ನು (Giant Teddy Bear Trend) ಕೊಳ್ಳತೊಡಗಿದ್ದಾರೆ. ಪರಿಣಾಮ, ಇವಕ್ಕೆ ಬೇಡಿಕೆ ಹೆಚ್ಚಾಗಿದೆ.
ನಾನಾ ಬಗೆಯ ಜೈಂಟ್ ಟೆಡ್ಡಿಬೇರ್ಸ್
ಬಿಗ್ ಟೆಡ್ಡಿಬೇರ್ಸ್‌ನಲ್ಲಿ ಸಾಫ್ಟ್ ಫ್ಯಾಬ್ರಿಕ್‌ನವು ಹೆಚ್ಚು ಮಾರಾಟವಾಗುತ್ತಿವೆ. ಅದರಲ್ಲೂ ತಿಳಿ ಗುಲಾಬಿ, ಪಾಸ್ಟೆಲ್ ಶೇಡ್‌ನವು, ಕ್ರೀಮ್, ಲೈಟ್ ಬ್ರೌನ್ ಟೆಡ್ಡಿಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಎಷ್ಟೇ ವರ್ಷವಾದರೂ ಮುದುಡದ, ಗಲೀಜಾದರೂ ಸುಲಭವಾಗಿ ಕ್ಲೀನ್ ಮಾಡಬಹುದಾದ ಮೆಟೀರಿಯಲ್‌ನಲ್ಲಿ ಮಾಡಿರುವಂತಹ ಟೆಡ್ಡಿಬೇರ್‌ಗಳು ಬಂದಿವೆ.
ಸೈಡಿಗೆ ಸರಿದ ರೆಡ್ ಶೇಡ್ ಟೆಡ್ಡಿಬೇರ್ಸ್
ಮೊದಲೆಲ್ಲಾ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟೆಡ್ಡಿಬೇರ್ಸ್ ಕೊಡುವುದು ಎಂದರೇ ಕೇವಲ ರೆಡ್ ಶೇಡ್‌ನದ್ದನ್ನು ನೀಡುವುದು ವಾಡಿಕೆಯಾಗಿತ್ತು. ಬರಬರುತ್ತಾ ಹುಡುಗಿಯರ ಅಭಿರುಚಿ ಬದಲಾದಂತೆ ಕಲರ್‌ಗಳ ಆಯ್ಕೆ ಕೂಡ ಬದಲಾಯಿತು. ಅದೊಂದು ದಿನಕ್ಕೆ ಸೀಮಿತವಾಗದೇ ಇತರೇ ದಿನಗಳಲ್ಲೂ ನೋಡಿದಾಗ ಆನಂದವುಂಟಾಗುವ ರೀತಿಯಲ್ಲಿ ಸಿದ್ಧಪಡಿಸಿದ ಟೆಡ್ಡಿಬೇರ್‌ಗಳನ್ನು ಇಷ್ಟಪಡತೊಡಗಿದರು. ಹಾಗಾಗಿ ಇದೀಗ ಪಾಸ್ಟೆಲ್ ಹಾಗೂ ಇತರೇ ಕಲರ್‌ನ ಟೆಡ್ಡಿಬೇರ್‌ಗಳು ಜನಪ್ರಿಯಗೊಂಡಿವೆ. ಇನ್ನು ರೆಡ್ ಶೇಡ್‌ನಲ್ಲಿ ಕೊಡಲು ಇಷ್ಟಪಡುವವರಿಗೆಂದೇ ಮಿನಿ ಟೆಡ್ಡಿಬೇರ್‌ಗಳು ಆಗಮಿಸಿವೆ ಎನ್ನುತ್ತಾರೆ ಟೆಡ್ಡಿಬೇರ್ ಶಾಪ್‌ನ ಮಾಲೀಕರು.
ಆನ್‌ಲೈನ್‌ನಲ್ಲಿ ವೆರೈಟಿ ಜೈಂಟ್ ಟೆಡ್ಡಿಬೇರ್ಸ್
ನಾನಾ ಬ್ರಾಂಡ್‌ಗಳಲ್ಲಿ ಲಭ್ಯವಿರುವ ಟೆಡ್ಡಿಬೇರ್ಸ್ ಇದೀಗ ಆನ್‌ಲೇನ್ ಅತಿ ಸುಲಭವಾಗಿ ಶಾಪಿಂಗ್ ಮಾಡಬಹುದು. ಅಷ್ಟೇಕೆ! ದೊರದಲ್ಲಿದ್ದರೂ ಸಂಗಾತಿಗೆ ಹೋಮ್ ಡಿಲಿವೆರಿ ಮಾಡಬಹುದು. ಹಾಗಾಗಿ ಆನ್‌ಲೈನ್‌ನಲ್ಲಿ ಇವನ್ನು ಖರೀದಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಮಾರಾಟಗಾರರು. ಇನ್ನು, ಈ ದಿನ ಮುಗಿದರೂ ಇವುಗಳನ್ನು ಮನೆಯ ಕಾರ್ನರ್‌ನಲ್ಲಿ ಅಥವಾ ಬೆಡ್ ರೂಮ್‌ನಲ್ಲಿ ಇರಿಸಿ ಅಲಂಕರಿಸಬಹುದು. ಕನಿಷ್ಠ ಪಕ್ಷ ಆರು ತಿಂಗಳಿಗೊಮ್ಮೆಯಾದರೂ ಇವನ್ನು ಸ್ವಚ್ಛಗೊಳಿಸಬೇಕು. ಇಲ್ಲವಾದಲ್ಲಿ ಕ್ರೀಮಿಕೀಟಗಳು ಸೇರಿಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ ಟೆಡ್ಡಿ ಶಾಪ್‌ವೊಂದರ ಮಾರಾಟಗಾರರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Chocolate Face Mask: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಚಾಕೋಲೇಟ್ ಫೇಸ್ ಮಾಸ್ಕ್ ಹವಾ