Site icon Vistara News

Valentines Week Red Dress: ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಟ್ರೆಂಡಿಯಾಗಿವೆ ಈ 5 ರೆಡ್‌ ಡ್ರೆಸ್‌

Valentines Week Red Dress

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿವರ್ಷದಂತೆ ಈ ವರ್ಷವೂ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ರೆಡ್‌ ಡ್ರೆಸ್‌ಗಳು (Valentines Week Red Dress) ಟ್ರೆಂಡಿಯಾಗಿವೆ. ನೋಡಲು ಒಂದೇ ಕಲರ್‌ನ ನಾನಾ ಶೇಡ್‌ಗಳಾದರೂ ಆಕರ್ಷಕವಾಗಿರುವ ಡಿಸೈನ್‌ನ ಔಟ್‌ಫಿಟ್‌ಗಳು ಲಗ್ಗೆ ಇಟ್ಟಿವೆ. ಅವುಗಳಲ್ಲಿ, 5 ಶೈಲಿಯ ರೆಡ್‌ ಡ್ರೆಸ್‌ಗಳು ವಿಶೇಷವಾಗಿ ಟ್ರೆಂಡಿಯಾಗಿವೆ. ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆನ್‌ಲೈನ್‌ ಶಾಪ್‌ಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿವೆ.

ಗ್ಲಾಮರಸ್‌ ಲುಕ್‌ನ ರೆಡ್‌ ಡ್ರೆಸ್‌ಗಳಿಗೆ ಬೇಡಿಕೆ

“ವ್ಯಾಲೈಂಟೈನ್ಸ್ ವೀಕ್‌ನಲ್ಲಿ ಇತರೇ ಕಲರ್‌ಗಳಿಗಿಂತ ಅತಿ ಹೆಚ್ಚಾಗಿ ರೆಡ್‌ ಡ್ರೆಸ್‌ಗಳು ಬಿಕರಿಯಾಗುತ್ತವೆ. ಅದರಲ್ಲೂ ಗ್ಲಾಮರಸ್‌ ಲುಕ್‌ ನೀಡುವಂತಹ ಪಾರ್ಟಿವೇರ್‌ ಡ್ರೆಸ್‌ಗಳು ಬಿಡುಗಡೆಗೊಳ್ಳುತ್ತವೆ. ಇನ್ನು ಜನರೇಷನ್‌ ಬದಲಾದಂತೆ ಇಂದಿನ ಹುಡುಗಿಯರಿಗೂ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಬಂದಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಮಾಲ್‌ಗಳಲ್ಲಿ ನಾನಾ ಬಗೆಯ ಡಿಸೈನರ್‌ವೇರ್‌ ರೆಡ್‌ ಔಟ್‌ಫಿಟ್‌ಗಳನ್ನು ಕಾಣಬಹುದು. ಇನ್ನು ಆನ್‌ಲೈನ್‌ನಲ್ಲಂತೂ ಲೆಕ್ಕವಿಲ್ಲದಷ್ಟೂ ಶೈಲಿಯವು ಲಭ್ಯ. ಕೆಲವಲ್ಲಂತೂ ಈ ವಿಶೇಷ ಸಂದರ್ಭಕ್ಕೆ ಆಫರ್‌ನಲ್ಲಿ ಸಿಗುತ್ತಿವೆ” ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫಟ್ರ್ಸ್.

ಮಿನುಗುವ ಸಿಕ್ವಿನ್ಸ್ ಪಾರ್ಟಿ ಫ್ರಾಕ್‌

ಗ್ಲಾಮರಸ್‌ ಲುಕ್‌ ನೀಡುವ ಡಿಸೈನ್‌ನಲ್ಲಿ ಲಭ್ಯವಿರುವ ಸಿಕ್ವಿನ್ಸ್ ಪಾರ್ಟಿ ಫ್ರಾಕ್‌ಗಳು ಆಕರ್ಷಕವಾದ ಡಿಸೈನ್‌ನಲ್ಲಿ ಬಂದಿವೆ. ಡೀಪ್‌ ನೆಕ್‌, ಸ್ಲೀವ್ಲೆಸ್‌, ಶಾರ್ಟ್ ಡ್ರೆಸ್‌ಗಳು ಕಾಲೇಜು ಹುಡುಗಿಯರನ್ನು ಸೆಳೆದಿವೆ.

ಗ್ಲಾಮರಸ್‌ ಬಾರ್ಡಟ್ ಡ್ರೆಸ್‌

ಶೋಲ್ಡರ್‌ ಇಲ್ಲದ ಬಾರ್ಡಟ್ ಡ್ರೆಸ್‌ಗಳು ಗ್ಲಾಮರಸ್‌ ಲುಕ್‌ಗೆಂದೇ ಬಿಡುಗಡೆಗೊಂಡಿವೆ. ಸ್ಲಿಮ್‌ ಫಿಟ್‌ ಶೈಲಿಯಲ್ಲಿ ಕೆಲವು ವಿನ್ಯಾಸಗೊಂಡಿದ್ದರೇ ಇನ್ನು ಕೆಲವು ಶಿಮ್ಮರಿಂಗ್‌ ಫ್ಯಾಬ್ರಿಕ್‌ನಲ್ಲಿ ಯುವತಿಯರನ್ನು ಆಕರ್ಷಿಸುತ್ತಿವೆ.

ಫಿಟ್ಟಿಂಗ್‌ಗಾಗಿ ಬಾಡಿಕಾನ್‌ ಡ್ರೆಸ್

ಮೈಗೆ ಅಂಟುಕೊಂಡಂತೆ ಕಾಣುವ ಫುಲ್‌ ಸ್ಲೀವ್‌ನ ಬಾಡಿಕಾನ್‌ ಡ್ರೆಸ್‌ಗಳು ನಾನಾ ಶೇಡ್‌ನಲ್ಲಿ ಹಾಗೂ ವಿನ್ಯಾಸದಲ್ಲಿ ಆಗಮಿಸಿವೆ. ಹೈ ನೆಕ್‌ ಹಾಗೂ ಬೋಟ್‌ ನೆಕ್‌ನವು ಟೈಟ್‌ ಫಿಟ್ಟಿಂಗ್‌ನಲ್ಲಿ ದೊರೆಯುತ್ತಿವೆ.

ಆಕರ್ಷಕ ಮ್ಯಾಕ್ಸಿ ಡ್ರೆಸ್

ರೆಡ್‌ ಸ್ಟ್ರಾಪ್‌ ಮ್ಯಾಕ್ಸಿ ಡ್ರೆಸ್‌ಗಳು ಕಾಲೇಜು ಹುಡುಗಿಯರನ್ನು ಸವಾರಿ ಮಾಡಲು ಸಜ್ಜಾಗಿವೆ. ಪಾರ್ಟಿವೇರ್‌ ಕೆಟಗರಿಯಲ್ಲಿ ಫ್ಲೇರ್‌ ಹಾಗೂ ಅಂಬ್ರೆಲ್ಲಾ ಶೈಲಿಯಲ್ಲಿ ಬಂದಿವೆ.

ಹಾಟ್‌ ಲುಕ್‌ಗಾಗಿ ಟ್ಯೂಬ್‌ ಡ್ರೆಸ್

ನೋಡಲು ಹಾಟ್‌ ಲುಕ್‌ ನೀಡುವ ಈ ಟ್ಯೂಬ್‌ ಡ್ರೆಸ್‌ಗಳು ಇದೀಗ ಮತ್ತೊಮ್ಮೆ ಟ್ರೆಂಡಿಯಾಗಿವೆ. ರೆಡ್‌ ಸಿಲ್ಕ್ ಮೆಟಿರಿಯಲ್‌ನಲ್ಲೂ ಇವು ಕಾಣಿಸಿಕೊಂಡಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Giant Teddy Bear Trend: ಹುಡುಗಿಯರನ್ನು ಆಲಂಗಿಸಲು ಬಂತು ಜೈಂಟ್ ಟೆಡ್ಡಿಬೇರ್ಸ್ !

Exit mobile version