ಹೊಸದಿಲ್ಲಿ: ತೀವ್ರ ಅಸಮಾಧಾನ ಕಂಡುಬಂದ ಹಿನ್ನೆಲೆಯಲ್ಲಿ, ಕಡಿಮೆ ದೂರದ ಪ್ರಯಾಣಗಳಿಗೆ ವಂದೇ ಭಾರತ್ ರೈಲುಗಳ ಟಿಕೆಟ್ ದರ ಕಡಿಮೆ ಮಾಡಲು ಭಾರತೀಯ ರೈಲ್ವೇ ಮುಂದಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಆರಂಭವಾದ ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲಿನಲ್ಲಿ, 10 ಕಿ.ಮೀ ದೂರದ ಪ್ರಯಾಣಗಳಿಗೂ 410 ರೂ, ವಸೂಲಿ ಮಾಡಲಾಗುತ್ತಿದೆ ಎಂದ ದೂರು ಕೇಳಿಬಂದಿತ್ತು. ಆದರೆ ಈ ರೈಲಿನಲ್ಲಿ ಊಟ- ತಿಂಡಿ ಒದಗಿಸಲಾಗುತ್ತಿರುವುದರಿಂದ ದರ ಹೆಚ್ಚು ಇದೆ ಎಂಬುದು ಇಲಾಖೆಯ ಸಮಜಾಯಿಷಿ.
ಜನರಿಗೆ ಅನುಕೂಲವಾಗುವಂತೆ ಪ್ರಯಾಣ ದರವನ್ನು ರೂಪಿಸಲು ಇದನ್ನು ಮಾಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ವಂದೇ ಭಾರತ್‌ನಿಂದ ಪ್ರಯಾಣದ ಸಮಯ ಕಡಿಮೆಯಾಗಿದ್ದರೂ ದರ ದುಬಾರಿಯಾಗಿದೆ. ಉದಾಹರಣೆಗೆ ಭೋಪಾಲ್- ಇಂದೋರ್ ವಂದೇ ಭಾರತ್ 3 ಗಂಟೆಗಳ ಪ್ರಯಾಣ ಅವಧಿ ಹೊಂದಿದ್ದು ಕೇವಲ ಶೇ. 21ರಿಂದ 29ರಷ್ಟು ಪ್ರಯಾಣಿಕರು ಮಾತ್ರವೇ ಪ್ರಯಾಣಿಸುತ್ತಿದ್ದಾರೆ. ಇದರ ಎಸಿ ಕೋಚ್ ಟಿಕೆಟ್ ದರ 950 ರು. ಮತ್ತು ಎಕ್ಸಿಕ್ಯೂಟಿವ್ ಟಿಕೆಟ್ ದರ 1525 ರು. ಇದೆ.
ಶತಾಬ್ದಿ ರೈಲಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಚೇರ್ ಕಾರ್ ಸೀಟಿಗೆ 315 ರೂ. ದರವಿದೆ. ಅದೇ ವೇಳೆ ವಂದೇ ಭಾರತ್ ರೈಲಿನನಲ್ಲಿ ಟಿಕೆಟ್ ಬೆಲೆ 720 ರೂ. ಇದೆ. ಎಕ್ಸಿಕ್ಯೂಟಿವ್ ಗೆ 925 ರೂ. ಇರುವ ದರ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ 1,215 ರೂ. ಹೆಚ್ಚಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ವಂದೇ ಭಾರತ್ ರೈಲಿನಲ್ಲಿ ಚೇರ್ ಕಾರ್ ದರ 515 ರೂ. ಹಾಗೂ ವಾಪಸ್ ಬರಲು ಟಿಕೆಟ್ ದರ 720 ರೂ. ಇದೆ. ಇನ್ನು ಬೆಂಗಳೂರಿನಿಂದ ಚೆನ್ನೈ ಪ್ರಯಾಣಿಸಲು ಟಿಕೆಟ್ ದರ ವಂದೇ ಭಾರತ್ ರೈಲಿನಲ್ಲಿ 940 ರೂ. ಇದೆ. ವಂದೇ ಭಾರತ್ ರೈಲಿನಲ್ಲಿ ಬೆಂಗಳೂರಿನಿಂದ ಚೆನ್ನೈ ಪ್ರಯಾಣಿಸಲು ಎಕ್ಸಿಕ್ಯೂಟಿವ್ ಸೀಟಿನ ದರ 1,835 ರೂ. ಇದೆ. 140 ರೂ. ಕಡಿಮೆಯಿದೆ.
ಇದನ್ನೂ ಓದಿ: Vande Bharat Express: ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲು; ಟೈಮಿಂಗ್ ಹೇಗೆ? ಪ್ರಯಾಣ ದರ ಎಷ್ಟು?