Site icon Vistara News

Viral Video: ರೀಲ್ಸ್‌ ಮಾಡಲು ನವಿಲು ಹಿಡಿದು, ಎಲ್ಲ ಗರಿ ಕಿತ್ತು ಕ್ರೌರ್ಯ ಮೆರೆದ ವ್ಯಕ್ತಿ; ಇಲ್ಲಿದೆ ವಿಡಿಯೊ

Video Shows Man Picking Feathers Off Peacock For Fun In Madhya Pradesh, Creates Uproar

Video Shows Man Picking Feathers Off Peacock For Fun In Madhya Pradesh, Creates Uproar

ಭೋಪಾಲ್‌: ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಪ್ರತಿಯೊಂದು ವಿಷಯವನ್ನೂ ವಿಡಿಯೊ ಮಾಡುವ, ರೀಲ್ಸ್‌ ಮಾಡಿ ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ಪೋಸ್ಟ್‌ ಮಾಡುವ ಹಪಾಹಪಿ ಎಲ್ಲರದ್ದಾಗಿದೆ. ಆದರೆ, ಹೀಗೆ ರೀಲ್ಸ್‌ ಮಾಡುವ ಉಮೇದಯಿಂದ ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ರಾಷ್ಟ್ರಪಕ್ಷಿ ನವಿಲನ್ನು ಹಿಡಿದು, ಅದರ ಎಲ್ಲ ಗರಿಗಳನ್ನು ಕಿತ್ತಿ ಕ್ರೌರ್ಯ ಮೆರೆದಿದ್ದಾನೆ. ಈ ವಿಡಿಯೊ (Viral Video) ಈಗ ವೈರಲ್‌ ಆಗಿದೆ.

ಮಧ್ಯಪ್ರದೇಶದ ಕತ್ನಿ ಜಿಲ್ಲೆಯ ವ್ಯಕ್ತಿಯೊಬ್ಬ ನವಿಲನ್ನು ಹಿಡಿದಿದ್ದಾನೆ. ಮತ್ತೊಬ್ಬ ಬಾಲಕಿ ಜತೆ ಕುಳಿತ ಆತ ನವಿಲಿನ ಒಂದೊಂದೇ ಗರಿಗಳನ್ನು ಕಿತ್ತುಹಾಕಿದ್ದಾನೆ. ನವಿಲಿನ ಎಲ್ಲ ಗರಿಗಳನ್ನು ಕಿತ್ತಿಹಾಕಿದ, ಬಳಿಕ ನಗುತ್ತ ನವಿಲಿನ ಜತೆ ಇರುವ ವಿಡಿಯೊವನ್ನು ಎಲ್ಲ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೊ ವೈರಲ್‌ ಆಗುತ್ತಲೇ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇಲ್ಲಿದೆ ವಿಡಿಯೊ

ಇದನ್ನೂ ಓದಿ: Viral Video : ಮಾರುದ್ದದ ವಿಷಕಾರಿ ಹಾವನ್ನು ಕೈನಲ್ಲಿ ಹಿಡಿದು ವಿಡಿಯೊ ಮಾಡಿದ ವ್ಯಕ್ತಿ; ಇಲ್ಲಿದೆ ನೋಡಿ ವೈರಲ್‌ ವಿಡಿಯೊ

ಕುಳಿತಿರುವ ಯುವಕನು ಒಂದೊಂದಾಗಿಯೇ ನವಿಲಿನ ಗರಿಗಳನ್ನು ಕಿತ್ತುಹಾಕಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಬಾಲಕಿಯು ಯುವಕನ ಪಕ್ಕದಲ್ಲಿ ಕುಳಿತು ನಗುತ್ತಿದ್ದಾಳೆ. ಮತ್ತೊಬ್ಬನು ವಿಡಿಯೊ ರೆಕಾರ್ಡ್‌ ಮಾಡಿದ್ದಾನೆ. ಬ್ಯಾಕ್‌ಗ್ರೌಂಡ್‌ನಲ್ಲಿ ಬಾಲಿವುಡ್‌ ಹಾಡು ಕೇಳಿಸುತ್ತದೆ. ಕಾನೂನಿನ ಪ್ರಕಾರ ಯಾವುದೇ ವನ್ಯಜೀವಿಯನ್ನು ಬೇಟೆಯಾಡುವುದು, ಅವುಗಳಿಗೆ ಹಿಂಸೆ ಮಾಡುವಂತಿಲ್ಲ. ಅದರಲ್ಲೂ, ನವಿಲು ರಾಷ್ಟ್ರಪಕ್ಷಿಯಾದ ಕಾರಣ ಜನರಿಂದ ಹೆಚ್ಚಿನ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ

Exit mobile version