Site icon Vistara News

Viral News: ʻತಾಲಿಬಾನ್‌ ಜೋಕ್‌ʼ ಮಾಡಿದ ಬ್ರಿಟಿಷ್-‌ ಭಾರತೀಯ ವಿದ್ಯಾರ್ಥಿಯ ವಿಚಾರಣೆ, ಭಾರಿ ದಂಡ

indian student spain taliban joke

ಹೊಸದಿಲ್ಲಿ: ತನ್ನ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಸ್ಫೋಟಿಸುವ (Airplane Blast) ಬಗ್ಗೆ ತಮಾಷೆಯಾಗಿ ಸ್ನ್ಯಾಪ್‌ಚಾಟ್ ಸಂದೇಶವನ್ನು (Snapchat message) ಕಳುಹಿಸಿದ ಬ್ರಿಟಿಷ್-ಭಾರತೀಯ (British Indian) ವಿದ್ಯಾರ್ಥಿಯೊಬ್ಬ ಈಗ ಸ್ಪೇನ್‌ನಲ್ಲಿ ಪೊಲೀಸರಿಂದ ವಿಚಾರಣೆಯನ್ನು ಎದುರಿಸುತ್ತಿದ್ದಾನೆ.

ಬಾತ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿದ್ಯಾರ್ಥಿ ಆದಿತ್ಯ ವರ್ಮಾ ಎಂಬಾತ ಜುಲೈ 2022ರಲ್ಲಿ ಈಸಿಜೆಟ್ ವಿಮಾನದಲ್ಲಿ ತನ್ನ ಸ್ನೇಹಿತರೊಂದಿಗೆ ಸ್ಪೇನ್‌ನ ಮೆನೋರ್ಕಾ ದ್ವೀಪಕ್ಕೆ ಹೋಗುತ್ತಿದ್ದಾಗ, ನಿರ್ಗಮನದ ಮೊದಲು ಸಂದೇಶವನ್ನು ಕಳುಹಿಸಿದ್ದ. “ನಾನು ತಾಲಿಬಾನ್‌ ಸದಸ್ಯ. ವಿಮಾನವನ್ನು ಸ್ಫೋಟಿಸುವ ಹಾದಿಯಲ್ಲಿದ್ದೇನೆ” ಎಂದು ಈತ ಮೆಸೇಜ್‌ ಮಾಡಿದ್ದ.

ವರ್ಮಾನ ಈ ಸಂದೇಶವನ್ನು ಬ್ರಿಟಿಷ್‌ ಭದ್ರತಾ ಏಜೆನ್ಸಿಗಳು ಗ್ಯಾಟ್‌ವಿಕ್‌ನ ವೈ-ಫೈ ನೆಟ್‌ವರ್ಕ್‌ನಲ್ಲಿ ಪತ್ತೆಹಚ್ಚಿದ್ದವು. ಅವರು ಈಜಿಜೆಟ್ ವಿಮಾನವು ಆಕಾಶದಲ್ಲಿದ್ದಾಗಲೇ ಇದನ್ನು ಸ್ಪ್ಯಾನಿಷ್ ಅಧಿಕಾರಿಗಳಿಗೆ ತಿಳಿಸಿದರು. ವಿಮಾನದಿಂದ ಇಳಿದ ಕೂಡಲೇ ಆತನನ್ನು ಬಂಧಿಸಲಾಯಿತು.

ಈತನ ಸಂದೇಶ ಆ ಸಂದರ್ಭದಲ್ಲಿ ಕೋಲಾಹಲ ಸೃಷ್ಟಿಮಾಡಿತ್ತು. ಇದು ಬೆದರಿಕೆ ಸಂದೇಶ ಎಂದುಕೊಂಡಿದ್ದ ಅಧಿಕಾರಿಗಳು ಎರಡು ಸ್ಪ್ಯಾನಿಷ್ ಎಫ್-18 ಫೈಟರ್ ಜೆಟ್‌ಗಳನ್ನು ಸನ್ನದ್ಧತೆಯಲ್ಲಿಟ್ಟಿದ್ದರು. ಮೆನೋರ್ಕಾದಲ್ಲಿ ವಿಮಾನ ಇಳಿಯುವವರೆಗೂ ಈ ವಿಮಾನವನ್ನು ಒಂದು ಜೆಟ್ ವಿಮಾನ ಹಿಂಬಾಲಿಸಿತ್ತು. ನಂತರ ಈ ವಿಮಾನವನ್ನು ವ್ಯಾಪಕವಾಗಿ ಶೋಧಿಸಲಾಗಿತ್ತು.

18 ವರ್ಷ ವಯಸ್ಸಿನ ವರ್ಮಾನನ್ನು ಬಂಧಿಸಿ ಎರಡು ದಿನಗಳ ಕಾಲ ಪೊಲೀಸ್ ಸೆಲ್‌ನಲ್ಲಿ ಇರಿಸಿ, ಬ್ರಿಟಿಷ್ ಗುಪ್ತಚರ ಸಂಸ್ಥೆಗಳಾದ MI5 ಮತ್ತು MI6ಗಳಲ್ಲಿ ವಿಚಾರಣೆಗೆ ಒಳಪಡಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಮ್ಯಾಡ್ರಿಡ್‌ನ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ, ವರ್ಮಾ ಸಾರ್ವಜನಿಕ ಹಾನಿ ಅಥವಾ ತೊಂದರೆಯನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿರಲಿಲ್ಲ ಎಂಬುದು ಸಾಬೀತಾಯಿತು.

ತನ್ನ ಸಂದೇಶ ಸಹಪಾಠಿಗಳಿಗೆ ಕಳಿಸಿದ ಜೋಕ್‌ ಆಗಿತ್ತು ಎಂದು ವಿದ್ಯಾರ್ಥಿ ಹೇಳಿದ್ದಾನೆ. ಈತನ ಫೋನನ್ನು ಪರಿಶೀಲಿಸಿದಾಗ, ಭಾರತ ಮತ್ತು ಪಾಕಿಸ್ತಾನದ ನಡುವಿನ ಘರ್ಷಣೆಗಳು ಮತ್ತು ಈ ಪ್ರದೇಶದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ದಾಳಿಗಳ ಬಗ್ಗೆ ಆತ ಸರ್ಚ್‌ ಮಾಡಿದ್ದು ಕಂಡುಬಂದಿತ್ತು. ಆದರೆ ವರ್ಮಾ ಮತ್ತು ಜಿಹಾದಿ ಮೂಲಭೂತವಾದದ ನಡುವೆ ಯಾವುದೇ ಸಂಬಂಧ ಕಂಡುಬರಲಿಲ್ಲ.

ವರ್ಮಾ ಮೇಲೆ ಭಯೋತ್ಪಾದನೆ ಕೇಸು ಹಾಕಿಲ್ಲ. ಜೈಲು ಶಿಕ್ಷೆಯೂ ಆಗಿಲ್ಲ. ಆದರೆ ಈತ ತಪ್ಪಿತಸ್ಥನೆಂದು ನ್ಯಾಯಾಲಯ ಹೇಳಿದರೆ ಮಾತ್ರ ಸುಮಾರು ಕಂಡುಬಂದಲ್ಲಿ ಸುಮಾರು 1,17,000 ಯೂರೋ (106 ಕೋಟಿ ರೂ.) ದಂಡ ಕಟ್ಟಬೇಕಾಗಬಹುದು.

ಇದನ್ನೂ ಓದಿ: Hollywoodgate: ಅಫಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದ ಮೇಲೆ ಬೆಳಕು ಚೆಲ್ಲುವ ʼಹಾಲಿವುಡ್‌ ಗೇಟ್‌ʼ

Exit mobile version