Site icon Vistara News

Viral News: ಶಾಕಿಂಗ್‌ ಘಟನೆ! ಬುದ್ಧಿ ಹೇಳಿದ ಗುರುವನ್ನೇ ಚುಚ್ಚಿ ಕೊಂದ ವಿದ್ಯಾರ್ಥಿ

Viral News

ಗುವಾಹಟಿ: ಈಗಿನ ಕಾಲ ಹೇಗಿದೆ ಅಂದ್ರೆ ಸಂಬಂಧಗಳು ನಿಧಾನವಾಗಿ ಮರೆಯಾಗಿ ಎಲ್ಲರೂ ಯಾಂತ್ರಿಕವಾಗಿ ಬದುಕುತ್ತಿರುವ ಹಂತಕ್ಕೆ ತಲುಪಿದ್ದೇವೆ. ಈ ಯಾಂತ್ರಿಕ ಜೀವನದಲ್ಲಿ ಅಪ್ಪ-ಅಮ್ಮ, ಗುರು-ಶಿಷ್ಯ ಹೀಗೆ ಇಂತಹ ಸಂಬಂಧಗಳ ಮೇಲೆ ಭಾವನಾತ್ಮಕ ಬಂಧವೇ ಇಲ್ಲದಂತಾಗಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ವಿದ್ಯೆ ಕಲಿಸಿದ ಗುರುವನ್ನೇ ವಿದ್ಯಾರ್ಥಿಯೊಬ್ಬ ಇರಿದು(Stabbed) ಕೊಂದಿದ್ದಾನೆ. ಬುದ್ಧಿ ಹೇಳಿದ ಶಿಕ್ಷಕನಿಗೆ ತಿಳಿಗೇಡಿ ವಿದ್ಯಾರ್ಥಿ ಯಮನಾಗಿ ಎದುರುನಿಂತು ಪ್ರಾಣವನ್ನೇ ತೆಗೆದಿದ್ದಾನೆ(Viral News).

ಅಸ್ಸಾಂನ ಶಿವಸಾಗರ್ ಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, 11 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನನ್ನು ತರಗತಿಯಲ್ಲಿ ಇರಿದು ಕೊಂದಿದ್ದಾನೆ. ಕಳಪೆ ಸಾಧನೆಗಾಗಿ ಬೈದಿದ್ದಕ್ಕಾಗಿ ರಸಾಯನಶಾಸ್ತ್ರ ಶಿಕ್ಷಕ ರಾಜೇಶ್ ಬರುವಾ ಬೆಜವಾಡ (55) ಮೇಲೆ ಹಲ್ಲೆ ನಡೆಸಿ ಕೊಂದ 16 ವರ್ಷದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಬೆಜವಾಡ ಅವರು ರಸಾಯನಶಾಸ್ತ್ರವನ್ನು ಕಲಿಸುತ್ತಿದ್ದರು. ಜೊತೆಗೆ ಖಾಸಗಿ ಒಡೆತನದ ಶಾಲೆಯಲ್ಲಿ ನಿರ್ವಹಣಾ ಜವಾಬ್ದಾರಿಗಳನ್ನು ಸಹ ಹೊಂದಿದ್ದರು.ರಸಾಯನಶಾಸ್ತ್ರದಲ್ಲಿನ ಕಲಿಕೆಯ ಬಗ್ಗೆ ಶಿಕ್ಷಕರು ನಿನ್ನೆ ವಿದ್ಯಾರ್ಥಿಯನ್ನು ಗದರಿಸಿದ್ದರು. ಅಲ್ಲದೇ ಪೋಷಕರ ಸಭೆಗಾಗಿ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ಹೇಳಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ದಿನದ ನಂತರ ವಿದ್ಯಾರ್ಥಿ ಕ್ಯಾಶುಯಲ್ ಬಟ್ಟೆಗಳಲ್ಲಿ ತರಗತಿಗೆ ಬಂದಿದ್ದ. ಶಿಕ್ಷಕರು ಅವನನ್ನು ಹೊರಹೋಗುವಂತೆ ಕೇಳಿದರು. ಇದ್ದಕ್ಕಿದ್ದಂತೆ ವಿದ್ಯಾರ್ಥಿ ಬೆಜವಾಡ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಪದೇ ಪದೇ ಇರಿದಿದ್ದಾನೆ.

ಇನ್ನು ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ಕೋಚಿಂಗ್‌ ಸೆಂಟರ್‌ನಲ್ಲಿ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಬಂದು ನೋಡಿದಾಗ ತರಗತಿಯಲ್ಲಿ ರಕ್ತದ ಮಡುವಿನಲ್ಲಿ ಶಿಕ್ಷಕ ಬಿದ್ದಿದ್ದರು. ಅಲ್ಲೇ ಚಾಕು ಕೂಡ ಇತ್ತು. ಶಿಕ್ಷಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿಲಾಯಿತಾದರೂ ಆತ ಸಾವನ್ನಪ್ಪಿರುವುದನ್ನು ವೈದ್ಯರು ಖಚಿತಪಡಿಸಿದರು. ಇನ್ನು ವಿದ್ಯಾರ್ಥಿಯನ್ನು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಇತರ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ ಶಿಕ್ಷಕ ವಿದ್ಯಾರ್ಥಿಗೆ ಈ ಹಿಂದೆ ಬೈದಿದ್ದರು ಎಂಬುದು ಬಯಲಾಗಿದೆ.

ರಸಾಯನಶಾಸ್ತ್ರದಲ್ಲಿನ ಕಲಿಕೆಯ ಬಗ್ಗೆ ಶಿಕ್ಷಕರು ನಿನ್ನೆ ವಿದ್ಯಾರ್ಥಿಯನ್ನು ಗದರಿಸಿದ್ದರು. ಅಲ್ಲದೇ ಪೋಷಕರ ಸಭೆಗಾಗಿ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ಹೇಳಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ದಿನದ ನಂತರ ವಿದ್ಯಾರ್ಥಿ ಕ್ಯಾಶುಯಲ್ ಬಟ್ಟೆಗಳಲ್ಲಿ ತರಗತಿಗೆ ಬಂದಿದ್ದ. ಶಿಕ್ಷಕರು ಅವನನ್ನು ಹೊರಹೋಗುವಂತೆ ಹೇಳಿದ್ದರು ಎನ್ನಲಾಗಿದೆ. ಇನ್ನು ಆರೋಪಿ ವಿದ್ಯಾರ್ಥಿ ತರಗತಿ ಮುಗಿಸಿ ಮನೆಗೆ ತೆರಳಿದ್ದ. ಇದಾದ ಕೆಲವೇ ಹೊತ್ತಲ್ಲಿ ಮತ್ತೆ ತರಗತಿಗೆ ಬಂದಿದ್ದಾನೆ. ಅವನು ತರಗತಿಗೆ ಪ್ರವೇಶಿಸಿದಾಗ, ಶಿಕ್ಷಕನು ಅವನನ್ನು ಮತ್ತೆ ಬೈಯಲು ಶುರು ಮಾಡಿದ್ದ. ಇದರಿಂದ ಕೋಪಗೊಂಡ ವಿದ್ಯಾರ್ಥಿ ಶಿಕ್ಷಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸಹಪಾಠಿ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ:Mahadayi Water Dispute: ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ್ ತಂಡ ಭೇಟಿ; ನಾಲೆಗಳ ಪರಿಶೀಲನೆ

Exit mobile version