ಬೆಂಗಳೂರು, ಕರ್ನಾಟಕ: ಭಾರತದ ಗಣ್ಯ ಉದ್ಯಮಿ ಆನಂದ್ ಮಹೀಂದ್ರಾ(Anand Mahindra) ಟ್ವಿಟರ್‌ನಲ್ಲಿ(Twitter) ಯಾವಾಗಲೂ ಸಕ್ರಿಯರಾಗಿದ್ದಾರೆ. ಅವರ ಒಂದು ಟ್ವೀಟ್ ಸಾವಿರಾರು ಷೇರ್, ಕಮೆಂಟ್ಸ್ ಮತ್ತು ಲೈಕ್ಸ್ ಪಡೆದುಕೊಳ್ಳುತ್ತದೆ. ಆಗಾಗ, ಅವರು ದೇಶದ ವೈವಿಧ್ಯತೆ ಮತ್ತು ಶ್ರೇಷ್ಠತೆಯನ್ನು ಸಾರುವ, ಸ್ಫೂರ್ತಿದಾಯಕ ಸಾಧಕರ ಬಗ್ಗೆ ಟ್ವೀಟ್ ಮಾಡಿ ಎಲ್ಲರ ಗಮನ ಸೆಳೆಯುತ್ತದೆ. ಅದೇ ರೀತಿ ಈಗ ಆನಂದ್ ಮಹೀಂದ್ರಾ ಅವರು, ಭಾರತದ 51 ನದಿಗಳ ಕುರಿತು ಮಾಹಿತಿಯನ್ನು ಹೊಂದಿರುವ ಮ್ಯೂಸಿಕ್ ವಿಡಿಯೋವೊಂದನ್ನು(Music Video) ಷೇರ್ ಮಾಡಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ(Vrial Video.
ಟ್ವಿಟರ್‌ನಲ್ಲಿ ಸುಮಾರು ಒಂದೂ ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿರುವ ಆನಂದ್ ಮಹೀಂದ್ರಾ ಅವರು, ನೀರನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತದ ನದಿಗಳನ್ನು ಆಧರಿಸಿದ ಸಂಗೀತ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ‘ರಿವರ್ಸ್ ಆಫ್ ಇಂಡಿಯಾ’ ಶೀರ್ಷಿಕೆಯ ಹಾಡಿನಲ್ಲಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಭಾರತದಾದ್ಯಂತದ 51 ನದಿಗಳ ಹೆಸರುಗಳನ್ನು ಈ ವಿಡಿಯೋದಲ್ಲಿ ಕಾಣಬಹುದು.
ಉದ್ಯಮಿ ಆನಂದ ಮಹೀಂದ್ರಾ ಅವರ ಟ್ವೀಟ್
ಭಾರತದ 51 ನದಿಗಳ ಹೆಸರನ್ನು ಆಧರಿಸಿದ ಈ ಹಾಡು ಅದ್ಭುತವಾಗಿದೆ. ಅಮೂಲ್ಯ ಜಲ ಸಂಪನ್ಮೂಲದ ಬಗ್ಗೆ ಜಾಗೃತಿ ಮೂಡಿಸಲು ಈ ಹಾಡನ್ನು ರಚಿಸಲಾಗಿದೆ. ಬಾಂಬೆ ಜಯಶ್ರೀ (ಮತ್ತು ಅವರ ಮಗ ಅಮೃತ್) ಕೌಶಿಕಿ ಚಕ್ರವರ್ತಿ (ಮತ್ತು ಅವರ ಮಗ ರಿಷಿತ್) ಮತ್ತು ಇತರ ಅನೇಕರನ್ನು ಒಳಗೊಂಡ ಜಾಗತಿಕ ಸಹಯೋಗವನ್ನು ಇದು ಹೊಂದಿದೆ. ನದಿಯಂತೆ ಸಂಗೀತವು ನಿಮ್ಮ ಮೂಲಕ ಹರಿಯಲಿ, ಆನಂದಿಸಿ” ಎಂದು ಮಹೀಂದ್ರಾ ಹಂಚಿಕೊಂಡ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಆನಂದ ಮಹೀಂದ್ರಾ ಎಂಬ ಸ್ಫೂರ್ತಿಯ ಸೆಲೆ, Best supporting HERO!
ಈ ಮ್ಯೂಸಿಕ್ ವಿಡಿಯೋವನ್ನು 2021ರಲ್ಲಿ ರಚಿಸಲಾಗಿದೆ. ಮದ್ರಾಸ್ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯು ಈ ವಿಡಿಯೋವನ್ನು ಈ ಮೊದಲು ಷೇರ್ ಮಾಡಿತ್ತು. ಈಗ ಮಹೀಂದ್ರಾ ಅವರು ಈ ವಿಡಿಯೋ ಹಂಚಿಕೊಂಡಿದ್ದು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.