ಚಂಡೀಗಢ: ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಜನರೊಂದಿಗೆ ಹೆಚ್ಚು ಬೆರೆಯುತ್ತಿದ್ದಾರೆ. ರೈತರ ಗದ್ದೆಗಳಿಗೆ ಇಳಿಯುವುದು, ಬೈಕ್ ರಿಪೇರಿ ಅಂಗಡಿಗಳಿಗೆ ತೆರಳುವುದು ಸೇರಿ ಹಲವು ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇನ್ನು, ಹರಿಯಾಣದಲ್ಲಿ ಹಲವು ರೈತ ಮಹಿಳೆಯರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿಯಾಗಿದ್ದು, ರಾಹುಲ್ ಗಾಂಧಿ ಮದುವೆ ಕುರಿತು ಅವರು ಕೇಳಿದ ಪ್ರಶ್ನೆ ಈಗ ವೈರಲ್ ಆಗಿದೆ.
ಹರಿಯಾಣದ ಸೋನಿಪತ್‌ನಲ್ಲಿ ರೈತರ ಜತೆ ಸಂವಾದ ನಡೆಸಿದ ವಿಡಿಯೊದ ತುಣುಕೊಂದನ್ನು ರಾಹುಲ್ ಗಾಂಧಿ ಅವರು ಟ್ವೀಟ್ (ಈಗ X) ಮಾಡಿದ್ದಾರೆ. ರೈತ ಮಹಿಳೆಯರ ಜತೆ ಸಂವಾದ ನಡೆಸುವಾಗ, ಮಹಿಳೆಯೊಬ್ಬರು, “ರಾಹುಲ್ ಗಾಂಧಿ ಅವರಿಗೆ ಮದುವೆ ಮಾಡಿ” ಎಂದು ಕೇಳಿದ್ದಾರೆ. ಆಗ ಸೋನಿಯಾ ಗಾಂಧಿ ಅವರು, “ನೀವೇ ಒಂದು ಹೆಣ್ಣು ಹುಡುಕಿ” ಎಂಬುದಾಗಿ ಸೋನಿಯಾ ಗಾಂಧಿ ಹೇಳಿದ್ದಾರೆ. “ಹಾಗೇ ಆಗಲಿ” ಎಂದು ಮಹಿಳೆ ಪ್ರತಿಕ್ರಿಯಿಸಿದ್ದಾರೆ.
ವೈರಲ್ ಆದ ವಿಡಿಯೊ
मां, प्रियंका और मेरे लिए एक यादगार दिन, कुछ खास मेहमानों के साथ!
— Rahul Gandhi (@RahulGandhi) July 29, 2023
सोनीपत की किसान बहनों का दिल्ली दर्शन, उनके साथ घर पर खाना, और खूब सारी मज़ेदार बातें।
साथ मिले अनमोल तोहफे – देसी घी, मीठी लस्सी, घर का अचार और ढेर सारा प्यार।
पूरा वीडियो यूट्यूब पर:https://t.co/2rATB9CQoz pic.twitter.com/8ptZuUSDBk
ರೈತ ಮಹಿಳೆಯರು ವಿಶೇಷ ವಾಹನದಲ್ಲಿ ಸೋನಿಪತ್ ಜಿಲ್ಲೆಯಲ್ಲಿರುವ ಸೋನಿಯಾ ಗಾಂಧಿ ನಿವಾಸಕ್ಕೆ ಆಗಮಿಸಿದ್ದರು. ರಾಹುಲ್ ಗಾಂಧಿ ಆಹ್ವಾನದ ಮೇರೆಗೆ ಅವರು ಆಗಮಿಸಿದ್ದರು. ರೈತ ಮಹಿಳೆಯರಿಗೆ ಸೋನಿಯಾ ಗಾಂಧಿ ನಿವಾಸದಲ್ಲಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಇದೇ ವೇಳೆ ರೈತ ಮಹಿಳೆಯರು, ಯುವತಿಯರ ಜತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಸಂವಾದ ನಡೆಸಿದ್ದಾರೆ.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಮದುವೆಯಾಗಲು ಹುಡುಗಿ ಬಳಿ ಇರಬೇಕಾದ ಗುಣಗಳು ಯಾವವು? ಅವರೇ ಕೊಟ್ಟ ಪಟ್ಟಿ ಇಲ್ಲಿದೆ
ಹೀಗೆ, ರೈತ ಮಹಿಳೆಯರೊಂದಿಗೆ ನಡೆಸಿದ ಮಾತುಕತೆಯು ರಾಹುಲ್ ಗಾಂಧಿ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ರಾಹುಲ್ ಗಾಂಧಿ ಅವರು ಹರಿಯಾಣದಲ್ಲಿ ಭತ್ತದ ಗದ್ದೆಗಳಿಗೆ ಇಳಿದು ಟ್ರ್ಯಾಕ್ಟರ್ ಓಡಿಸಿದ್ದರು. ಅಲ್ಲದೆ, ರೈತರ ಜತೆಗೂಡಿ ಭತ್ತ ನಾಟಿ ಮಾಡಿದ್ದರು.