Rahul Gandhi: ರಾಹುಲ್‌ ಗಾಂಧಿ ಮದುವೆಯಾಗಲು ಹುಡುಗಿ ಬಳಿ ಇರಬೇಕಾದ ಗುಣಗಳು ಯಾವವು? ಅವರೇ ಕೊಟ್ಟ ಪಟ್ಟಿ ಇಲ್ಲಿದೆ Vistara News

ದೇಶ

Rahul Gandhi: ರಾಹುಲ್‌ ಗಾಂಧಿ ಮದುವೆಯಾಗಲು ಹುಡುಗಿ ಬಳಿ ಇರಬೇಕಾದ ಗುಣಗಳು ಯಾವವು? ಅವರೇ ಕೊಟ್ಟ ಪಟ್ಟಿ ಇಲ್ಲಿದೆ

‌Rahul Gandhi: ರಾಹುಲ್‌ ಗಾಂಧಿ ಅವರಿಗೆ ಐಸ್‌ಕ್ರೀಮ್ ಅಂದರೆ ತುಂಬ ಇಷ್ಟವಂತೆ. ಒಂದೇ ಸಲ 8-10 ಐಸ್‌ಕ್ರೀಮ್‌ಗಳನ್ನು ಅವರು ತಿನ್ನುತ್ತಾರಂತೆ. ಇದರ ಜತೆಗೆ ಹಲವು ಸಂಗತಿಗಳನ್ನು ರಾಹುಲ್‌ ಗಾಂಧಿ ಹಂಚಿಕೊಂಡಿದ್ದಾರೆ.

VISTARANEWS.COM


on

Rahul Gandhi Marriage
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶ್ರೀನಗರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹಾಗೂ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ಮದುವೆ ಬಗ್ಗೆ ಆಗಾಗ ದೇಶದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ. ಇವರಿಬ್ಬರು ಸುಮ್ಮನಿದ್ದರೂ ಜನ ಇವರ ಮದುವೆ ಬಗ್ಗೆ ಮಾತನಾಡುತ್ತಾರೆ. ಆದರೆ, ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಅವರೇ ಪ್ರತಿಕ್ರಿಯಿಸಿದ್ದು, ತಾವು ಮದುವೆಯಾಗುವ ಹೆಣ್ಣುಮಗಳಿಗೆ ಯಾವ ಗುಣ ಇರಬೇಕು ಎಂಬುದನ್ನು ಹೇಳಿದ್ದಾರೆ.

ಭಾರತ್‌ ಜೋಡೋ ಯಾತ್ರೆ ಮಧ್ಯೆಯೇ ಕರ್ಲಿ ಟೇಲ್ಸ್‌ ಎಂಬ ಯುಟ್ಯೂಬ್‌ ಚಾನೆಲ್‌ನ ಕಾಮಿಯಾ ಜಾನಿ ಜತೆ ರಾಹುಲ್‌ ಗಾಂಧಿ ಮಾತನಾಡಿದ್ದು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಮದುವೆ ಬಗ್ಗೆ ನಿರೂಪಕಿ ಕೇಳಿದಾಗ, “ಇವಳೇ ನನ್ನ ಬಾಳ ಸಂಗತಿ, ಇವಳೇ ನನಗೆ ಸರಿಯಾದ ಜೋಡಿ ಎಂದು ಎನಿಸಿದರೆ ಖಂಡಿತವಾಗಿಯೂ ಮದುವೆಯಾಗುತ್ತೇನೆ. ಪ್ರೀತಿಯಿಂದ ಕಾಣುವ ಗುಣ ಹಾಗೂ ಜಾಣತನ ಇರುವವರನ್ನು ಮದುವೆಯಾಗುತ್ತೇನೆ” ಎಂದು ಹೇಳಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ.

ಮದುವೆ ಜತೆಗೆ ರಾಹುಲ್‌ ಗಾಂಧಿಯವರ ಇಷ್ಟದ ತಿನಿಸು, ನೆಚ್ಚಿನ ಹವ್ಯಾಸ, ಬಾಲ್ಯ, ಶಾಲೆಯ ದಿನಗಳು, ರಾಜಕೀಯ, ಪ್ರಧಾನಿ ಹುದ್ದೆ, ವಿದೇಶದಲ್ಲಿ ಸಿಕ್ಕ ಮೊದಲ ಜಾಬ್‌, ಅದರ ಸಂಬಳ ಸೇರಿ ಹತ್ತಾರು ವಿಷಯಗಳ ಕುರಿತು ರಾಹುಲ್‌ ಗಾಂಧಿ ಮುಕ್ತವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ | Rahul Gandhi | ರಾಹುಲ್‌ ಗಾಂಧಿಯನ್ನು ಆದಿ ಶಂಕರರಿಗೆ ಹೋಲಿಸಿದ ಫಾರೂಕ್‌ ಅಬ್ದುಲ್ಲಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Job News: ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆಗಳಲ್ಲಿ ಶೇ.14ರಷ್ಟು ಉದ್ಯೋಗ ಹೆಚ್ಚಳ

Job News: ಭಾರತದಲ್ಲಿ ನೇಮಕಾತಿ ಚಟುವಟಿಕೆಯು 2% ಮಾಸಿಕ ಕುಸಿತವನ್ನು ಕಂಡಿದೆ (2023ರ ನವೆಂಬರ್ ಮತ್ತು ಅಕ್ಟೋಬರ್) ಮತ್ತು 10% ವಾರ್ಷಿಕ ಕುಸಿತ (2022 ನವೆಂಬರ್-2023 ನವೆಂಬರ್) ದಾಖಲಾಗಿದೆ ಎಂದು ವರದಿ ತಿಳಿಸಿದೆ. I ಮಧ್ಯೆ ಸರ್ಕಾರ, ರಕ್ಷಣಾ ಇಲಾಖೆಗಳಲ್ಲಿ ಶೇ.14ರಷ್ಟು ಉದ್ಯೋಗ ಹೆಚ್ಚಳವಾಗಿದೆ.

VISTARANEWS.COM


on

job opportunity
Koo

ನವದೆಹಲಿ: ಭಾರತದಲ್ಲಿ ನೇಮಕಾತಿ ಚಟುವಟಿಕೆಯು 2% ಮಾಸಿಕ ಕುಸಿತವನ್ನು ಕಂಡಿದೆ (2023ರ ನವೆಂಬರ್ ಮತ್ತು ಅಕ್ಟೋಬರ್) ಮತ್ತು 10% ವಾರ್ಷಿಕ ಕುಸಿತ (2022 ನವೆಂಬರ್-2023 ನವೆಂಬರ್) ದಾಖಲಾಗಿದೆ ಎಂದು ವರದಿ ತಿಳಿಸಿದೆ. ಈತನ್ಮಧ್ಯೆ ಲಾಜಿಸ್ಟಿಕ್ಸ್, ಸಾಗಾಣಿಕೆ ಮತ್ತು ಖರೀದಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉದ್ಯೋಗ ನೇಮಕಾತಿಯಲ್ಲಿ 6% ಬೆಳವಣಿಗೆಯನ್ನು ಕಂಡಿದೆ (Job News).

ಪ್ರತಿಭಾನ್ವೇಷಣಾ ವೇದಿಕೆಯ ಫೌಂಡಿಟ್ (Foundit ಹಿಂದಿನ Monster APAC & ME) ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದೆ. ಫೌಂಡಿಟ್ ಇನ್‌ಸೈಟ್ಸ್‌ ಟ್ರ್ಯಾಕರ್ (Fit)ನಲ್ಲಿ 2023ರ ನೇಮಕಾತಿ ಪ್ರಕ್ರಿಯೆ ಕುರಿತಾದ ಈ ಸಂಶೋಧನಾ ವರದಿ ಪ್ರಕಟವಾಗಿದೆ.

ನೇಮಕಾತಿ ಸೂಚ್ಯಂಕವು ನವೆಂಬರ್ 2022ರಲ್ಲಿ 277 ಇತ್ತು. 2023ರ ನವೆಂಬರ್‌ನಲ್ಲಿ ಇದು 249ಕ್ಕೆ ಇಳಿದಿದೆ. ಅದಾಗ್ಯೂ ಭಾರತೀಯ ಕೈಗಾರಿಕೆಗಳು, ಸ್ಟಾರ್ಟ್ ಅಪ್‌ಗಳು ಮತ್ತು ಉತ್ಪಾದನಾ ಘಟಕಗಳ ಸಹಾಯದಿಂದ ದೇಶದ ಆರ್ಥಿಕ ಭವಿಷ್ಯವು ಭರವಸಾದಾಯಕವಾಗಿದೆ ಎಂದು ವರದಿ ಹೇಳಿದೆ.

ಉದ್ಯೋಗ ಅಂತರವನ್ನು ಕಡಿಮೆ ಮಾಡಲು ಪಿಎಸ್‌ಯು(Public Sector Undertakings)ಮುಂದಾಗಿದ್ದು, ಅದರ ಫಲವಾಗಿ ಇದು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿರುದ್ಯೋಗ ದರವು 7.2%ರಿಂದ 6.6% ಕ್ಕೆ ಇಳಿಕೆಯಾಗಿದೆ ಎನ್ನುವ ಅಂಶದ ಮೇಲೆ ವರದಿ ಬೆಳಕು ಚೆಲ್ಲಿದೆ.

ಉದ್ಯೋಗ ಹೆಚ್ಚಳಕ್ಕೆ ಕ್ರಮ

ಸರ್ಕಾರ, ಪಿಎಸ್‌ಯು ಮತ್ತು ರಕ್ಷಣಾ ಕೈಗಾರಿಕೆಗಳು (14%) ಉದ್ಯೋಗ ಒದಗಿಸುವಲ್ಲಿ ಮುಂದಿವೆ. ಸರ್ಕಾರದ ನೀತಿಗಳು ಮತ್ತು ಯೋಜನೆಗಳಾದ ‘ಮೇಕ್ ಇನ್ ಇಂಡಿಯಾ’, ಆತ್ಮ ನಿರ್ಭರ ಭಾರತ್ ರೋಜ್‌ಗಾರ್‌ ಯೋಜನೆ (ABRY) ಇತ್ಯಾದಿ ದೇಶದಲ್ಲಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಗೆ ಕಾರಣವಾಗಿವೆ. ಇವು ನಿರುದ್ಯೋಗ ದರವನ್ನು ಕಡಿಮೆ ಮಾಡಲು ಗಣನೀಯ ಕೊಡುಗೆ ಸಲ್ಲಿಸಿವೆ. ಮೆಟ್ರೋ ರೈಲು ಮತ್ತು ರೈಲುಗಳ(ವಂದೇ ಭಾರತ್ ಸೇವೆ ಸೇರಿದಂತೆ) ತ್ವರಿತ ವಿಸ್ತರಣೆಯೊಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಗರಿಷ್ಠ ಪ್ರಯತ್ನ ಪಡುತ್ತಿದೆ. “ಯುವ ಜನತೆ ಉದ್ಯೋಗಗಳನ್ನು ಪಡೆಯಲು ಕೌಶಲ್ಯವನ್ನು ಹೆಚ್ಚಿಸಬೇಕು. ಮುಂಬರುವ ದಿನಗಳಲ್ಲಿ ಹೊಸ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆʼʼ ಎಂದು ಫೌಂಡಿಟ್ ಹೇಳಿದೆ.

ವೇತನ ಶ್ರೇಣಿ

ಫ್ರೆಶರ್‌ಗಳಿಗೆ ಕನಿಷ್ಠ ವೇತನ 2,10,994 ರೂ.ಗಳಿಂದ (BPO / ITES) 3,94,794 ರೂ.ಗಳವರೆಗೆ (ಐಟಿ-ಹಾರ್ಡ್‌ವೇರ್‌, ಸಾಫ್ಟ್‌ವೇರ್‌) ಮತ್ತು 11-15 ವರ್ಷಗಳ ಅನುಭವ ಹೊಂದಿರುವ ವೃತ್ತಿಪರರಿಗೆ ವೇತನವು 19,60,577 ರೂ.ಗಳಿಂದ (ಬ್ಯಾಂಕಿಂಗ್ / ಹಣಕಾಸು ಸೇವೆಗಳು, ವಿಮೆ) 33,09,292 ರೂ.ಗಳವರೆಗೆ ಇದೆ. ಐಟಿ-ಹಾರ್ಡ್‌ವೇರ್‌, ಸಾಫ್ಟ್‌ವೇರ್‌ ಉದ್ಯಮವು ಹೆಚ್ಚಿನ ವೇತನವನ್ನು ನೀಡುತ್ತದೆ. ನಂತರದ ಸ್ಥಾನದಲ್ಲಿ ಬ್ಯಾಂಕಿಂಗ್ / ಹಣಕಾಸು ಸೇವೆಗಳು / ವಿಮಾ ಉದ್ಯಮ ಇದೆ. ಭಾರತದಲ್ಲಿ ನುರಿತ ಐಟಿ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇರುವುದು ಇದಕ್ಕೆ ಕಾರಣ. ಬಿಪಿಒ / ಐಟಿಇಎಸ್ ಮತ್ತು ಶಿಕ್ಷಣ ಉದ್ಯಮವು ಕಡಿಮೆ ವೇತನ ಶ್ರೇಣಿಗಳನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಆಫೀಸ್ ಇಕ್ವಿಪ್‌ಮೆಂಟ್ ಮತ್ತು ಆಟೋಮೇಷನ್ ವಲಯವು ನೇಮಕಾತಿಯಲ್ಲಿ 4% ಬೆಳವಣಿಗೆಯನ್ನು ದಾಖಲಿಸಿದೆ. ಆಟೋಮೇಷನ್ ಮತ್ತು ಎಐ ತಂತ್ರಜ್ಞಾನಗಳ ಅಳವಡಿಕೆ ಉತ್ಪಾದಕತೆಯ ಹೆಚ್ಚಳ, ಜಿಡಿಪಿ ಬೆಳವಣಿಗೆಗೆ ಕಾರಣವಾಗಲಿದೆ. ಅಕ್ಟೋಬರ್‌ಗೆ ಹೋಲಿಸಿದರೆ ನವೆಂಬರ್‌ನಲ್ಲಿ ಬೆಳವಣಿಗೆ ದಾಖಲಿಸಿದ ಇತರ ಕೈಗಾರಿಕೆಗಳೆಂದರೆ ಚಿಲ್ಲರೆ ವ್ಯಾಪಾರ (3%) ಮತ್ತು ಹೆಲ್ತ್‌ಕೇರ್‌ / ಫಾರ್ಮಾಸ್ಯುಟಿಕಲ್ಸ್ ಕೈಗಾರಿಕೆ (2%).

ಗಮನಾರ್ಹ ಕೊಡುಗೆ ನೀಡಿದ ಎರಡನೇ ಹಂತದ ನಗರಗಳು

ಎರಡನೇ ಹಂತದ ನಗರಗಳಲ್ಲಿ ವೈವಿಧ್ಯಮಯ ಪ್ರತಿಭೆಗಳ ಲಭ್ಯತೆಯು ಹೆಚ್ಚುತ್ತಿದೆ. ಇದರ ಅಂಗವಾಗಿ ಕೊಯಮತ್ತೂರು ನೇಮಕಾತಿಯಲ್ಲಿ ಗಮನಾರ್ಹವಾದ 13% ಹೆಚ್ಚಳ ದಾಖಲಿಸಿದೆ. ಕೊಯಮತ್ತೂರು ಹೊರತುಪಡಿಸಿ ಕೇರಳದ ಕೊಚ್ಚಿಯಲ್ಲಿಯೂ ನೇಮಕಾತಿ ಚಟುವಟಿಕೆಯಲ್ಲಿ 4% ಹೆಚ್ಚಳವಾಗಿದೆ. ಇನ್ನು ಜೈಪುರದಲ್ಲಿ 2% ಹೆಚ್ಚಳ ಕಂಡುಬಂತು. ಇದಕ್ಕೆ ವಿರುದ್ಧವಾಗಿ ಕೋಲ್ಕತಾ, ಮುಂಬೈ ಮತ್ತು ಪುಣೆಯಂತಹ ಕೆಲವು ನಗರಗಳ ನೇಮಕಾತಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕ್ರಮವಾಗಿ 5%, 6% ಮತ್ತು 4%ರಷ್ಟು ಕುಸಿತ ದಾಖಲಿಸಿವೆ.

ಕುಸಿತ ಕಂಡುಬಂದ ಕ್ಷೇತ್ರಗಳು

ಎಂಜಿನಿಯರಿಂಗ್ / ಉತ್ಪಾದನೆ (-5%), ಸೀನಿಯರ್‌ ಮ್ಯಾನೇಜ್‌ಮೆಂಟ್‌ ಪೊಸಿಷನ್‌ (-4%), ಮಾರಾಟ ಮತ್ತು ಅಭಿವೃದ್ಧಿ (-4%), ಮತ್ತು ಗ್ರಾಹಕ ಸೇವಾ ಸ್ಥಾನಗಳು (-4%) ನೇಮಕಾತಿಯಲ್ಲಿ ಕುಸಿತ ದಾಖಲಿಸಿದವು. ಈ ತಿಂಗಳು ಮಾರ್ಕೆಟಿಂಗ್ ಮತ್ತು ಸಂವಹನ, ಸಾಫ್ಟ್‌ವೇರ್‌, ಹಾರ್ಡ್‌ವೇರ್‌ ಮತ್ತು ದೂರಸಂಪರ್ಕ ಕ್ಷೇತ್ರಗಳ ಚಟುವಟಿಕೆ ಮಧ್ಯ,ಮವಾಗಿತ್ತು.

ಇದನ್ನೂ ಓದಿ: Ram Temple: ರಾಮಮಂದಿರ ಉದ್ಘಾಟನೆಗೆ ರಾಮ, ಸೀತೆಗೂ ಆಹ್ವಾನ! ವಿಐಪಿ ಲಿಸ್ಟ್‌ನಲ್ಲಿ ಯಾರಿದ್ದಾರೆ?

Continue Reading

ದೇಶ

ಬೆಂಗಳೂರು ಸೇರಿ ದೇಶದ ಟಾಪ್ 7 ನಗರಗಳಲ್ಲಿ ಕಚೇರಿ ಬಾಡಿಗೆ ಹೆಚ್ಚಳ!

Bengaluru: ಬೆಂಗಳೂರು ಸೇರಿದಂತೆ ದೇಶದ 7 ನಗರಗಳಲ್ಲಿ ಕಚೇರಿ ಜಾಗ ಬಾಡಿಗೆ ಹೆಚ್ಚಳವಾಗಿದೆ. ಚೆನ್ನೈನಲ್ಲಿ ಈ ದರ ಅತ್ಯಧಿಕ ಇದೆ ಎಂದು ವರದಿ ತಿಳಿಸಿದೆ.

VISTARANEWS.COM


on

Office Rental Rises in top 7 cities including bengaluru
Koo

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲು ಆರು ತಿಂಗಳು ಬೆಂಗಳೂರು (Bengaluru) ಸೇರಿದಂತೆ ದೇಶದ ಟಾಪ್ 7 ನಗರಗಳಲ್ಲಿ (Top 7 Cities) ವಾಣಿಜ್ಯ ಕಚೇರಿ ಸ್ಥಳಾವಕಾಶದ ಚಟುವಟಿಕೆಗಳು ಅಷ್ಟೇನೂ ಪೂರಕವಾಗಿರಲಿಲ್ಲ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಕಷ್ಟು ಚಟುವಟಿಕೆಗಳು ಮಂದಗತಿಯಲ್ಲಿದ್ದವು ಎಂದು ಅನಾರಾಕ್ ತನ್ನ ಹೇಳಿಕೆಯಲ್ಲಿ ಹೇಳಿದೆ. ಈ ಮಧ್ಯೆ, ಬೆಂಗಳೂರು ಸೇರಿದಂತೆ ದೇಶದ ಏಳು ನಗರಗಳಲ್ಲಿ ಕಚೇರಿ ಬಾಡಿಗೆಯು ಶೇ.7ರಷ್ಟು ಹೆಚ್ಚಳವಾಗಿದೆ(Office Rental Rises). ಈ ಪೈಕಿ, ಚೆನ್ನೈ ನಗರವು (Chennai City) ಭಾರೀ ಬೆಳವಣಿಗೆ ಕಂಡಿದೆ.

ಸರಾಸರಿ ಮಾಸಿಕ ಕಚೇರಿ ಬಾಡಿಗೆ ಮೌಲ್ಯಗಳಲ್ಲಿ ಚೆನ್ನೈ ಅತ್ಯಧಿಕ ಶೇ.10 ರಷ್ಟು ವಾರ್ಷಿಕ ಏರಿಕೆಯನ್ನು ದಾಖಲಿಸಿದೆ. ಪ್ರತಿ ಚದರ ಅಡಿಗೆ 62 ರೂ. ರಿಂದ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಚದರ ಅಡಿಗೆ 68 ರೂ. ಇತ್ತು. ವಾರ್ಷಿಕ ಶೇ.8ರ ಬೆಳವಣಿಗೆಯೊಂದಿಗೆ ಹೈದರಾಬಾದ್ ನಂತರದ ಸ್ಥಾನದಲ್ಲಿದೆ. ನಗರದಲ್ಲಿನ ಸರಾಸರಿ ಮಾಸಿಕ ಕಚೇರಿ ಬಾಡಿಗೆ ಮೌಲ್ಯವು 61 ರೂ.ನಿಂದ 66 ರೂ.ಗೆ ಏರಿಕೆಯಾಗಿದೆ. ಮತ್ತೊಂದೆಡೆ, ಬೆಂಗಳೂರು ಮತ್ತು ಪುಣೆ, ಕೋಲ್ಕೊತಾ ನಗರಗಳಲ್ಲಿ ವಾರ್ಷಿಕ ಶೇ.7 ಬೆಳವಣಿಗೆಯನ್ನು ದಾಖಲಾಗಿದೆ. ಮತ್ತೊಂದೆಡೆ ಮುಂಬೈ ಮತ್ತು ಎನ್‌ಸಿಆರ್‌ನಲ್ಲಿ ಈ ಪ್ರಮಾಣ ಶೇ.5ರಷ್ಟು ಏರಿಕೆಯಾಗಿದೆ.

2023ರ ವಿತ್ತ ವರ್ಷದ ಮೊದಲ ಅರ್ಧ ವರ್ಷಕ್ಕೆ ಹೋಲಿಸಿದರೆ, 2024ರ ವಿತ್ತ ವರ್ಷದ ಮೊದಲ ಆರ್ಥಿಕ ವರ್ಷದಲ್ಲಿ ದೇಶದ 7 ನಗರಗಳಲ್ಲಿ ಹೊಸ ಕಚೇರಿಯ ಬೇಡಿಕೆ ಪೂರೈಕೆಯ ಕೇವಲ ಶೇ.5ರಷ್ಟು ಏರಿಕೆಯಾಗಿದೆ. ಇದೇ ವೇಳೆ, ವಾರ್ಷಿಕ ಬೇಡಿಕೆಯಲ್ಲಿ ಶೇ.1ರಷ್ಟು ಕುಸಿತವಾಗಿದೆ.

ಟಿಎಂಎಫ್ ಜಾಗತಿಕ ಸುಸ್ಥಿರ ನಗರಗಳ ಚಾಲೆಂಜ್; ಬೆಂಗಳೂರು, ವಾರಾಣಸಿ ಶಾರ್ಟ್ ಲಿಸ್ಟ್

ಟೊಯೊಟಾ ಮೊಬಿಲಿಟಿ ಫೌಂಡೇಶನ್ (Toyota Mobility Foundation – TMF) 9 ಮಿಲಿಯನ್ ಡಾಲರ್ ಸುಸ್ಥಿರ ನಗರಗಳ ಚಾಲೆಂಜ್ ನಲ್ಲಿ ಅಗ್ರ 10 ನಗರಗಳಲ್ಲಿ ಬೆಂಗಳೂರು (Bengaluru) ಮತ್ತು ವಾರಣಾಸಿಯನ್ನು (Varanasi) ಶಾರ್ಟ್ ಲಿಸ್ಟ್ (Shortlisted) ಮಾಡಲಾಗಿದೆ ಎಂದು ಘೋಷಿಸಿದೆ. ಟೊಯೊಟಾ ಮೊಬಿಲಿಟಿ ಫೌಂಡೇಶನ್, ಚಾಲೆಂಜ್ ವರ್ಕ್ಸ್ ಮತ್ತು ವರ್ಲ್ಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್‌ನ ಬೆಂಬಲದೊಂದಿಗೆ ಜೂನ್ 2023 ರಲ್ಲಿ ಈ ಚಾಲೆಂಜ್ ಅನ್ನು ಪ್ರಾರಂಭಿಸಲಾಗಿತ್ತು. ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸುವ ಸಾಮರ್ಥ್ಯದೊಂದಿಗೆ ಚಲನಶೀಲತೆ ಕೇಂದ್ರಿತ ನಾವೀನ್ಯತೆಯನ್ನು ಬೆಂಬಲಿಸುವ ಮೂಲಕ ನಗರಗಳು ಭವಿಷ್ಯಕ್ಕಾಗಿ ಸಿದ್ಧವಾಗಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಈ ಪ್ರವೇಶ ಅವಧಿಯಲ್ಲಿ ಜಾಗತಿಕವಾಗಿ 46 ದೇಶಗಳ 150 ಕ್ಕೂ ಹೆಚ್ಚು ನಗರಗಳಿಂದ 200 ಕ್ಕೂ ಹೆಚ್ಚು ನಮೂದುಗಳನ್ನು ಸ್ವೀಕರಿಸಲಾಗಿದೆ. 1) ಚಾಲೆಂಜ್ ಫೋಕಸ್ 2) ನಾವೀನ್ಯತೆ 3) ಪರಿಣಾಮ 4) ಪಾಲುದಾರ ಸಾಮರ್ಥ್ಯದ ನಾಲ್ಕು ಪ್ರಮುಖ ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಲಾಯಿತು. ಬ್ರೆಜಿಲ್, ಕೊಲಂಬಿಯಾ, ಭಾರತ, ಇಟಲಿ, ಮಲೇಷ್ಯಾ, ಮೆಕ್ಸಿಕೊ, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ನಗರಗಳು ಈ ಪಟ್ಟಿಯಲ್ಲಿವೆ.

ಈ ಸುದ್ದಿಯನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆಗಾಗಿ ಇನ್ನು ಮೊಬೈಲ್, ಲ್ಯಾಪ್‌ಟ್ಯಾಪ್‌ ಟ್ರೇನಲ್ಲಿ ಇಡಬೇಕಿಲ್ಲ!

Continue Reading

ಕ್ರೈಂ

ವರದಕ್ಷಿಣೆಯಾಗಿ 150 ಗ್ರಾಂ ಚಿನ್ನ, 15 ಎಕರೆ ಭೂಮಿ, ಬಿಎಂಡಬ್ಲ್ಯು ಕಾರಿಗೆ ಬೇಡಿಕೆ; ವೈದ್ಯೆ ಆತ್ಮಹತ್ಯೆ

Crime News: ವರದಕ್ಷಿಣೆಗೆ ಕೇರಳದಲ್ಲಿ ಇನ್ನೊಂದು ಜೀವದ ಬಲಿ ನಡೆದಿದೆ. ಯುವ ವೈದ್ಯೆ ಡಾ. ಶಹನಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ವರನ ಕಡೆಯವರ ವರ ದಕ್ಷಿಣೆ ಬೇಡಿಕೆಯೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

VISTARANEWS.COM


on

shahana
Koo

ತಿರುವನಂತಪುರಂ: ವರದಕ್ಷಿಣೆ (Dowry demands) ವಿಚಾರಕ್ಕೆ ಮತ್ತೊಂದು ಸಾವು ಸಂಭವಿಸಿದೆ. ದುಬಾರಿ ಮೊತ್ತದ ವರದಕ್ಷಿಣೆಗೆ ಬೇಡಿಕೆ ಇಟ್ಟು ಪ್ರಿಯತಮ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದು ವೈದ್ಯೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ಸಂಭವಿಸಿದೆ. ತಿರುವನಂತಪುರಂನ 26 ವರ್ಷದ ಡಾ. ಶಹನಾ ಆತ್ಮಹತ್ಯೆ ಮಾಡಿಕೊಂಡವರು (Crime News).

ಡಾ. ಶಹನಾ ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು. ವರನ ಮನೆಯವರು ವರದಕ್ಷಿಣೆಯಾಗಿ 150 ಗ್ರಾಂ ಚಿನ್ನ, 15 ಎಕರೆ ಭೂಮಿ ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿದ್ದರು. ಅಷ್ಟು ಕೊಡಲು ಸಾಧ್ಯವಿಲ್ಲ ಎಂದಾಗ ವರನ ಕಡೆಯವರು ಸಿಟ್ಟಿನಿಂದ ಮದುವೆ ರದ್ದು ಮಾಡಿದ್ದಾರೆ. ಇದರಿಂದ ಶಹನಾ ದಿಢೀರ್ ಖಿನ್ನತೆಗೆ ಒಳಗಾಗಿದ್ದರು. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತನಿಖೆಗೆ ಆದೇಶ

ಘಟನೆ ಕುರಿತು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆಘಾತ ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆಕೆಯ ಪ್ರಿಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವರದಕ್ಷಿಣೆ ಬೇಡಿಕೆ, ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ಹಲವು ಪ್ರಕರಣ ದಾಖಲಿಸಲಾಗಿದೆ.

ಘಟನೆಯ ವಿವರ

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಡಾ. ಶಹನಾ ತನ್ನ ತಾಯಿ ಮತ್ತು ಇಬ್ಬರು ಒಡಹುಟ್ಟಿದವರೊಂದಿಗೆ ವಾಸಿಸುತ್ತಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಆಕೆಯ ತಂದೆ ಎರಡು ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಡಾ. ಶಹನಾ ಮತ್ತು ಡಾ. ಇ.ಎ. ರುವೈಸ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಮದುವೆಯಾಗಲು ನಿರ್ಧರಿಸಿದ್ದರು. ಈ ಮಧ್ಯೆ ಡಾ. ರುವೈಸ್ ಕುಟುಂಬವು ವರದಕ್ಷಿಣೆಯಾಗಿ 150 ಗ್ರಾಂ. ಚಿನ್ನ, 15 ಎಕರೆ ಭೂಮಿ ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇಟ್ಟಿತ್ತು ಎಂದು ಶಹನಾ ಕುಟುಂಬಸ್ಥರು ಆರೋಪಿಸಿದ್ದಾರೆ. ಡಾ. ಶಹನಾ ಅವರ ಕುಟುಂಬವು ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿದಾಗ ಮದುವೆಯನ್ನು ರದ್ದುಗೊಳಿಸಲಾಗಿತ್ತು ಎಂದು ಮೂಲಗಳು ವರದಿ ಮಾಡಿವೆ. ಆಕೆಯ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ ಡೆತ್‌ನೋಟ್‌ನಲ್ಲಿ “ಎಲ್ಲರಿಗೂ ಹಣ ಮಾತ್ರ ಬೇಕು” ಎಂದು ಬರೆಯಲಾಗಿತ್ತು.

ಇದನ್ನೂ ಓದಿ: Crime News: ಖಿನ್ನತೆ, ಕೊಲೆ, ಆತ್ಮಹತ್ಯೆ; ವೈದ್ಯನ ಮನೆಯಲ್ಲಿ ನಡೆದಿದ್ದು ಬೆಚ್ಚಿ ಬೀಳಿಸುವ ಘಟನೆ!

ವರದಕ್ಷಿಣೆ ಬೇಡಿಕೆಯ ಆರೋಪದ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಲಾಗಿದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ. ರಾಜ್ಯ ಅಲ್ಪಸಂಖ್ಯಾತ ಆಯೋಗ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಸಮಿತಿಯ ಅಧ್ಯಕ್ಷ ಎ.ಎ.ರಶೀದ್ ಅವರು ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಮತ್ತು ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಡಿಸೆಂಬರ್ 14ರಂದು ಆಯೋಗದ ಮುಂದೆ ಹಾಜರಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಅವರು ಡಾ. ಶಹನಾ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕೇರಳದಲ್ಲಿ ವರದಕ್ಷಿಣೆ ಕಿರುಕುಳ ಪ್ರಕಣಗಳು ವರದಿಯಾಗಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ದೇಶ

Ram Temple: ರಾಮಮಂದಿರ ಉದ್ಘಾಟನೆಗೆ ರಾಮ, ಸೀತೆಗೂ ಆಹ್ವಾನ! ವಿಐಪಿ ಲಿಸ್ಟ್‌ನಲ್ಲಿ ಯಾರಿದ್ದಾರೆ?

Ram Temple: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ನಿರ್ಮಾಣ ಕಾಮಗಾರಿಯು ಕೊನೆಯ ಹಂತಕ್ಕೆ ಬಂದು ನಿಂತಿದೆ. ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾನೆಗೆ ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗುತ್ತಿದೆ.

VISTARANEWS.COM


on

arun and deepika
Koo

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ(Ram Mandir)ದ ಕಾಮಗಾರಿಯು ಕೊನೆಯ ಹಂತಕ್ಕೆ ಬಂದು ನಿಂತಿದೆ. 2024ರ ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ಮಾಡಲಾಗುತ್ತದೆ. ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾನೆ (Pran Pratishta) ನೆರವೇರಿಸಿ, ಗರ್ಭಗುಡಿಯಲ್ಲಿ ಇರಿಸಿ ಪೂಜೆ ಮಾಡಲಾಗುತ್ತದೆ. ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದೀಗ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗುತ್ತಿದೆ.

ಆಹ್ವಾನ ಪಡೆದ ಗಣ್ಯರು

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಮಾರು 3,000 ವಿವಿಐಪಿಗಳು, ದೇಶದ ವಿವಿಧ ಭಾಗಗಳಿಂದ 4,000 ಸಂತರು ಮತ್ತು ಸಾಧುಗಳು, 50 ದೇಶಗಳ ಪ್ರತಿನಿಧಿಗಳು ಮತ್ತು ರಾಮ ಮಂದಿರ ಚಳವಳಿಯ ಭಾಗವಾಗಿದ್ದ ‘ಕರ ಸೇವಕರ’ ಕುಟುಂಬ ಸದಸ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರಿಗೆ ಆಹ್ವಾನ ಪತ್ರಗಳನ್ನು ಕಳುಹಿಸಿದೆ.

“ಸಂತರು, ಸಿನಿಮಾ, ಕ್ರೀಡಾ ತಾರೆಯರು, ಉದ್ಯಮಿಗಳು, ವಿಜ್ಞಾನಿಗಳು, ನ್ಯಾಯಾಧೀಶರು, ಪತ್ರಕರ್ತರು, ರಾಜಕಾರಣಿಗಳು ಹೀಗೆ ಎಲ್ಲ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳನ್ನು ಆಹ್ವಾನಿಸಿದ್ದೇವೆ. ಜತೆಗೆ ಕವಿಗಳು, ಗಾಯಕರು, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಿಗೆ ಆಹ್ವಾನಗಳನ್ನು ಕಳುಹಿಸಲಾಗುತ್ತಿದೆ ಎಂದು ಅಯೋಧ್ಯೆಯ ವಿಶ್ವ ಹಿಂದೂ ಪರಿಷತ್‌ನ ಪ್ರಾದೇಶಿಕ ವಕ್ತಾರ ಶರದ್ ಶರ್ಮಾ ಹೇಳಿದ್ದಾರೆ.

ರಾಮ ಮಂದಿರ ಟ್ರಸ್ಟ್‌ನ 3,000 ವಿವಿಐಪಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್‌ ಬಚ್ಚನ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ನಟಿ ಕಂಗನಾ ರಾಣಾವತ್‌, ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್, ಯೋಗ ಗುರು ರಾಮ್‌ದೇವ್‌ ಮತ್ತು ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ರತನ್ ಟಾಟಾ ಮತ್ತು ಗೌತಮ್ ಅದಾನಿ ಸೇರಿದ್ದಾರೆ. ಇದಲ್ಲದೆ ಪ್ರಸಿದ್ಧ ಟಿವಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ ನಟ ಅರುಣ್ ಗೋವಿಲ್ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸಿದ ದೀಪಿಕಾ ಚಿಖ್ಲಿಯಾ ಅವರನ್ನು ಸಹ ಟ್ರಸ್ಟ್ ಆಹ್ವಾನಿಸಿದೆ.

ಪ್ರತಿಷ್ಠಾಪನಾ ಸಮಾರಂಭಕ್ಕೆ ಸುಮಾರು 50 ದೇಶಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಅಲ್ಲದೆ, ರಾಮ ಮಂದಿರ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ಕರ ಸೇವಕರಿಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ಅವರ ಕುಟುಂಬ ಸದಸ್ಯರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.

ಇದನ್ನೂ ಓದಿ: Ram Mandir: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ವಿರಾಟ್​ ಕೊಹ್ಲಿ, ಸಚಿನ್​​ಗೆ ಆಹ್ವಾನ

ನಾಲ್ಕು ವೇದಗಳಲ್ಲಿ ಪರಿಣತಿ ಹೊಂದಿರುವ ವಿದ್ವಾಂಸರನ್ನು ಒಳಗೊಂಡ ವಾರಣಾಸಿಯ 21 ಪಂಡಿತರ ತಂಡವೂ ಸಮಾರಂಭದಲ್ಲಿ ಭಾಗವಹಿಸಲಿದೆ. ಖ್ಯಾತ ವೈದಿಕ ವಿದ್ವಾಂಸ ಪಂಡಿತ್ ಲಕ್ಷ್ಮೀಕಾಂತ್ ದೀಕ್ಷಿತ್ ತಂಡವನ್ನು ಮುನ್ನಡೆಸಲಿದ್ದು, ಅವರ ಇಬ್ಬರು ಪುತ್ರರಾದ ಪಂಡಿತ್ ಜೈಕೃಷ್ಣ ದೀಕ್ಷಿತ್ ಮತ್ತು ಸುನಿಲ್ ದೀಕ್ಷಿತ್ ಮತ್ತು ಕಾಶಿಯ ಇತರ 18 ಪಂಡಿತರು ಮಾರ್ಗದರ್ಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಯೋಧ್ಯೆಯ ರಾಮ ದೇವಾಲಯದ ಗರ್ಭಗುಡಿಯಲ್ಲಿ ಇರಿಸಬೇಕಾದ ವಿಗ್ರಹದ ಕೆಲಸ ಬಹುತೇಕ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading
Advertisement
Pressmeet for Demand for construction of bypass road in Yallapur
ಉತ್ತರ ಕನ್ನಡ3 mins ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ5 mins ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ5 mins ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ22 mins ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ23 mins ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ32 mins ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Wedding Fashion
ಫ್ಯಾಷನ್38 mins ago

Wedding Fashion: ಮದುಮಗನ ಆರತಕ್ಷತೆಯ ಗ್ರ್ಯಾಂಡ್‌ ಔಟ್‌ಫಿಟ್‌ ಆಯ್ಕೆಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

U-19 Asia Cup IND vs PAK
ಕ್ರಿಕೆಟ್47 mins ago

ನಾಳೆಯಿಂದ ಅಂಡರ್​-19 ಏಷ್ಯಾಕಪ್; ಭಾರತ-ಪಾಕ್​ ಮುಖಾಮುಖಿ ಯಾವಾಗ?

Veer Savarkar and Priyank Kharge
ಕರ್ನಾಟಕ48 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

job opportunity
ದೇಶ1 hour ago

Job News: ಕೇಂದ್ರ ಸರ್ಕಾರ, ರಕ್ಷಣಾ ಇಲಾಖೆಗಳಲ್ಲಿ ಶೇ.14ರಷ್ಟು ಉದ್ಯೋಗ ಹೆಚ್ಚಳ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Veer Savarkar and Priyank Kharge
ಕರ್ನಾಟಕ48 mins ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ6 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ14 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ22 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

read your daily horoscope predictions for december 6 2023
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರು ಸುಮ್ಮನಿದ್ದರೂ ನಡೆಯುತ್ತೆ ಕಲಹ!

ಟ್ರೆಂಡಿಂಗ್‌