Site icon Vistara News

ವಿಸ್ತಾರ TOP 10 NEWS | ಪ್ರವೀಣ್‌ ಹತ್ಯಾರೋಪಿಗಳ ಸೆರೆಯಿಂದ VR ಬಿಡುಗಡೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news 28072022

ಬೆಂಗಳೂರು: ಸುಳ್ಯದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ನಂತರ ಕಾರ್ಯಕರ್ತರ ಬಂಡಾಯಕ್ಕೆ ಮಣಿದ ಬಿಜೆಪಿ ಸರ್ಕಾರ ತನ್ನ ವಾರ್ಷಿಕ ಕಾರ್ಯಕ್ರಮವನ್ನೇ ರದ್ದುಪಡಿಸಿದೆ, ಹತ್ಯೆ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಈ ನಡುವೆ, ಗುರುವಾರ ರಾತ್ರಿ ಸುರತ್ಕಲ್‌ನಲ್ಲಿ ಮುಸ್ಲಿಂ ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ ಪರ್ವ ಮುಂದುವರಿದಿದೆ, ಈ ಆಕ್ರೋಶಕ್ಕೆ ಕಾರಣಗಳನ್ನು ಹಿಂದೂ ಚಿಂತಕರು ವಿಶ್ಲೇಷಣೆ ಮಾಡಿದ್ದಾರೆ. ಬಿಬಿಎಂಪಿ ಚುನಾವಣೆ ಕುರಿತು ಸುಪ್ರೀಂ ಆದೇಶ, ಚೆನ್ನೈಯಲ್ಲಿ ಚೆಸ್‌ ಒಲಿಂಪಿಯಾಡ್‌ ಸೇರಿ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Praveen Nettaru |  ಹತ್ಯೆ ಆರೋಪಿಗಳಾದ ಶಫೀಕ್‌, ಝಾಕೀರ್‌ ಆ.11ರವರೆಗೆ ನ್ಯಾಯಾಂಗ ಬಂಧನಕ್ಕೆ
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಶಫೀಕ್‌, ಝಾಕೀರ್‌ರನ್ನು ಪುತ್ತೂರು ನ್ಯಾಯಾಲಯಕ್ಕೆ ಬೆಳ್ಳಾರೆ ಪೊಲೀಸರು ಹಾಜರುಪಡಿಸಿದ್ದು, ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಬಂಧಿತರನ್ನು ಆಗಸ್ಟ್‌ 11ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶವನ್ನು ಹೊರಡಿಸಿದೆ. ಶುಕ್ರವಾರ ಬೆಳಗ್ಗೆ ಶಫೀಕ್‌ ಮತ್ತು ಝಾಕೀರ್‌ರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ದಕ್ಷಿಣ ಕನ್ನಡದಲ್ಲಿ ಮತ್ತೊಂದು ಹತ್ಯೆ: ಸುರತ್ಕಲ್‌ನಲ್ಲಿ ಮುಸ್ಲಿಂ ಯುವಕನ ಕೊಲೆ

2. ಬಿಜೆಪಿ ಕಾರ್ಯಕರ್ತರ ಬಂಡಾಯದ ಮೂಲ ಏನು? ಹಿಂದು ಮುಖಂಡರು-ಚಿಂತಕರು ಏನೆನ್ನುತ್ತಾರೆ?
ದಕ್ಷಿಣ ಕನ್ನಡದ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯ ನಂತರ ಹಿಂದು ಸಂಘಟನೆಗಳಲ್ಲಿ, ವಿಶೇಷವಾಗಿ ಬಿಜೆಪಿ ಪಕ್ಷದಲ್ಲಿ ಆಂತರಿಕ ಆಕ್ರೋಶ ಭುಗಿಲೆದ್ದಿದೆ. ಆ ಪಕ್ಷದ ಯುವ ಕಾರ್ಯಕರ್ತರು ತಮ್ಮ ನಾಯಕರ ಮೇಲಿನ ಭರವಸೆಯನ್ನೇ ಕಳೆದುಕೊಂಡಿರುವುದಾಗಿ ತಿಳಿಸಿ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಪಕ್ಷದ ರಾಜ್ಯ ಅಧ್ಯಕ್ಷರ ಕಾರನ್ನೇ ಅಲುಗಾಡಿಸಿ ಆಕ್ರೋಶ ಹೊರಹಾಕಿದ್ದಾರೆ. ಇದೆಲ್ಲದಕ್ಕೆ ತಣ್ಣಗೆ ಬೆದರಿದ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ, ಗುರುವಾರ ಹಮ್ಮಿಕೊಂಡಿದ್ದ ಬೃಹತ್‌ ವಾರ್ಷಿಕೋತ್ಸವ ಕಾರ್ಯಕ್ರಮವನ್ನೇ ರದ್ದುಮಾಡಿದೆ.
ಈ ಬಂಡಾಯಕ್ಕೆ ಕಾರಣ ಏನು? ಇದಕ್ಕೆ ಪರಿಹಾರ ಏನು? ಬಿಜೆಪಿಯಿಂದ ಪರಿಹಾರವೇ? ಬಿಜೆಪಿಯಲ್ಲೇ ಸಮಸ್ಯೆಯಿದೆಯೇ ಎಂಬ ಕುರಿತು ನಾಡಿನ ಇಬ್ಬರು ಹಿಂದು ಮುಖಂಡರು( ಹಿಂದು ಜಾಗರಣ ವೇದಿಕೆಯ ಜಗದೀಶ ಕಾರಂತ, ವಿಶ್ವ ಹಿಂದು ಪರಿಷತ್‌ನ ಕೇಶವ ಹೆಗಡೆ) ಒಬ್ಬರು ಸಂತರು (ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ) ಹಾಗೂ ಹಿಂದು ಚಿಂತಕ (ಡಾ. ಜಿ.ಬಿ. ಹರೀಶ) ತಮ್ಮ ಅಭಿಪ್ರಾಯಗಳನ್ನು ʻವಿಸ್ತಾರ ನ್ಯೂಸ್‌ʼ ಜತೆ ಹಂಚಿಕೊಂಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

3. Praveen Nettaru | ಮುಂದುವರಿದ ಬಿಜೆಪಿ ಆಂತರಿಕ ಆಕ್ರೋಶ, ಸಾವಿರಾರು ಮಂದಿ ರಾಜೀನಾಮೆ!
ದಕ್ಷಿಣ ಕನ್ನಡದ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು (Praveen Nettaru) ಹತ್ಯೆ ಪ್ರಕರಣವು ರಾಜ್ಯಾದ್ಯಂತ ಆಕ್ರೋಶದ ಕಿಚ್ಚನ್ನು ಹೊತ್ತಿಸಿದ್ದು, ಬಿಜೆಪಿ ಒಳಗೇ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರದಿಂದಲೇ ಪಕ್ಷದ ಕಾರ್ಯಕರ್ತರ ಸಹಿತ ವಿವಿಧ ಜವಾಬ್ದಾರಿಯನ್ನು ಹೊಂದಿರುವವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು, ಗುರುವಾರವೂ ಮುಂದುವರಿದಿದೆ. ಇದುವರೆಗೆ ರಾಜ್ಯಾದ್ಯಂತ ಸುಮಾರು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿದಿದ್ದಾರೆ. ಅಲ್ಲದೆ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸಹ ಅಗತ್ಯಬಿದ್ದರೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

4. Audio Leak | ಕಾಂಗ್ರೆಸ್ ಸರ್ಕಾರ ಆಗಿದ್ರೆ ಕಲ್ಲು ಹೊಡೆಯಬಹುದಿತ್ತು ಎಂದ ತೇಜಸ್ವಿ!
ಕಾಂಗ್ರೆಸ್ ಸರ್ಕಾರವಾಗಿದ್ರೆ ಕಲ್ಲು ಹೊಡೆಯಬಹುದಿತ್ತು. ನಮ್ಮದೇ ಸರ್ಕಾರ ಇದೆ. ಏನು ಮಾಡೋದು!
ಇದು, ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಅವರ ಮಾತು! ಬಿಜೆಪಿ ಯುವ ಮೋರ್ಚಾ ಮುಖಂಡರೊಬ್ಬರ ಜತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋ ಈಗ ಬಯಲಾಗಿದೆ. ತೇಜಸ್ವಿ ಸೂರ್ಯ ಅವರು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಸಂದೀಪ್ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಸಾಮೂಹಿಕ ರಾಜೀನಾಮೆ ನೀಡಿರುವ ಕುರಿತು ಅವರಿಬ್ಬರ ನಡುವೆ ಮಾತುಕತೆ ಇದಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

5. ನೇಕಾರರು, ಟ್ಯಾಕ್ಸಿ ಡ್ರೈವರ್‌, ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ: ಸಿಎಂ ಬೊಮ್ಮಾಯಿ ಘೋಷಣೆ
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಸ್ಥಾಪನೆಯಾದಾಗ ಆರಂಭಿಸಿದ್ದ ಮೊಟ್ಟಮೊದಲ ಯೋಜನೆಯಾದ ರೈತ ವಿದ್ಯಾನಿಧಿಯನ್ನು ರಾಜ್ಯದ ನೇಕಾರರು, ಟ್ಯಾಕ್ಸಿ ಚಾಲಕರು, ಮೀನುಗಾರರ ಮಕ್ಕಳಿಗೂ ವಿಸ್ತರಣೆ ಮಾಡಲಾಗಿದೆ. ಸುಳ್ಯದ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ನಂತರ ಭುಗಿಲೆದ್ದ ಕಾರ್ಯಕರ್ತರ ಆಕ್ರೋಶಕ್ಕೆ ಮಣಿದು ಸರ್ಕಾರದ ವರ್ಷಾಚರಣೆಯನ್ನು ರದ್ದುಪಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಗುರುವಾರ ಬೆಳಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

6. ನನ್ನ‌ ಬಳಿ ನೀವು ಮಾತಾಡಲೇಬೇಡಿ; ಸ್ಮೃತಿ ಇರಾನಿ ಮುಖಕ್ಕೆ ಹೊಡೆದಂತೆ ಉತ್ತರಿಸಿದ ಸೋನಿಯಾ ಗಾಂಧಿ
ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಕಾಂಗ್ರೆಸ್‌ ನಾಯಕ ರಂಜನ್‌ ಅಧೀರ್‌ ಚೌಧರಿ ರಾಷ್ಟ್ರಪತ್ನಿ ಎಂದು ಸಂಬೋಧಿಸಿದ್ದನ್ನು ವಿರೋಧಿಸಿ ಬಿಜೆಪಿ ಇಂದು ಸಂಸತ್‌ ಕಲಾಪದಲ್ಲಿ ದೊಡ್ಡ ಗಲಾಟೆಯನ್ನೇ ಸೃಷ್ಟಿಸಿದೆ. ಸೋನಿಯಾ ಗಾಂಧಿ ಸೇರಿ ಪಕ್ಷದ ಎಲ್ಲರೂ ಕ್ಷಮೆ ಕೇಳಬೇಕು ಎಂದು ಬಿಜೆಪಿಯ ಸಚಿವರು, ಸಂಸದರು ಆಗ್ರಹಿಸಿದ್ದಾರೆ. ಈ ವೇಳೆ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಇಡೀ ಸದನದಲ್ಲಿ ಒಬ್ಬರಾದರೂ ಬಿಜೆಪಿ ಸಂಸದರ ಬಳಿ ಹೋಗಿ ಈ ಬಗ್ಗೆ ಸ್ಪಷ್ಟನೆ ಕೊಡಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಮಧ್ಯಪ್ರವೇಶ ಮಾಡಿದ ಸ್ಮೃತಿ ಇರಾನಿ, ʼಸೋನಿಯಾ ಗಾಂಧಿ ಕ್ಷಮೆ ಕೇಳಬೇಕುʼ ಎಂದು ಮತ್ತಷ್ಟು ಜೋರಾಗಿಯೇ ಕೂಗಿದ್ದಾರೆ. ಆಗ ಕ್ರೋಧಗೊಂಡ ಸೋನಿಯಾಗಾಂಧಿ. ʼನೀವು ನನ್ನ ಬಳಿ ಮಾತನಾಡಲೇಬೇಡಿʼ ಎಂದು ಸ್ಮೃತಿ ಇರಾನಿಗೆ ಖಾರವಾಗಿಯೇ ಉತ್ತರಿಸಿದ್ದಾರೆ ಎಂದು ಹೇಳಲಾಗಿದೆ.(ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

7. ವಿಸ್ತಾರ Explainer | 5G ತಂತ್ರಜ್ಞಾನದಿಂದ ಅನುಕೂಲ ಅಪಾರ, ಅನನುಕೂಲ ಅತ್ಯಲ್ಪ
ದೇಶದ ಟೆಲಿಕಾಂ ವಲಯದಲ್ಲಿ ೫ಜಿ ಕ್ರಾಂತಿಯ ಹವಾ ಶೀಘ್ರದಲ್ಲಿಯೇ ಶುರುವಾಗಲಿದೆ. ಈ ತಂತ್ರಜ್ಞಾನದಲ್ಲಿ ಯಾವುದೇ ಹೊಸ ಬಗೆಯ ರಿಸ್ಕ್‌ ಇಲ್ಲ. ಜತೆಗೆ ಅನನುಕೂಲಕ್ಕಿಂತ ಅನುಕೂಲವೇ ಹೆಚ್ಚು ಎನ್ನುತ್ತಾರೆ ಸೈಬರ್ ತಜ್ಞ ಫಣೀಂದರ್ ಬಿ. ಎನ್. ಅವರು ಮುಂಬರುವ ೫ಜಿ ಕ್ರಾಂತಿಯ ಬಗ್ಗೆ ವಿಸ್ತಾರ ನ್ಯೂಸ್‌ ಜತೆ ಸಮಗ್ರವಾಗಿ ವಿವರಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

8. BBMP Election | ವಾರದೊಳಗೆ ಬಿಬಿಎಂಪಿ ಮೀಸಲಾತಿ ಪ್ರಕಟಿಸಿ: ಸುಪ್ರೀಂ ಮಹತ್ವದ ಆದೇಶ
ರಾಜ್ಯ ಸರ್ಕಾರವು ಮುಂದಿನ ವಾರದೊಳಗೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಬೇಕೆಂದು (BBMP Election) ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ. ಗುರುವಾರ ಬಿಬಿಎಂಪಿ ಚುನಾವಣೆ ಸಂಬಂಧ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌, ಈ ಹಿಂದೆ 8 ವಾರಗಳಲ್ಲಿ ಚುನಾವಣೆ ನಡೆಸಲು ಸೂಚನೆ ನೀಡಲಾಗಿತ್ತು. ಆದರೆ ಅದು ಯಾಕೆ ಸಾಧ್ಯವಾಗಲಿಲ್ಲವೆಂದು ನ್ಯಾ.ಎ.ಎಂ.ಖಾನಿಲ್ಕರ್‌ ನೇತೃತ್ವದ ಪೀಠ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದೆ. ಅದಕ್ಕೆ ಉತ್ತರಿಸಿರುವ ವಕೀಲರು, ಮೀಸಲಾತಿಗಾಗಿ ರಚಿಸಲಾಗಿದ್ದ ಭಕ್ತವತ್ಸಲ ಸಮಿತಿಯು ತಡವಾಗಿ ವರದಿ ನೀಡಿದೆ. ಈ ಕಾರಣಕ್ಕಾಗಿ ಮೀಸಲಾತಿ ಪ್ರಕಟಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

9. Chess Olympiad | 30 ಆಟಗಾರರು ಕಣದಲ್ಲಿ, ಇದು ಸಾರ್ವಕಾಲಿಕ ದಾಖಲೆ
ಮುಂಬರುವ ೪೪ನೇ ಆವೃತ್ತಿಯ ಚೆಸ್ ಒಲಿಂಪಿಯಾಡ್‌ಗೆ (Chess Olympiad) ಭಾರತ ಆತಿಥ್ಯ ವಹಿಸುತ್ತಿದೆ. ಜುಲೈ ೨೮ರಿಂದ ಆಗಸ್ಟ್‌ ೧೦ವರೆಗೆ ಜಾಗತಿಕ ಮಟ್ಟದ ಈ ಕೂಟ ನಡೆಯಲಿದೆ. ವಿಶೇಷ ಎಂದರೆ ಆತಿಥೇಯ ಭಾರತ ಈ ಬಾರಿ ಆರು ತಂಡವನ್ನು ಕಣಕ್ಕೆ ಇಳಿಸುತ್ತಿದ್ದು, ಒಟ್ಟಾರೆ ೩೦ ಚೆಟ್‌ ಪಟುಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಇದು ಭಾರತ ಚೆಸ್‌ ಇತಿಹಾಸದಲ್ಲಿ ದಾಖಲೆಯಾಗಿದೆ. ಮಹಾಬಲಿಪುರಮ್‌ನಲ್ಲಿ ಚೆಸ್ ಒಲಿಂಪಿಯಾಡ್‌ ನಡೆಯಲಿದ್ದು, ದಾಖಲೆಯ ೧೮೭ ದೇಶಗಳು ಪಾಲ್ಗೊಳ್ಳಲಿವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

10. Vikrant Rona Review | ಮೇಕಿಂಗ್‌ನಲ್ಲಿ ಹೊಸ ಜಗತ್ತು ಕಟ್ಟಿದ ವಿಕ್ರಾಂತ್‌ ರೋಣ
ಕಿಚ್ಚ ಸುದೀಪ್‌ ಅಭಿನಯದ, ಅನೂಪ್‌ ಭಂಡಾರಿ ನಿರ್ದೇಶಿಸಿರುವ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ವಿಕ್ರಾಂತ್‌ ರೋಣ (Vikrant Rona Review) ಒಂದು ಹೊಸ ಪ್ರಪಂಚವನ್ನು ಸೃಷ್ಟಿಸಿದೆ. ಈ ಸಿನಿಮಾ ಹೇಗಿದೆ? ಸಿನಿಮಾದಲ್ಲಿ ಏನೇನಿದೆ ಎಂಬ ವಿಶ್ಲೇಷಣೆ ಇಲ್ಲಿದೆ. (ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version