Site icon Vistara News

ವಿಸ್ತಾರ TOP 10 NEWS: ಬಿಜೆಪಿಯಲ್ಲಿ ಬಂಡಾಯದ ಬಿಸಿಯಿಂದ, ಭಾರತದಲ್ಲಿ ಐಫೋನ್ ಮಳಿಗೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news rebellion in bjp after ticket announcement to iphone store in india and more news

#image_title

1. ಟಿಕೆಟ್‌ ಘೋಷಣೆ ಬೆನ್ನಿಗೇ ಬಿಜೆಪಿಯಲ್ಲಿ ಬಂಡಾಯದ ಬಿಸಿ
ವಿಧಾನಸಭೆ ಚುನಾವಣೆಗೆ 189 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ಟಿಕೆಟ್‌ ಕೈತಪ್ಪಿದ ಗೂಳಿಹಟ್ಟಿ ಶೇಖರ್‌, ಲಕ್ಷ್ಮಣ ಸವದಿ, ಆರ್‌. ಶಂಕರ್‌, ಎಸ್‌. ಅಂಗಾರ, ರಘುಪತಿ ಭಟ್‌ ಅಸಮಾಧಾನ ಹೊರಹಾಕಿದ ಪ್ರಮುಖರಾಗಿದ್ದರೆ, ಮಾಜಿ ಸಿಎಂ ಜಗದೀಶ ಶೆಟ್ಟರ್‌ ನವದೆಹಲಿಗೆ ತೆರಳಿದ್ದಾರೆ. ಇತ್ತ ಬೆಂಗಳೂರಿನಲ್ಲೂ ಅನ್‌.ಆರ್‌. ರಮೇಶ್‌, ಸೈಲೆಂಟ್‌ ಸುನೀಲ್‌, ಮುನೀಂದ್ರ ಕುಮಾರ್‌ ಬೆಂಬಲಿಗರು ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತ ವಿವಿಧ ಸುದ್ದಿಗಳಿಗಾಗಿ ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ
Karnataka Election 2023: ರೆಡ್ಡಿ ಪಕ್ಷದತ್ತ ಗೂಳಿಹಟ್ಟಿ; ತಮಗೆ ಟಿಕೆಟ್‌ ತಪ್ಪಿಸಿದ್ದು ಬಿಎಸ್‌ವೈ ಎಂದು ಹರಿಹಾಯ್ದ ಶೇಖರ್
Karnataka Election : ರಾಣೆಬೆನ್ನೂರು ಬಂಡಾಯ; MLC ಸ್ಥಾನಕ್ಕೆ ಆರ್‌ ಶಂಕರ್‌ ರಾಜೀನಾಮೆ, ಬಿಎಸ್‌ವೈ ಶಿಷ್ಯನೂ ಗುಡ್‌ಬೈ
Karnataka Election 2023 : ಸೀಟು ತಪ್ಪಿದ್ದಕ್ಕೆ ಬೇಜಾರಿಲ್ಲ, ನಡೆಸಿಕೊಂಡ ರೀತಿಗೆ ನೋವಾಗಿದೆ, ಈ ರಾಜಕೀಯ ಸಾಕು: ಅಂಗಾರ ಬೇಸರ

2. ‌R. Ashok: ಆರ್‌. ಅಶೋಕ್‌ ಪದ್ಮನಾಭನಗರದಲ್ಲೂ ಸೋಲುತ್ತಾರೆ: ರಘುನಾಥ ನಾಯ್ಡುವೇ ಅಭ್ಯರ್ಥಿ ಎಂದ ಡಿ.ಕೆ. ಶಿವಕುಮಾರ್‌
ಎದುರಾಳಿ ಪಕ್ಷದ ನಾಯಕರನ್ನು ಕಟ್ಟಿಹಾಕಲು ಪ್ರಬಲ ಸ್ಪರ್ಧಿಗಳನ್ನು ಕಣಕ್ಕಿಳಿಸುವ ಸಂಪ್ರದಾಯವನ್ನು ಬಿಜೆಪಿ ಈ ಬಾರಿಯೂ ಮುಂದುವರಿಸಿದ್ದು, ಕನಕಪುರದಲ್ಲಿ ಡಿ.ಕೆ. ಶಿವಕುಮಾರ್‌ ವಿರುದ್ಧ ಕಂದಾಯ ಸಚಿವ ಆರ್‌. ಅಶೋಕ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಈ ಕುರಿತು ಸದಾಶಿವನಗರ ನಿವಾಸದಲ್ಲಿ ಡಿ.ಕೆ. ಶಿವಕುಮಾರ್‌ ಹಾಗೂ ಡಿ.ಕೆ. ಸುರೇಶ್‌ ಚರ್ಚೆ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: BJP Karnataka: ಇದು ಒಕ್ಕಲಿಗ ನಾಯಕರ ನಡುವಿನ ಫೈಟ್‌: ಕನಕಪುರದಲ್ಲಿ ಗೆದ್ದೇ ಗೆಲ್ಲುವೆ ಎಂದ ಆರ್‌. ಅಶೋಕ್‌

3. Karnataka Election 2023: ಹಾಸನ ಟಿಕೆಟ್ ಸಾಮಾನ್ಯ ಕಾರ್ಯಕರ್ತನಿಗೇ ಎಂದು ದೇವೇಗೌಡರು ಹೇಳಿದ್ರೆ ಒಪ್ಪುವೆ: ಎಚ್‌.ಡಿ. ರೇವಣ್ಣ
ಹಾಸನ ಟಿಕೆಟ್ ವಿಚಾರವಾಗಿ ಯಾವ ಗೊಂದಲವೂ ಇಲ್ಲ. ಸಾಮಾನ್ಯ ಕಾರ್ಯಕರ್ತನಿಗೇ ಟಿಕೆಟ್ ಎಂದು ದೇವೇಗೌಡರು ಹೇಳಿದರೆ ಒಪ್ಪುವೆ. ಅವರು ನಮಗೆ ಸುಪ್ರೀಂ ನಾಯಕರು, ಅವರು ಏನೇ ತೀರ್ಮಾನ ಮಾಡಿದರೂ ಅದಕ್ಕೆ ನಾನು ಬದ್ಧ. ನಾನು ಪಕ್ಷೇತರವಾಗಿ ನಿಲ್ಲುವೆ (Karnataka Election 2023) ಎಂದು ಎಲ್ಲೂ ಹೇಳಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Karnataka Election 2023 : ಬಿಜೆಪಿ ಸೇರಿದ ಡಾ.ರಾಜನಂದಿನಿ; ಮಗಳು ಎದೆಗೇ ಚೂರಿ ಹಾಕಿದ್ದಾಳೆ ಎಂದ ಕಾಗೋಡು ತಿಮ್ಮಪ್ಪ
ನಿರೀಕ್ಷೆಯಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ನ ನಾಯಕಿ ಡಾ. ರಾಜನಂದಿನಿ ಬಿಜೆಪಿ ಸೇರಿದ್ದಾರೆ. ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ತವರು ಜಿಲ್ಲೆಯ ಈ ಮಹಿಳಾ ನಾಯಕಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಬಹುತೇಕ ಪ್ರಕರಣಗಳಲ್ಲಿ ಆರೆಸ್ಸೆಸ್ ಸದಸ್ಯರು ಬಲಿಪಶುಗಳೇ ಹೊರತು ಅಪರಾಧಿಗಳಲ್ಲ ಎಂದ ಸುಪ್ರೀಂ
ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನಕ್ಕೆ ಅನುಮತಿ ನೀಡಿದ್ದ ಮದ್ರಾಸ್‌ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ಆರ್‌ಎಸ್‌ಎಸ್‌ ಪಥಸಂಚಲನ ಮಾಡಬಹುದಾಗಿದೆ. ಹಾಗೆಯೇ, “ಬಹುತೇಕ ಪ್ರಕರಣಗಳಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಬಲಿಪಶುಗಳಾಗಿದ್ದಾರೆಯೇ ಹೊರತು ಅಪರಾಧಿಗಳು ಎಂಬುದು ಸಾಬೀತಾಗಿಲ್ಲ” ಎಂದು ಕೋರ್ಟ್‌ ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Special trains : ರೈಲ್ವೆಯಿಂದ ಈ ಸಲದ ಬೇಸಿಗೆ ಅವಧಿಯಲ್ಲಿ 217 ವಿಶೇಷ ರೈಲು ಸಂಚಾರ
ರೈಲ್ವೆ ಇಲಾಖೆಯಿಂದ ಈ ಸಲದ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 217 ವಿಶೇಷ ರೈಲುಗಳನ್ನು (Special trains) ದೇಶಾದ್ಯಂತ ಬಿಡಲಾಗುತ್ತಿದೆ. 4,010 ಟ್ರಿಪ್‌ಗಳನ್ನು ಈ ರೈಲುಗಳು ನಿರ್ವಹಿಸಲಿವೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ. ಬೇಸಿಗೆಯ ಕಾಲದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಪ್ರವಾಸಾದ ಸಲುವಾಗಿ ಪ್ರಯಾಣದ ದಟ್ಟಣೆ ಹೆಚ್ಚು ಇರುವುದು ಸಾಮಾನ್ಯ. ಆದ್ದರಿಂದ ಇಲಾಖೆ ಹೆಚ್ಚುವರಿ ರೈಲುಗಳನ್ನು ಬಿಡುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Apple Store: ಮುಂದಿನ ವಾರ ಮುಂಬೈನಲ್ಲಿ ಭಾರತದ ಪ್ರಥಮ ಐಫೋನ್ ಮಳಿಗೆ ಶುರು! ಚೀನಾಗೆ ನಿರಾಸೆ
ಮುಂದಿನ ವಾರ ಆ್ಯಪಲ್ ಕಂಪನಿ ಭಾರತದಲ್ಲಿ ತನ್ನ ಮೊದಲ ಐಫೋನ್ ಮಳಿಗೆಯನ್ನು ಆರಂಭಿಸಲಿದೆ. ಇದಕ್ಕಾಗಿ ಆ್ಯಪಲ್ ಸಿಇಒ ಟಿಮ್ ಕುಕ್ (Tim Cook) ಅವರು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಆ್ಯಪಲ್ ಕಂಪನಿಯು ಭಾರತವನ್ನು ಅಭಿವೃದ್ಧಿಶೀಲ ಮಾರುಕಟ್ಟೆ ಹಾಗೂ ಉತ್ಪಾದನಾ ಕೇಂದ್ರವಾಗಿ ಪರಿಗಣಿಸಿದ್ದು, ಆ ನಿಟ್ಟಿನಲ್ಲಿ ತನ್ನ ಪ್ರಯತ್ನಗಳನ್ನು ಆರಂಭಿಸಿದೆ(Apple Store). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Elon Musk: ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ, ಟ್ವಿಟರ್‌ ನೌಕರರನ್ನು ಜೈಲಿಗೆ ಕಳುಹಿಸಲು ಇಷ್ಟವಿಲ್ಲ: ಎಲಾನ್‌ ಮಸ್ಕ್
ಟ್ವಿಟರ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಅವರು ಇತ್ತೀಚೆಗಷ್ಟೇ ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫಾಲೋ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಅಷ್ಟೇ ಅಲ್ಲ, ಭಾರತಕ್ಕೆ ಟೆಸ್ಲಾ ಕಂಪನಿ ಕಾಲಿಡಲಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಇಂತಹ ಮಾತುಗಳು ಕೇಳುತ್ತಿರುವ ಮಧ್ಯೆಯೇ ಎಲಾನ್‌ ಮಸ್ಕ್‌ ಅವರು ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದಾರೆ. “ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಲನೆ ಕಷ್ಟಸಾಧ್ಯ. ನಮ್ಮ ಟ್ವಿಟರ್‌ ಸಂಸ್ಥೆಯ ಉದ್ಯೋಗಿಗಳನ್ನು ಜೈಲಿಗೆ ಕಳುಹಿಸಲು ನನಗೆ ಇಷ್ಟವಿಲ್ಲ” ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Success Story: ಪಾನ್‌ ಶಾಪ್‌ ಮಾಲೀಕನ ಮಗಳೀಗ ಮ್ಯಾಜಿಸ್ಟ್ರೇಟ್‌, ತಂದೆಯ ಕನಸಿಗೆ ‘ಜ್ಯೋತಿ’ಯಾದ ದಿಟ್ಟೆ
ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲ, ಸಕಾರಾತ್ಮಕ ಹಠ, ಗುರಿಯೆಡೆಗೆ ಸಾಗುವ, ಅದನ್ನು ಮುಟ್ಟಿಯೇ ತೀರಬೇಕು ಎಂಬ ಮನೋಭಾವನೆ, ತುಡಿತ ಇದ್ದರೆ ಎಲ್ಲವನ್ನೂ ಸಾಧಿಸಬಹುದು. ಇಂತಹ ಸ್ಫೂರ್ತಿದಾಯಕ ಮಾತುಗಳಿಗೆ ದ್ಯೋತಕ ಎಂಬಂತೆ ಉತ್ತರ ಪ್ರದೇಶದಲ್ಲಿ ಪಾನ್‌ ಶಾಪ್‌ ಮಾಲೀಕನ ಪುತ್ರಿ, ಜ್ಯೋತಿ ಚೌರಾಸಿಯಾ ಎಂಬ ದಿಟ್ಟೆಯು ಕಷ್ಟದಲ್ಲಿ ಓದಿ ಈಗ ಮ್ಯಾಜಿಸ್ಟ್ರೇಟ್‌ ಆಗಿ (Success Story) ಆಯ್ಕೆಯಾಗಿದ್ದಾರೆ. ಆ ಮೂಲಕ ತಂದೆಯ ಕನಸನ್ನು ನನಸು ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. T20 Ranking: ಅಗ್ರ ಸ್ಥಾನದಲ್ಲೇ ಮುಂದುವರಿದ ಸೂರ್ಯಕುಮಾರ್​ ಯಾದವ್​
ಐಸಿಸಿ ನೂತನ ಟಿ20 ಶ್ರೇಯಾಂಕದಲ್ಲಿ(T20 Ranking) ಟೀಮ್​ ಇಂಡಿಯಾದ ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ನಂ.1 ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಬುಧವಾರ ಪ್ರಕಟಗೊಂಡ ಈ​ ಪಟ್ಟಿಯಲ್ಲಿ ಸೂರ್ಯಕುಮಾರ್‌ 906 ರೇಟಿಂಗ್‌ ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version