Site icon Vistara News

ಅವಳಲ್ಲ… ಅವನು..! ಲಿಂಗ ಪರಿವರ್ತನೆಗೆ ಮುಂದಾದ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿಯ ಪುತ್ರಿ!

Suchetana Bhattacharya

ನವದೆಹಲಿ: ಪಶ್ಚಿಮ ಬಂಗಾಳದ (West Bengal) ಮಾಜಿ ಸಿಎಂ ಬುದ್ಧದೇಬ್ ಭಟ್ಟಾಚಾರ್ಯ (Fromer CM Buddhadeb Bhattacharya) ಅವರ ‘ಪುತ್ರಿ’ ತಮ್ಮ ‘ಲಿಂಗ’ ಬದಲಿಸಿ ‘ಪುತ್ರ’ರಾಗಲು ಮಂದಾಗಿದ್ದಾರೆ (Sex Change). ಸುಚೇತನಾ ಭಟ್ಟಾಚಾರ್ಯ (Suchetana Bhattacharya) ಅವರು ಈ ನಿರ್ಧಾರ ಕೈಗೊಂಡಿದ್ದು, ಸುಚೇತನಾ ಬದಲಿಗೆ ಸುಚೇತನ್ ಆಗಲಿದ್ದಾರೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅವರು ಕಾನೂನು ಸಲಹೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಕಾರ್ಯವಿಧಾನಕ್ಕೆ ಅಗತ್ಯವಿರುವ ಎಲ್ಲಾ ಪ್ರಮಾಣಪತ್ರಗಳಿಗಾಗಿ ಮನೋವೈದ್ಯರನ್ನು ಸಂಪರ್ಕಿಸಿದ್ದಾರೆ.

ಸಚೇತನಾ ಅವರು ಇತ್ತೀಚೆಗಷ್ಟೇ ಎಲ್‌ಜಿಬಿಟಿಕ್ಯೂ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ತಮ್ಮನ್ನು ತಾವು ಪುರುಷನೆಂದು ಗುರುತಿಸಿಕೊಂಡಿದ್ದರು. ಅವರು ದೈಹಿಕವಾಗಿಯೂ ಲಿಂಗ ಬದಲಿಸಿಕೊಳ್ಳಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದರು.

ನನ್ನ ಕುಟುಂಬದ ಅಥವಾ ತನ್ನ ತಂದೆ ತಾಯಿ ಗುರುತು ನನಗೆ ದೊಡ್ಡ ವಿಷಯವಲ್ಲ. ನನ್ನ ಎಲ್‌ಜಿಪಿಟಿಕ್ಯೂ ಚಳವಳಿಯ ಭಾಗವಾಗಿ ನಾನು ಇದನ್ನು ಮಾಡುತ್ತಿದ್ದೇನೆ. ಟ್ರಾನ್ಸ್ ಮ್ಯಾನ್ ಆಗಿ ನಾನು ಪ್ರತಿದಿನ ಎದುರಿಸುತ್ತಿರುವ ಸಾಮಾಜಿಕ ಕಿರುಕುಳವನ್ನು ನಿಲ್ಲಿಸಲು ನಾನು ಬಯಸುತ್ತೇನೆ ಎಂದು ಸುಚೇತನಾ ಭಟ್ಟಾಚಾರ್ಯಾ ಅವರು ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ನಾನು ವಯಸ್ಕ. ನನಗೀಗ 41 ವರ್ಷ. ಹಾಗಾಗಿ, ನನಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ನಾನು ಕೈಗೊಳ್ಳಲು ಸ್ವತಂತ್ರಗಳು. ಲಿಂಗ ಬದಲಾವಣೆ ನಿರ್ಧಾರವನ್ನು ನಾನು ನನ್ನದೇ ಆದ ರೀತಿಯಲ್ಲಿ ಕೈಗೊಳ್ಳುತ್ತಿದ್ದೇನೆ. ಈ ವಿಷಯದಲ್ಲಿ ನನ್ನ ತಂದೆ ತಾಯಿಯನ್ನು ಎಳೆಯಬೇಡಿ. ಮಾನಸಿಕವಾಗಿ ಯಾರೇ ಆಗಲಿ ಪುರುಷ ಎಂದು ಭಾವಿಸಿಕೊಂಡರೆ ಅಂಥವರು ಪುರುಷರೇ ಆಗಿರುತ್ತಾರೆ. ಹಾಗೆಯೇ ನಾನು ಮಾನಸಿಕವಾಗಿ ಪುರುಷನಾಗಿದ್ದೇನೆ. ಹಾಗಾಗಿ, ನಾನೀಗ ಭೌತಿಕವಾಗಿಯೂ ಪುರುಷನಾಗಲು ಮುಂದಾಗಿದ್ದೇನೆ ಎಂದು ಸುಚೇತನಾ ಭಟ್ಟಾಚಾರ್ಯ ತಿಳಿಸಿದ್ದಾರೆ. ಬಾಲ್ಯದಿಂದಲೂ ನನ್ನ ಮಾನಸಿಕತೆಯ ಬಗ್ಗೆ ನನ್ನ ತಂದೆಗೆ ಗೊತ್ತು. ಹಾಗಾಗಿ ತಂದೆ ಕೂಡ ಸಪೋರ್ಟ್ ಮಾಡುತ್ತಾರೆಂಬ ವಿಶ್ವಾಸವನ್ನು ಸುಚೇತನಾ ಅವರು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video : ಕಾಫಿಗೂ ಲಿಂಗ ಬದಲಾವಣೆಗೂ ಏನು ಸಂಬಂಧ? ಸ್ಟಾರ್‌ಬಕ್ಸ್‌ ಜಾಹೀರಾತು ವಿವಾದ

ಲಿಂಗ ಪರಿವರ್ತನೆ ನಿರ್ಧಾರವು ನನ್ನದು ಮತ್ತು ನನ್ನದು ಮಾತ್ರವೇ ಆಗಿದೆ. ಈ ಸುದ್ದಿಯನ್ನು ತಿರುಚಬೇಡಿ ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಇದು ನನ್ನದೇ ಹೋರಾಟ. ನಾನು ಇದನ್ನು ಏಕಾಂಗಿಯಾಗಿ ಹೋರಾಡಲು ಬಯಸುತ್ತೇನೆ. ಈ ನಿರ್ಧಾರವನ್ನು ಎಂದೋ ಕೈಗೊಳ್ಳಬೇಕಾಗಿತ್ತು. ನನ್ನ ಬಾಲ್ಯದಿಂದಲೂ ನಾನು ಈ ದೃಷ್ಟಿಕೋನವನ್ನು ಹೊಂದಿದ್ದೇನೆ. ಅನೇಕರು ಇದನ್ನು ಬೆಂಬಲಿಸಿದರು, ಇನ್ನು ಕೆಲವರು ಹೀಗಳೆದರು. ಮಾನಸಿಕವಾಗಿ ನಾನು ಟ್ರಾನ್ಸ್ ಮ್ಯಾನ್ ಮತ್ತು ದೈಹಿಕವಾಗಿಯೂ ನಾನು ಅದೇ ಆಗಲು ಬಯಸುತ್ತೇನೆ ಎಂದು ಸುಚೇತನಾ ಭಟ್ಟಾಚಾರ್ಯ ಅವರು ತಿಳಿಸಿದ್ದಾರೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version