Site icon Vistara News

Bihar Politics: ನಿತೀಶ್‌ ಕುಮಾರ್ ರಾಜೀನಾಮೆಗೆ ಕ್ಷಣಗಣನೆ; ಪಕ್ಷವಾರು ಬಲಾಬಲ ಹೇಗಿದೆ?

Narendra Modi Nitish Kumar

No question of leaving NDA: Nitish Kumar after his record ninth oath as Bihar CM

ಪಟನಾ: ಬಿಹಾರದಲ್ಲಿ ರಾಜಕೀಯ ಬೆಳವಣಿಗೆಗಳು (Bihar Politics) ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುತ್ತಿವೆ. ಆರ್‌ಜೆಡಿ ಜತೆಗಿನ ಮೈತ್ರಿ ಮುರಿದುಕೊಂಡು ಬಿಜೆಪಿ ಜತೆ ಕೈಜೋಡಿಸಲು ನಿತೀಶ್‌ ಕುಮಾರ್‌ (Nitish Kumar) ಅವರು ತುದಿಗಾಲಿನ ಮೇಲೆ ನಿಂತಿದ್ದಾರೆ. ಬಿಜೆಪಿಯೂ (BJP Meeting) ಶಾಸಕಾಂಗ ಸಭೆ ನಡೆಸುವ ಮೂಲಕ ಶಾಸಕರ ಬೆಂಬಲ ದೃಢಪಡಿಸಿಕೊಂಡಿದೆ. ಅತ್ತ, ಆರ್‌ಜೆಡಿಯೂ (RJD) ಶಾಸಕರ ಸಭೆ ನಡೆಸಿದೆ. ನಿತೀಶ್‌ ಕುಮಾರ್‌ ಅವರು ಇಂದೇ (ಜನವರಿ 27) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಬೆಂಬಲದೊಂದಿಗೆ ಭಾನುವಾರ (ಜನವರಿ 28) ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳ ಮಧ್ಯೆಯೇ ಬಿಹಾರದಲ್ಲಿ ಯಾವ ಪಕ್ಷಗಳ ಸಂಖ್ಯಾ ಬಲ ಹೇಗಿದೆ? ಇಲ್ಲಿದೆ ಮಾಹಿತಿ.

ಪಕ್ಷಶಾಸಕರು
ಆರ್‌ಜೆಡಿ79
ಬಿಜೆಪಿ78
ಜೆಡಿಯು45
ಸಿಪಿಐ (ಎಂಎಲ್)12
ಕಾಂಗ್ರೆಸ್‌19
ಎಚ್‌ಎಎಂ04
ಎಐಎಂಐಎಂ01
ಸಿಪಿಎಂ02
ಸಿಪಿಐ02
ಸ್ವತಂತ್ರ01
ಒಟ್ಟು243
ಮ್ಯಾಜಿಕ್‌ ನಂಬರ್‌122

ಇದನ್ನೂ ಓದಿ: Bihar Politics: ಬಿಹಾರದ ರಾಜಕೀಯ ಅನಿಶ್ಚಿತತೆ ನಡುವೆ ಬಹು ಮುಖ್ಯ ನಿರ್ಧಾರ ಪ್ರಕಟಿಸಿದ ಕಾಂಗ್ರೆಸ್‌

ಶಾಸಕರ ವಿಶ್ವಾಸ ಹೆಚ್ಚಿಸಿದ ಲಾಲು ಪ್ರಸಾದ್‌ ಯಾದವ್‌

ನಿತೀಶ್‌ ಕುಮಾರ್‌ ಅವರು ರಾಜೀನಾಮೆ ನೀಡಲು ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಆರ್‌ಜೆಡಿ ಶಾಸಕರ ಜತೆ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರು ಸಭೆ ನಡೆಸಿ, ಅವರ ಆತ್ಮಸ್ಥೈರ್ಯ ಹೆಚ್ಚಿಸಿದ್ದಾರೆ. “ಆರ್‌ಜೆಡಿಯ ಯಾವ ಶಾಸಕರೂ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಅಧಿಕಾರ ಹೋಯ್ತು ಎಂದು ಹತಾಶರಾಗುವುದೂ ಬೇಡ. ತೇಜಸ್ವಿ ಯಾದವ್‌ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿ” ಎಂಬುದಾಗಿ ಲಾಲು ಪ್ರಸಾದ್‌ ಯಾದವ್‌ ಅವರು ಶಾಸಕರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಬಿಜೆಪಿಯು ಸಾಲು ಸಾಲು ಸಭೆಗಳನ್ನು ನಡೆಸುತ್ತಿರುವ ಕಾರಣ ಜೆಡಿಯು ಶಾಸಕರ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ಬಿಹಾರದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ರಚಿಸದಿದ್ದರೂ ನಿತೀಶ್‌ ಕುಮಾರ್‌ ಅವರು 2005ರಿಂದಲೂ (8 ತಿಂಗಳು ಹೊರತುಪಡಿಸಿ) ಮುಖ್ಯಮಂತ್ರಿಯಾಗಿದ್ದಾರೆ. ಇಷ್ಟು ವರ್ಷಗಳಲ್ಲಿ ಅವರು ಬಿಜೆಪಿ ಜತೆಗೂಡಿ 20 ವರ್ಷ ಸಿಎಂ ಹುದ್ದೆಯಲ್ಲಿದ್ದರು. ಹಾಗೆಯೇ, ಮಹಾಘಟಬಂಧನ್‌ ಎಂಬ ಮೈತ್ರಿ ರಚಿಸಿ 4 ವರ್ಷ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಿತೀಶ್‌ ಕುಮಾರ್‌ ಅವರು ಮೈತ್ರಿಪಕ್ಷಗಳನ್ನು ಆಗಾಗ ಬದಲಾಯಿಸಿದರೂ, ಅವರೇ ಸಿಎಂ ಆದರೂ, ಬೇರೆ ಪಕ್ಷಗಳು ಮಾತ್ರ ಅವರಿಗೆ ಆಫರ್‌ ನೀಡುತ್ತಲೇ ಇರುತ್ತವೆ. ಈಗ ಬಿಜೆಪಿಯು ಅವರ ಜತೆ ಮತ್ತೆ ಜೋಡಿಸುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version