Site icon Vistara News

Budget 2024: ಬಜೆಟ್ ಮಂಡಿಸುತ್ತಿದ್ದಂತೆ ರೈಲ್ವೆ ಷೇರುಗಳೇಕೆ ಕುಸಿದವು?

Why did Railway Shares down after present of Budget 2024

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಧ್ಯಂತರ ಬಜೆಟ್ ಮಂಡಿಸುತ್ತಿದ್ದಂತೆ (Budget 2024) ರೈಲ್ವೆ ಸಂಬಂಧಿಸಿದ ಕಂಪನಿಗಳ ಷೇರುಗಳ ಕುಸಿತವನ್ನು ದಾಖಲಿಸಿದವು(Railway Shares). ಬಜೆಟ್‌ನಲ್ಲಿ ರೈಲ್ವೆಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡದ್ದರಿಂದ ಷೇರುಗಳು ಕುಸಿದವು(Stock Market). ಕಳೆದ ಒಂದು ತಿಂಗಳಿಂದ ಈ ಷೇರುಗಳು ಸಾಕಷ್ಟು ಏರಿಕೆಯನ್ನು ದಾಖಲಿಸಿ, ಹೂಡಿಕೆದಾರರಿಗೆ ಲಾಭ ಮಾಡಿದ್ದವು.

ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್(IRFC), IRCON ಇಂಟರ್‌ನ್ಯಾಷನಲ್, ರೈಲ್ ವಿಕಾಸ್ ನಿಗಮ್ (RVNL) ಷೇರುಗಳು 2.85%, ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ 2.48% ಮತ್ತು ಟೆಕ್ಸ್‌ಮಾಕೊ ರೈಲ್ & ಇಂಜಿನಿಯರಿಂಗ್ 2.09% ಕುಸಿಯಿತು. ಐಆರ್‌ಎಫ್‌ಸಿ ಷೇರು ಬೆಲೆ ಶೇ.1.80ರಷ್ಟು ಕುಸಿದಿದೆ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್), ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಜುಪಿಟರ್ ವ್ಯಾಗನ್ಸ್ ಲಿಮಿಟೆಡ್‌ನಲ್ಲಿ 1% ರಿಂದ 2% ರಷ್ಟು ಕುಸಿತ ದಾಖಲಿಸಿದವು.

ಮೆಟ್ರೋ ರೈಲು (Metro Rail) ಮತ್ತು ನಮೋ ಭಾರತ್ ರೈಲು (Namo Bharat Rail) ಸೇವೆಯನ್ನು ಇತರ ಎಲ್ಲ ನಗರಗಳಿಗೂ ವಿಸ್ತರಿಸುವ ಬಗ್ಗೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ (Niramla Sitharaman) ಅವರು ಘೋಷಣೆ ಮಾಡಿದ್ದಾರೆ. ಹಾಗೆಯೇ, ವಂದೇ ಭಾರತ್ ಹಂತಕ್ಕೆ 40 ಸಾವಿರ ಬೋಗಿಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆಯೂ ವಾಗ್ದಾನ ಮಾಡಲಾಗಿದೆ. ಇದರ ಜೊತೆಗೆ, ಮೂರು ಪ್ರಮುಖ ಆರ್ಥಿಕ ರೈಲ್ವೇ ಕಾರಿಡಾರ್ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ. ಅನುಷ್ಠಾನ-ಶಕ್ತಿ, ಬಂದರು ಸಂಪರ್ಕ, ಹೆಚ್ಚಿನ ಸಂಚಾರ ಸಾಂದ್ರತೆ ಮತ್ತು ಖನಿಜ ಮತ್ತು ಸಿಮೆಂಟ್ ಕಾರಿಡಾರ್ ಬಗ್ಗೆ ಪ್ರಕಟಿಸಲಾಗಿದೆ(budget 2024).

ದಾಖಲೆಯ ಮಟ್ಟದಲ್ಲಿ ಈ ಬಾರಿ ರೈಲ್ವೆಗೆ ಅನುದಾನವನ್ನು ಒದಗಿಸಲಾಗಿದೆ. 2024-25ನೇ ಸಾಲಿಗೆ ಕೇಂದ್ರ ಸರ್ಕಾರವು ರೈಲ್ವೆ ಇಲಾಖೆಗೆ 2.4 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಈ ವರ್ಷ ರೈಲ್ವೆ ಇಲಾಖೆಯಿಂದ ಸಾಕಷ್ಟು ನಿರೀಕ್ಷೆ ಕೂಡ ಇಟ್ಟುಕೊಳ್ಳಲಾಗಿದೆ.

2024ರ (Budget 2024) ಲೋಕಸಭಾ ಚುನಾವಣೆಗೆ ಮುಂಚಿತವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಧ್ಯಂತರ ಬಜೆಟ್​ ಪ್ರಕಟಿಸಿದ್ದಾರೆ. 2024-25ನೇ ಸಾಲಿಗೆ ಭಾರತದ ಬಂಡವಾಳ ವೆಚ್ಚವನ್ನು ಶೇಕಡಾ 11 ರಷ್ಟು ಹೆಚ್ಚಿಸಿ 11.11 ಲಕ್ಷ ಕೋಟಿ ರೂ.ಗೆ ಅಥವಾ ಜಿಡಿಪಿಯ ಶೇಕಡಾ 3.4 ಕ್ಕೆ ಹೆಚ್ಚಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಇಲಾಖಾವಾರು ಬಜೆಟ್​ಗಳ ಹಂಚಿಕೆಯನ್ನು ಪ್ರಕಟಿಸಿದ್ದಾರೆ. ಮಧ್ಯಂತರ ಬಜೆಟ್​ನಲ್ಲಿ ರಕ್ಷಣಾ ಸಚಿವಾಲಯಕ್ಕೆ ಹೆಚ್ಚಿನ ಹಂಚಿಕೆ ನೀಡಿರುವುದು ಖಾತರಿಯಾಗಿದ್ದು, ಕೃಷಿ ಇಲಾಖೆ ಕನಿಷ್ಠ ಪಾಲು ಪಡೆದುಕೊಂಡಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ದ್ವಿಗುಣ ಪರಿಣಾಮ ಬೀರಿದೆ ಎಂಬುದಾಗಿ ವಿತ್ತ ಸಚಿವರು ಹೇಳಿದ್ದಾರೆ. ಭಾರತೀಯ ವಿಮಾನಯಾನ ಸಂಸ್ಥೆಗಳು 1,000 ಹೊಸ ವಿಮಾನಗಳಿಗೆ ಆರ್ಡರ್ ನೀಡಿವೆ ಎಂದು ಸಚಿವರು ಇದೇ ವೇಳೆ ಪ್ರಕಟಿಸಿದ್ದಾರೆ.

ಈ ಸುದ್ದಿಯನ್ನು ಓದಿ: Budget 2024 : ಇವಿ ವಾಹನ ಕ್ಷೇತ್ರಕ್ಕೂ ಬಜೆಟ್​ನಲ್ಲಿ ಒತ್ತು; ವಿತ್ತ ಸಚಿವರ ಘೋಷಣೆಯೇನು?

Exit mobile version