Site icon Vistara News

President Election | ದ್ರೌಪದಿ ಮುರ್ಮು ಆಯ್ಕೆ ಮಾಸ್ಟರ್‌ ಸ್ಟ್ರೋಕ್‌ ಎಂಬುದಕ್ಕೆ ಇಲ್ಲಿವೆ 7 ಕಾರಣಗಳು

draupadi murmu

ದ್ರೌಪದಿ ಮುರ್ಮು ಅವರನ್ನು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಇತ್ತೀಚಿನ ದಿನಗಳಲ್ಲಿ ಬಿಜೆಪಿಯ ಅತ್ಯುತ್ತಮ ಕಾರ್ಯತಂತ್ರ ಎನ್ನಬಹುದು. ಇದಕ್ಕೆ ಹಲವಾರು ಕಾರಣಗಳಿವೆ. ಆರು ಕಾರಣಗಳು ಹೀಗಿವೆ:

೧.. ಕಳೆದ ಬಾರಿ ರಾಮನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿಯಾಗಿ ತಂದು ಒಂದು ರಾಜಕೀಯ ಸಂದೇಶವನ್ನು ಬಿಜೆಪಿ ದೇಶಕ್ಕೆ ನೀಡಿತ್ತು. ಈ ಸಲದ್ದೂ ಅಂಥದೇ ಇನ್ನೊಂದು ಸಂದೇಶ. ಕಳೆದ ಬಾರಿ ಅದು ದಲಿತರನ್ನು ಸೆಳೆದಿದ್ದರೆ, ಈ ಬಾರಿ ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಏಕಕಾಲಕ್ಕೆ ಸೆಳೆಯುವಂತಿದೆ.

೨. ಮೊತ್ತ ಮೊದಲನೆಯದಾಗಿ, ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು, ಪರಿಶಿಷ್ಟ ಪಂಗಡದವರು. ಲೋಕಸಭೆಯಲ್ಲಿ ೨೭ ಸ್ಥಾನಗಳು ಬುಡಕಟ್ಟು ಸಮುದಾಯಕ್ಕೆ ಮೀಸಲಾಗಿವೆ. ೨೦2೪ರ ಲೋಕಸಭೆ ಚುನಾವಣೆಯಲ್ಲಿ ಇದು ಗಣನೀಯ ಪ್ರಭಾವವನ್ನೇ ಬೀರಬಹುದು.

೩. ಬಿಜೆಪಿಯ ಮತದಾರರಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹಿಗ್ಗುತ್ತಿದೆ. ಮಹಿಳೆಯರ ಮತಗಳತ್ತ ಹೆಚ್ಚಿನ ಗಮನ ಹರಿಸಿ ಎಂದು ಪ್ರಧಾನಿ ಮೋದಿ ಆಗಾಗ ಪಕ್ಷದ ನಾಯಕರಿಗೆ ಎಚ್ಚರಿಸುತ್ತಿರುತ್ತಾರೆ. ಮಹಿಳೆಯರಲ್ಲಿ ನಿಷ್ಠಾವಂತ ಮತದಾರರನ್ನು ಬಿಜೆಪಿ ಗುರುತಿಸಿದೆ. ಉಜ್ವಲಾ, ಸ್ವಚ್ಛ ಭಾರತ್‌, ಉಚಿತ ರೇಷನ್‌ ಮುಂತಾದ ಕಾರ್ಯಕ್ರಮಗಳ ಮೂಲಕ ಮಹಿಳೆಯರ ಮನ ಸೆಳೆದಿರುವ ಬಿಜೆಪಿಯ ಕಾರ್ಯತಂತ್ರಗಳಲ್ಲಿ ಇದೂ ಒಂದು.

೪. ಒಡಿಶಾ ಹಾಗೂ ಜಾರ್ಖಂಡ್‌ಗಳಲ್ಲಿ ತನ್ನ ಮತದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಮೋದಿ ಸರ್ಕಾರ ಯತ್ನಿಸುತ್ತಿದೆ. ಮುರ್ಮು ಒಡಿಶಾ ಮೂಲದವರು ಹಾಗೂ ಜಾರ್ಖಂಡ್‌ ರಾಜ್ಯಪಾಲರಾಗಿದ್ದರು. ಒಡಿಶಾ ಇನ್ನೂ ಪೂರ್ತಿಯಾಗಿ ಬಿಜೆಪಿ ತೆಕ್ಕೆಗೆ ಸಿಕ್ಕಿಲ್ಲ. ಒಡಿಶಾದಲ್ಲಿ ತನ್ನ ನೆಲೆಯನ್ನು ಊರಲು ಬಿಜೆಪಿ ಯತ್ನಿಸುತ್ತಿದೆ.

ಇದನ್ನೂ ಓದಿ: ದ್ರೌಪದಿ ಮುರ್ಮು ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ, ಬುಡಕಟ್ಟು ಮಹಿಳೆಗೆ ಮನ್ನಣೆ

5. ಒಡಿಶಾದ ಆಡಳಿತ ಪಕ್ಷ, ನವೀನ್‌ ಪಾಟ್ನಾಯಿಕ್‌ ನೇತೃತ್ವದ ಬಿಜು ಜನತಾ ದಳದ ಬೆಂಬಲವನ್ನು ಈ ಸಲ ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಕೋರಿದೆ. ಒಡಿಶಾ ಮೂಲದ ವ್ಯಕ್ತಿಯ ಮೂಲಕ ಬಿಜೆಡಿ ಬೆಂಬಲ ಖಾತ್ರಿಪಡಿಸಿಕೊಳ್ಳಲಾಗಿದೆ.

೬. ಬುಡಕಟ್ಟು ಸಮುದಾಯ ಕೇಂದ್ರಿತ ಕಾರ್ಯಕ್ರಮಗಳನ್ನು ಬಿಜೆಪಿ ಇತ್ತೀಚೆಗೆ ಹೆಚ್ಚು ಹೆಚ್ಚು ರೂಪಿಸುತ್ತಿದೆ. ಮುಂದಿನ ವರ್ಷ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ವಿಧಾನಸಭೆ ಚುನಾವಣೆಗಳಿದ್ದು, ಇಲ್ಲಿ ಬುಡಕಟ್ಟು ಮತಗಳು ಸಾಕಷ್ಟಿವೆ.

೭. ದ್ರೌಪದಿ ಮುರ್ಮು ಅವರು ರಾಜಕೀಯವಾಗಿ ಯಾವುದೇ ಶತ್ರುಗಳಿಲ್ಲದ ವ್ಯಕ್ತಿ. ಪ್ರತಿಪಕ್ಷಗಳಿಗೂ ಇವರನ್ನು ವಿರೋಧಿಸಲು ಕಾರಣಗಳಿಲ್ಲ.

ಇದನ್ನೂ ಓದಿ: ಯಾರಿವರು ದ್ರೌಪದಿ ಮುರ್ಮು? ಗೆದ್ದರೆ ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿ

Exit mobile version