Site icon Vistara News

New Parliament Building: ಹೊಸ ಸಂಸತ್ ಭವನ ತ್ರಿಕೋನಾಕೃತಿಯಲ್ಲಿ ಯಾಕಿದೆ?

why new parliament building is triangular in shape

ನೂತನ ಸಂಸತ್‌ ಭವನವನ್ನು (New Parliament Building) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಉದ್ಘಾಟಿಸಲಿದ್ದಾರೆ. ಸೊಗಸಾದ ವಾಸ್ತುಶಿಲ್ಪ, ರಾಜದಂಡ ʼಸೆಂಗೊಲ್’ ಮುಂತಾದ ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಭವನ ತ್ರಿಕೋನಾಕೃತಿಯಲ್ಲಿ ಯಾಕಿದೆ ಎಂಬ ಪ್ರಶ್ನೆ ತುಂಬಾ ಮಂದಿಯ ತಲೆ ತಿಂದಿರಬಹುದು.

₹ 971 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಕಟ್ಟಡ ಸಂಕೀರ್ಣದ ತ್ರಿಕೋನ ಆಕಾರದಿಂದಾಗಿ ಲಭ್ಯವಿರುವ ಜಾಗದ ಅತ್ಯುತ್ತಮ ಬಳಕೆ ಸಾಧ್ಯವಾಗಲಿದೆ ಎಂದು ಯೋಜನೆಯ ವೆಬ್‌ಸೈಟ್ ಹೇಳಿದೆ. ಈ ಆಕಾರದಿಂದಾಗಿ ಮೂರು ಮೂಲೆಗಳಲ್ಲಿ ಮೂರು ಮಹಾದ್ವಾರಗಳು ಸಿಗುತ್ತವೆ. ಲೋಕಸಭೆ, ರಾಜ್ಯಸಭೆ ಹಾಗೂ ಸೆಕ್ರೆಟೇರಿಯಟ್‌ಗಳಿಗೆ ಪ್ರತ್ಯೇಕವಾದ ದ್ವಾರಗಳು ಲಭ್ಯವಾಗುತ್ತವೆ. ಹಾಗೂ ಭದ್ರತೆಯ ದೃಷ್ಟಿಯಿಂದಲೂ ಇದು ಉತ್ತಮ ವಿನ್ಯಾಸ ಎನ್ನಲಾಗಿದೆ. ಸೆಂಟ್ರಲ್ ವಿಸ್ಟಾ ರಿಡೆವಲಪ್ಮೆಂಟ್ ಪ್ರಾಜೆಕ್ಟ್‌ನ ವೆಬ್‌ಸೈಟ್ ಪ್ರಕಾರ “135 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು” ಪ್ರತಿಬಿಂಬಿಸುವ ಕಟ್ಟಡವಿದು.

ಹೊಸ ಕಟ್ಟಡ ಸಂಕೀರ್ಣದಲ್ಲಿರುವ ಶಾಸಕಾಂಗ ಸಭೆಗಳು ಭವ್ಯವಾಗಿವೆ. ಲೋಕಸಭೆಯು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಆಕೃತಿಯಲ್ಲಿದೆ. ಇಲ್ಲಿ ಪ್ರಸ್ತುತಕ್ಕಿಂತ ಮೂರು ಪಟ್ಟು ಆಸನ ಸಾಮರ್ಥ್ಯವಿದೆ. 888 ಸೀಟುಗಳಿವೆ. ರಾಜ್ಯಸಭೆಯ ವಿನ್ಯಾಸ ರಾಷ್ಟ್ರೀಯ ಹೂವು ಕಮಲದ ಆಕೃತಿಯಲ್ಲಿದ್ದು, 348 ಆಸನಗಳು ಇರುತ್ತವೆ. ಲೋಕಸಭೆಯ ಸಭಾಂಗಣವು ಜಂಟಿ ಅಧಿವೇಶನಗಳಿಗೆ ಅನುಕೂಲವಾಗುವಂತೆ 1,272 ಆಸನಗಳಿಗೆ ಅವಕಾಶ ಕಲ್ಪಿಸುತ್ತದೆ.

ಎರಡು ಶಾಸಕಾಂಗ ಸಭೆಗಳನ್ನು ಹೊರತುಪಡಿಸಿ, ಹೊಸ ಸಂಕೀರ್ಣದಲ್ಲಿ ʼಸಾಂವಿಧಾನಿಕ ಸಭಾಂಗಣ’ವಿದೆ. ಇದು ಹೊಸ ಸೇರ್ಪಡೆ. ಇದು ಹಿಂದಿನ ಕಟ್ಟಡದಂತೆಯೇ ಹೊರಾಂಗಣದಲ್ಲಿ ಕಚೇರಿಗಳನ್ನು ಹೊಂದಿರುತ್ತದೆ ಮತ್ತು ಜಂಟಿ ಅಧಿವೇಶನವು ಮೇಲೆ ತಿಳಿಸಿದಂತೆ ಲೋಕಸಭೆ ಸಭಾಂಗಣದ ಒಂದು ಭಾಗವಾಗಿರುತ್ತದೆ.

19 political parties boycotted new parliament building inauguration

ಅತ್ಯಾಧುನಿಕ ʼಸಾಂವಿಧಾನಿಕ ಸಭಾಂಗಣ’ ಸಂಸತ್ತಿನ ಸಂಕೀರ್ಣಕ್ಕೆ ಹೊಸ ಸೇರ್ಪಡೆ. ಸಾಂಕೇತಿಕವಾಗಿ ಮತ್ತು ಭೌತಿಕವಾಗಿ ಇದು ಸಂವಿಧಾನವನ್ನು “ಪ್ರಜಾಪ್ರಭುತ್ವದ ಹೃದಯಭಾಗದಲ್ಲಿ” ಇರಿಸುತ್ತದೆ. ಹೊಸ ಸಂಕೀರ್ಣದಲ್ಲಿ ಕಚೇರಿಗಳನ್ನು ʼಅಲ್ಟ್ರಾ-ಆಧುನಿಕ’ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇತ್ತೀಚಿನ ಸಂವಹನ ತಂತ್ರಜ್ಞಾನಗಳೊಂದಿಗೆ ಇದು ಸಜ್ಜಾಗಿದೆ. ಹೊಸ ಸಂಕೀರ್ಣದಲ್ಲಿ ದೊಡ್ಡ ಕಮಿಟಿ ಕೊಠಡಿಗಳಿವೆ. ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಇತ್ತೀಚಿನ ತಂತ್ರಜ್ಞಾನ ಮತ್ತು ವಿನ್ಯಾಸಗಳೊಂದಿಗೆ ಸುಸಜ್ಜಿತವಾಗಿದೆ. ಚಿಂತನಶೀಲವಾಗಿ ವಿನ್ಯಾಸಗೊಳಿಸಿದ ಗ್ರಂಥಾಲಯವನ್ನೂ ಹೊಂದಿದೆ.

ಇಂಧನ ದಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಹೊಸ ಸಂಕೀರ್ಣವು “ಪ್ಲಾಟಿನಂ-ರೇಟೆಡ್ ಹಸಿರು ಕಟ್ಟಡ”. ಇದು “ಸುಸ್ಥಿರ ಅಭಿವೃದ್ಧಿಯ ಕಡೆಗೆ ಭಾರತದ ಬದ್ಧತೆʼʼ. ದೇಶದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಅನೇಕ ಪ್ರಾದೇಶಿಕ ಕಲಾಕೃತಿಗಳೂ ಇಲ್ಲಿ ಇರುತ್ತವೆ. ಹೊಸ ಸಂಕೀರ್ಣವನ್ನು ಅಂಗವಿಕಲರಿಗೆ ಓಡಾಡಲು ಕಷ್ಟವಾಗದಂತೆ ವಿನ್ಯಾಸಗೊಳಿಸಲಾಗಿದೆ. ಮಧ್ಯದಲ್ಲಿ ತೆರೆದ ಅಂಗಣಕ್ಕೆ ಪೂರಕವಾಗಿ ಕೇಂದ್ರದಲ್ಲಿ ವಿಶ್ರಾಂತಿ ಕೋಣೆಯನ್ನು ಹೊಂದಿದೆ. ಇಲ್ಲಿ ಸಂಸತ್‌ ಸದಸ್ಯರು ಇತರರ ಜತೆಗೆ ಸಂವಹನ ನಡೆಸಬಹುದು. ಈ ತೆರೆದ ಅಂಗಣದಲ್ಲಿ ರಾಷ್ಟ್ರೀಯ ಮರವಾದ ಆಲದ ಮರ ಕೂಡ ಇದೆ.

ಇದನ್ನೂ ಓದಿ: New Parliament Building: ರಾಷ್ಟ್ರಪತಿ ಅವರಿಂದಲೇ ಸಂಸತ್‌ ಭವನ ಉದ್ಘಾಟನೆ ಕೋರಿ ಅರ್ಜಿ; ತಿರಸ್ಕರಿಸಿದ ಕೋರ್ಟ್

Exit mobile version