New Parliament Building: ಹೊಸ ಸಂಸತ್ ಭವನ ತ್ರಿಕೋನಾಕೃತಿಯಲ್ಲಿ ಯಾಕಿದೆ? Vistara News
Connect with us

ದೇಶ

New Parliament Building: ಹೊಸ ಸಂಸತ್ ಭವನ ತ್ರಿಕೋನಾಕೃತಿಯಲ್ಲಿ ಯಾಕಿದೆ?

ನೂತನ ಸಂಸತ್‌ ಭವನ (New Parliament Building) ತ್ರಿಕೋನಾಕೃತಿಯಲ್ಲಿ ಯಾಕಿದೆ ಎಂಬ ಪ್ರಶ್ನೆ ಅನೇಕರನ್ನು ಕಾಡಬಹುದು. ಇದಕ್ಕೆ ಉತ್ತರವಿದೆ.

VISTARANEWS.COM


on

why new parliament building is triangular in shape
Koo

ನೂತನ ಸಂಸತ್‌ ಭವನವನ್ನು (New Parliament Building) ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಉದ್ಘಾಟಿಸಲಿದ್ದಾರೆ. ಸೊಗಸಾದ ವಾಸ್ತುಶಿಲ್ಪ, ರಾಜದಂಡ ʼಸೆಂಗೊಲ್’ ಮುಂತಾದ ಅನೇಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಭವನ ತ್ರಿಕೋನಾಕೃತಿಯಲ್ಲಿ ಯಾಕಿದೆ ಎಂಬ ಪ್ರಶ್ನೆ ತುಂಬಾ ಮಂದಿಯ ತಲೆ ತಿಂದಿರಬಹುದು.

₹ 971 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಕಟ್ಟಡ ಸಂಕೀರ್ಣದ ತ್ರಿಕೋನ ಆಕಾರದಿಂದಾಗಿ ಲಭ್ಯವಿರುವ ಜಾಗದ ಅತ್ಯುತ್ತಮ ಬಳಕೆ ಸಾಧ್ಯವಾಗಲಿದೆ ಎಂದು ಯೋಜನೆಯ ವೆಬ್‌ಸೈಟ್ ಹೇಳಿದೆ. ಈ ಆಕಾರದಿಂದಾಗಿ ಮೂರು ಮೂಲೆಗಳಲ್ಲಿ ಮೂರು ಮಹಾದ್ವಾರಗಳು ಸಿಗುತ್ತವೆ. ಲೋಕಸಭೆ, ರಾಜ್ಯಸಭೆ ಹಾಗೂ ಸೆಕ್ರೆಟೇರಿಯಟ್‌ಗಳಿಗೆ ಪ್ರತ್ಯೇಕವಾದ ದ್ವಾರಗಳು ಲಭ್ಯವಾಗುತ್ತವೆ. ಹಾಗೂ ಭದ್ರತೆಯ ದೃಷ್ಟಿಯಿಂದಲೂ ಇದು ಉತ್ತಮ ವಿನ್ಯಾಸ ಎನ್ನಲಾಗಿದೆ. ಸೆಂಟ್ರಲ್ ವಿಸ್ಟಾ ರಿಡೆವಲಪ್ಮೆಂಟ್ ಪ್ರಾಜೆಕ್ಟ್‌ನ ವೆಬ್‌ಸೈಟ್ ಪ್ರಕಾರ “135 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು” ಪ್ರತಿಬಿಂಬಿಸುವ ಕಟ್ಟಡವಿದು.

ಹೊಸ ಕಟ್ಟಡ ಸಂಕೀರ್ಣದಲ್ಲಿರುವ ಶಾಸಕಾಂಗ ಸಭೆಗಳು ಭವ್ಯವಾಗಿವೆ. ಲೋಕಸಭೆಯು ಭಾರತದ ರಾಷ್ಟ್ರೀಯ ಪಕ್ಷಿ ನವಿಲಿನ ಆಕೃತಿಯಲ್ಲಿದೆ. ಇಲ್ಲಿ ಪ್ರಸ್ತುತಕ್ಕಿಂತ ಮೂರು ಪಟ್ಟು ಆಸನ ಸಾಮರ್ಥ್ಯವಿದೆ. 888 ಸೀಟುಗಳಿವೆ. ರಾಜ್ಯಸಭೆಯ ವಿನ್ಯಾಸ ರಾಷ್ಟ್ರೀಯ ಹೂವು ಕಮಲದ ಆಕೃತಿಯಲ್ಲಿದ್ದು, 348 ಆಸನಗಳು ಇರುತ್ತವೆ. ಲೋಕಸಭೆಯ ಸಭಾಂಗಣವು ಜಂಟಿ ಅಧಿವೇಶನಗಳಿಗೆ ಅನುಕೂಲವಾಗುವಂತೆ 1,272 ಆಸನಗಳಿಗೆ ಅವಕಾಶ ಕಲ್ಪಿಸುತ್ತದೆ.

ಎರಡು ಶಾಸಕಾಂಗ ಸಭೆಗಳನ್ನು ಹೊರತುಪಡಿಸಿ, ಹೊಸ ಸಂಕೀರ್ಣದಲ್ಲಿ ʼಸಾಂವಿಧಾನಿಕ ಸಭಾಂಗಣ’ವಿದೆ. ಇದು ಹೊಸ ಸೇರ್ಪಡೆ. ಇದು ಹಿಂದಿನ ಕಟ್ಟಡದಂತೆಯೇ ಹೊರಾಂಗಣದಲ್ಲಿ ಕಚೇರಿಗಳನ್ನು ಹೊಂದಿರುತ್ತದೆ ಮತ್ತು ಜಂಟಿ ಅಧಿವೇಶನವು ಮೇಲೆ ತಿಳಿಸಿದಂತೆ ಲೋಕಸಭೆ ಸಭಾಂಗಣದ ಒಂದು ಭಾಗವಾಗಿರುತ್ತದೆ.

19 political parties boycotted new parliament building inauguration

ಅತ್ಯಾಧುನಿಕ ʼಸಾಂವಿಧಾನಿಕ ಸಭಾಂಗಣ’ ಸಂಸತ್ತಿನ ಸಂಕೀರ್ಣಕ್ಕೆ ಹೊಸ ಸೇರ್ಪಡೆ. ಸಾಂಕೇತಿಕವಾಗಿ ಮತ್ತು ಭೌತಿಕವಾಗಿ ಇದು ಸಂವಿಧಾನವನ್ನು “ಪ್ರಜಾಪ್ರಭುತ್ವದ ಹೃದಯಭಾಗದಲ್ಲಿ” ಇರಿಸುತ್ತದೆ. ಹೊಸ ಸಂಕೀರ್ಣದಲ್ಲಿ ಕಚೇರಿಗಳನ್ನು ʼಅಲ್ಟ್ರಾ-ಆಧುನಿಕ’ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇತ್ತೀಚಿನ ಸಂವಹನ ತಂತ್ರಜ್ಞಾನಗಳೊಂದಿಗೆ ಇದು ಸಜ್ಜಾಗಿದೆ. ಹೊಸ ಸಂಕೀರ್ಣದಲ್ಲಿ ದೊಡ್ಡ ಕಮಿಟಿ ಕೊಠಡಿಗಳಿವೆ. ಕೆಲಸದ ದಕ್ಷತೆಯನ್ನು ಹೆಚ್ಚಿಸಲು ಇತ್ತೀಚಿನ ತಂತ್ರಜ್ಞಾನ ಮತ್ತು ವಿನ್ಯಾಸಗಳೊಂದಿಗೆ ಸುಸಜ್ಜಿತವಾಗಿದೆ. ಚಿಂತನಶೀಲವಾಗಿ ವಿನ್ಯಾಸಗೊಳಿಸಿದ ಗ್ರಂಥಾಲಯವನ್ನೂ ಹೊಂದಿದೆ.

ಇಂಧನ ದಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಹೊಸ ಸಂಕೀರ್ಣವು “ಪ್ಲಾಟಿನಂ-ರೇಟೆಡ್ ಹಸಿರು ಕಟ್ಟಡ”. ಇದು “ಸುಸ್ಥಿರ ಅಭಿವೃದ್ಧಿಯ ಕಡೆಗೆ ಭಾರತದ ಬದ್ಧತೆʼʼ. ದೇಶದ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಅನೇಕ ಪ್ರಾದೇಶಿಕ ಕಲಾಕೃತಿಗಳೂ ಇಲ್ಲಿ ಇರುತ್ತವೆ. ಹೊಸ ಸಂಕೀರ್ಣವನ್ನು ಅಂಗವಿಕಲರಿಗೆ ಓಡಾಡಲು ಕಷ್ಟವಾಗದಂತೆ ವಿನ್ಯಾಸಗೊಳಿಸಲಾಗಿದೆ. ಮಧ್ಯದಲ್ಲಿ ತೆರೆದ ಅಂಗಣಕ್ಕೆ ಪೂರಕವಾಗಿ ಕೇಂದ್ರದಲ್ಲಿ ವಿಶ್ರಾಂತಿ ಕೋಣೆಯನ್ನು ಹೊಂದಿದೆ. ಇಲ್ಲಿ ಸಂಸತ್‌ ಸದಸ್ಯರು ಇತರರ ಜತೆಗೆ ಸಂವಹನ ನಡೆಸಬಹುದು. ಈ ತೆರೆದ ಅಂಗಣದಲ್ಲಿ ರಾಷ್ಟ್ರೀಯ ಮರವಾದ ಆಲದ ಮರ ಕೂಡ ಇದೆ.

ಇದನ್ನೂ ಓದಿ: New Parliament Building: ರಾಷ್ಟ್ರಪತಿ ಅವರಿಂದಲೇ ಸಂಸತ್‌ ಭವನ ಉದ್ಘಾಟನೆ ಕೋರಿ ಅರ್ಜಿ; ತಿರಸ್ಕರಿಸಿದ ಕೋರ್ಟ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ದೇಶ

ಶಾಲೆಯಲ್ಲಿ 30ಕ್ಕೂ ಹೆಚ್ಚು ಮಕ್ಕಳ ಕೂದಲು ಕತ್ತರಿಸಿದ ಶಿಕ್ಷಕ; ಪೊಲೀಸ್​ ಠಾಣೆ ಮೆಟ್ಟಿಲೇರಿದ ಪ್ರಕರಣ

ಮಕ್ಕಳ ಕೂದಲು ಕತ್ತರಿಸಿದ್ದು ನಿಕ್ಕಿ ಎಂಬ ಶಿಕ್ಷಕರಾಗಿದ್ದು, ಅವರು ಶಾಲಾ ಆಡಳಿತದ ನಿಯಮವನ್ನಷ್ಟೇ ಪಾಲಿಸಿದ್ದಾರೆ. ಆದರೆ ಕೂದಲು ಕಟ್​ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ. ಶಾಲೆಗೆ ಹೋಗಲು ಇಷ್ಟವಿಲ್ಲ ಎನ್ನುತ್ತಿದ್ದಾರೆ.

VISTARANEWS.COM


on

Edited by

teacher chops hair in Assam
Koo

ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಶಿಸ್ತು ಕೂಡ ಕಲಿಸುತ್ತಾರೆ. ಇದು ಅಗತ್ಯವೂ ಹೌದು. ಆದರೆ ಅಸ್ಸಾಂನ ಮಜುಲಿ ಜಿಲ್ಲೆಯ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಮಕ್ಕಳಿಗೆ ಶಿಸ್ತಿನ ಪಾಠ ಮಾಡಲು ಹೋಗಿ ವಿವಾದ ಸೃಷ್ಟಿಸಿದ್ದಾರೆ. ಬೆಳಗ್ಗೆ ಶಾಲೆಯಲ್ಲಿ ನಡೆಯುವ ಪ್ರಾರ್ಥನೆ ನಂತರದ ಸೆಷನ್​​ನಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೂದಲು ಕತ್ತರಿಸಿದ್ದಾರೆ (Teacher Chops Hair Of Students). ಈ ಕೇಸ್​ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಸೂಕ್ತವಾಗಿ ತನಿಖೆ ನಡೆಸುವಂತೆ ಹೆಚ್ಚುವರಿ ಆಯುಕ್ತರಾದ ಕಾವೇರಿ ಬಿ.ಶರ್ಮಾ ಸೂಚನೆ ನೀಡಿದ್ದಾರೆ.

ಈ ವಿಷಯ ವಿವಾದ ಸೃಷ್ಟಿ ಮಾಡುತ್ತಿದ್ದಂತೆ ಶಾಲಾ ಆಡಳಿತ ಹೇಳಿಕೆ ಬಿಡುಗಡೆ ಮಾಡಿದೆ. ‘ಮಕ್ಕಳ ಕೂದಲು ಉದ್ದುದ್ದ ಬೆಳೆದಿತ್ತು. ಶಾಲೆಯ ಮಾರ್ಗಸೂಚಿ ಪ್ರಕಾರ ಇಲ್ಲಿನ ಗಂಡು ಮಕ್ಕಳು ಉದ್ದನೆಯ ಕೂದಲು ಬಿಡುವುದಕ್ಕೆ ಅವಕಾಶ ಇಲ್ಲ. ಹೇರ್​ಕಟ್​ ಮಾಡಿಸಿಕೊಳ್ಳುವಂತೆ ಮಕ್ಕಳಿಗೆ ಹೇಳಿಯಾಯಿತು. ಪಾಲಕರಿಗೂ ವಿಷಯ ತಿಳಿಸಲಾಗಿತ್ತು. ಆದರೆ ಒಂದಷ್ಟು ಮಕ್ಕಳು ಮಾತು ಕೇಳಲೇ ಇಲ್ಲ. ಹೀಗಾಗಿ ನಾವೇ ಕೂದಲು ಕಟ್​ ಮಾಡಿದ್ದೇವೆ. ಇದು ಮಕ್ಕಳಿಗೆ ಶಿಸ್ತು ಕಲಿಸುವ ಒಂದು ವಿಧಾನವಷ್ಟೇ’ ಎಂದು ತಿಳಿಸಿದೆ. ಅಷ್ಟೇ ಅಲ್ಲ, ಶಿಕ್ಷಕರು ವಿದ್ಯಾರ್ಥಿಗಳ ಕೂದಲ ಉದ್ದವನ್ನು ಮಾತ್ರ ಕಡಿಮೆ ಮಾಡಿದ್ದಾರೆ. ಟ್ರಿಮ್ ಮಾಡಿಲ್ಲ, ಯಾವುದೇ ಸ್ಟೈಲ್​​ಲ್ಲಿ ಹೇರ್​ಕಟ್​ ಮಾಡಿಲ್ಲ ಎಂದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ.

ಇದನ್ನೂ ಓದಿ: Shivamogga News: ಸಾಗರದಲ್ಲಿ ವಿಷಾಹಾರ ಸೇವನೆಯಿಂದ 30ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ

ಮಕ್ಕಳ ಕೂದಲು ಕತ್ತರಿಸಿದ್ದು ನಿಕ್ಕಿ ಎಂಬ ಶಿಕ್ಷಕರಾಗಿದ್ದು, ಅವರು ಶಾಲಾ ಆಡಳಿತದ ನಿಯಮವನ್ನಷ್ಟೇ ಪಾಲಿಸಿದ್ದಾರೆ. ಆದರೆ ಕೂದಲು ಕಟ್​ ಮಾಡುತ್ತಿದ್ದಂತೆ ವಿದ್ಯಾರ್ಥಿಗಳು ಅಸಮಾಧಾನಗೊಂಡಿದ್ದಾರೆ. ಶಾಲೆಗೆ ಹೋಗಲು ಇಷ್ಟವಿಲ್ಲ ಎಂದು ಮನೆಯಲ್ಲಿ ಹಠ ಹಿಡಿದು ಕುಳಿತಿದ್ದಾರೆ. ಪಾಲಕರೂ ಕಿಡಿಕಾರಿದ್ದಾರೆ. ‘ಶಾಲೆಯಲ್ಲಿ ಮಕ್ಕಳಿಗೆ ಶಿಸ್ತು ಕಲಿಸುವುದು ಬೇಡ ಎಂದು ನಾವು ಹೇಳುವುದಿಲ್ಲ. ಆದರೆ ಅದಕ್ಕೂ ಒಂದು ಮಿತಿಯಿದೆ. ಮಕ್ಕಳು ಅವರ ಸಮವಸ್ತ್ರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಚೆನ್ನಾಗಿ ಇರಬೇಕು. ಆದರೆ ಇಡೀ ಶಾಲೆಯಲ್ಲಿರುವ ಎಲ್ಲ ಮಕ್ಕಳು, ವಿದ್ಯಾರ್ಥಿಗಳ ಎದುರು ಕೆಲವೇ ಕೆಲವು ವಿದ್ಯಾರ್ಥಿಗಳ ತಲೆಕೂದಲು ಕತ್ತರಿಸಿದ್ದು, ಅವರಿಗೆ ಅವಮಾನ ಆಗಿದೆ’ ಎಂದು ಹೇಳಿದ್ದಾರೆ.

Continue Reading

ದೇಶ

NITI Aayog Meeting: ನೀತಿ ಆಯೋಗದ ಸಭೆಗೆ ಸಿದ್ದು ಸೇರಿ 10 ಸಿಎಂಗಳು ಗೈರು; ರಾಜ್ಯಗಳಿಗೆ ನಷ್ಟವೇನು?

NITI Aayog Meeting: ಕೇಂದ್ರ ಸರ್ಕಾರದ ಮೇಲಿನ ಮುನಿಸು, ಆಕ್ರೋಶದಿಂದಾಗಿ ನೀತಿ ಆಯೋಗದ ಸಭೆಗೆ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ಆದರೆ, ಸಭೆಗೆ ಗೈರಾಗುವುದರಿಂದ ರಾಜ್ಯಗಳಿಗೇ ನಷ್ಟ ಎನ್ನಲಾಗುತ್ತಿದೆ.

VISTARANEWS.COM


on

Edited by

NITI Aayog Meeting Chaired By PM Narendra Modi
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನೀತಿ ಆಯೋಗದ ಎಂಟನೇ ಗವರ್ನಿಂಗ್‌ ಸಮಿತಿ ಸಭೆ (Governing Council Meeting) ನಡೆದಿದ್ದು, ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ. ಆದರೆ, ಕೇಂದ್ರ ಸರ್ಕಾರದ ವಿರುದ್ಧದ ಆಕ್ರೋಶ, ಮುನಿಸಿನಿಂದಾಗಿ 10 ರಾಜ್ಯಗಳ ಮುಖ್ಯಮಂತ್ರಿಗಳು ಸಭೆಗೆ ಗೈರಾಗಿದ್ದಾರೆ. ಆದರೆ, ಅಭಿವೃದ್ಧಿ ದೃಷ್ಟಿಯಿಂದ ಮಹತ್ವ ಪಡೆದಿರುವ ಸಭೆಗೆ ಸಿಎಂಗಳು ಗೈರಾಗಿರುವುದು ಆಯಾ ರಾಜ್ಯಗಳಿಗೇ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ.

ನೀತಿ ಆಯೋಗದ ಸಭೆಯಲ್ಲಿ ದೇಶದ ಅಭಿವೃದ್ಧಿಯ ದೃಷ್ಟಿಯಿಂದ 100 ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಲೆಫ್ಟಿನೆಂಟ್‌ ಗವರ್ನರ್‌ಗಳು, ಕೇಂದ್ರ ಸಚಿವರು ಸಭೆಯಲ್ಲಿ ಭಾಗವಹಿಸಿ ಅಭಿವೃದ್ಧಿ ವಿಚಾರಗಳನ್ನು ಚರ್ಚಿಸಲಾಗಿದೆ. ಎಂಎಸ್‌ಎಂಇ, ಮೂಲ ಸೌಕರ್ಯ, ಹೂಡಿಕೆ, ಮಹಿಳಾ ಸಬಲೀಕರಣ, ಆರೋಗ್ಯ, ಕೌಶಲಾಭಿವೃದ್ಧಿ ಸೇರಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಕೆಲವು ರಾಜ್ಯಗಳು ಕೂಡ ತಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿರಿಸಿವೆ. ಏಳಿಗೆ ದಿಸೆಯಲ್ಲಿಯೇ ಪ್ರಮುಖ ತೀರ್ಮಾನಗಳನ್ನೂ ತೆಗೆದುಕೊಳ್ಳಲಾಗಿದೆ. ಈಗ ಗೈರಾದ ರಾಜ್ಯಗಳಿಗೆ ಈ ವಿಷಯಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ತೀರ್ಮಾನಗಳ ಜಾರಿಗೆ ಕಷ್ಟವಾಗಲಿದೆ ಎನ್ನಲಾಗುತ್ತಿದೆ.

ಗೈರಾದ ಸಿಎಂಗಳು ಯಾರು? ಏಕೆ?

ದೆಹಲಿಯಲ್ಲಿ ಆಡಳಿತ ಸೇವೆಗಳ ಮೇಲಿನ ನಿಯಂತ್ರಣ ಕುರಿತು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸಭೆಗೆ ಹಾಜರಾಗಿಲ್ಲ. ಇನ್ನು, ಕೇಂದ್ರದಿಂದ ಅನುದಾನ ಸಿಗುತ್ತಿಲ್ಲ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಕೂಡ ಗೈರಾಗಿದ್ದಾರೆ. ಕರ್ನಾಟಕದಲ್ಲಿ ಸಚಿವರ ಪ್ರಮಾಣವಚನ, ಖಾತೆ ಹಂಚಿಕೆ ಹಿನ್ನೆಲೆಯಲ್ಲಿ ನೂತನ ಸಿಎಂ ಸಿದ್ದರಾಮಯ್ಯ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.

ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌, ಬೇರೆ ಕಾರ್ಯಕ್ರಮದಿಂದಾಗಿ ಒಡಿಶಾ ಸಿಎಂ ನವೀನ್‌ ಪಾಟ್ನಾಯಕ್‌, ಕೇಂದ್ರದ ಮೇಲಿನ ಅಸಮಾಧಾನದಿಂದಾಗಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಬಿಹಾರದ ನಿತೀಶ್‌ ಕುಮಾರ್‌, ತೆಲಂಗಾಣದ ಕೆ.ಚಂದ್ರಶೇಖರ ರಾವ್‌ ಹಾಗೂ ಯಾವುದೇ ಕಾರಣ ನೀಡದೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಸಭೆಯಲ್ಲಿ ಪಾಲ್ಗೊಂಡಿಲ್ಲ.

ಇದನ್ನೂ ಓದಿ: NITI Aayog Meeting:‌ ಕೇಂದ್ರಕ್ಕೆ ಬಾಯ್ಕಾಟ್‌ ಬಿಸಿ; ದೀದಿ ಬಳಿಕ ನೀತಿ ಆಯೋಗದ ಸಭೆ ಬಹಿಷ್ಕರಿಸಿದ ಕೇಜ್ರಿವಾಲ್

Continue Reading

ದೇಶ

NIA Raid: ಮಧ್ಯಪ್ರದೇಶದಲ್ಲಿ ಐಸಿಸ್‌ ಉಗ್ರರ ಜಾಲ ಬಯಲು; ಮಸೀದಿಗಳಲ್ಲೇ ಸಂಚು ರೂಪಿಸುತ್ತಿದ್ದ ಮೂವರ ಬಂಧನ

NIA Raid: ಮಧ್ಯಪ್ರದೇಶದ ಜಬಲ್ಪುರದ ಹಲವೆಡೆ ದಾಳಿ ನಡೆಸಿದ ಎನ್‌ಐಎ, ಮೂವರು ಮೂಲಭೂತವಾದಿಗಳನ್ನು ಬಂಧಿಸಿದೆ. ಇವರು ದೇಶದಲ್ಲಿ ಉಗ್ರರ ದಾಳಿಗೆ ನೆರವಾಗುವ ಜತೆಗೆ ಶಸ್ತ್ರಾಸ್ತ್ರ ಸಂಗ್ರಹಣೆ, ಯುವಕರ ನೇಮಕ ಸೇರಿ ಹಲವು ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಎನ್‌ಐಎ ತಿಳಿಸಿದೆ.

VISTARANEWS.COM


on

Edited by

NIA Raids In Jabalpur
Koo

ಭೋಪಾಲ್‌: ಮಧ್ಯಪ್ರದೇಶದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (NIC) ಜಂಟಿ ಕಾರ್ಯಾಚರಣೆ ನಡೆಸಿ ಐಸಿಸ್‌ ಉಗ್ರರ ಜಾಲವೊಂದನ್ನು (NIA Raid) ಭೇದಿಸಿದೆ. ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಮಧ್ಯಪ್ರದೇಶ ಉಗ್ರ ನಿಗ್ರಹ ದಳದ (ATS) ಜತೆಗೂಡಿ ಎನ್‌ಐಎ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಜಬಲ್ಪುರದಲ್ಲಿ ಮೂವರನ್ನು ಬಂಧಿಸಿದೆ. ಮೂವರೂ ಭಾರತದಲ್ಲಿ ಐಸಿಸ್‌ ದಾಳಿಗೆ ಪಿತೂರಿ ನಡೆಸುತ್ತಿದ್ದರು ಎಂದು ಎನ್‌ಐಎ ತಿಳಿಸಿದೆ.

ಮೇ 26 ಹಾಗೂ 27ರಂದು ಎನ್‌ಐಎ ಜಬಲ್ಪುರದ 13 ಕಡೆ ದಾಳಿ ನಡೆಸಿದ್ದು, ಇದೇ ವೇಳೆ ಸೈಯದ್‌ ಮಮೂರ್‌ ಅಲಿ, ಮೊಹಮ್ಮದ್‌ ಆದಿಲ್‌ ಖಾನ್‌ ಹಾಗೂ ಮೊಹಮ್ಮದ್‌ ಶಾಹಿದ್‌ ಎಂಬುವರನ್ನು ಬಂಧಿಸಲಾಗಿದೆ. ಇವರ ಬಳಿ ಶಸ್ತ್ರಾಸ್ತ್ರ, ದಾಖಲೆ ಹಾಗೂ ಡಿಜಿಟಲ್‌ ಡಿವೈಸ್‌ಗಳು ಸಿಕ್ಕಿವೆ. ಶೀಘ್ರದಲ್ಲೇ ಇವರನ್ನು ಎನ್‌ಐಎ ವಿಶೇಷ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಐಸಿಸ್‌ ಪರ ಚಟುವಟಿಕೆಗಳಲ್ಲಿ ತೊಡಗಿದ್ದ ಮೊಹಮ್ಮದ್‌ ಆದಿಲ್‌ ಖಾನ್‌ ಮೇಲೆ ಎನ್‌ಐಎ ಕಳೆದ ವರ್ಷದಿಂದಲೂ ನಿಗಾ ವಹಿಸಿತ್ತು. ಹಾಗೆಯೇ, ಆತನ ವಿರುದ್ಧ ಮೇ 24ರಂದು ಪ್ರಕರಣ ದಾಖಲಿಸಲಾಗಿತ್ತು. ಸಾಮಾಜಿಕ ಜಾಲತಾಣಗಳ ಮೂಲಕ ಐಸಿಸ್‌ ವಿಚಾರಧಾರೆಗಳನ್ನು ಹರಡುವುದು, ಯುವಕರನ್ನು ಉಗ್ರ ಸಂಘಟನೆಗೆ ಸೆಳೆಯುವುದು ಸೇರಿ ಹಲವು ಚಟುವಟಿಕೆಗಳಲ್ಲಿ ನಿರತನಾಗಿದ್ದ. ಇವನಿಗೆ ಸಹಚರರು ಕೂಡ ಇದ್ದರು ಎಂದು ತಿಳಿದುಬಂದಿದೆ. ಅದರಂತೆ, ಎನ್‌ಐಎ ದಾಳಿ ನಡೆಸಿ ಬಂಧಿಸಿದೆ.

ಭಾರತದಲ್ಲಿ ಐಸಿಸ್‌ ಉಗ್ರರ ದಾಳಿಗೆ ಸಂಚು ರೂಪಿಸಲು ಬಂಧಿತರು ನೆರವು ನೀಡುತ್ತಿದ್ದರು. ಇದಕ್ಕಾಗಿ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದರು. ಹಾಗೆಯೇ, ಮಸೀದಿಗಳು ಹಾಗೂ ಮನೆಗಳಲ್ಲಿ ಸಾಲು ಸಾಲು ಸಭೆ ನಡೆಸುತ್ತಿದ್ದರು. ಅದರಲ್ಲೂ, ಬಂಧಿತ ಮೂವರು ಮೂಲಭೂತವಾದವನ್ನು ಪಸರಿಸಲು ಪಿತೂರಿ ನಡೆಸುತ್ತಿದ್ದರು. ಯುವಕರನ್ನು ಉಗ್ರ ಚಟುವಟಿಕೆಗಳತ್ತ ಸೆಳೆಯುವ ಜತೆಗೆ ಶಸ್ತ್ರಾಸ್ತ್ರಗಳ ಸಂಗ್ರಹದಲ್ಲೂ ಇವರು ತೊಡಗಿದ್ದರು ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಕಾರಾಗೃಹದ ಮೇಲೆ ದಾಳಿ ಮಾಡಿದ್ದ ಪೊಲೀಸ್​ ವೇಷಧಾರಿ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ ಎನ್​ಐಎ

ಮೂವರಲ್ಲಿ ಸೈಯದ್‌ ಮಮೂರ್‌ ಅಲಿಯು ಸ್ಥಳೀಯವಾಗಿ ಫಿಸ್‌ಬಿಲ್ಲಾಹ್‌ ಎಂಬ ತಂಡವನ್ನು ಕಟ್ಟಿದ್ದ. ಹಾಗೆಯೇ, ವಾಟ್ಸ್‌ಆ್ಯಪ್ ಗ್ರೂಪ್‌ ಮೂಲಕವೂ ಮೂಲಭೂತವಾದ ಹರಡುತ್ತಿದ್ದ. ಆದಿಲ್‌ನು ಸಮಾನ ಮನಸ್ಕ ಯುವಕರನ್ನು ಒಗ್ಗೂಡಿಸುತ್ತಿದ್ದ. ಅಕ್ರಮವಾಗಿ ಶಸ್ತ್ರಾಸ್ತ್ರ ಸಾಗಿಸುವವರ ಜತೆಗೂ ಇವರು ಸಂಪರ್ಕ ಹೊಂದಿದ್ದರು ಎಂದು ಎನ್‌ಐಎ ಮಾಹಿತಿ ನೀಡಿದೆ.

Continue Reading

ಕ್ರೈಂ

ಬೇಸಿಗೆ ರಜಾ ಇದ್ದರೂ ಶಾಲೆಗೆ ಹೋಗಿ ನಿಗೂಢವಾಗಿ ಮೃತಪಟ್ಟ 10ನೇ ತರಗತಿ ವಿದ್ಯಾರ್ಥಿನಿ

ಬಾಲಕಿಯ ತಲೆ ಮತ್ತು ಪಾದಗಳ ಮೇಲೆ ಗಾಯಗಳು ಗುರುತು ಇದೆ. ಮುಖ ಊದಿಕೊಂಡಿತ್ತು. ಕಣ್ಣ ಬಳಿಯೂ ಗಾಯವಾಗಿತ್ತು. ಹುಡುಗಿ ಮೇಲೆ ಹಲ್ಲೆಯಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಎಂದು ಮೃತ ಬಾಲಕಿಯ ಪಾಲಕರು, ಸಂಬಂಧಿಕರು ಪ್ರತಿಪಾದಿಸಿದ್ದಾರೆ.

VISTARANEWS.COM


on

Edited by

Class 10 student Girl Died After Falling From school terrace In Uttar Pradesh
Koo

ಬೇಸಿಗೆ ರಜಾ ಇದ್ದರೂ ಶಾಲೆಗೆ ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿ, ಟೆರೇಸ್​ ಮೇಲಿಂದ ಬಿದ್ದು ಮೃತಪಟ್ಟಿದ್ದಾಳೆ. ಆಕೆ ಶಾಲೆಯ ಟೆರೇಸ್​ ಮೇಲಿಂದ ಕೆಳಗೆ ಬಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ಈಕೆಯ ಸಾವು ನಿಗೂಢವೆನ್ನಿಸಿದೆ. ಘಟನೆ ನಡೆದಿದ್ದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಸನ್​ಬೀಮ್​ ಎಂಬ ಶಾಲೆಯಲ್ಲಿ. ಮೇ 26ರ ಮುಂಜಾನೆ 8.45ರ ಹೊತ್ತಿಗೆ.

ಬಾಲಕಿಯ ಸಾವು ಈಗ ವಿವಾದಕ್ಕೂ ಕಾರಣವಾಗಿದೆ. ಶಾಲೆಗೆ ಬೇಸಿಗೆ ರಜಾ ಇದ್ದರೂ ನನ್ನ ಮಗಳನ್ನು ಶಾಲೆಗೆ ಕರೆಸಲಾಗಿತ್ತು ಎಂದು ಪಾಲಕರು ಆರೋಪಿಸಿದ್ದಾರೆ. ಶುಕ್ರವಾರ ಮುಂಜಾನೆಯೇ ಮಗಳು ಶಾಲೆಗೆ ಹೋಗಿದ್ದಳು. ಆದರೆ ಬೆಳಗ್ಗೆ 10 ಗಂಟೆ ಹೊತ್ತಿಗೆ ನಮಗೆ ಶಾಲೆಯಿಂದ ಕರೆಬಂತು. ನಿಮ್ಮ ಮಗಳು ಉಯ್ಯಾಲೆಯಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಅವರು ನಮಗೆ ಹೇಳಿದರು. ಹಾಗೇ, ಆಸ್ಪತ್ರೆಗೆ ದಾಖಲಿಸಿದ್ದಾಗಿಯೂ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ. ಇಷ್ಟೆಲ್ಲ ಆದ ಮೇಲೆ ಶಾಲೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಬಾಲಕಿಯ ಪಾಲಕರು ತಿಳಿಸಿದ್ದಾರೆ.

ಇದನ್ನೂ ಓದಿ: Cooker Blast:‌ ರಾಮನಗರದಲ್ಲಿ ಎಲೆಕ್ಷನ್‌ ಪ್ರಚಾರದ ವೇಳೆ ಕೊಟ್ಟಿದ್ದ ಕುಕ್ಕರ್‌ ಸ್ಫೋಟ; ಬಾಲಕಿಗೆ ಗಂಭೀರ ಗಾಯ

ಬಾಲಕಿ ಟೆರೇಸ್​​ನಿಂದ ಬಿದ್ದಿದ್ದು ಸಿಸಿಟಿವಿಯಲ್ಲಿ ಕಾಣಿಸುತ್ತದೆ. ಇದರಲ್ಲೇನೋ ಸಂಚು ಇದೆ. ಈ ಸಾವು ನಿಗೂಢವಾಗಿದೆ. ಬಾಲಕಿಯ ತಲೆ ಮತ್ತು ಪಾದಗಳ ಮೇಲೆ ಗಾಯಗಳು ಗುರುತು ಇದೆ. ಮುಖ ಊದಿಕೊಂಡಿತ್ತು. ಕಣ್ಣ ಬಳಿಯೂ ಗಾಯವಾಗಿತ್ತು. ಹುಡುಗಿ ಮೇಲೆ ಹಲ್ಲೆಯಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಎಂದು ಮೃತ ಬಾಲಕಿಯ ಪಾಲಕರು, ಸಂಬಂಧಿಕರು ಪ್ರತಿಪಾದಿಸಿದ್ದಾರೆ. ಹುಡುಗಿಯ ತಂದೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಶಾಲೆಯಲ್ಲಿ ಉಯ್ಯಾಲೆ ಇರುವುದು ನೆಲದಿಂದ ಒಂದು-ಒಂದೂವರೆ ಅಡಿ ಎತ್ತರದಲ್ಲಿ. ಆಕೆ ಅಲ್ಲಿಂದ ಬಿದ್ದರೆ ಸಾಯಲು ಸಾಧ್ಯವಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ನನ್ನ ಮಗಳ ಸಾವಿನಲ್ಲಿ ಶಾಲೆಯ ಶಿಕ್ಷಕ ಅಭಿಷೇಕ್​ ಕನೋಜಿಯಾ ಮತ್ತು ಆಡಳಿತ ವಿಭಾಗದ ಅಧಿಕಾರಿ ಬ್ರಿಜೇಶ್ ಯಾದವ್​ ಕೈವಾಡವಿದೆ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಶಾಲೆಯ ಪ್ರಾಂಶುಪಾಲರು ಈ ಬಗ್ಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Continue Reading
Advertisement
new Simple One Scooter
ಆಟೋಮೊಬೈಲ್5 mins ago

Simple One: ಒಂದು ಚಾರ್ಜ್​​ಗೆ 212 ಕಿ.ಮೀ ಓಡುವ ಸ್ಕೂಟರ್​ ಬಿಡುಗಡೆ; ಇದರ ಬೆಲೆ ಎಷ್ಟು ಗೊತ್ತೇ?

upsc prelims 2023 IAS prelims 2023
ಉದ್ಯೋಗ7 mins ago

UPSC Prelims 2023: ನಾಳೆ ಯುಪಿಎಸ್‌ಸಿ ಪ್ರಿಲಿಮ್ಸ್‌; ಈ ಬಾರಿಯೂ ಕನ್ನಡದಲ್ಲಿ ನಡೆಯೋಲ್ಲ ಪರೀಕ್ಷೆ

soudi
ವೈರಲ್ ನ್ಯೂಸ್11 mins ago

Viral News : ನಿತ್ಯ ಶಾಪಿಂಗ್‌ಗೆಂದೇ 70 ಲಕ್ಷ ರೂ. ಖರ್ಚು ಮಾಡುತ್ತಾಳಂತೆ ಈ ಮಹಿಳೆ!

TB Jayachandra speaking with media
ಕರ್ನಾಟಕ13 mins ago

Karnataka Cabinet: ರಾಜ್ಯ ಕಾಂಗ್ರೆಸ್‌ ನಾಯಕರ ಜತೆಗೆ ಮಾತುಕತೆ ಕಟ್‌: ಸದನದಲ್ಲಿ ನೋಡ್ಕೊತೀನಿ ಎಂದ ಜಯಚಂದ್ರ

Pond near kolar
ಕರ್ನಾಟಕ18 mins ago

Drowned in Pond: ಸೆಕೆ ತಾಳಲಾರದೆ ಕೆರೆಯಲ್ಲಿ ಈಜಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಸಾವು

Manoj Bajpayee starrer Sirf Ek Bandaa Kaafi
ಒಟಿಟಿ21 mins ago

Manoj Bajpayee: ಹೊಸ ದಾಖಲೆ ಬರೆದ ಮನೋಜ್​ ಬಾಜಪೇಯಿ ಸಿನಿಮಾ!

Shivamogga MP B Y Raghavendra meeting
ಕರ್ನಾಟಕ35 mins ago

Shivamogga News: ಶಿವಮೊಗ್ಗ ಕ್ಷೇತ್ರಕ್ಕೆ 4ಜಿ ಆಧಾರಿತ 225 ಮೊಬೈಲ್ ಟವರ್ ಸ್ಥಾಪನೆಗೆ ಅನುಮತಿ: ಸಂಸದ ಬಿ.ವೈ. ರಾಘವೇಂದ್ರ

bus stand in dilapidated condition at challakere taluk
ಕರ್ನಾಟಕ39 mins ago

Challakere News: ಶಿಥಿಲಾವಸ್ಥೆಯಲ್ಲಿ ದೊಡ್ಡೇರಿ ಗ್ರಾಮದ ಬಸ್ ತಂಗುದಾಣ; ದುರಸ್ತಿಗೆ ಬೇಕಿದೆ ಅನುದಾನ

ಬಾಲಿವುಡ್39 mins ago

Aahana Kumra: ಐಫಾ ಕಾರ್ಯಕ್ರಮದಲ್ಲಿ ನಟಿ ಅಹಾನಾ ಕುಮ್ರಾಳ ಡ್ರೆಸ್‌ ಜಾರುವುದರಲ್ಲಿತ್ತು, ಆಗ? ವಿಡಿಯೊ ವೈರಲ್​

Snake Found In Mid Day Meal
ವೈರಲ್ ನ್ಯೂಸ್51 mins ago

Viral News : ಸರ್ಕಾರಿ ಶಾಲೆಯ ಬಿಸಿಯೂಟದಲ್ಲಿ ಸಿಕ್ಕಿತು ಹಾವು! ಹಲವು ಮಕ್ಕಳು ಅಸ್ವಸ್ಥ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ14 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ3 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ5 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್7 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Laxmi Hebbalkar oath taking as a minister
ಕರ್ನಾಟಕ2 hours ago

Laxmi Hebbalkar: ಸಚಿವೆಯಾಗುವುದರ ಜತೆಗೆ ಅಜ್ಜಿಯೂ ಆದ ಲಕ್ಷ್ಮಿ ಹೆಬ್ಬಾಳ್ಕರ್‌; ಒಂದೇ ದಿನ 2 ಸಿಹಿ ಸುದ್ದಿ!

HD Kumaraswamy in JDS Meeting
ಕರ್ನಾಟಕ23 hours ago

H.D. Kumaraswamy: ಜೆಡಿಎಸ್‌ ವಿಸರ್ಜನೆ ಹೇಳಿಕೆಗೆ ಬದ್ಧ ಎಂದ ಎಚ್‌.ಡಿ. ಕುಮಾರಸ್ವಾಮಿ!

induction stoves
ಕರ್ನಾಟಕ1 day ago

Congress Guarantee: ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನ; ಇಂಡಕ್ಷನ್‌ ಸ್ಟವ್‌ಗೆ ಹೆಚ್ಚಿದ ಬೇಡಿಕೆ

Viral Video, Teacher and Principal are quarrel in front of School children
ದೇಶ1 day ago

Viral Video: ಶಾಲಾ ಮಕ್ಕಳ ಎದುರೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಟೀಚರ್! ಇಲ್ಲಿದೆ ನೋಡಿ ವಿಡಿಯೋ

Horoscope Today
ಪ್ರಮುಖ ಸುದ್ದಿ2 days ago

Horoscope Today : ಮಕರ ರಾಶಿಯವರಿಗೆ ಕೌಟುಂಬಿಕವಾಗಿ ಶುಭ ಫಲ; ಇಂದಿನ ಭವಿಷ್ಯ ಇಲ್ಲಿದೆ

HD Kumaraswamy said he will take up the issue of congress guarantee
ಕರ್ನಾಟಕ2 days ago

Congress Guarantee: ನಾವು ಕಡುಬು ತಿನ್ನೋಕ ರಾಜಕಾರಣ ಮಾಡ್ತಿರೋದು?: ಎಚ್‌.ಡಿ. ಕುಮಾರಸ್ವಾಮಿ ಆಕ್ರೋಶ

Beware if the Congress Guarantee card is conditioned and Pratap Simha says he will fight from June 1
ಕರ್ನಾಟಕ2 days ago

Congress Guarantee: ಗ್ಯಾರಂಟಿ ಕಾರ್ಡ್‌ಗೆ ಕಂಡೀಷನ್ ಹಾಕಿದ್ರೆ ಹುಷಾರ್‌; ಜೂನ್‌ 1ರಿಂದ ಹೋರಾಟವೆಂದ ಪ್ರತಾಪ್‌ ಸಿಂಹ

Electricity bill man hit bescom staff
ಕರ್ನಾಟಕ3 days ago

Electricity Bill: ಕರೆಂಟ್‌ ಬಿಲ್‌ ಕಿರಿಕ್‌; ಬಾಕಿ ಬಿಲ್‌ ಕಟ್ಟು ಎಂದಿದ್ದಕ್ಕೆ ಚಪ್ಪಲಿಯಿಂದಲೇ ಹೊಡೆದವ ಅರೆಸ್ಟ್‌

karnataka politics it takes time to implement guarantee schemes says minister priyank kharge
ಕರ್ನಾಟಕ3 days ago

Saffronisation issue : ಬಿಜೆಪಿಯವರಿಗೆ ತೊಂದರೆ ಇದ್ರೆ ಪಾಕಿಸ್ತಾನಕ್ಕೆ ಹೋಗಲಿ; ಪ್ರಿಯಾಂಕ್‌ ಖರ್ಗೆ ವಿವಾದಿತ ಹೇಳಿಕೆ

horoscope today
ಪ್ರಮುಖ ಸುದ್ದಿ4 days ago

Horoscope Today : ಪಂಚಮಿಯ ದಿನ ಪಂಚ ರಾಶಿಯವರಿಗೆ ಶುಭ ಫಲ; ಇಲ್ಲಿದೆ ಇಂದಿನ ದಿನ ಭವಿಷ್ಯ

ಟ್ರೆಂಡಿಂಗ್‌

error: Content is protected !!