Site icon Vistara News

Wipro layoffs | ವಿಪ್ರೋದಿಂದ 500 ಹೊಸ ಉದ್ಯೋಗಿಗಳ ವಜಾ

Wipro announces salary hike of financial year 2022

ನವ ದೆಹಲಿ: ಭಾರತದ ಅಗ್ರ ಐದು ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೋ, ಸುಮಾರು 500 ಹೊಸ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಆಂತರಿಕ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ನೀಡಿದ್ದಕ್ಕಾಗಿ ಹೀಗೆ ಮಾಡಲಾಗಿದೆ ಎಂದಿದೆ.

ವಿಪ್ರೋದಲ್ಲಿ ನಾವು ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ನಾವು ಬಯಸುತ್ತೇವೆ. ನಾವು ಸಾಧಿಸಬೇಕಾದ ಗುರಿಯ ಮಾನದಂಡಗಳಿಗೆ ಅನುಗುಣವಾಗಿ, ಪ್ರತಿಯೊಬ್ಬ ಹೊಸ ಉದ್ಯೋಗಿಯೂ ತಮ್ಮ ಕೆಲಸದ ಕ್ಷೇತ್ರದಲ್ಲಿ ನಿರ್ದಿಷ್ಟ ಮಟ್ಟದ ಪ್ರಾವೀಣ್ಯ ಹೊಂದಿರಬೇಕೆಂದು ನಾವು ನಿರೀಕ್ಷಿಸುತ್ತೇವೆ. ಸಂಸ್ಥೆಯ ವ್ಯವಹಾರ ಉದ್ದೇಶಗಳು ಮತ್ತು ನಮ್ಮ ಗ್ರಾಹಕರ ಅಗತ್ಯಗಳೊಂದಿಗೆ ಉದ್ಯೋಗಿಗಳಿ ಮಿಳಿತಗೊಳ್ಳಲು ಮೌಲ್ಯಮಾಪನ ಪ್ರಕ್ರಿಯೆ ನಮ್ಮಲ್ಲಿದೆ. ಈ ವ್ಯವಸ್ಥಿತ ಮತ್ತು ಸಮಗ್ರ ಕಾರ್ಯಕ್ಷಮತೆಯ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಮಾರ್ಗದರ್ಶನ, ಮರುತರಬೇತಿಗಳಿದ್ದು, ಕೆಲವು ಸಂದರ್ಭಗಳಲ್ಲಿ ಕಂಪನಿಯಿಂದ ಕೆಲವು ಉದ್ಯೋಗಿಗಳನ್ನು ತೆಗೆಯಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಸುಮಾರು 800 ಮಂದಿಯನ್ನು ತೆಗೆಯಲಾಗಿದೆ ಎಂದು ಕೆಲವು ಮೂಲಗಳು ಹೇಳಿದ್ದರೂ, ವಜಾಗೊಳಿಸಿದ ಉದ್ಯೋಗಿಗಳ ಸಂಖ್ಯೆ 500ಕ್ಕಿಂತ ಕಡಿಮೆ ಎಂದು ಸಂಸ್ಥೆ ಹೇಳಿದೆ. ವಜಾಗೊಳಿಸಲಾದ ಉದ್ಯೋಗಿಗಳಿಗೆ ಸಂಸ್ಥೆ ನೀಡಿದ ಪತ್ರದಲ್ಲಿ, ʼʼನಿಮ್ಮ ತರಬೇತಿಗೆ ನಾವು ವೆಚ್ಚ ಮಾಡಿದ ಹಣವಾದ 75,000 ರೂ.ಗಳನ್ನು ನೀವು ಪಾವತಿಸಬೇಕಿತ್ತು. ಆದರೆ ನಾವು ಅದನ್ನು ರದ್ದು ಮಾಡುತ್ತಿದ್ದೇವೆʼʼ ಎಂದಿದೆ.

ಇದನ್ನೂ ಓದಿ | Microsoft Layoffs | 21 ವರ್ಷ ದುಡಿದ ಭಾರತ ಮೂಲದ ಉದ್ಯೋಗಿಯನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್‌, ಉದ್ಯೋಗಿ ಪೋಸ್ಟ್ ವೈರಲ್

ಈ ತಿಂಗಳ ಆರಂಭದಲ್ಲಿ ವಿಪ್ರೋ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿತ್ತು. ವಾರ್ಷಿಕ ಲಾಭದಲ್ಲಿ ಈ ಬಾರಿ ಕಂಪನಿಗೆ 2.8% ಹೆಚ್ಚಳವಾಗಿದೆ. ಐಟಿ ಸೇವೆಗಳ ಆದಾಯದಲ್ಲಿ 12%ದಷ್ಟು ಹೆಚ್ಚಳವನ್ನು ಗಳಿಸಿದೆ.

ಇತ್ತೀಚೆಗೆ ಹಲವು ಐಟಿ ಕಂಪನಿಗಳು ಸಾಮೂಹಿಕ ಉದ್ಯೋಗ ಕಡಿತ ಆರಂಭಿಸಿವೆ. 2023ರಲ್ಲಿ ಭಾರಿ ಆರ್ಥಿಕ ಹಿನ್ನಡೆ ಉಂಟಾಗಲಿದೆ ಎಂದು ತಜ್ಞರು ಭವಿಷ್ಯ ಹೇಳಿದ್ದು, ಮೈಕ್ರೋಸಾಫ್ಟ್‌ ಮುಂತಾದ ಕಂಪನಿಗಳು ಸಾಮೂಹಿಕ ಉದ್ಯೀಗ ಕಡಿತಕ್ಕೆ ಮುಂದಾಗಿವೆ.

ಇದನ್ನೂ ಓದಿ | Tech layoffs | ‌ಗ್ರೇಟ್‌ ರಿಸೆಶನ್ ಮಟ್ಟವನ್ನೂ ಮೀರಿದ ಐಟಿ ಉದ್ಯೋಗ ಕಡಿತ, 2023ರಲ್ಲಿ ಮತ್ತಷ್ಟು ಜಾಬ್‌ ಕಟ್?

Exit mobile version