Site icon Vistara News

ಮಹಿಳೆ ಯಾರದೇ ಆಸ್ತಿಯಲ್ಲ: ಸುಪ್ರೀಂ ಕೋರ್ಟ್‌

Supreme Court On Article 370

Article 370: Constitution doesn’t restrict President from reorganising a state

ನವ ದೆಹಲಿ: ಮಹಿಳೆ ಯಾರದೇ ಅಸ್ತಿಯಲ್ಲ. ಆಕೆಗೆ ಅವಳದೇ ಆದ ಅಸ್ತಿತ್ವವಿದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಒತ್ತಿಹೇಳಿದೆ. ರಾಜ್ಯದಾಚೆಯ ವ್ಯಕ್ತಿಗಳನ್ನು ಮದುವೆಯಾದ ಸಿಕ್ಕಿಂ ಮಹಿಳೆಯರನ್ನು ತೆರಿಗೆ ವಿನಾಯಿತಿಯಿಂದ ಹೊರಗಿಡುವ ಆದಾಯ ತೆರಿಗೆ ಕಾಯಿದೆ-1961ರ ತಾರತಮ್ಯಪೂರಿತ ಸೆಕ್ಷನ್‌ ಅನ್ನು ಅದು ತಳ್ಳಿಹಾಕಿದೆ.

1961ರ ಕಾಯಿದೆಯ ಪ್ರಕಾರ 2008 ಏಪ್ರಿಲ್‌ ಬಳಿಕ ರಾಜ್ಯದ ಹೊರಗಿನವರನ್ನು ಮದುವೆಯಾದ ಮಹಿಳೆಯರಿಗೆ ಆದಾಯ ತೆರಿಗೆ ಸೆಕ್ಷನ್‌ 10(26AAA) ಪ್ರಕಾರ ವಿನಾಯಿತಿಯಿಲ್ಲ. 1975 ಏಪ್ರಿಲ್‌ 26ರ ಬಳಿಕ ಸಿಕ್ಕಿಂಗೆ ಬಂದು ನೆಲೆಸಿದ ಪುರುಷರಿಗೂ ಈ ವಿನಾಯಿತಿ ಇರಲಿಲ್ಲ. ಇದು ಭಾರತ ಒಕ್ಕೂಟದಲ್ಲಿ ಸಿಕ್ಕಿಂ ವಿಲೀನಗೊಂಡ ಅವಧಿಯಾಗಿದೆ. ಈ ವಿನಾಯಿತಿಯನ್ನು ವಿಸ್ತರಿಸುವ ಮೂಲಕ ರಾಜ್ಯದ ಸುಮಾರು ಶೇ.95 ಮಂದಿಗೆ ಇದನ್ನು ವಿಸ್ತರಿಸಿದಂತಾಗಿದೆ. ಇವರಲ್ಲಿ ಭುತಿಯಾ ಲೆಪ್ಚಾಗಳು, ಶೆರ್ಪಾಗಳು, ಮತ್ತು ನೇಪಾಳೀಯರು ಇದ್ದಾರೆ. ಸುಮಾರು 500 ಕುಟುಂಬಗಳು ಇಂಥ ಪುರಾತನ ವಲಸಿಗರಾಗಿದ್ದು, ಇದಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹೋಗಿದ್ದರು.‌

ಇದನ್ನೂ ಓದಿ | Isha Foundation | ನಂದಿ ಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್‌ ಅನುಮತಿ

ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡಿದ್ದ ನ್ಯಾ.ಎಂ.ಆರ್‌ ಶಾ ಮತ್ತು ನ್ಯಾ.ನಾಗರತ್ನ ಅವರಿದ್ದ ನ್ಯಾಯಪೀಠ, ಆದಾಯ ತೆರಿಗೆಯ ಈ ವಿಭಾಗವು ತಾರತಮ್ಯಪೂರಿತ ಮತ್ತು ಅಸಾಂವಿಧಾನಿಕವಾಗಿದೆ ಎಂದು ಅಭಿಪ್ರಾಯಪಟ್ಟಿತು. 1965ರ ಬಳಿಕ ಸಿಕ್ಕಿಮೇತರ ಪುರುಷರನ್ನು ಮದುವೆಯಾಗಿರುವ ಮಹಿಳೆಯರಿಗೆ ಮಾಡಿರುವ ಈ ತಾರತಮ್ಯ ಲಿಂಗತ್ವ ಆಧಾರಿತವಾಗಿದೆ. ಇದೇ ಅನ್ವಯಿಸುವಿಕೆ ಪುರುಷರಿಗೆ ಆಗಿಲ್ಲ. ಇದು ಸಂವಿಧಾನದ ಸಮಾನತೆಯ ಹಕ್ಕಿನ ವಿರುದ್ಧವಾಗಿದೆ ಎಂದು ಹೇಳಿತು.

ಆದಾಯ ತೆರಿಗೆ ಸೆಕ್ಷನ್‌ 10(26AAA) ಪ್ರಕಾರ ಸಿಕ್ಕಿಂನ ಶೇ.94 ಮಂದಿ ಈಗಾಗಲೇ ವಿನಾಯಿತಿ ಪಡೆದಿದ್ದಾರೆ. 2008ರಲ್ಲಿ ಈ ವಿನಾಯಿತಿ ಅಳವಡಿಸಲಾಗಿತ್ತು.

ಇದನ್ನೂ ಓದಿ | Hate Speech Row | ಸಮಾಜ ವಿಭಜಕ ಟಿವಿ ಆ್ಯಂಕರ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ, ಸುಪ್ರೀಂ ಕೋರ್ಟ್‌ ಸೂಚನೆ

Exit mobile version