ಭಾರತದಲ್ಲಿ ಸಂಪತ್ತು ಬೆಳೆಯುವುದಕ್ಕಿಂತಲೂ ವೇಗವಾಗಿ ಜನಸಂಖ್ಯೆ ಬೇಡವೆಂದರೂ ಬೆಳೆಯುತ್ತಾ ಹೋಗುತ್ತಿದೆ. ಹೆಚ್ಚೇನಿಲ್ಲ, ಮುಂದಿನ ವರ್ಷವೇ (2023) ನಾವು ಜನಸಂಖ್ಯೆಯ ವಿಷಯದಲ್ಲಿ ಚೀನಾ ದೇಶವನ್ನೂ ಹಿಂದಿಕ್ಕಲಿದ್ದೇವೆ. ಈ ವರ್ಷ ಭಾರತದ ಅಂದಾಜು ಜನಸಂಖ್ಯೆ 141.2 ಕೋಟಿ ಆಗಿದ್ದು, ಚೀನಾದಲ್ಲಿ ಅದು 142.6 ಕೋಟಿ ಇದೆ.
ಇದನ್ನು ಹೇಳಿರುವುದು ವಿಶ್ವಸಂಸ್ಥೆ. ಇಂದು ವಿಶ್ವ ಜನಸಂಖ್ಯಾ ದಿನ (ಜುಲೈ 11) ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಒಂದು ವರದಿಯಲ್ಲಿ ಇದನ್ನು ತಿಳಿಸಿದೆ. 2022ರಲ್ಲಿ ಜಾಗತಿಕ ಜನಸಂಖ್ಯಾ ಸ್ಥಿತಿಗತಿ ಹೇಗಿದೆ ಎಂಬ ವರದಿಯನ್ನು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ, ಜನಸಂಖ್ಯಾ ವ್ಯವಹಾರಗಳ ವಿಭಾಗ ನೀಡಿದೆ.
ಆ ವರದಿಯ ಪ್ರಕಾರ ನೆನಪಿಟ್ಟುಕೊಳ್ಳಬೇಕಾದ ಕೆಲವು ಅಂಶಗಳು ಹೀಗಿವೆ:
೧. ಜಗತ್ತಿನ ಜನಸಂಖ್ಯೆ ಈ ವರ್ಷ ನವೆಂಬರ್‌ನಲ್ಲಿ 800 ಕೋಟಿ ಮುಟ್ಟಲಿದೆ. 2030ರ ವೇಳೆಗೆ 850 ಕೋಟಿ ಆಗಲಿದೆ ಹಾಗೂ 2050ರಲ್ಲಿ 970 ಕೋಟಿ ಮುಟ್ಟಲಿದೆ.
೨. 2080ರ ಹೊತ್ತಿಗೆ, ಎರಡನೇ ವಿಶ್ವಯುದ್ಧ ನಂತರದ ಅತೀ ನಿಧಾನಗತಿಯ ಜನಸಂಖ್ಯಾ ಬೆಳವಣಿಗೆಯನ್ನು ಜಗತ್ತು ಕಾಣಲಿದ್ದು, 1040 ಕೋಟಿ ಮುಟ್ಟುತ್ತದೆ. ಬಳಿಕ ಅದೇ ಹಂತದಲ್ಲಿ 2100ರವರೆಗೂ ಉಳಿಯಲಿದೆಯಂತೆ.
೩. 2023ರಲ್ಲಿ ಚೀನಾವನ್ನೂ ಹಿಂದಿಕ್ಕಿ ಭಾರತ ಜಗತ್ತಿನ ಅತೀ ಹೆಚ್ಚು ಜನಸಂಖ್ಯೆಯ ದೇಶ ಎನಿಸಲಿದೆ.
೪. 2050ರವರೆಗಿನ ಒಟ್ಟು ಜಾಗತಿಕ ಜನಸಂಖ್ಯಾ ಬೆಳವಣಿಗೆಯ ಅರ್ಧದಷ್ಟು ಎಂಟು ದೇಶಗಳಲ್ಲಿ ಕೇಂದ್ರೀಕರಿಸಿರುತ್ತದೆ- ಭಾರತವನ್ನೂ ಸೇರಿ.
೫. ಇತರ ಏಳು ದೇಶಗಳು ಕಾಂಗೋ, ಇಥಿಯೋಪಿಯಾ, ನೈಜೀರಿಯಾ, ಪಾಕಿಸ್ತಾನ, ಫಿಲಿಪ್ಪೀನ್ಸ್ ಮತ್ತು ತಾಂಜಾನಿಯಾ.
ಇದನ್ನೂ ಓದಿ: Viral video: ಇದೆಂಥಾ ಬಸ್ಸಾ? ಒಂದೇ ಆಟೊದಲ್ಲಿ 1,2,3,4,5,6,7.. 27 ಜನ! ಬಹುಶಃ ಇದು World record!
೬. ಈ ಶತಮಾನದ ಕೊನೆಗೆ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಉತ್ತರ ಆಫ್ರಿಕಾ, ಪೂರ್ವ ಏಷ್ಯಾ, ಓಶಿಯಾನಿಯಾಗಳ ಜನಸಂಖ್ಯೆ ನಿಧಾನಗತಿಯಲ್ಲಿ, ಧನಾತ್ಮಕವಾಗಿ ವೃದ್ಧಿಸುತ್ತದೆ.
೭. 2100ರ ಮೊದಲು ಪೂರ್ವ, ಆಗ್ನೇಯ, ಮಧ್ಯ ಮತ್ತು ದಕ್ಷಿಣ ಏಷ್ಯಾ, ಲ್ಯಾಟಿನ್ ಅಮೇರಿಕಾ, ಕೆರಿಬಿಯನ್ ದ್ವೀಪ, ಯುರೋಪ್, ಉತ್ತರ ಅಮೆರಿಕ ತಮ್ಮ ಜನಸಂಖ್ಯೆಯ ಉತ್ತುಂಗವನ್ನು ತಲುಪಿ ಇಳಿಯಲು ಆರಂಭವಾಗುತ್ತದೆ.
೮. 2010-2021ರಿಂದ 10 ಲಕ್ಷಕ್ಕೂ ಅಧಿಕ ಮಂದಿ ದೇಶದಿಂದ ಪ್ರತಿವರ್ಷ ವಲಸೆ ಹೋಗುವ 10 ದೇಶಗಳಲ್ಲಿ ಭಾರತವೂ ಸೇರಿದೆ. ವಲಸಿಗರ ಅತಿ ಹೆಚ್ಚು ಹೊರಹರಿವು ಪಾಕಿಸ್ತಾನದಿಂದ ವರದಿಯಾಗಿದೆ (16 ಲಕ್ಷ).
೯. ಸಿರಿಯಾ, ವೆನೆಜುವೆಲಾ ಮತ್ತು ಮ್ಯಾನ್ಮಾರ್‌ನಂತಹ ದೇಶಗಳಲ್ಲಿ ಅಭದ್ರತೆ ಮತ್ತು ಸಂಘರ್ಷದಿಂದಾಗಿ ವಲಸಿಗರು ಹೊರಹರಿವು ಹೆಚ್ಚಿದೆ.
೧೦. 2021ರಲ್ಲಿ ಮನುಷ್ಯನ ಜಾಗತಿಕ ಜೀವಿತಾವಧಿ 71 ವರ್ಷಕ್ಕೆ ಇಳಿದಿದೆ. 2019ರಲ್ಲಿ 72.8 ವರ್ಷ ಇತ್ತು. ಇದು ಆದುದು ಕೋವಿಡ್-19 ಸಾಂಕ್ರಾಮಿಕ ಪರಿಣಾಮ.
೧೧. ಕಡಿಮೆ ಅಭಿವೃದ್ಧಿ ಹೊಂದಿದ 46 ದೇಶಗಳು ಜನಸಂಖ್ಯೆಯ ದೃಷ್ಟಿಯಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಸೇರಿವೆ. 2022 ಮತ್ತು 2050ರ ನಡುವೆ ಇಲ್ಲಿ ಜನಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.
ಇದನ್ನೂ ಓದಿ: ಕಲರ್ ಎರಚಿಯೂ ಕೇಡಿಗಳನ್ನು ಹಿಡಿಯಬಹುದಾ?