Site icon Vistara News

Yogi Adityanath: ಪಾಕ್‌ ಭಾರತದ ಜೊತೆ ವಿಲೀನವಾಗುತ್ತೆ…ಇಲ್ಲದಿದ್ದರೆ ಅಸ್ತಿತ್ವದಲ್ಲೇ ಇರಲ್ಲ- ಯೋಗಿ ಆದಿತ್ಯನಾಥ್‌

yogi adityanath

ಲಖನೌ: ಕಾಂಗ್ರೆಸ್‌ ಪಕ್ಷದ ಅಧಿಕಾರ ದಾಹದಿಂದ ದೇಶ ವಿಭಜನೆಯೆಂಬ ಬೆಂಕಿಯ ಕೆನ್ನಾಲಿಗೆ ಇಡೀ ದೇಶವೇ ಹೊತ್ತಿ ಉರಿಯುವಂತಹ ಸ್ಥಿತಿ ನಿರ್ಮಾಣವಾಗಿತ್ತು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ(Uttar Pradesh Chief Minister) ಯೋಗಿ ಆದಿತ್ಯನಾಥ್‌(Yogi Adityanath) ಎಂದು ವಾಗ್ದಾಳಿ ನಡೆಸಿದ್ದಾರೆ. ಲಖನೌದಲ್ಲಿ ದೇಶ ವಿಭಜನೆ ಕರಾಳ ದಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಭಯೋತ್ಪಾದನೆಯ ರೂಪದಲ್ಲಿ ಇಂದಿಗೂ ಕಾಟ ಎದುರಿಸುತ್ತಿರುವ ಭಾರತಕ್ಕೆ ಕಾಂಗ್ರೆಸ್‌ ಪಕ್ಷ ಗಾಯವನ್ನುಂಟು ಮಾಡಿದೆ. ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ದೌರ್ಜನ್ಯದ ಬಗ್ಗೆ ಪ್ರತಿಪಕ್ಷಗಳ ಮೌನದ ಬಗ್ಗೆಯೂ ಅವರು ಪ್ರಶ್ನೆ ಎತ್ತಿದರು.

1947 ರಲ್ಲಿ ಪಾಕಿಸ್ತಾನದಲ್ಲಿ ನಡೆದಿದ್ದು, ಈಗ ಬಾಂಗ್ಲಾದೇಶದಲ್ಲಿ ನಡೆಯುತ್ತಿದೆ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಆದರೆ ರಾಜಕೀಯ ಹಿತಾಸಕ್ತಿಗಳಿಂದಾಗಿ, ಭಾರತದಲ್ಲಿ ಕೆಲವರು ಮೌನ ವಹಿಸುತ್ತಿದ್ದಾರೆ. 1947ರಲ್ಲಿ ಪಾಕಿಸ್ತಾನದಲ್ಲಿ ಮಿಲಿಯನ್ ಹಿಂದೂಗಳು ಮತ್ತು ಸಿಖ್ಖರನ್ನು ಕಗ್ಗೊಲೆ ಮಾಡಲಾಯಿತು. ಇಂದಿಗೂ ನಮ್ಮ ಅಕ್ಕ-ತಂಗಿಯರ ಮೇಲೆ ಅದೇ ರೀತಿಯ ಅತ್ಯಾಚಾರ, ಲೂಟಿ, ದೌರ್ಜನ್ಯಗಳು ನಡೆಯುತ್ತಿವೆ. ಅದೇ ರೀತಿಯ ದುರಂತ ಇಂದಿಗೂ ತೆರೆದುಕೊಳ್ಳುತ್ತಿದೆ. ಬಾಂಗ್ಲಾದೇಶದ 15 ಮಿಲಿಯನ್ ಹಿಂದೂಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹತಾಶವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಯೋಗಿ ಸೇರಿಸಿದರು.

ಪ್ರತಿಪಕ್ಷಗಳನ್ನು ಗುರಿಯಾಗಿಸಿ ಸಿಎಂ ಯೋಗಿ, ಭಾರತದ ‘ಜಾತ್ಯತೀತ ಜನರು’ ತಮ್ಮ ಮತ ಬ್ಯಾಂಕ್ ಕಳೆದುಕೊಳ್ಳುವ ಭಯದಿಂದ ಈ ವಿಷಯದ ಬಗ್ಗೆ ಮೌನವಾಗಿದ್ದಾರೆ. ಇಂದು ಭಾರತದಲ್ಲಿ ಜಾತ್ಯತೀತ ಜನರ ಬಾಯಿ ಮುಚ್ಚಿದೆ. ದುರ್ಬಲರ ಪರವಾಗಿ ಮಾತನಾಡಿದರೆ ತಮ್ಮ ವೋಟ್ ಬ್ಯಾಂಕ್ ಅನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಹೆದರುತ್ತಾರೆ, ಅವರು ತಮ್ಮ ಮತಬ್ಯಾಂಕ್ ಬಗ್ಗೆ ಕಾಳಜಿ ಹೊಂದಿದ್ದಾರೆ, ಆದರೆ ಅವರ ಮಾನವ ಸಂವೇದನೆ ಸತ್ತಿದೆ” ಪಾಕಿಸ್ತಾನವು ಭಾರತದೊಂದಿಗೆ ವಿಲೀನಗೊಳ್ಳುತ್ತದೆ ಅಥವಾ ಅದು ಶಾಶ್ವತವಾಗಿ ಅಸ್ತಿತ್ವದಲ್ಲಿ ಇರುವುದಿಲ್ಲ ಎಂಬ ವಾರ್ಸಿ ಅರವಿಂದ್ ಅವರ 1947 ರ ಭವಿಷ್ಯ ನಿಜವಾಗಲಿದೆ ಎಂದು ಅವರು ಹೇಳಿದರು.

1947ರಲ್ಲಿ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದಾಗ ಸುಮಾರು 15 ಲಕ್ಷ ಜನರು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಬೇಕಾಯಿತು. ವಿಶೇಷವಾಗಿ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಸಮೃದ್ಧವಾಗಿರುವ ಪಂಜಾಬ್‌ನಲ್ಲಂತೂ ಪರಿಸ್ಥಿತಿ ಭೀಕರವಾಗಿತ್ತು. ವಿಭಜನೆಯಿಂದಾಗಿ ಅನೇಕ ಕಡೆ ಗಲಭೆಗಳೂ ನಡೆದವು. ಈ ಗಲಭೆಗಳಿಂದಾಗಿ ಲಕ್ಷಾಂತರ ಜನರು ಸ್ಥಳಾಂತರಗೊಳ್ಳಬೇಕಾಯಿತು. ಈ ಅವಧಿಯಲ್ಲಿ ಹಲವು ಮಂದಿ ಪ್ರಾಣವನ್ನೂ ಕಳೆದುಕೊಂಡಿದ್ದರು.

ಇದನ್ನೂ ಓದಿ: PM Narendra Modi: ಕೆಂಪುಕೋಟೆಯ ಕಾರ್ಯಕ್ರಮಕ್ಕೆ ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

Exit mobile version