Site icon Vistara News

Yogi Adityanath: ಹೊಸ ಮೈಲಿಗಲ್ಲು ಸಾಧಿಸಿದ ಯೋಗಿ- ಉತ್ತರ ಪ್ರದೇಶದ ಸುದೀರ್ಘ ಅವಧಿಯ ಸಿಎಂ ಎಂಬ ಖ್ಯಾತಿ

Yogi Adityanath

Yogi Adityanath

ಲಖನೌ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ರಾಜ್ಯ ಅತಿ ಹೆಚ್ಚು ವರ್ಷ ಸಿಎಂ ಆಗಿ ಸೇವೆ ಸಲ್ಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಬರೋಬ್ಬರಿ ಏಳು ವರ್ಷ 148 ದಿನಗಳ ಕಾಲ ಸುದೀರ್ಘ ಸೇವೆ ಸಲ್ಲಿಸುವ ಮೂಲಕ ಯೋಗಿ, ಮುಲಾಯಂ ಸಿಂಗ್‌ ಯಾದವ್‌(Mulayam Singh Yadav), ಅಖಿಲೇಶ್‌ ಯಾದವ್‌(Akhilesh Yadav) ಮತ್ತು ಮಾಯವತಿ(Mayawati)ಯವರನ್ನು ಸರಿಗಟ್ಟಿದ್ದಾರೆ.

ಈ ಹಿಂದೆ, ಕಾಂಗ್ರೆಸ್ ನಾಯಕ ಸಂಪೂರ್ಣಾನಂದ ಅವರು ಒಟ್ಟು ಐದು ವರ್ಷ ಮತ್ತು 344 ದಿನಗಳೊಂದಿಗೆ ಯುಪಿ ಸಿಎಂ ಆಗಿ ಸುದೀರ್ಘ ಅಧಿಕಾರಾವಧಿಯನ್ನು ಹೊಂದಿದ್ದರು. ಆದಿತ್ಯನಾಥ್ ಅವರು 2023ರಲ್ಲಿ ದಾಖಲೆಯನ್ನು ಸರಿಗಟ್ಟಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಾಯಾವತಿ ನಾಲ್ಕು ಬಾರಿ ಸಿಎಂ ಸ್ಥಾನಕ್ಕೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಮತ್ತು ಮುಲಾಯಂ ಸಿಂಗ್ ಯಾದವ್ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಆದರೂ ಅವರಿಗೆ ಸಂಪೂರ್ಣವಾಗಿ ಅಧಿಕಾರಾವಧಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

ಅವಿಭಜಿತ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್ ನಾಯಕ ನಾರಾಯಣ್ ದತ್ ತಿವಾರಿ ಅವರ 37 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ರಾಜ್ಯದಲ್ಲಿ ಸತತ ಎರಡನೇ ಅವಧಿಗೆ ತಮ್ಮ ಪಕ್ಷವನ್ನು ಮುನ್ನಡೆಸಿದ ನಾಯಕರಲ್ಲಿ ಆದಿತ್ಯನಾಥ್ ಕೂಡ ಸೇರಿದ್ದಾರೆ. 1985ರಲ್ಲಿ ಉತ್ತರಾಖಂಡ್ ರಚನೆಯಾದಾಗಿನಿಂದ, ಆದಿತ್ಯನಾಥ್ ಅವರು ಸತತ ಎರಡನೇ ಅವಧಿಗೆ ಅಧಿಕಾರವನ್ನು ಪಡೆದುಕೊಂಡ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.

ರಾಜಕೀಯ ಮುಖಂಡರು ನೋಯ್ಡಾಗೆ ತೆರಳಿದರೆ ಅವರು ನಿರೀಕ್ಷಿತ ಸ್ಥಾನವನ್ನು ಕಳೆದುಕೊಳ್ಳುತ್ತಾರೆಂಬ ಮಾತಿದೆ. ಆದರೆ ಯೋಗಿ ಆದಿತ್ಯಾನಾಥ್‌ ಅವರು ಅಲ್ಲಿಗೆ ತೆರಳುವ ಮೂಲಕ ಆದಿತ್ಯನಾಥ್ ಆ ವಾಡಿಕೆಯನ್ನು ತೊಡೆದು ಹಾಕಿದ್ದರು. ಅವರ ರಾಜಕೀಯ ಜೀವನವು 1998ರಲ್ಲಿ ಅವರು ಮೊದಲ ಬಾರಿಗೆ 12ನೇ ಲೋಕಸಭೆಗೆ ಆಯ್ಕೆಯಾದಾಗ ಪ್ರಾರಂಭವಾಯಿತು. 2017 ರಲ್ಲಿ 403 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 325 ಸ್ಥಾನಗಳಲ್ಲಿ ಬಹುಮತ ಗಳಿಸಿದಾಗ ಅವರು ಮೊದಲ ಬಾರಿಗೆ ಯುಪಿ ಮುಖ್ಯಮಂತ್ರಿಯಾದರು.

1972 ರಲ್ಲಿ ಜನಿಸಿದ ಅಜಯ್ ಸಿಂಗ್ ಬಿಶ್ತ್ , ಮಹಂತ್ ಅವೈದ್ಯನಾಥ್ ಅವರ ಮಾರ್ಗದರ್ಶನದಲ್ಲಿ, ಅವರು ‘ಯೋಗಿ ಆದಿತ್ಯನಾಥ್’ ಎಂಬ ಹೆಸರಿನೊಂದಿಗೆ ಸನ್ಯಾಸಿ ಜೀವನವನ್ನು ಸ್ವೀಕರಿಸಿದರು. 22 ನೇ ವಯಸ್ಸಿನಲ್ಲಿ ಗೋರಖನಾಥ ಮಠದ ಪ್ರಧಾನ ಅರ್ಚಕರಾಗಿ ನೇಮಕಗೊಂಡರು. ಅವರು 26 ನೇ ವಯಸ್ಸಿನಲ್ಲಿ ಲೋಕಸಭೆಯ ಕಿರಿಯ ಸದಸ್ಯರಲ್ಲಿ ಒಬ್ಬರಾಗಿದ್ದರು ಮತ್ತು ಐದು ಬಾರಿ ಗೋರಖ್‌ಪುರದ ಸಂಸದರಾಗಿ ಮರು ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: UP CM v/s DCM: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ; ಯೋಗಿ ತಲೆದಂಡ ಪಕ್ಕಾನಾ?

Exit mobile version