ಬೆಂಗಳೂರು: ’ಮನುಷ್ಯನ ಅವಶ್ಯಕತೆಯೇ ಸಂಶೋಧನೆ, ಅನ್ವೇಷಣೆ, ಆವಿಷ್ಕಾರದ ಮೂಲ’ ಎಂಬ ಮಾತಿದೆ. ಆದರೆ, ಆಧುನಿಕ ಜಗತ್ತಿನಲ್ಲಿ, ‘ಸೋಮಾರಿತನವೇ ಹೊಸ ಉಪಾಯಗಳಿಗೆ ರಹದಾರಿ’ ಎಂಬಂತಾಗಿದೆ. ಈ ಮಾತಿಗೆ ನಿದರ್ಶನ ಎಂಬಂತೆ, ದೇಶದಲ್ಲಿ 2 ಸಾವಿರ ರೂ. ನೋಟು ವಾಪಸ್ ಪಡೆದ ಕಾರಣ ಜನ ಬ್ಯಾಂಕ್‌ಗೆ (2000 Notes Withdrawn) ಹೋಗಿ ಎಕ್ಸ್‌ಚೇಂಜ್ ಮಾಡಲು ಸೋಮಾರಿತನ ಪ್ರದರ್ಶಿಸುತ್ತಿದ್ದಾರೆ. ಅದಕ್ಕಾಗಿ, ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡು ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ 2 ಸಾವಿರ ರೂ. ನೋಟು ಕೊಡುತ್ತಿದ್ದಾರೆ. ಇದರಿಂದ ಚಿಲ್ಲರೆಗಾಗಿ ಜೊಮ್ಯಾಟೋ ಡೆಲಿವರಿ ಬಾಯ್ಸ್ ಪರದಾಡುವಂತಾಗಿದೆ.
ಹೌದು, ದೇಶದಲ್ಲಿ 2 ಸಾವಿರ ರೂಪಾಯಿ ಮೌಲ್ಯದ ನೋಟುಗಳನ್ನು ಆರ್‌ಬಿಐ ಹಿಂಪಡೆದಿದೆ. 2 ಸಾವಿರ ರೂ. ನೋಟುಗಳು ಇರುವವರು ಬ್ಯಾಂಕ್‌ಗಳಿಗೆ ತೆರಳಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ. ಆದರೆ, ಹೀಗೆ ಬ್ಯಾಂಕ್‌ಗೆ ತೆರಳಲು ಜನ ಸೋಮಾರಿತನ ಪ್ರದರ್ಶಿಸುತ್ತಿದ್ದಾರೆ. ಬೆಂಗಳೂರು, ಮುಂಬೈ ಸೇರಿ ದೇಶದ ಹಲವು ನಗರಗಳಲ್ಲಿ ಜನ ಡೆಲಿವರಿ ಬಾಯ್ಸ್‌ಗೆ 2 ಸಾವಿರ ರೂ. ನೋಟು ನೀಡಿದ್ದಾರೆ. ಸೋಮವಾರ ಒಂದೇ ದಿನ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡ ಶೇ.72ರಷ್ಟು ಜನ 2 ಸಾವಿರ ರೂ. ನೋಟುಗಳನ್ನೇ ನೀಡಿದ್ದಾರೆ ಎಂದು ಜೊಮ್ಯಾಟೋ ಮಾಹಿತಿ ನೀಡಿದೆ.
ಜೊಮ್ಯಾಟೋ ಪೇಚಾಟ ಹೇಗಿದೆ ನೋಡಿ
ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವವರು ಡೆಲಿವರಿ ಬಾಯ್‌ಗಳಿಗೆ 2 ಸಾವಿರ ರೂ. ನೋಟುಗಳನ್ನೇ ಜಾಸ್ತಿ ನೀಡುತ್ತಿದ್ದಾರೆ. ಒಂದೆಡೆ ಚಿಲ್ಲರೆ ಸಮಸ್ಯೆ, ಮತ್ತೊಂದೆಡೆ 2 ಸಾವಿರ ರೂ. ನೋಟುಗಳನ್ನು ತಿರಸ್ಕರಿಸುವಂತಿಲ್ಲ. ಇದರಿಂದಾಗಿ ಜೊಮ್ಯಾಟೊ ಡೆಲಿವರಿ ಬಾಯ್ಸ್ ಪೇಚಾಡುವಂತಾಗಿದೆ. ಕೊಡಲು ಚಿಲ್ಲರೆ ಇರುವುದಿಲ್ಲ, ಆರ್ಡರ್ ಮಾಡಿದವರು ನೀಡಿದ ದುಡ್ಡು ಸ್ವೀಕರಿಸದಿರಲು ಸಾಧ್ಯವಿಲ್ಲ. ಇದು ಜೊಮ್ಯಾಟೋ ಕಂಪನಿಗಿಂತ ಡೆಲಿವರಿ ಬಾಯ್‌ಗಳಿಗೆ ಭಾರಿ ಪೇಚಾಟ ತಂದಿದೆ.
ಇದನ್ನೂ ಓದಿ: 2000 Notes Withdrawn : ಹೊರಬಿದ್ದ 2,000 ರೂ. ನೋಟು, ಚಲಾವಣೆಯಾಗುತ್ತಿರುವುದು ಎಲ್ಲಿ?!
ಜೊಮ್ಯಾಟೋ ಮಾಡಿದ ಟ್ವೀಟ್‌ಗೆ ತುಂಬ ಜನ ಪ್ರತಿಕ್ರಿಯಿಸಿದ್ದಾರೆ. ಹಾಸ್ಯಭರಿತವಾಗಿ ಉತ್ತರ ನೀಡಿದ್ದಾರೆ. ಇನ್ನೂ ಕೆಲವರು, ಜೊಮ್ಯಾಟೋ ಹಾಗೂ ಕ್ಯಾಶ್ ಆನ್ ಡೆಲಿವರಿಯನ್ನು ಮರೆತಿದ್ದೆವು. ನೀಡುವ ಐಡಿಯಾ ಕೊಟ್ಟು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದೂ ಪ್ರತಿಕ್ರಿಯಿಸಿದ್ದಾರೆ. ಸಾವಿರಾರು ಜನ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯೆ ಮೂಲಕ ಜೊಮ್ಯಾಟೋ ಕಾಲೆಳೆದಿದ್ದಾರೆ.